ಖಾಯಂ ಪೌರಾಯುಕ್ತರ ನೇಮಕಕ್ಕೆ ಆಗ್ರಹಿಸಿ ಜನ ಪ್ರತಿನಿಧಿಗಳ ಧರಣ
ಚಾಮರಾಜನಗರ

ಖಾಯಂ ಪೌರಾಯುಕ್ತರ ನೇಮಕಕ್ಕೆ ಆಗ್ರಹಿಸಿ ಜನ ಪ್ರತಿನಿಧಿಗಳ ಧರಣ

June 1, 2018

ಚಾಮರಾಜನಗರ:  ಚಾಮರಾಜನಗರ ನಗರಸಭೆಯಲ್ಲಿ ಪ್ರಭಾರ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸು ತ್ತಿರುವವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ ನಗರಸಭೆ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು ನಗರಸಭೆ ಕಚೇರಿ ಮುಂಭಾಗ ಗುರುವಾರದಿಂದ ಅನಿರ್ದಿಷ್ಠಾ ವಧಿ ಧರಣ ಆರಂಭಿಸಿದ್ದಾರೆ.

ನಗರಸಭೆ ಕಾರ್ಯಾಲಯದ ಮುಂಭಾಗ ಹಾಕಲಾಗಿರುವ ಶಾಮಿಯಾನದಡಿ ಕುಳಿತು ಧರಣ ಆರಂಭಿಸಿರುವ ಜನಪ್ರತಿನಿಧಿಗಳು, ನಮ್ಮ ಬೇಡಿಕೆ ಈಡೇರುವ ತನಕವೂ ಸಹ ಧರಣ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ.

ನಗರಸಭೆಗೆ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸದ ಕಾರಣ ಪ್ರಭಾರ ಪೌರಾ ಯುಕ್ತರಾಗಿ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫೌಜಿಯಾ ತರನುಂ ಅವರನ್ನು ನಿಯೋಜಿಸಲಾಗಿದೆ. ಕಳೆದ ಮೂರು-ನಾಲ್ಕು ತಿಂಗಳಿನಿಂದಲೂ ಸಹ ಫೌಜಿಯಾ ಅವರು ಪ್ರಭಾರ ಪೌರಾ ಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರತಿದಿನ ನಗರಸಭೆಗೆ ಬರುತ್ತಿಲ್ಲದ ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬ ಆಗುತ್ತಿದೆ. ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಸಾರ್ವಜನಿಕರ ಕೆಲಸ ಗಳು ಸಮಯಕ್ಕೆ ಸರಿಯಾಗಿ ಆಗದ ಕಾರಣ ಸಾರ್ವಜನಿಕರು ಪ್ರತಿದಿನ ಪರದಾಡುತ್ತಿ ರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಪ್ರಭಾರ ಪೌರಾಯುಕ್ತರಾಗಿರುವ ಫೌಜಿಯಾ ತರನುಂ ಅವರನ್ನು ಬದಲಾ ಯಿಸಿ ಬೇರೊಬ್ಬರನ್ನು ಖಾಯಂ ಆಗಿ ನಿಯೋಜಿಸುವಂತೆ ಪ್ರತಿಭಟನಾ ನಿರತ ಜನಪ್ರತಿನಿಧಿಗಳು ಒತ್ತಾಯಿಸಿದರು.

ನಗರಸಭೆಗೆ ಖಾಯಂ ಪೌರಾ ಯುಕ್ತರನ್ನು ನೇಮಕಗೊಳಿಸುವಂತೆ ಹಲ ವಾರು ಬಾರಿ ಒತ್ತಾಯಿಸಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ಪ್ರಭಾರ ಪೌರಾಯುಕ್ತರ ನೇಮಕದಿಂದ ನಗರ ಸಭೆಯಲ್ಲಿ ಆಗುವ ಕೆಲಸ-ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಇದರಿಂದ ಸಾರ್ವಜನಿಕರು, ನಗರಸಭೆ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸುವಂತೆ ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ಶೋಭಾ ಪುಟ್ಟ ಸ್ವಾಮಿ, ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ನಂಜುಂಡಸ್ವಾಮಿ, ಸದಸ್ಯರಾದ ಚಿನ್ನ ಸ್ವಾಮಿ, ಮಹೇಶ್, ಚಂಗುಮಣ , ಗೋಪಾಲ ಕೃಷ್ಣ, ರೂಪಾ, ರಾಜೇಶ್, ಇಮ್ರಾನ್, ಕಲಾವತಿ, ಮಹೇಶ್ ಉಪ್ಪಾರ, ಗೋವಿಂದು, ಮುಖಂಡರಾದ ಶ್ರೀನಿವಾಸ್‍ಪ್ರಸಾದ್, ರವಿಕುಮಾರ್, ಭಾಗ್ಯಮ್ಮ, ಶಿವರಾಜು ಇತ ರರು ಧರಣ ಯಲ್ಲಿ ಭಾಗವಹಿಸಿದ್ದರು.

Translate »