ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ: ಜಿಲ್ಲೆಯಲ್ಲಿ ಯಶಸ್ವಿ
ಚಾಮರಾಜನಗರ

ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ: ಜಿಲ್ಲೆಯಲ್ಲಿ ಯಶಸ್ವಿ

May 31, 2018

ಚಾಮರಾಜನಗರ:ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ದೇಶ ದ್ಯಾಂತ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಂಕ್‍ಗಳ ಮುಷ್ಕರ ಜಿಲ್ಲೆಯಲ್ಲಿ ಯಶಸ್ವಿಯಾಯಿತು.

ನಗರದ ಪ್ರಮುಖ ರಾಷ್ಟ್ರೀಯ ಬ್ಯಾಂಕ್ ಗಳಾದ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಡಿಕೇಂಟ್ ಬ್ಯಾಂಕ್, ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಂದ್ ಆಗಿ ದವು. ಬಂದ್‍ಗೆ ರಾಷ್ಟ್ರೀಕೃತ ಬ್ಯಾಂಕ್‍ನ ಎಟಿಎಂ ಕೇಂದ್ರಗಳ ಸಿಬ್ಬಂದಿಯು ಬೆಂಬಲ ಸೂಚಿಸಿದರಿಂದ ಎಟಿಎಂ ಕೇಂದ್ರಗಳು ಬಾಗಿಲು ತೆರಯಲಿಲ್ಲ. ಉಳಿದಂತೆ ಖಾಸಗಿ ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿತ್ತು.

ಸಾರ್ವಜನಿಕರ ಪರದಾಟ: ವಿವಿಧ ಬೇಡಿಕೆಗೆ ಆಗ್ರಹಿಸಿ ರಾಷ್ಟ್ರೀಕೃತ ಬ್ಯಾಂಕ್ ಗಳು ಬಂದ್ ಆಗಿರುವ ಮಾಹಿತಿಯಿಲ್ಲದ ಗ್ರಾಮೀಣ ಹಾಗೂ ನಗರ ಪ್ರದೇಶದ ಕೆಲವರು ಹಣ ಪಡೆಯಲು ಎಟಿಎಂ ಕೇಂದ್ರ ಹಾಗೂ ಬ್ಯಾಂಕ್‍ಗಳಿಗೆ ಭೇಟಿ ನೀಡಿದಾಗ ಅವುಗಳು ಬಂದ್ ಆಗಿರುವುದನ್ನು ನೋಡಿ ನಿರಾಶೆಯಿಂದ ಮನೆಯತ್ತ ಹಿಂದಿರುಗಿದರು.
ತಿಂಗಳಾಂತ್ಯದಲ್ಲಿ ಬ್ಯಾಂಕ್ ಸ್ಥಗಿತ ಕೊಂಡಿದ್ದರಿಂದ ಕೆಲವು ಖಾಸಗಿ ಸಂಸ್ಥೆ ಗಳು ನೌಕರಿಗೆ ವೇತನ ನೀಡಲು ಹಾಗೂ ಕೂಲಿ ಕಾರ್ಮಿಕರಿಗೆ ಕೂಲಿ ಹಣ ನೀಡಲು ಮಾಲೀಕರು ಪರದಾಡಿದರು.

Translate »