ನಾಳೆಯಿಂದ ಕಾಲುಬಾಯಿ ಜ್ವರ ಲಸಿಕೆ ಆಂದೋಲನ
ಚಾಮರಾಜನಗರ

ನಾಳೆಯಿಂದ ಕಾಲುಬಾಯಿ ಜ್ವರ ಲಸಿಕೆ ಆಂದೋಲನ

May 31, 2018

ಚಾಮರಾಜನಗರ:  ಜಿಲ್ಲೆ ಯಲ್ಲಿ ಜೂ 1ರಿಂದ 25ರವರೆಗೆ ಜಾನು ವಾರುಗಳಿಗೆ ತಗಲುವ ಕಾಲು ಬಾಯಿ ಜ್ವರವನ್ನು ತಡೆಯಲು 14ನೇ ಸುತ್ತಿನ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದ್ದು, ಜಿಲ್ಲೆಯ ಒಟ್ಟು 2,50,423 ಜಾನುವಾರುಗಳಿಗೆ ಲಸಿಕೆ ಹಾಕಲು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಾನುವಾರುಗಳಿಗೆ ಲಸಿಕೆ ನೀಡಲು ಜಾನು ವಾರು ಸಂಖ್ಯೆಗಳಿಗೆ ಅನುಗುಣವಾಗಿ 27 ಲಸಿಕಾ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 5 ರಿಂದ 6 ಮಂದಿ ಅರೆ ತಾಂತ್ರಿಕ ಸಿಬ್ಬಂದಿ ಇದ್ದು ಪಶುವೈದ್ಯ ರೊಬ್ಬರು ತಂಡದ ಮುಖ್ಯಸ್ಥರಾಗಿ ಇರಲಿದ್ದಾರೆ. ಚಾಮರಾಜನಗರ 9, ಗುಂಡ್ಲುಪೇಟೆ 7, ಕೊಳ್ಳೇಗಾಲ 8 ಹಾಗೂ ಯಳಂದೂರು ತಾಲೂಕಿಗೆ 3 ತಂಡ ಗಳನ್ನು ನಿಯೋಜಿಸಲಾಗಿದೆ.

ಲಸಿಕೆಯನ್ನು ಪ್ರತಿ ದಿನ ಯಾವ ಗ್ರಾಮಕ್ಕೆ ಯಾವ ತಂಡ ಲಸಿಕೆ ನೀಡಲಿದೆ ಎಂಬ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರತಿ ಗ್ರಾಮದಲ್ಲಿ ನೀಡಲಾಗುವ ಲಸಿಕೆ ಹಾಗೂ ಇದನ್ನು ನಿರ್ವಹಿಸುವ ಪಶುಪಾಲ ಕರ ಮಾಹಿತಿಯನ್ನು ಆಯಾ ದಿನವೇ ತಾಲೂಕು ಉಸ್ತುವಾರಿ ಅಧಿಕಾರಿಗೆ ಕಳು ಹಿಸಲಾಗುತ್ತದೆ. ಲಸಿಕೆ ವಿವರವನ್ನು ಕಳೆದ ಸುತ್ತಿನಲ್ಲಿ ಪಶುಪಾಲಕರಿಗೆ ನೀಡಿರುವ ಜಾನುವಾರು ಮಾಹಿತಿ ಪಾಸ್ ಪುಸ್ತಕ ಗಳಲ್ಲಿ ದಾಖಲು ಮಾಡಲಾಗುತ್ತದೆ. ಗ್ರಾಮ ವಾರು ಲಸಿಕೆ ಮಾಹಿತಿ ವರದಿಯನ್ನು ತಾಲೂಕು ಉಸ್ತುವಾರಿ ಅಧಿಕಾರಿಗಳು ಅದೇ ದಿನ ಮಧ್ಯಾಹ್ನ 3 ಗಂಟೆಯೊಳಗೆ ಆನ್‍ಲೈನ್ ಮೂಲಕ ರವಾನಿಸಲಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳ ಲಸಿಕೆ ಮಾಹಿತಿಯನ್ನು ಜಿಲ್ಲಾ ಕೇಂದ್ರಕ್ಕೆ ಪ್ರತಿ ದಿನ 4 ಗಂಟೆ ಯೊಳಗೆ ರವಾನಿಸಲಾಗುತ್ತದೆ. ಕ್ರೋಢಿ ಕರಿಸಿದ ಮಾಹಿತಿಯನ್ನು ರಾಜ್ಯಮಟ್ಟಕ್ಕೆ ಸಂಜೆ 5 ಗಂಟೆಯೊಳಗೆ ಸಲ್ಲಿಸಲಾಗುತ್ತದೆ. ಯಾವುದೇ ಗ್ರಾಮದ ಲಸಿಕೆ ಪ್ರಗತಿ ಮಾಹಿತಿ ಯನ್ನು ನಾಗರಿಕರು ವೀಕ್ಷಿಸಲು ಅವಕಾಶವಿದೆ.

ವ್ಯಾಕ್ಸಿನ್ ಕ್ಯಾರಿಯರ್ ಸೌಲಭ್ಯ: ಪಶು ಪಾಲನೆ ಇಲಾಖೆಗೆ ಈಗಾಗಲೇ 2.60ಲಕ್ಷ ಡೋಸ್ ಲಸಿಕೆ ಸರಬರಾಜಾಗುತ್ತಿದೆ. ಚಾಮ ರಾಜನಗರ ತಾಲೂಕು ಪಶುವೈದ್ಯ ಆಸ್ಪತ್ರೆಯ ವಾಕ್-ಇನ್-ಕೂಲರ್‍ನಲ್ಲಿ 1 ಲಕ್ಷ ಹಾಗೂ ಉಳಿದ 1.60ಲಕ್ಷ ಡೋಸ್ ಲಸಿಕೆಯನ್ನು ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂ ದೂರಿನ ಪಶುವೈದ್ಯ ಆಸ್ಪತ್ರೆಯ ಬಾಟಲ್ ಕೂಲರ್ಸ್ ಯಂತ್ರಗಳಲ್ಲಿ ದಾಸ್ತಾನು ಮಾಡ ಲಾಗಿದೆ. ಎಲ್ಲ ಹಂತದಲ್ಲೂ ಲಸಿಕೆಯ ಶೀತಲಿ ಸರಪಳಿ ನಿರ್ವಹಣೆ ಮಾಡಲಾಗಿದೆ. ಪ್ರತಿ ಗ್ರಾಮಕ್ಕೆ ಲಸಿಕೆಯನ್ನು ಕೊಂಡೊಯ್ಯಲು ವ್ಯಾಕ್ಸಿನ್ ಕ್ಯಾರಿಯರ್ ಸೌಲಭ್ಯ ಕಲ್ಪಿಸಲಾಗಿದೆ.

ಕರಪತ್ರಗಳ ಮೂಲಕ ಮಾಹಿತಿ: ಲಸಿಕಾ ತಂಡಗಳು ಗ್ರಾಮಗಳಿಗೆ ಸಕಾಲಕ್ಕೆ ತಲುಪಲು 27 ವಾಹನ ವ್ಯವಸ್ಥೆ ಮಾಡಲಾ ಗಿದೆ. ಚಾಮರಾಜನಗರ 9, ಗುಂಡ್ಲುಪೇಟೆ 7, ಕೊಳ್ಳೇಗಾಲ 8 ಹಾಗೂ ಯಳಂದೂರು ತಾಲೂಕಿಗೆ 3 ವಾಹನ ನಿಯೋಜಿಸಲಾಗಿದೆ.

ರೈತರು, ಹೈನುಗಾರಿಕೆ ಅವಲಂಬಿತರಿಗೆ ಅರಿವು ಮೂಡಿಸುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಭಿತ್ತಿಪತ್ರ ಹಾಗೂ ಕರ ಪತ್ರಗಳ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ದೊಡ್ಡ ಗ್ರಾಮ ಗಳಲ್ಲಿ ಬ್ಯಾನರ್‍ಗಳನ್ನು ಹಾಕಲಾಗುತ್ತಿದೆ. ಗ್ರಾಮ ಪಂಚಾಯಿತಿ ಮತ್ತು ಹಾಲು ಉತ್ಪಾ ದಕರ ಸಹಕಾರ ಸಂಘಗಳ ಮೂಲಕವೂ ಸಹ ಪ್ರಚಾರಕ್ಕಾಗಿ ಕ್ರಮ ತೆಗೆದು ಕೊಳ್ಳಲಾಗಿದೆ. ಪ್ರಚಾರಕ್ಕಾಗಿ 760 ಪೋಸ್ಟರ್ಸ್, 25 ಬ್ಯಾನರ್, 249 ಕರ ಪತ್ರಗಳನ್ನು ಮುದ್ರಿಸಲಾಗಿದೆ.
ಜಂತು ನಿವಾರಣೆÀ: ಲಸಿಕೆ ಮಾಡುವ ಮೊದಲು ಜಾನುವಾರುಗಳಲ್ಲಿ ಜಂತು ನಿವಾ ರಣೆ ಮಾಡುವುದು ಸೂಕ್ತವೆಂದು ನಿರ್ಧ ರಿಸಲಾಗಿದೆ. ಇದರಿಂದ ಲಸಿಕೆಯಿಂದ ಉಂಟು ಮಾಡುವ ರೋಗನಿರೋಧಕ ಶಕ್ತಿ ಹೆಚ್ಚಾ ಗಲಿದೆ. ಈ ಉದ್ದೇಶಕ್ಕಾಗಿಯೇ ಸಾಮೂ ಹಿಕ ಜಂತುನಿವಾರಣಾ ಕಾರ್ಯಕ್ರಮ ವನ್ನು ನಡೆಸಲಾಗಿದೆ. ಲಸಿಕೆ ಮಾಡುವ ಮೊದಲು ಫೀಕಲ್ ಮಾದರಿಗಳನ್ನು ಶೇಖ ರಿಸಿ ಜಂತುನಾಶಕ ಸೇವನೆ ಮಾಡಿಸಿದ ಬಳಿಕ ಅದೇ ರಾಸುಗಳಲ್ಲಿ 28 ದಿನದ ನಂತರ ಪರೀಕ್ಷೆ ನಡೆಸಲಾಗುತ್ತದೆ.
ಲಸಿಕೆ ಉಪಯುಕ್ತತೆಯನ್ನು ಅಳೆ ಯಲು ಜಿಲ್ಲೆಯ ಆಯ್ದ 10 ಗ್ರಾಮಗಳಲ್ಲಿ 20 ಜಾನುವಾರುಗಳಿಂದ ಲಸಿಕೆ ನೀಡುವ ಮೊದಲು ಸೀರಂ ಶೇಖರಿಸಲಾಗುತ್ತದೆ. ಲಸಿಕೆ ಮಾಡಿದ 28ನೇ ದಿನ ಅದೇ ರಾಸು ಗಳಿಂದ ಸೀರಂ ಶೇಖರಿಸಿ ರೋಗನಿರೋ ಧಕ ಶಕ್ತಿ ಪರೀಕ್ಷೆ ಮಾಡಲಾಗುತ್ತದೆ.

ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಲ ಹಾಗೂ ಅರಣ್ಯ ಇಲಾ ಖೆಯು ಬೃಹತ್ ಲಸಿಕಾ ಆಂದೋಲನಕ್ಕೆ ಕೈಜೋಡಿಸಿವ. ಇಲಾಖೆಯ ಲಸಿಕಾ ತಂಡವು ನಿಗದಿತ ದಿನಾಂಕಗಳಂದು ಭೇಟಿ ಕೊಡುವ ಸಂದರ್ಭದಲ್ಲಿ ಜಾನು ವಾರು ಮಾಲೀಕರು, ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಕಾಲುಬಾಯಿ ಜ್ವರ ತಡೆಗೆ ವಿಶೇಷ ಲಸಿಕೆ ನೀಡುವ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.

Translate »