ಹನೂರು: ಆನೆ ದಂತವನ್ನು ತಂದು ಮನೆಯಲ್ಲಿ ಅಡಗಿಸಿಟ್ಟಿದ್ದ ವ್ಯಕ್ತಿಯನ್ನು ಮಂಗಳವಾರ ಅರಣ್ಯಾಧಿಕಾರಿಗಳು ಬಂಧಿಸಿ ದಂತವನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಸೂಳೆಕೋಬೆ ಗ್ರಾಮದ ಸಣ್ಣಪುಟ್ಟ ಬಂಧಿತ ಆರೋಪಿ. ಹೂಗ್ಯಂ ವನ್ಯಜೀವಿ ವಲಯದ ಅರಣ್ಯ ಪ್ರದೇಶ ದಲ್ಲಿ ನೀರು ಕುಡಿಯಲು ಬಂದ 35 ವರ್ಷದ ಗಂಡಾನೆ ಯೊಂದು ಕಾಲು ಜಾರಿ ಬಿದ್ದು ಮೃತಪಟ್ಟಿದೆ. ಕಾಡಿಗೆ ತೆರಳಿದ್ದ ಸಣ್ಣಪುಟ್ಟ ಸತ್ತಿರುವ ಆನೆಯ ಎರಡು ದಂತ ಗಳನ್ನು ಕಡಿದು ಮನೆಯಲ್ಲಿ ಅಡಗಿಸಿಕೊಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಸುಂದರ್ ನೇತೃತ್ವದ ತಂಡ ದಾಳಿ ಮಾಡಿ ಎರಡು ದಂತ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.