Tag: congress-jds alliance

ಮಾದಿಗ ಸಮುದಾಯಕ್ಕೆ ಸಿಗದ ಸಚಿವ ಸ್ಥಾನ: ಪ್ರತಿಭಟನೆ
ಮಂಡ್ಯ

ಮಾದಿಗ ಸಮುದಾಯಕ್ಕೆ ಸಿಗದ ಸಚಿವ ಸ್ಥಾನ: ಪ್ರತಿಭಟನೆ

June 8, 2018

ಕೆ.ಆರ್.ಪೇಟೆ: ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗ(ಆದಿಜಾಂಬವ) ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡದ ಕ್ರಮ ಖಂಡಿಸಿ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಮುದಾಯದ ಕಾಂಗ್ರೆಸ್ ಹಿರಿಯ ನಾಯಕರಾದ ಸಂಸದ ಕೆ.ಹೆಚ್.ಮುನಿಯಪ್ಪ ಪುತ್ರಿ ರೂಪಾ ಶಶಿಧರ್‍ಗೆ ಕಡೇ ಗಳಿಗೆಯಲ್ಲಿ ಸಚಿವ ಸ್ಥಾನ ನೀಡದೇ ವಂಚಿಸಲಾಗಿದೆ. ಹಾಗೆಯೇ ಉತ್ತರ ಕರ್ನಾಟಕ ಭಾಗದ ಆರ್.ಬಿ.ತಿಮ್ಮಾಪೂರ್ ಅಥವಾ ಮೈಸೂರಿನ ಪ್ರಭಾವಿ ನಾಯಕ ಧರ್ಮಸೇನಾ ಅವರಿಗಾದರೂ ಸಚಿವ…

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂತ್ರಿ ಮಂಡಲಕ್ಕೆ 25 ಸಚಿವರ ಸೇರ್ಪಡೆ
ಮೈಸೂರು

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂತ್ರಿ ಮಂಡಲಕ್ಕೆ 25 ಸಚಿವರ ಸೇರ್ಪಡೆ

June 7, 2018

 ಜೆಡಿಎಸ್‍ನಿಂದ ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು, ಸಾರಾ ಮಹೇಶ್, ಡಿ.ಸಿ. ತಮ್ಮಣ್ಣ, ಹೆಚ್.ಡಿ. ರೇವಣ್ಣ, ಬಿಎಸ್‍ಪಿಯ ಎನ್. ಮಹೇಶ್ ಸೇರಿ 10, ಕಾಂಗ್ರೆಸ್‍ನಿಂದ ಪುಟ್ಟರಂಗಶೆಟ್ಟಿ, ಡಿ.ಕೆ. ಶಿವಕುಮಾರ್ ಸೇರಿ 15 ಮಂದಿ ಸಚಿವರು ನೂತನ ಸಚಿವರಿಗೆ ರಾಜಭವನ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ವಾಲಾ  ಪ್ರಿಯಾಂಕ ಖರ್ಗೆ ಅತ್ಯಂತ ಕಿರಿಯ, ಮನಗೂಳಿ ಅತ್ಯಂತ ಹಿರಿಯ ಸಚಿವರು! ಒಕ್ಕಲಿಗರ ಪ್ರಾಬಲ್ಯ ಉಳಿಸಿಕೊಂಡ ಜೆಡಿಎಸ್ ಬೆಂಗಳೂರು: ಭಿನ್ನ ಮತದ ಬೇಗುದಿ ನಡುವೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ತಮ್ಮ…

ಆಪರೇಷನ್ ಕಮಲದಿಂದ ಕಂಗೆಟ್ಟು ಕಾಂಗ್ರೆಸ್‍ನ ನಿಷ್ಠಾವಂತ ಹಿರಿಯರ ತಲೆದಂಡ
ಮೈಸೂರು

ಆಪರೇಷನ್ ಕಮಲದಿಂದ ಕಂಗೆಟ್ಟು ಕಾಂಗ್ರೆಸ್‍ನ ನಿಷ್ಠಾವಂತ ಹಿರಿಯರ ತಲೆದಂಡ

June 7, 2018

ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲಕ್ಕೆ ಬೆದರಿದ ಕಾಂಗ್ರೆಸ್, ತನ್ನ ಕೆಲವು ನಿಷ್ಠಾವಂತ ಮತ್ತು ಹಿರಿಯ ಸದಸ್ಯರ ತಲೆದಂಡ ತೆರಬೇಕಾಯಿತು. ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ್ದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ರೋಷನ್ ಬೇಗ್, ತನ್ವೀರ್ ಸೇಠ್, ದಿನೇಶ್ ಗುಂಡೂರಾವ್, ಶಾಮ ನೂರು ಶಿವಶಂಕರಪ್ಪ, ಹೆಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಎಂ.ಕೃಷ್ಣಪ್ಪ, ಸತೀಶ್ ಜಾರಕಿ ಹೊಳಿ ಸೇರಿದಂತೆ ಪ್ರಮುಖರಿಗೆ ಮಂತ್ರಿ ಯಾಗಲು ಅವಕಾಶ ನೀಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪೂರ್ಣಾವಧಿಗೆ ಉಳಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ವರಿಷ್ಠರು, ಹಿರಿಯರಿಗೆ…

ಡಿಕೆಶಿ ಸೇರಿ ಕಾಂಗ್ರೆಸ್ ಸೂಚಿಸುವವರ ಸಂಪುಟಕ್ಕೆ  ಸೇರಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ನಿರ್ಧಾರ
ಮೈಸೂರು

ಡಿಕೆಶಿ ಸೇರಿ ಕಾಂಗ್ರೆಸ್ ಸೂಚಿಸುವವರ ಸಂಪುಟಕ್ಕೆ  ಸೇರಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ನಿರ್ಧಾರ

June 5, 2018

ಬೆಂಗಳೂರು: ಮಾಜಿ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಸೇರಿ ದಂತೆ ಕಾಂಗ್ರೆಸ್ ಹೆಸ ರಿಸಿರುವ ಎಲ್ಲರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಆದರೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಅವರ ಸಂಘಟನೆ ಮತ್ತು ಹಿರಿಯತನಕ್ಕೆ ಅವರಿಗೆ ಸಂಪುಟ ದಲ್ಲಿ ಉತ್ತಮ ಖಾತೆ ಗೌರವ ನೀಡುವ ಬಗ್ಗೆ ನಾಯಕರಲ್ಲಿ ಅಪಸ್ವರ ಇಲ್ಲ. ಆದರೆ ನೋಟು ಅಮಾನ್ಯೀಕರಣ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶ ಕ್ಕಾಗಿ ಶಿವಕುಮಾರ್ ಮಂತ್ರಿಯಾದ ತಕ್ಷಣ ಸಿಬಿಐ…

ನಾನು ಅದೃಷ್ಟದ ರಾಜಕಾರಣಿ
ಮೈಸೂರು

ನಾನು ಅದೃಷ್ಟದ ರಾಜಕಾರಣಿ

June 5, 2018

ಸಿಎಂ ಕುಮಾರಸ್ವಾಮಿ ಪುನರುಚ್ಛಾರ ವ್ಯಾಸಂಗ ಮಾಡಿದ ನ್ಯಾಷನಲ್ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜೀವನ ಮೆಲುಕು ಬೆಂಗಳೂರು: ನಾನು ಅದೃಷ್ಟದ ರಾಜಕಾರಣ . ನಾಡಿನ ಜನತೆಯ ಸೇವಕ. ಆದರೆ ಆರೂವರೆ ಕೋಟಿ ಜನ ಆಯ್ಕೆ ಮಾಡಿದ ಸಿಎಂ ನಾನಲ್ಲ. ನಾನು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತೇನೋ ಗೊತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೇಗೆ ನಡೆಸಬೇಕೆಂಬುದು ಗೊತ್ತಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ. ತಾವು ವಿದ್ಯಾಭ್ಯಾಸ ಮಾಡಿದ ನಗರದ ನ್ಯಾಷನಲ್ ಕಾಲೇಜಿ ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ…

ಪಂಕ್ಚರ್ ಗಾಡಿಯಲ್ಲಿ ಜೆಡಿಎಸ್ ಪ್ರಯಾಣ
ಚಾಮರಾಜನಗರ

ಪಂಕ್ಚರ್ ಗಾಡಿಯಲ್ಲಿ ಜೆಡಿಎಸ್ ಪ್ರಯಾಣ

June 5, 2018

ಚಾಮರಾಜನಗರ: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಂಕ್ಚರ್ ಆಗಿರುವ ಗಾಡಿಯಾಗಿದೆ. ಈ ಪಂಕ್ಚರ್ ಗಾಡಿಯಲ್ಲಿ ಜೆಡಿಎಸ್ ಪ್ರಯಾಣ ಮಾಡುತ್ತಿದೆ ಎಂದು ಮಾಜಿ ಸಂಸದೆ ತೇಜಸ್ವಿನಿಗೌಡ ವ್ಯಂಗ್ಯ ವಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನ ದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅವಕಾಶವಾದಿಗಳ ಪಿತಾಮಹ ಎಂದು ಟೀಕಿಸಿದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಚುನಾವಣಾ ಪೂರ್ವದಲ್ಲಿ ಖುಷಿಯಿಂದ ಹೇಳುತ್ತಿದ್ದರು. ಜತೆಗೆ, ವಯೋವೃದ್ಧರಿಗೆ ಮಾಸಿಕ…

ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಮೈಸೂರು

ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ

June 2, 2018

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆಯನ್ನು ಎದುರಿಸಲಿವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ಸ್ಪಷ್ಟಪಡಿಸಿ, ಸ್ಥಾನಗಳ ಹಂಚಿಕೆ ಕುರಿತು ಚುನಾವಣಾ ಪೂರ್ವದಲ್ಲಿ ನಿರ್ಧರಿಸಲಾಗುವುದು. ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಬಹುಮತ ಲಭ್ಯವಾಗದ ಹಿನ್ನೆಲೆಯಲ್ಲಿ ಜಾತ್ಯಾತೀತ ಪಕ್ಷಗಳು ಒಂದಾಗಿ ಸರ್ಕಾರ ರಚಿಸಲಾಗಿದೆ. ಇದೇ ಮೈತ್ರಿ ಮತ್ತು ಒಗ್ಗಟ್ಟು ಮುಂಬರುವ ಲೋಕಸಭಾ ಚುನಾವಣೆಗೂ ಇರಲಿದೆ ಎಂದರು.

1 11 12 13
Translate »