ಆಪರೇಷನ್ ಕಮಲದಿಂದ ಕಂಗೆಟ್ಟು ಕಾಂಗ್ರೆಸ್‍ನ ನಿಷ್ಠಾವಂತ ಹಿರಿಯರ ತಲೆದಂಡ
ಮೈಸೂರು

ಆಪರೇಷನ್ ಕಮಲದಿಂದ ಕಂಗೆಟ್ಟು ಕಾಂಗ್ರೆಸ್‍ನ ನಿಷ್ಠಾವಂತ ಹಿರಿಯರ ತಲೆದಂಡ

June 7, 2018

ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲಕ್ಕೆ ಬೆದರಿದ ಕಾಂಗ್ರೆಸ್, ತನ್ನ ಕೆಲವು ನಿಷ್ಠಾವಂತ ಮತ್ತು ಹಿರಿಯ ಸದಸ್ಯರ ತಲೆದಂಡ ತೆರಬೇಕಾಯಿತು.

ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ್ದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ರೋಷನ್ ಬೇಗ್, ತನ್ವೀರ್ ಸೇಠ್, ದಿನೇಶ್ ಗುಂಡೂರಾವ್, ಶಾಮ ನೂರು ಶಿವಶಂಕರಪ್ಪ, ಹೆಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಎಂ.ಕೃಷ್ಣಪ್ಪ, ಸತೀಶ್ ಜಾರಕಿ ಹೊಳಿ ಸೇರಿದಂತೆ ಪ್ರಮುಖರಿಗೆ ಮಂತ್ರಿ ಯಾಗಲು ಅವಕಾಶ ನೀಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪೂರ್ಣಾವಧಿಗೆ ಉಳಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ವರಿಷ್ಠರು, ಹಿರಿಯರಿಗೆ ಮಣೆ ಹಾಕಿಲ್ಲ. ಸರ್ಕಾರ ರಚನೆ ಸಂದರ್ಭದಲ್ಲಿ ಬಿಜೆಪಿಯ ಆಪರೇಷನ್ ಕಮಲದೊಂದಿಗೆ ಸಂಪರ್ಕ ಹೊಂದಿದ್ದ, ವೆಂಕಟರಮಣಪ್ಪ, ಪುಟ್ಟರಂಗ ಶೆಟ್ಟಿ, ಜಮೀರ್ ಅಹಮದ್ ಖಾನ್, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್ ಹಾಗೂ ಪಕ್ಷೇತರ ಸದಸ್ಯ ಶಂಕರ್ ಅವರಿಗೆ ಸಚಿವ ಸ್ಥಾನ ದಯಪಾಲಿಸಿದೆ.

ಸಚಿವ ಸ್ಥಾನ ದೊರೆಯದೆ ಇವರು ಯಾವುದೇ ಸಂದರ್ಭದಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಬಹುದೆಂಬ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೆಲವು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅವಕಾಶ ವಂಚಿತ ಹಿರಿಯರು ಮತ್ತು ನಿಷ್ಠಾವಂತರು ಯಾವುದೇ ಸಂದರ್ಭದಲ್ಲೂ ಪಕ್ಷದ ಕೈಬಿಡುವುದಿಲ್ಲ ಎಂಬ ದೃಢ ನಂಬಿಕೆ ಒಂದೆಡೆಯಾದರೆ, ಮತ್ತೊಂದೆಡೆ ಮುಂಬರುವ ಲೋಕಸಭಾ ಚುನಾ ವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದಾರೆ ಎನ್ನಲಾಗಿದೆ. ಮತ್ತೆ ಕೆಲವರು ಬಿಜೆಪಿ ಸಂಪರ್ಕದಲ್ಲಿದ್ದರೂ, ಅವರು ಪಕ್ಷ ತೊರೆದರೂ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ಪೂರ್ವಾಲೋಚನೆಯಿಂದ, ಅಂತಹವರ ಒತ್ತಡಕ್ಕೆ ಮಣ ದಿಲ್ಲ. ಕಾಂಗ್ರೆಸ್‍ನಿಂದ ಮಂತ್ರಿಯಾಗಲು 50ರಿಂದ 60ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು, ಆದರೆ ಪಕ್ಷಕ್ಕೆ ಕೇವಲ 22 ಸ್ಥಾನ ಮಾತ್ರ ಲಭ್ಯವಿತ್ತು. ಪ್ರಸಕ್ತ ವಿಸ್ತರಣೆಯಲ್ಲಿ ಅವಕಾಶ ದೊರೆಯದವರಿಗೆ ಮುಂದಿನ ಬಾರಿ ಅವಕಾಶ ಕಲ್ಪಿಸುವ ಭರವಸೆಯಾಗಿ 6 ಸ್ಥಾನಗಳನ್ನು ಉಳಿಸಿಕೊಳ್ಳಲಾ ಗಿದೆ. ವಿಸ್ತರಣೆಯಲ್ಲಿ ತಮಗೆ ಅವಕಾಶ ಇಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್‍ನ ಕೆಲವು ಸದಸ್ಯರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Translate »