Tag: congress-jds alliance

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ?
ಮೈಸೂರು

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ?

June 16, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಸಲಹೆ ಗಾರರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸಂಪುಟದ ಸಚಿವರೂ ಆಗಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದರೂ, ಅವರು ಈ ಜವಾಬ್ದಾರಿ ವಹಿಸಿ ಕೊಂಡಿಲ್ಲ. ನಾನು ರೈತರು, ಸಾಮಾನ್ಯ ಜನ ರೊಂದಿಗೆ ಬೆಳೆದು ಬಂದಿದ್ದು, ಅವರೊಂದಿಗಿದ್ದು ಕೆಲಸ ಮಾಡಬಹುದಾದ ಖಾತೆಯನ್ನು ನೀಡಬೇಕೆಂದು…

ಮೈತ್ರಿ ಸರ್ಕಾರದ ವೈಫಲ್ಯ: ಜೂ. 30ಕ್ಕೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರು

ಮೈತ್ರಿ ಸರ್ಕಾರದ ವೈಫಲ್ಯ: ಜೂ. 30ಕ್ಕೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

June 16, 2018

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾ ರದ ವೈಫಲ್ಯ ಮುಂದಿಟ್ಟುಕೊಂಡು ಬಿಜೆಪಿ ಇದೇ 30 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ರೈತರ ಸಾಲ ಮನ್ನಾ, ರೈತರ ಆತ್ಮಹತ್ಯೆ ತಡೆಯುವಲ್ಲಿ ವಿಫಲತೆ ಸೇರಿದಂತೆ ಸರ್ಕಾರದ ಮಂದ ಧೋರಣೆಯನ್ನು ವಿರೋಧಿಸಿ ಹೋರಾ ಟಕ್ಕೆ ನಿರ್ಧರಿಸಿದೆ. ರೈತ ಮೋರ್ಚಾ ನೇತೃತ್ವದಲ್ಲಿ ಜೂ.30ರಿಂದ ಜುಲೈ 15ರವರೆಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಂಚರಿಸಲಿರುವ ಈ ತಂಡವು…

ಕಾಂಗ್ರೆಸ್‍ನಲ್ಲಿ ಅತೃಪ್ತರೇ ಇಲ್ಲ… ಎಲ್ಲರೂ ತೃಪ್ತರಿದ್ದಾರೆ: ಸಿದ್ದರಾಮಯ್ಯ ಪ್ರತಿಪಾದನೆ
ಮೈಸೂರು

ಕಾಂಗ್ರೆಸ್‍ನಲ್ಲಿ ಅತೃಪ್ತರೇ ಇಲ್ಲ… ಎಲ್ಲರೂ ತೃಪ್ತರಿದ್ದಾರೆ: ಸಿದ್ದರಾಮಯ್ಯ ಪ್ರತಿಪಾದನೆ

June 13, 2018

ಮೈಸೂರು:  ಕಾಂಗ್ರೆಸ್‍ನಲ್ಲಿ ಅತೃಪ್ತರೇ ಇಲ್ಲ. ಎಲ್ಲರೂ ತೃಪ್ತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆಡಳಿತ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆ ಬಳಿಕ ಒಂದು ತಿಂಗಳ ನಂತರ ಮಂಗಳವಾರ ಮೈಸೂರಿಗೆ ಭೇಟಿ ನೀಡಿದ ಅವರು, ತಮ್ಮ ಮನೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್, ಸುಧಾಕರ್, ಸಂಗಮೇಶ, ಈಶ್ವರ ಖಂಡ್ರೆ, ಎಸ್.ಆರ್.ಪಾಟೀಲ್ ಇನ್ನಿತರರ ಜೊತೆಗೆ ಮಾತನಾಡಿದ್ದೇನೆ. ಅವರೆಲ್ಲಾ ತೃಪ್ತರಾಗಿದ್ದಾರೆ ಎಂದರು. ರಾಜ್ಯದ ಜನರು ಐದು ವರ್ಷಗಳಿಗೆಂದು ತೀರ್ಪು ನೀಡಿದ್ದಾರೆ. ಅದರಂತೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಐದು ವರ್ಷ…

ಮೈತ್ರಿ ಸರ್ಕಾರದಲ್ಲಿ ನಾಯಕ ಸಮುದಾಯದ  ಒಬ್ಬರಿಗೇ ಸಚಿವ ಸ್ಥಾನ: ಮುಖಂಡರ ಆಕ್ರೋಶ
ಮೈಸೂರು

ಮೈತ್ರಿ ಸರ್ಕಾರದಲ್ಲಿ ನಾಯಕ ಸಮುದಾಯದ  ಒಬ್ಬರಿಗೇ ಸಚಿವ ಸ್ಥಾನ: ಮುಖಂಡರ ಆಕ್ರೋಶ

June 12, 2018

ಮೈಸೂರು: ಇತ್ತೀಚಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಆಯ್ಕೆಯಾಗಿರುವ ನಾಯಕ ಜನಾಂಗದ 17 ಶಾಸಕರ ಪೈಕಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‍ನ -1, ಕಾಂಗ್ರೆಸ್‍ನ -9 ಹಾಗೂ ವಿಧಾನಪರಿಷತ್‍ನ ಒಬ್ಬ ಸದಸ್ಯರು ಸೇರಿದಂತೆ ಒಟ್ಟು 11 ಮಂದಿ ಶಾಸಕರಿದ್ದಾರೆ. ಹೀಗಿದ್ದರೂ ಸಮ್ಮಿಶ್ರ ಸರ್ಕಾರದಲ್ಲಿ ನಾಯಕ ಸಮುದಾಯದ ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ನಾಯಕ ಜನಾಂಗದ ಮುಖಂಡ ದ್ಯಾವಪ್ಪ ನಾಯಕ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ನಾಯಕ ಸಮುದಾಯದ…

ಖಾತೆಹಂಚಿಕೆ ಸಿಎಂ, ಡಿಸಿಎಂ ಬಳಿ ಭರಪೂರ ಅಧಿಕಾರ
ಮೈಸೂರು

ಖಾತೆಹಂಚಿಕೆ ಸಿಎಂ, ಡಿಸಿಎಂ ಬಳಿ ಭರಪೂರ ಅಧಿಕಾರ

June 9, 2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವರು ಗಳಿಗೆ ಖಾತೆಗಳನ್ನು ಹಂಚಿಕೆ ಮಾಡಲಾ ಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಣಕಾಸು, ಗುಪ್ತಚರ, ಇಂಧನ, ವಾರ್ತಾ ಮತ್ತು ಪ್ರಸಾರ, ಯೋಜನಾ ಮತ್ತು ಸಾಂಖ್ಯಿಕ ಸೇರಿದಂತೆ 11 ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ.ಪರಮೇ ಶ್ವರ್ ಅವರಿಗೆ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿ ದಾಖಲೆ ನಿರ್ಮಿಸಿದ ಜಿ.ಟಿ.ದೇವೇಗೌಡ ರಿಗೆ…

ಜಿಟಿಡಿ, ಪುಟ್ಟರಾಜು ಬೆಂಬಲಿಗರು, ಜೆಡಿಎಸ್ ಮುಖಂಡರ ಆಕ್ರೋಶ
ಮೈಸೂರು

ಜಿಟಿಡಿ, ಪುಟ್ಟರಾಜು ಬೆಂಬಲಿಗರು, ಜೆಡಿಎಸ್ ಮುಖಂಡರ ಆಕ್ರೋಶ

June 9, 2018

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (ಈಗ ಮಾಜಿ) ಅವರನ್ನು ಮಣ ಸಿದ್ದ ಜಿ.ಟಿ. ದೇವೇಗೌಡ ಅವರಿಗೆ ಪ್ರಮುಖ ಖಾತೆ ಲಭಿಸುವ ನಿರೀಕ್ಷೆಯ ಲ್ಲಿದ್ದ ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಈಗ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದ ಜಿ.ಟಿ. ದೇವೇಗೌಡರಿಗೆ ಸಹಜವಾಗಿಯೇ ಪ್ರಬಲ ಖಾತೆ ಸಿಗುವ ಬಗ್ಗೆಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಭಾರೀ…

ಮಂತ್ರಿ ಸ್ಥಾನ ವಂಚಿತ ಅತೃಪ್ತ ಕಾಂಗ್ರೆಸ್ ಶಾಸಕರ ಬಂಡಾಯ ತಾರಕಕ್ಕೆ: ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಕ್ಕೆ ಭಾರೀ ಕಂಟಕ
ಮೈಸೂರು

ಮಂತ್ರಿ ಸ್ಥಾನ ವಂಚಿತ ಅತೃಪ್ತ ಕಾಂಗ್ರೆಸ್ ಶಾಸಕರ ಬಂಡಾಯ ತಾರಕಕ್ಕೆ: ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಕ್ಕೆ ಭಾರೀ ಕಂಟಕ

June 9, 2018

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಕಾಂಗ್ರೆಸ್ ಶಾಸಕರ ಬಂಡಾಯ ತಾರಕಕ್ಕೇರಿದ್ದು, ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಭಾರೀ ಕಂಟಕ ಎದುರಾದಂತಿದೆ. ವೀರಶೈವ ಹಾಗೂ ಉತ್ತರ ಕರ್ನಾಟಕ ಭಾಗದ ಅತೃಪ್ತ ಸುಮಾರು 15-20 ಶಾಸಕರ ನಾಯಕತ್ವ ವಹಿಸಿಕೊಂಡಿರುವ ಎಂ.ಬಿ. ಪಾಟೀಲ್, ಪಕ್ಷದ ವರಿಷ್ಠರ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವುದರಿಂದ ಮೈತ್ರಿ ಸರ್ಕಾರದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ, ರಂಗ ಪ್ರವೇಶ ಮಾಡಿ ಅತೃಪ್ತರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿ ದರಲ್ಲದೆ, ಭಿನ್ನರು ಹಾಗೂ ವರಿಷ್ಠರ…

ಉಪ ಮುಖ್ಯಮಂತ್ರಿ ಸ್ಥಾನವೇ ಬೇಕು: ಎಂ.ಬಿ. ಪಾಟೀಲ್ ಪಟ್ಟು
ಮೈಸೂರು

ಉಪ ಮುಖ್ಯಮಂತ್ರಿ ಸ್ಥಾನವೇ ಬೇಕು: ಎಂ.ಬಿ. ಪಾಟೀಲ್ ಪಟ್ಟು

June 9, 2018

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಬೇಡ, ನನಗೆ ಮಂತ್ರಿ ಸ್ಥಾನವೂ ಬೇಕಿಲ್ಲ, ಉಪಮುಖ್ಯಮಂತ್ರಿ ಸ್ಥಾನವೇ ಬೇಕು ಎಂದು ಬಂಡಾಯ ನಾಯಕ ಎಂ.ಬಿ.ಪಾಟೀಲ್ ಇಂದಿಲ್ಲಿ ಖಡಕ್ಕಾಗಿ ಪಕ್ಷದ ನಾಯಕ ರಿಗೆ ತಿಳಿಸಿದ್ದಾರೆ. ಮಂತ್ರಿಮಂಡಲ ರಚನೆ ಆಗುತ್ತಿದ್ದಂತೆ ಪಾಟೀಲ್ ನೇತೃತ್ವದಲ್ಲಿ ಎದ್ದಿರುವ ಬಂಡಾಯ ಶಮನಗೊಳಿ ಸಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಹಿರಿಯ ಸಚಿವರಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ತಮ್ಮ ಸ್ಪಷ್ಟ…

ಮೈತ್ರಿ ಸರ್ಕಾರ ಟೇಕಾಫ್ ಆಗುವ ಮುನ್ನವೇ  ಭಾರೀ ಬಂಡಾಯ ಬಿಸಿ
ಮೈಸೂರು

ಮೈತ್ರಿ ಸರ್ಕಾರ ಟೇಕಾಫ್ ಆಗುವ ಮುನ್ನವೇ  ಭಾರೀ ಬಂಡಾಯ ಬಿಸಿ

June 8, 2018

 15ಕ್ಕೂ ಅಧಿಕ ಕಾಂಗ್ರೆಸ್ ಶಾಸಕರಿಂದ ಬಂಡಾಯ ಕಹಳೆ ದಿನವಿಡೀ ಪ್ರತ್ಯೇಕ ಸಭೆ: ನಾಲ್ಕು ಪಂಗಡಗಳಾಗಿರುವ ಅತೃಪ್ತರು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಮೈಸೂರು: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕೂಟ ಸರ್ಕಾರ ಟೇಕಾಫ್ ಆಗುವ ಮುನ್ನವೇ ಕಾಂಗ್ರೆಸ್‍ನಲ್ಲಿ ಭಾರೀ ಬಂಡಾಯವೆದ್ದಿದ್ದು, ಸರ್ಕಾರದ ಅಸ್ತಿತ್ವಕ್ಕೆ ಸವಾಲಾಗಿ ಪರಿಣಮಿಸಿದೆ. ಬುಧವಾರ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆಯೇ ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಪ್ರಭಾವಿ ಶಾಸಕರು ತೀವ್ರ ಆಕ್ರೋಶಗೊಂಡಿದ್ದಾರೆ. ಪ್ರತ್ಯೇಕ ಸಭೆ ಸೇರುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಶಾಸಕರಂತೂ ಕೆರಳಿ ಕೆಂಡವಾಗಿದ್ದಾರೆ. ಇವರಲ್ಲಿ…

ಮೈತ್ರಿ ಸರ್ಕಾರದಲ್ಲಿ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡದೇ ಅನ್ಯಾಯ ಆರೋಪ
ಮೈಸೂರು

ಮೈತ್ರಿ ಸರ್ಕಾರದಲ್ಲಿ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡದೇ ಅನ್ಯಾಯ ಆರೋಪ

June 8, 2018

ಮೈಸೂರು: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‍ನ ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನಮಾನ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಹಾಲುಮತ ಮಹಾಸಭಾದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಗಾಂಧಿಚೌಕದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ನಲ್ಲಿರುವ ಕಾರಣಕ್ಕೆ ಶೇ.90ರಷ್ಟು ಕುರುಬ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಈಗ ಕಾಂಗ್ರೆಸ್‍ನಲ್ಲಿ ಜನಾಂಗದ ಶಾಸಕರಿಗೆ ಸಚಿವ ಸ್ಥಾನ ನೀಡದೇ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಐದು ವರ್ಷಗಳ ಪೂರ್ಣಾವಧಿಗೆ…

1 10 11 12 13
Translate »