Tag: congress-jds alliance

ಸಿದ್ದರಾಮಯ್ಯ ಸಿಎಂ ಆದರೆ ಜೆಡಿಎಸ್ ಬೆಂಬಲ ಇಲ್ಲ: ಹೆಚ್.ಡಿ.ದೇವೇಗೌಡ ಖಡಕ್ ಎಚ್ಚರಿಕೆ
ಮೈಸೂರು

ಸಿದ್ದರಾಮಯ್ಯ ಸಿಎಂ ಆದರೆ ಜೆಡಿಎಸ್ ಬೆಂಬಲ ಇಲ್ಲ: ಹೆಚ್.ಡಿ.ದೇವೇಗೌಡ ಖಡಕ್ ಎಚ್ಚರಿಕೆ

July 8, 2019

ಬೆಂಗಳೂರು: ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವುದಾದಲ್ಲಿ ಕಾಂಗ್ರೆಸ್‍ಗೆ ನೀಡಿದ ಬೆಂಬಲ ವಾಪಾಸ್ ಪಡೆಯಲಾಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಒಪ್ಪಂದದ ಪ್ರಕಾರ 5 ವರ್ಷ ಜೆಡಿಎಸ್‍ಗೆ ಮುಖ್ಯಮಂತ್ರಿ ಹುದ್ದೆ ಅಧಿಕಾರ ಕೊಟ್ಟರೆ ಮಾತ್ರ ಬೆಂಬಲ ನೀಡುತ್ತೇವೆ ಹೊರತು ಸಿದ್ದರಾಮಯ್ಯ ಸಿಎಂ ಆದರೆ ಬೆಂಬಲಿಸಲು ಸಿದ್ಧವಿಲ್ಲ ಎಂದು ದೇವೇಗೌಡ ಖಡಕ್ ಮಾತು ಗಳಲ್ಲಿ ಕೈ ನಾಯಕರಿಗೆ ಎಚ್ಚರಿಸಿದ್ದಾರೆ. ಪದ್ಮನಾಭ ನಗರದ ಎಚ್.ಡಿ.ದೇವೇಗೌಡ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ನಂತರ ಮಾತನಾಡಿದ ದೇವೇಗೌಡ, ಮಾಜಿ ಸಿಎಂ…

ಸಿದ್ದರಾಮಯ್ಯ ಮತ್ತೆ ಸಿಎಂ; ಬೆಂಗಳೂರು ಶಾಸಕರ ಒತ್ತಾಯ
ಮೈಸೂರು

ಸಿದ್ದರಾಮಯ್ಯ ಮತ್ತೆ ಸಿಎಂ; ಬೆಂಗಳೂರು ಶಾಸಕರ ಒತ್ತಾಯ

July 8, 2019

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಇಬ್ಬರು ಕಾಂಗ್ರೆಸ್ ಶಾಸಕರು ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್, ಶಾಸಕರಾದ ರಾಮಲಿಂಗಾ ರೆಡ್ಡಿ ಹಾಗೂ ಮುನಿರತ್ನ ಅವರೊಂದಿಗೆ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ, ರೇವಣ್ಣ ಉಪಮುಖ್ಯಮಂತ್ರಿಯಾಗಲಿ ಎಂದು ಈ ಶಾಸಕರು ಒತ್ತಾಯ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ….

ಪಟ್ಟು ಸಡಿಲಿಸದ ರಾಮಲಿಂಗಾ ರೆಡ್ಡಿ
Uncategorized, ಮೈಸೂರು

ಪಟ್ಟು ಸಡಿಲಿಸದ ರಾಮಲಿಂಗಾ ರೆಡ್ಡಿ

July 8, 2019

ಬೆಂಗಳೂರು: ರಾಜೀನಾಮೆ ಹಿಂಪಡೆಯುವಂತೆ ರಾಮಲಿಂಗಾ ರೆಡ್ಡಿ ಅವರನ್ನು ಮನವೊಲಿ ಸಲು ಮಲ್ಲಿಕಾರ್ಜುನ ಖರ್ಗೆ ನಡೆಸಿದ ಸಂಧಾನ ವಿಫಲವಾಗಿದೆ. ರಾಮಲಿಂಗಾ ರೆಡ್ಡಿ ಅವರ ಜೊತೆ ಮಲ್ಲಿಕಾರ್ಜುನ ಖರ್ಗೆ ದೂರವಾಣಿ ಮೂಲಕ ಮಾತನಾಡಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ರೆಡ್ಡಿ ಅವರು ನಾನು ಈಗಾಗಲೇ ರಾಜೀ ನಾಮೆ ಕೊಟ್ಟಾಗಿದೆ. ಅದರಿಂದ ನಾನಾಗಲೀ, ನನ್ನ ಪುತ್ರಿಯಾಗಲೀ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ನಿಮ್ಮ ಅಧಿಕಾರವೂ ಬೇಡ, ಸಹವಾಸವೂ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ಹೇಳಲಾಗಿದೆ. ಇದಾದ ನಂತರ ಡಿ.ಕೆ.ಶಿವಕುಮಾರ್…

ನಾವ್ಯಾರೂ ರಾಜೀನಾಮೆ ಹಿಂಪಡೆಯಲ್ಲ:  ಅತೃಪ್ತ ಶಾಸಕರ ಘೋಷಣೆ
ಮೈಸೂರು

ನಾವ್ಯಾರೂ ರಾಜೀನಾಮೆ ಹಿಂಪಡೆಯಲ್ಲ: ಅತೃಪ್ತ ಶಾಸಕರ ಘೋಷಣೆ

July 8, 2019

ಮುಂಬೈ: ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಹೋಟೆಲ್ ಮುಂಭಾಗ ಚುಟುಕು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ಈ ಎಚ್ಚರಿಕೆ ಸಂದೇಶವನ್ನು ನೀಡಿದರು. ರಾಜೀ ನಾಮೆ ಕೊಟ್ಟಿರುವ ನಾವ್ಯಾರೂ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಾವು ಮುಖ್ಯಮಂತ್ರಿ ಬದಲಾವಣೆ ಬೇಡಿಕೆ ಇಟ್ಟಿಲ್ಲ. ಬೇರೆ ಯಾರನ್ನೂ ಮುಖ್ಯಮಂತ್ರಿ ಮಾಡಬೇಕೆಂದು ಕೇಳಲೂ ಇಲ್ಲ ಎಂದರು. ಅವರ ಮಾತುಗಳನ್ನೇ ಜೆಡಿಎಸ್ ಶಾಸಕ ಗೋಪಾಲಯ್ಯ ಮತ್ತು ಕಾಂಗ್ರೆಸ್ ಶಾಸಕ ಬಿ.ಎಸ್.ಪಾಟೀಲ್…

ಖರ್ಗೆಗೆ ಸಿಎಂ ಪಟ್ಟ ಸಾಧ್ಯತೆ
ಮೈಸೂರು

ಖರ್ಗೆಗೆ ಸಿಎಂ ಪಟ್ಟ ಸಾಧ್ಯತೆ

July 8, 2019

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದಿರುವ 13 ಶಾಸಕರು ತಮ್ಮ ವಿಧಾನಸಭಾ ಸದ ಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕವೂ ಸರ್ಕಾರ ಉಳಿಸಿಕೊಳ್ಳುವತ್ತ ಕಾಂಗ್ರೆಸ್-ಜೆಡಿಎಸ್ ನಾಯಕರು ಗಂಭೀರ ಚಿಂತನೆ ನಡೆಸಿದ್ದು, ಅಗತ್ಯ ಬಿದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬದಲಾವಣೆಯಂತಹ ಕಠಿಣ ನಿರ್ಧಾರ ಅನಿವಾರ್ಯ ಎನ್ನುವ ನಿಲುವಿಗೆ ಬಂದಿದ್ದಾರೆ. ಸರ್ಕಾರ ರಕ್ಷಣೆಗೆ ಹಲವು ಸೂತ್ರಗಳನ್ನು ಸಿದ್ಧಪಡಿಸಿದ್ದು, ಇದರಲ್ಲಿ ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸುವುದು ಸೇರಿದೆ. ಸರ್ಕಾರ ಉಳಿಯಬೇಕಾದರೆ ಅತೃಪ್ತ ಶಾಸಕರ ಬೇಡಿಕೆಗಳಿಗೆ ಮನ್ನಣೆ ನೀಡುವುದು ಅನಿವಾರ್ಯ ಎಂಬುದನ್ನು ಮನಗಂಡಿದ್ದಾರೆ. ರಾಜೀನಾಮೆ ನೀಡಿರುವ…

ಯಾವುದೇ ತ್ಯಾಗಕ್ಕೂ ಸಿದ್ಧ: ಜಿಟಿಡಿ
ಮೈಸೂರು

ಯಾವುದೇ ತ್ಯಾಗಕ್ಕೂ ಸಿದ್ಧ: ಜಿಟಿಡಿ

July 8, 2019

ಬೆಂಗಳೂರು: ರಾಜ್ಯದ ಹಿತದೃಷ್ಟಿಯಿಂದ ತಾವು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ತಿಳಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪಕ್ಷದ ವರಿಷ್ಠರು ಹೇಳಿದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅಥವಾ ಬೇರೆ ಯಾರನ್ನೂ ಮುಖ್ಯಮಂತ್ರಿ ಮಾಡಿದರೂ ಕೂಡ ತಾವು ಒಪ್ಪುವುದಾಗಿ ಹೇಳಿದರು. ತನಗೆ ಮತ ನೀಡಿ ಗೆಲ್ಲಿಸಿರುವ ಚಾಮುಂ ಡೇಶ್ವರಿ ಕ್ಷೇತ್ರದ ಮತದಾರರಿಗೆ ದ್ರೋಹವೆಸಗಿ ಜೆಡಿಎಸ್ ಬಿಟ್ಟು ಬಿಜೆಪಿಗೆ…

`ಮೈತ್ರಿ’ ಉಳಿವಿಗೆ ಸಂಪುಟ ಪುನರ್ರಚನೆ
Uncategorized, ಮೈಸೂರು

`ಮೈತ್ರಿ’ ಉಳಿವಿಗೆ ಸಂಪುಟ ಪುನರ್ರಚನೆ

July 4, 2019

ಬೆಂಗಳೂರು, ಜು. 3(ಕೆಎಂಶಿ)-ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವನ್ನು ಮತ್ತೊಮ್ಮೆ ಪುನರ್ ರಚಿಸಲು ಮುಂದಾಗಿದ್ದಾರೆ. ಅಮೆರಿಕಾ ಪ್ರವಾಸದಿಂದ ಹಿಂತಿರುಗು ತ್ತಿದ್ದಂತೆ ಆರು ಹೊಸ ಮುಖಗಳಿಗೆ ಸಂಪುಟ ದಲ್ಲಿ ಅವಕಾಶ ಮಾಡಿಕೊಡಲು ತೀರ್ಮಾ ನಿಸಿದ್ದಾರೆ. ಆಪರೇಷನ್ ಕಮಲದ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ವರಿ ಷ್ಠರೇ ಮುಂದಾಗಿರುವ ಹಿನ್ನೆಲೆಯಲ್ಲಿ ತಂತ್ರಕ್ಕೆ ಪ್ರತಿತಂತ್ರದ ಮೊದಲ ಭಾಗ ಇದಾಗಿದೆ. ಸರ್ಕಾರ ಉಳಿಸಲು ಕಾಂಗ್ರೆಸ್-ಜೆಡಿಎಸ್‍ನ ಐವರು ಸಚಿವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನ ತ್ಯಜಿಸುವ ಇಂಗಿತ…

ಮೈತ್ರಿ ಸರ್ಕಾರದ ಕೌಂಟ್‍ಡೌನ್ ಆರಂಭ
ಮೈಸೂರು

ಮೈತ್ರಿ ಸರ್ಕಾರದ ಕೌಂಟ್‍ಡೌನ್ ಆರಂಭ

July 2, 2019

ಬೆಂಗಳೂರು,ಜು.1(ಕೆಎಂಶಿ)-ಕಾಂಗ್ರೆಸ್‍ನ ಶಾಸಕರಾದ ಆನಂದ್‍ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಅವರುಗಳು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿದೇಶ ಪ್ರವಾಸ ದಲ್ಲಿರುವಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕೌಂಟ್‍ಡೌನ್ ಆರಂಭವಾಗಿದೆ. ಇವರಿಬ್ಬರು ಮಾತ್ರವಲ್ಲದೇ, ಇನ್ನೂ ಏಳು ಶಾಸಕರು ರಾಜೀನಾಮೆ ನೀಡ ಲಿದ್ದಾರೆ ಎಂಬ ಮಾತುಗಳು ಕೇಳಿಬರು ತ್ತಿದ್ದು, ಈ ಹಿಂದೆ `ರಾಜೀನಾಮೆ ಕೊಟ್ಟರೆ ನಾನೊಬ್ಬನೇ ಕೊಡುವುದಿಲ್ಲ, ನಾವೆಲ್ಲಾ ಒಂದು ಗುಂಪಾಗಿ ರಾಜೀನಾಮೆ ಕೊಡು ತ್ತೇವೆ’ ಎಂದು ರಮೇಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ನಿಜವಾಗುವುದೇ? ಎಂಬ ಪ್ರಶ್ನೆ ರಾಜಕೀಯ…

ಡಿಸೆಂಬರ್ ಗೆ ದೋಸ್ತಿ ಖತಂ?
ಮೈಸೂರು

ಡಿಸೆಂಬರ್ ಗೆ ದೋಸ್ತಿ ಖತಂ?

June 27, 2019

ಬೆಂಗಳೂರು, ಜೂ. 26 (ಕೆಎಂಶಿ)-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಡಿಸೆಂಬರ್‍ನಲ್ಲಿ ಅಂತ್ಯಗೊಳಿಸಿ, ಮಧ್ಯಂತರ ಚುನಾವಣೆಗೆ ತೆರಳಲು ರಾಜ್ಯ ಪ್ರದೇಶ ಕಾಂಗ್ರೆಸ್ ಮುಂದಾಗಿದೆ. ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಕೆ.ಸಿ.ವೇಣುಗೋಪಾಲ್, ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಾಯಕತ್ವದಲ್ಲಿ ಪಕ್ಷದ ಹಿರಿಯ ನಾಯಕರ ಜೊತೆ ಪಕ್ಷ ಸಂಘಟನೆ ಕುರಿತಂತೆ ಇಂದು ನಡೆದ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಗಿದೆ. ಕುಮಾರಸ್ವಾಮಿ ಅವರಿಗೆ ಪೂರ್ಣ ಅಧಿಕಾರಾವಧಿ ನೀಡಿದರೆ, ರಾಜ್ಯದಲ್ಲಿ ಕಾಂಗ್ರೆಸ್…

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬದಲಾವಣೆಗೆ ಕಾಂಗ್ರೆಸ್ ವರಿಷ್ಠರ ಚಿಂತನೆ
ಮೈಸೂರು

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬದಲಾವಣೆಗೆ ಕಾಂಗ್ರೆಸ್ ವರಿಷ್ಠರ ಚಿಂತನೆ

June 12, 2019

ಬೆಂಗಳೂರು: ರಾಜ್ಯದ ಆಡಳಿತಾರೂಢ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಮೌನಕ್ಕೆ ಶರಣಾಗಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಕಳೆದ ಭಾನುವಾರ ರಾತ್ರಿ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ…

1 2 3 4 13
Translate »