Tag: COVID-19

ರಾಜ್ಯಾದ್ಯಂತ ಇಂದಿನಿಂದ ಬಸ್, ಆಟೋ, ಟ್ಯಾಕ್ಸಿ ಸಂಚಾರ
ಮೈಸೂರು

ರಾಜ್ಯಾದ್ಯಂತ ಇಂದಿನಿಂದ ಬಸ್, ಆಟೋ, ಟ್ಯಾಕ್ಸಿ ಸಂಚಾರ

May 19, 2020

ಬೆಂಗಳೂರು, ಮೇ 18(ಕೆಎಂಶಿ)- ಸಿನಿಮಾ ಮಂದಿರ, ಮಾಲ್ ಹೊರತುಪಡಿಸಿ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗೆ ಸರ್ಕಾರ ನಾಳೆಯಿಂದ ಹಸಿರು ನಿಶಾನೆ ತೋರಿದೆ. ಆದರೆ ಭಾನುವಾರ ರಜೆ ದಿನದಂತೆ ಸಂಪೂರ್ಣ ಕಫ್ರ್ಯೂ ಹೇರಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ನಾಳೆ ಯಿಂದ (ಮೇ 19)ಸಂಚಾರ ಪ್ರಾರಂಭಿಸಲಿದ್ದು, ಇದೇ ಸಂದರ್ಭದಲ್ಲಿ ನಗರ ಸಾರಿಗೆ ಹಾಗೂ ಖಾಸಗಿ ಬಸ್ ಓಡಾಟಕ್ಕೂ ಅನುವು ಮಾಡಿ ಕೊಟ್ಟಿದೆ. ರಾಜ್ಯದ ಒಳಗಡೆ ರೈಲು ಓಡಾ ಟಕ್ಕೆ ಅನುವು ಮಾಡಿಕೊಟ್ಟಿರುವ ಸರ್ಕಾರ, ಮೆಟ್ರೋ, ವಿಮಾನ ಸೇವೆಯನ್ನು…

ಮೈಸೂರು ರೆಡ್ ಜೋನ್‍ನಿಂದ ಹೊರ ಬರಲು ದಿನಗಣನೆ 10ನೇ ದಿನವೂ ಹೊಸ ಪ್ರಕರಣ ಪತ್ತೆಯಾಗಿಲ್ಲ
ಮೈಸೂರು

ಮೈಸೂರು ರೆಡ್ ಜೋನ್‍ನಿಂದ ಹೊರ ಬರಲು ದಿನಗಣನೆ 10ನೇ ದಿನವೂ ಹೊಸ ಪ್ರಕರಣ ಪತ್ತೆಯಾಗಿಲ್ಲ

May 11, 2020

ಮೈಸೂರು, ಮೇ 10(ಎಂಟಿವೈ)- ರೆಡ್‍ಜೋನ್ ಹಣೆಪಟ್ಟಿಯಿಂದ ಹೊರ ಬರಲು ಮೈಸೂರು ಜಿಲ್ಲೆಗೆ ನಾಲ್ಕೇ ಮೆಟ್ಟಿಲು ಬಾಕಿ ಇದೆ. ಸತತ 2 ವಾರ ಹೊಸ ಪ್ರಕರಣ ಪತ್ತೆ ಯಾಗದಿದ್ದರೆ ನಿಯಮಾನುಸಾರ ರೆಡ್‍ಜೋನ್‍ನಿಂದ ಆರೆಂಜ್‍ಜೋನ್‍ಗೆ ವರ್ಗಾವಣೆಯಾಗುವುದರಿಂದ ಮೈಸೂರಿನ ಜನತೆ ಕೇವಲ 4 ದಿನಗಳತ್ತ ಗಮನ ಕೇಂದ್ರೀಕರಿಸುವಂತಾಗಿದೆ. ಕೊರೊನಾ ಮುಕ್ತವಾಗುವತ್ತ ಮೈಸೂರು ದಾಪುಗಾಲಿಡುತ್ತಿದ್ದು, ಸತತ 10ನೇ ದಿನವೂ ಕೊರೊನಾ ಸೋಂಕಿತ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್ ಆಸ್ಪತ್ರೆಯಿಂದ ಸೋಂಕಿತರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಕ್ರಿಯ ಪ್ರಕರಣ ಕೇವಲ 4ಕ್ಕೆ ಕುಸಿದಿದ್ದರೆ, ಬಿಡುಗಡೆ…

ವೈದ್ಯರು, ಆರೋಗ್ಯ ಸಿಬ್ಬಂದಿ, ಜಿಲ್ಲಾಡಳಿತದ ಪರಿಶ್ರಮದಿಂದ ಮೈಸೂರಲ್ಲಿ ಕೊರೊನಾ ಸೋಂಕು ನಿಯಂತ್ರಣ
ಮೈಸೂರು

ವೈದ್ಯರು, ಆರೋಗ್ಯ ಸಿಬ್ಬಂದಿ, ಜಿಲ್ಲಾಡಳಿತದ ಪರಿಶ್ರಮದಿಂದ ಮೈಸೂರಲ್ಲಿ ಕೊರೊನಾ ಸೋಂಕು ನಿಯಂತ್ರಣ

May 11, 2020

ಮೈಸೂರು,ಮೇ 10(ಎಂಟಿವೈ)- ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸತತ ಪರಿಶ್ರಮದಿಂದ ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ವೈರಾಣು ಹರಡುವು ದನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದರೊಂದಿಗೆ ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡು ವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಪತ್ರ ಮುಖೇನ ಮನವಿ ಮಾಡಿದ್ದಾರೆ. ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿ ಮುಖವಾಗುವುದರೊಂದಿಗೆ ಕಳೆದ 9 ದಿನದಿಂದ ಹೊಸ ಸೋಂಕಿತರ ಪತ್ತೆಯಾಗದೇ ಇರುವುದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಗಳ…

ಮೈಸೂರಲ್ಲಿ ಕ್ವಾರಂಟೈನ್ ಸಂಖ್ಯೆ ಇಳಿಮುಖ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್
ಮೈಸೂರು

ಮೈಸೂರಲ್ಲಿ ಕ್ವಾರಂಟೈನ್ ಸಂಖ್ಯೆ ಇಳಿಮುಖ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್

April 27, 2020

ಮೈಸೂರು,ಏ.26(ಆರ್‍ಕೆಬಿ)- ಮೈಸೂರಿನಲ್ಲಿ ಕ್ವಾರಂಟೈನ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 28 ದಿನಗಳ ಅವಧಿಯ ಕ್ವಾರಂಟೈನ್ ಪ್ರಕರಣಗಳಲ್ಲಿ ನಮ್ಮಲ್ಲಿ ಸದ್ಯ ಒಟ್ಟು 830 ಜನ ಇದ್ದಾರೆ. ಶನಿವಾರ ಬಂದಿರುವ ಮಹಿಳೆಯೊಬ್ಬರ ಪಾಸಿಟಿವ್ ಪ್ರಕರಣದಲ್ಲಿ ಮಹಿಳೆ ಸಂಪರ್ಕ ಕೂಡ ಕಡಿಮೆ ಇದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇಂದಿಲ್ಲಿ ತಿಳಿಸಿದರು. ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಜಿಲ್ಲೆಯಲ್ಲಿ 300ಕ್ಕೂ ಅಧಿಕ `ಎಸ್‍ಎ ಆರ್‍ಐ’ (Severe Acute Respiratory Illness) ಪ್ರಕರಣಗಳು ಪತ್ತೆಯಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸ ಲಾಗಿದೆ….

ಮೈಸೂರಿನಾದ್ಯಂತ ಸಂಚಾರ ಬಂದ್
ಮೈಸೂರು

ಮೈಸೂರಿನಾದ್ಯಂತ ಸಂಚಾರ ಬಂದ್

April 18, 2020

ಮೈಸೂರು, ಏ. 17(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿ ರುವುದರಿಂದ ಇಂದು ಮೈಸೂರಲ್ಲಿ ಹಾಟ್‍ಸ್ಪಾಟ್ ಗಳು ಸೇರಿದಂತೆ ಎಲ್ಲೆಡೆ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾ ಗಿರುವ ಮೈಸೂರಿನ ವಿಜಯನಗರ 1, 2ನೇ ಹಂತ, ನಜರ್‍ಬಾದ್, ಜನತಾನಗರ, ಕುವೆಂಪುನಗರ, ಜೆ.ಪಿ.ನಗರ, ಜಯಲಕ್ಷ್ಮಿಪುರಂ, ಶ್ರೀರಾಂಪುರ 2ನೇ ಹಂತ, ಸರ್ದಾರ್ ವಲ್ಲಭಭಾಯಿ ಪಟೇಲ್‍ನಗರ 2ನೇ ಹಂತಗಳಲ್ಲಿ ಎಲ್ಲಾ ಪ್ರಮುಖ ರಸ್ತೆ ಮತ್ತು ಸಣ್ಣಪುಟ್ಟ ರಸ್ತೆಗಳನ್ನೂ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಪೊಲೀಸರು…

ಲಾಕ್‍ಡೌನ್ ಪರಿಣಾಮ: ಪರ್ಯಾಯ ದಾರಿ ಕಂಡುಕೊಂಡ ಮೂಲ ಕಸುಬುಗಾರಿಕೆ ಕಾರ್ಮಿಕರು
ಮೈಸೂರು

ಲಾಕ್‍ಡೌನ್ ಪರಿಣಾಮ: ಪರ್ಯಾಯ ದಾರಿ ಕಂಡುಕೊಂಡ ಮೂಲ ಕಸುಬುಗಾರಿಕೆ ಕಾರ್ಮಿಕರು

April 18, 2020

– ರಾಜಕುಮಾರ್ ಭಾವಸಾರ್ ಮೈಸೂರು, ಏ.16(ಆರ್‍ಕೆಬಿ)- ಲಾಕ್ ಡೌನ್ ನಂತರ ಮೈಸೂರಿನ ಬೀದಿ, ಬೀದಿ ಗಳಲ್ಲಿ ತರಕಾರಿ, ಹಣ್ಣಿನ ವ್ಯಾಪಾರದ ಅಂಗಡಿಗಳು ಹೆಚ್ಚುತ್ತಿವೆ. ಕೆಲವು ಪ್ರಮುಖ ವೃತ್ತ, ರಸ್ತೆಗಳಲ್ಲಿ ಮಾತ್ರ ಅಲ್ಲೊಂದು, ಇಲ್ಲೊಂದು ತರಕಾರಿ, ಹಣ್ಣಿನ ಅಂಗಡಿ ಗಳು ಇದ್ದವು. ಆದರೆ ಕಳೆದ 15 ದಿನಗಳಿಂ ದೀಚೆಗೆ ನಗರದ ಬಹುತೇಕ ರಸ್ತೆಗಳಲ್ಲಿ ತರಕಾರಿ, ಹಣ್ಣಿನ ವ್ಯಾಪಾರ ಜೋರಾಗಿದೆ. ಜನರು ಸಹ ತರಕಾರಿ, ಹಣ್ಣು ಕೊಳ್ಳಲು ಬಹು ದೂರ ಹೋಗದೆ ಸನಿಹದಲ್ಲೇ ಇರುವ ಈ ತರಕಾರಿ ಅಂಗಡಿಗಳಲ್ಲಿಯೇ ಖರೀದಿಯಲ್ಲಿ…

ಹಾಪ್‍ಕಾಮ್ಸ್‍ನಲ್ಲಿ 7 ಟನ್‍ನಿಂದ 15 ಟನ್‍ಗೆ ಹೆಚ್ಚಿದ ಹಣ್ಣಿನ ಮಾರಾಟ
ಮೈಸೂರು

ಹಾಪ್‍ಕಾಮ್ಸ್‍ನಲ್ಲಿ 7 ಟನ್‍ನಿಂದ 15 ಟನ್‍ಗೆ ಹೆಚ್ಚಿದ ಹಣ್ಣಿನ ಮಾರಾಟ

April 18, 2020

ಮೈಸೂರು, ಏ.17(ಆರ್‍ಕೆಬಿ)- ಲಾಕ್‍ಡೌನ್ ಪರಿಣಾಮ ಮೈಸೂರಿನಲ್ಲಿ ತರಕಾರಿ ಮತ್ತು ಹಣ್ಣಿನ ಮಾರಾಟದಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ. ಹಾಪ್‍ಕಾಮ್ಸ್‍ನಲ್ಲಿ ಪ್ರತಿದಿನ 7 ಟನ್‍ನಷ್ಟು ಮಾರಾಟವಾಗುತ್ತಿದ್ದ ಹಣ್ಣು ಇದೀಗ 15 ಟನ್‍ಗೆ ಹೆಚ್ಚಳವಾಗಿದೆ. ಹಾಗೆಯೇ ತರಕಾರಿ ಮಾರಾಟದಲ್ಲೂ ಎರ ಡರಷ್ಟು ಹೆಚ್ಚಳವಾಗಿದೆ. ಸೇಬು, ಕಿತ್ತಳೆ, ದ್ರಾಕ್ಷಿ, ದಾಳಿಂಬೆ, ಕರಬೂಜ ಇನ್ನಿತರ ಹಣ್ಣುಗಳು ಹೆಚ್ಚಾಗಿ ಖರ್ಚಾಗುತ್ತಿವೆ. ಹಾಪ್‍ಕಾಮ್ಸ್ ವತಿಯಿಂದ ಮನೆ ಮನೆಗೆ ಹಣ್ಣು ತರಕಾರಿ ಮಾರಾಟವೂ ಇದಕ್ಕೆ ಪೂರಕವಾಗಿದೆ. ತೋಟಗಾರಿಕೆ ಉಪ ನಿರ್ದೇಶಕರ ರುದ್ರೇಶ್ ಪ್ರಕಾರ ಲಾಕ್‍ಡೌನ್‍ನಿಂದ ಜನರು ಮನೆಯಲ್ಲೇ…

ಯೋಗಕ್ಷೇಮ ವಿಚಾರಿಸಿದ ಉಸ್ತುವಾರಿ ಅಧಿಕಾರಿ ಹರ್ಷಗುಪ್ತ
ಮೈಸೂರು

ಯೋಗಕ್ಷೇಮ ವಿಚಾರಿಸಿದ ಉಸ್ತುವಾರಿ ಅಧಿಕಾರಿ ಹರ್ಷಗುಪ್ತ

April 18, 2020

ಮೈಸೂರು, ಏ.17- ಕೋವಿಡ್-19 ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿರುವ ನಂಜನಗೂಡಿಗೆ ಶುಕ್ರವಾರ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಭೇಟಿ ನೀಡಿ, ಸ್ಥಳೀಯರ ಯೋಗಕ್ಷೇಮ ವಿಚಾರಿಸಿದರು. ಔಷಧ ಕಾರ್ಖಾನೆಯ ನೌಕರರು ಹೋಂ ಕ್ವಾರಂಟೈನ್‍ನಲ್ಲಿದ್ದು, ಕೆಲವರ ಮನೆ ಬಳಿಗೆ ತೆರಳಿ, ಹೊರಗೆ ನಿಂತು ಕುಟುಂಬದವರ ಕುಶಲೋಪರಿ ವಿಚಾರಿಸಿಕೊಂಡರು. `ನಿಮ್ಮ ಮನೆಯ ಯಜಮಾನರ ಆರೋಗ್ಯ ಈಗ ಹೇಗಿದೆ? ಹೋಂ ಕ್ವಾರಂಟೈನ್ ಅವಧಿ ಮುಗಿದಿದೆಯಾ? ನಿಮ್ಮ ಮನೆಗೆ ಅಗತ್ಯ ವಸ್ತುಗಳು ಬರುತ್ತಿವೆಯಾ? ತರಕಾರಿಗೆ ಏನು ಮಾಡಿಕೊಂಡಿದ್ದೀರಿ…’ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ, ಆಯಾ…

ಕೊರೊನಾ ವೈರಸ್: 24 ಗಂಟೆಗಳಲ್ಲಿ 23 ಸಾವು, 1007 ಹೊಸ ಪಾಸಿಟಿವ್ ಪ್ರಕರಣಗಳು ದೇಶದಲ್ಲಿ ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆ
ಮೈಸೂರು

ಕೊರೊನಾ ವೈರಸ್: 24 ಗಂಟೆಗಳಲ್ಲಿ 23 ಸಾವು, 1007 ಹೊಸ ಪಾಸಿಟಿವ್ ಪ್ರಕರಣಗಳು ದೇಶದಲ್ಲಿ ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆ

April 18, 2020

ನವದೆಹಲಿ, ಏ.17- ಭಾರತದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 23 ಮಂದಿ ಸೋಂಕಿತರು ಸಾವನ್ನ ಪ್ಪಿದ್ದು ಆ ಮೂಲಕ ದೇಶದಲ್ಲಿ ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ 437ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೊರೊನಾ ಕುರಿತ ಮಾಹಿತಿ ನೀಡಿದರು. ‘ಲಾಕ್‍ಡೌನ್ ಘೋಷಣೆ ಬಳಿಕ ಭಾರತದಲ್ಲಿ ಕೊರೊನಾ ಪ್ರಸರಣ ಪ್ರಮಾಣ ಗಣನೀಯವಾಗಿ ತಗ್ಗಿದೆ. ಲಾಕ್‍ಡೌನ್‍ಗೂ ಮುನ್ನ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು…

ಮೈಸೂರಲ್ಲಿ ಕ್ವಾರಂಟೈನ್‍ನಲ್ಲಿದ್ದವರ ಬಿಡಾಡಿ ಸಂಚಾರ!
ಮೈಸೂರು

ಮೈಸೂರಲ್ಲಿ ಕ್ವಾರಂಟೈನ್‍ನಲ್ಲಿದ್ದವರ ಬಿಡಾಡಿ ಸಂಚಾರ!

April 6, 2020

ಮೈಸೂರು, ಏ.5(ಎಂಟಿವೈ)- ಮೈಸೂರಿನಲ್ಲಿ ಸದ್ಯ ಹೋಂ ಕ್ವಾರಂಟೈನ್‍ನಲ್ಲಿರುವ ಜುಬಿಲಂಟ್ ಕಾರ್ಖಾನೆಯ ನೌಕ ರರೂ ಸೇರಿದಂತೆ ಹಲವರು ಮನೆಯಿಂದ ಹೊರಬಂದು ಓಡಾಡುತ್ತಿದ್ದು, ಸುತ್ತಲ ನಿವಾಸಿಗಳನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಮೈಸೂರಿನ ಅಗ್ರಹಾರ, ವಿಜಯನಗರ, ಗೋಕುಲಂ ಸೇರಿದಂತೆ ವಿವಿಧೆಡೆ ಇರುವ ಮನೆಗಳಲ್ಲಿ ಕ್ವಾರಂಟೈನ್ ನಲ್ಲಿರುವ ಕೊರೊನಾ ಸೋಂಕು ತಗುಲಿರಬಹುದಾದ ಶಂಕೆ ಇರುವವರು ಮನೆಯಿಂದ ಹೊರಬರುತ್ತಿದ್ದಾರೆ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದರು. ದೂರು ಬಂದ ಸ್ಥಳಗಳಿಗೆ ಭಾನುವಾರ ಮುಂಜಾನೆಯೇ ತಕ್ಷಣ ಧಾವಿಸಿದ ಜಿಲ್ಲಾಡಳಿತದ ತಂಡ, ಸ್ವಗೃಹಗಳಲ್ಲಿ ಕ್ವಾರಂಟೈನ್ ಆಗಿದ್ದವರನ್ನು ಅಲ್ಲಿಂದ…

1 3 4 5 6 7
Translate »