ಯೋಗಕ್ಷೇಮ ವಿಚಾರಿಸಿದ ಉಸ್ತುವಾರಿ ಅಧಿಕಾರಿ ಹರ್ಷಗುಪ್ತ
ಮೈಸೂರು

ಯೋಗಕ್ಷೇಮ ವಿಚಾರಿಸಿದ ಉಸ್ತುವಾರಿ ಅಧಿಕಾರಿ ಹರ್ಷಗುಪ್ತ

April 18, 2020

ಮೈಸೂರು, ಏ.17- ಕೋವಿಡ್-19 ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿರುವ ನಂಜನಗೂಡಿಗೆ ಶುಕ್ರವಾರ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಭೇಟಿ ನೀಡಿ, ಸ್ಥಳೀಯರ ಯೋಗಕ್ಷೇಮ ವಿಚಾರಿಸಿದರು. ಔಷಧ ಕಾರ್ಖಾನೆಯ ನೌಕರರು ಹೋಂ ಕ್ವಾರಂಟೈನ್‍ನಲ್ಲಿದ್ದು, ಕೆಲವರ ಮನೆ ಬಳಿಗೆ ತೆರಳಿ, ಹೊರಗೆ ನಿಂತು ಕುಟುಂಬದವರ ಕುಶಲೋಪರಿ ವಿಚಾರಿಸಿಕೊಂಡರು.

`ನಿಮ್ಮ ಮನೆಯ ಯಜಮಾನರ ಆರೋಗ್ಯ ಈಗ ಹೇಗಿದೆ? ಹೋಂ ಕ್ವಾರಂಟೈನ್ ಅವಧಿ ಮುಗಿದಿದೆಯಾ? ನಿಮ್ಮ ಮನೆಗೆ ಅಗತ್ಯ ವಸ್ತುಗಳು ಬರುತ್ತಿವೆಯಾ? ತರಕಾರಿಗೆ ಏನು ಮಾಡಿಕೊಂಡಿದ್ದೀರಿ…’ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ, ಆಯಾ ಮನೆಯವರಿಂದ ಉತ್ತರ ಪಡೆದರು. `ಇದೂವರೆಗೂ ಕಂಪನಿಯವರೇ ಎರಡು ಬಾರಿ ತರಕಾರಿ, ದಿನಸಿ ಕೊಟ್ಟಿದ್ದಾರೆ. ಅಗತ್ಯ ಬಿದ್ದಾಗ ಸಮೀಪದ ಮಾರುಕಟ್ಟೆಗೆ ಒಬ್ಬಳೇ ನಡೆದು ಹೋಗಿ ತರಕಾರಿ ತರುವೆ’ ಎಂದು ಹೋಂ ಕ್ವಾರಂಟೈನ್‍ನಲ್ಲಿರುವ ನೌಕರರೊಬ್ಬರ ಪತ್ನಿ, ಹರ್ಷಗುಪ್ತ ಅವರಿಗೆ ತಿಳಿಸಿದರು. `ಮನೆಯಲ್ಲೂ ಅವರೊಟ್ಟಿಗೆ ವಾಸ ಮಾಡಬೇಡಿ. ಇನ್ನೂ ಕೆಲವು ದಿನ ಪ್ರತ್ಯೇಕವಾಗಿಟ್ಟಿರಿ. ಶೌಚ, ಸ್ನಾನವೂ ಪ್ರತ್ಯೇಕವಾಗಿ ನಡೆಯಲಿ’ ಎಂದು ಕಿವಿಮಾತು ಹೇಳಿದರು. ನಂತರ ಅಧಿಕಾರಿಗಳ ಸಭೆ ನಡೆಸಿದರು. ತಹಶೀಲ್ದಾರ್ ಕೆ.ಎಂ.ಮಹೇಶ್‍ಕುಮಾರ್ ನೇತೃತ್ವದ ತಂಡ ಮಾಹಿತಿ ನೀಡಿತು.

Translate »