ಕೊರೊನಾ ವೈರಸ್: 24 ಗಂಟೆಗಳಲ್ಲಿ 23 ಸಾವು, 1007 ಹೊಸ ಪಾಸಿಟಿವ್ ಪ್ರಕರಣಗಳು ದೇಶದಲ್ಲಿ ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆ
ಮೈಸೂರು

ಕೊರೊನಾ ವೈರಸ್: 24 ಗಂಟೆಗಳಲ್ಲಿ 23 ಸಾವು, 1007 ಹೊಸ ಪಾಸಿಟಿವ್ ಪ್ರಕರಣಗಳು ದೇಶದಲ್ಲಿ ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆ

April 18, 2020

ನವದೆಹಲಿ, ಏ.17- ಭಾರತದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 23 ಮಂದಿ ಸೋಂಕಿತರು ಸಾವನ್ನ ಪ್ಪಿದ್ದು ಆ ಮೂಲಕ ದೇಶದಲ್ಲಿ ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ 437ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೊರೊನಾ ಕುರಿತ ಮಾಹಿತಿ ನೀಡಿದರು. ‘ಲಾಕ್‍ಡೌನ್ ಘೋಷಣೆ ಬಳಿಕ ಭಾರತದಲ್ಲಿ ಕೊರೊನಾ ಪ್ರಸರಣ ಪ್ರಮಾಣ ಗಣನೀಯವಾಗಿ ತಗ್ಗಿದೆ. ಲಾಕ್‍ಡೌನ್‍ಗೂ ಮುನ್ನ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು 3 ದಿನಗಳು ಹಿಡಿಯುತ್ತಿತ್ತು. ಆದರೆ ಲಾಕ್‍ಡೌನ್ ಹೇರಿದ ಬಳಿಕ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು ಸರಾಸರಿ 7 ದಿನಗಳು ಬೇಕಾಗುತ್ತಿದೆ. ಪ್ರಸ್ತುತ ಪ್ರತೀ 6.2 ದಿನಗಳಿಗೆ ದೇಶದ 19 ರಾಜ್ಯಗಳು ಮತ್ತು ಕೇಂದ್ರಾ ಡಳಿತ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎಂದು ಹೇಳಿದರು.

ಅಂತೆಯೇ ‘ಪ್ರಸ್ತುತ ನಮ್ಮ ಗುರಿ ಏನಿದ್ದರೂ, ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಪ್ರಸ ರಿಸದಂತೆ ತಡೆಯಬೇಕು ಮತ್ತು ಅದಕ್ಕೆ ಆದಷ್ಟೂ ಶೀಘ್ರವಾಗಿ ಲಸಿಕೆ ಕಂಡು ಹಿಡಿದು ಮಹಾಮಾರಿ ಯನ್ನು ತೊಲಗಿಸಬೇಕು. ಇದಕ್ಕಾಗಿ ನಮ್ಮ ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸೋಂಕಿತರಿಗೆ ಬಿಸಿಜಿ, ಪ್ಲಾಸ್ಮಾ ಥೆರಪಿ, ಮೋನೊಕ್ಲೋನಲ್ ಆ್ಯಂಟಿಬಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಸಕಾರಾತ್ಮಕ ಫಲಿ ತಾಂಶ ಬರುತ್ತಿದೆ. ದೇಶದಲ್ಲಿ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾ ಗುತ್ತಿದ್ದು, ಸೋಂಕಿತರು ಮತ್ತು ಗುಣಮುಖರಾಗುತ್ತಿ ರುವವರ ಪ್ರಮಾಣ 80:20 ಅನುಪಾತದಲ್ಲಿದೆ. ಇದು ಕೊರೊನಾ ಪೀಡಿತ ಇನ್ನಾ ವುದೇ ದೇಶಗಳಿಗಿಂತ ಉತ್ತಮ ಅನುಪಾತವಾ ಗಿದೆ ಎಂದು ಲವ್ ಅಗ ರ್ವಾಲ್ ಹೇಳಿದ್ದಾರೆ.

ಇನ್ನು ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಮಾಹಿತಿ ನೀಡಿದ ಲವ್ ಅಗರ್ವಾಲ್ ಅವರು, ಭಾರತದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 23 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ದೇಶದಲ್ಲಿ ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ 437ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಅಂತೆಯೇ ಕಳೆದ 24 ಗಂಟೆಗಳ ಅವಧಿಯಲ್ಲಿ 1007 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 13,387ಕ್ಕೆ ಏರಿಕೆಯಾಗಿದೆ. ಈ ಪೈಕಿ 1,749 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಈ ಪ್ರಮಾಣವನ್ನು ಹೋಲಿಕೆ ಮಾಡಿದರೆ ಭಾರತದಲ್ಲಿ ಪ್ರತೀ 24 ಮಾದರಿಗಳಲ್ಲಿ 1 ಪಾಸಿಟಿವ್ ಪ್ರಕರಣ ಕಂಡುಬರುತ್ತಿದೆ ಎಂದು ಹೇಳಿದರು. ಕೊರೊನಾ ವೈರಸ್ ಗಾಗಿಯೇ ದೇಶದಲ್ಲಿ ಈವರೆಗೂ 1919 ಆಸ್ಪತ್ರೆಗಳನ್ನು ನಿಯೋಜಿಸಲಾಗಿದೆ.

ಇದಲ್ಲದೆ 1.73 ಲಕ್ಷ ಐಸೋಲೇಷನ್ ಬೆಡ್‍ಗಳು ಭಾರತದಲ್ಲಿದ್ದು, ಪ್ರತಿ ನಿತ್ಯ 10 ಲಕ್ಷ ಕೊರೊನಾ ಟೆಸ್ಟ್ ಮಾಡುವ ಗುರಿ ಹೊಂದಲಾಗಿದೆ. ಅಲ್ಲದೆ ತಿಂಗಳಿಗೆ 10 ಲಕ್ಷ ಖಖಿPಅಖ ಕಿಟ್‍ಗಳನ್ನು ದೇಶೀ ಯವಾಗಿ ಉತ್ಪಾದನೆ ಮಾಡುವ ಗುರಿ ಹೊಂದಲಾ ಗಿದೆ. ಕೊರೋನಾ ವಿರುದ್ಧದ ಹೋರಾಟ ಇತರೆ ಯಾವುದೇ ದೇಶಗಳಿಗಿಂತ ಭಾರತದಲ್ಲಿ ಉತ್ತಮ ವಾಗಿದೆ ಎಂದು ಲವ್ ಅಗರ್ವಾಲ್ ಹೇಳಿದರು.

Translate »