Tag: Dasara 2019

ಜಂಬೂಸವಾರಿಗೆ ಪ್ರಮೋದಾದೇವಿ ಒಡೆಯರ್ ಆಹ್ವಾನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
ಮೈಸೂರು

ಜಂಬೂಸವಾರಿಗೆ ಪ್ರಮೋದಾದೇವಿ ಒಡೆಯರ್ ಆಹ್ವಾನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

September 30, 2019

ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ಯದುವಂಶದ ರಾಜಮಾತೆ ಪ್ರಮೋದಾ ದೇವಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಹೂಗುಚ್ಛ ನೀಡಿ, ದಸರಾ ಶುಭಾಶಯ ವಿನಿಮಯ ಮಾಡಿಕೊಂಡರು. ಅಲ್ಲದೇ ಜಂಬೂ ಸವಾರಿ ಕಾರ್ಯ ಕ್ರಮಕ್ಕೆ ರಾಜ ಮನೆತನದವರು ಬರುವಂತೆ ಇದೇ ವೇಳೆ ಆಹ್ವಾನ ನೀಡಿದರು. ರಾಜ ಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಯಡಿಯೂರಪ್ಪ ಅವರು ದಸರಾ ಮಹೋತ್ಸವದಲ್ಲಿ ರಾಜಮನೆತನದ ಕೊಡುಗೆ ಅಪಾರವಾದದ್ದು, ರಾಜಮಾತೆ ಪ್ರಮೋದಾ ದೇವಿ ಅವರ ಜೊತೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದು,…

ನಾಳೆಯಿಂದ ದಸರಾ ಯೋಗ ಪ್ರದರ್ಶನ
ಮೈಸೂರು

ನಾಳೆಯಿಂದ ದಸರಾ ಯೋಗ ಪ್ರದರ್ಶನ

September 29, 2019

ಮೈಸೂರು,ಸೆ.28(ಆರ್‍ಕೆ)-ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ವಿವಿಧೆಡೆ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 6ರವರೆಗೆ ಯೋಗ ಪ್ರದರ್ಶನ ಏರ್ಪಡಿಸಲಾಗಿದೆ. ಮೈಸೂರಿನ ವಾರ್ತಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯೋಗ ದಸರಾ ಉಪಸಮಿತಿ ಅಧ್ಯಕ್ಷ ಡಾ.ಅನಿಲ್ ಥಾಮಸ್ ಹಾಗೂ ಉಪ ವಿಶೇಷಾಧಿಕಾರಿ ಕೆ.ರಮ್ಯ ಅವರು, ಸೆಪ್ಟೆಂಬರ್ 30 ಸಂಜೆ 5ರಿಂದ 8 ಗಂಟೆವರೆಗೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಓವಲ್ ಮೈದಾನದಲ್ಲಿ ಯೋಗ ನೃತ್ಯ ರೂಪಕ ನಡೆಯಲಿದ್ದು ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದರು. ಅ.1ರಂದು ಬೆಳಿಗ್ಗೆ 8 ರಿಂದ…

ಭಾನುವಾರ ದಸರಾ ಉತ್ಸವ ಉದ್ಘಾಟನೆ
ಮೈಸೂರು

ಭಾನುವಾರ ದಸರಾ ಉತ್ಸವ ಉದ್ಘಾಟನೆ

September 27, 2019

ಮೈಸೂರು,ಸೆ.26(ಆರ್‍ಕೆ)-2019ರ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಶೃಂಗಾರಗೊಂಡಿದೆ. ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ ಅವರು ಸೆಪ್ಟೆಂಬರ್ 29ರ ಭಾನುವಾರ ಬೆಳಿಗ್ಗೆ 9.39ರಿಂದ 10-25ಗಂಟೆಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ನಾಡ ಹಬ್ಬ 2019ರ ದಸರಾ ಮಹೋ ತ್ಸವವನ್ನು ಉದ್ಘಾಟಿಸುವರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಪ್ರಹ್ಲಾದ ಜೋಷಿ,…

ಪೊಲೀಸ್ ಬ್ಯಾಂಡ್ ರಿಹರ್ಸಲ್‍ನಲ್ಲಿ ಯದುವೀರ್ ಒಡೆಯರ್ ಪುತ್ರನೇ ಸ್ಟಾರ್..!
ಮೈಸೂರು

ಪೊಲೀಸ್ ಬ್ಯಾಂಡ್ ರಿಹರ್ಸಲ್‍ನಲ್ಲಿ ಯದುವೀರ್ ಒಡೆಯರ್ ಪುತ್ರನೇ ಸ್ಟಾರ್..!

September 27, 2019

ಮೈಸೂರು: ದಸರಾ ಹಬ್ಬದ ಹಿನ್ನೆಲೆ ಅರ ಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್ ರಿಹರ್ಸಲ್ ಆರಂಭವಾಗಿದೆ. ಈ ವೇಳೆ ಯದುವೀರ್ ಒಡೆಯರ್ ಹಾಗೂ ಪುತ್ರ ಆದ್ಯವೀರ್ ಒಡೆಯರ್ ಕೂಡ ಭಾಗ ವಹಿಸಿದ್ದಾರೆ. ಮೈಸೂರು ರಾಜವಂಶಸ್ಥರ ಉತ್ತರಾ ಧಿಕಾರಿ ಜೊತೆ ಅಪ್ಪನ ವಿಹಾರ ನಡೆಸಿರುವುದು. ಅರಮನೆ ಅಂಗಳಕ್ಕೆ ಶೋಭೆ ತಂದಿದೆ. ದರ್ಬಾರ್ ಹಾಲ್ ಮೇಲ್ಭಾಗದ ಗ್ಯಾಲರಿಯಲ್ಲಿ ಮಗ ಆದ್ಯವೀರ್ ಜೊತೆ ಯದುವೀರ್ ಒಡೆಯರ್ ಪೊಲೀಸ್ ಬ್ಯಾಂಡ್ ರಿಹರ್ಸಲ್ ವೀಕ್ಷಿಸಿದ್ದಾರೆ. ಈ ವೇಳೆ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪೆÇಲೀಸರು ಮುಗಿಬಿದ್ದರು.

ಮೈಸೂರು ದಸರಾ ವಸ್ತು ಪ್ರದರ್ಶನದಲ್ಲೊಂದು ಅಭಯಾರಣ್ಯ…!
ಮೈಸೂರು

ಮೈಸೂರು ದಸರಾ ವಸ್ತು ಪ್ರದರ್ಶನದಲ್ಲೊಂದು ಅಭಯಾರಣ್ಯ…!

September 27, 2019

ಮೈಸೂರು, ಸೆ.26-ವಸ್ತು ಪ್ರದರ್ಶನ ದಲ್ಲೊಂದು ಅಭಯಾರಣ್ಯ…! ಹೌದು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಮೈದಾನದಲ್ಲಿ ಅಭಯಾರಣ್ಯ ವೊಂದು ತಲೆ ಎತ್ತುತ್ತಿದೆ! ಹುಲಿ-ಸಿಂಹ ಗಳ ಘರ್ಜನೆ… ಜಿಂಕೆಗಳ ಓಟ… ಕ್ರಿಮಿ ಕೀಟಗಳ ವೈವಿಧ್ಯಮಯ ನೋಟ… ಜುಳು ಜುಳು ಹರಿಯುವ ನದಿ… ಅರಣ್ಯ ಇಲಾಖೆಯ ಕಾರ್ಯವೈಖರಿ ಈ ಎಲ್ಲವೂ ಇರುವ ಕಾಡೊಂದು ಇಲ್ಲಿ ಅನಾವರಣಗೊಳ್ಳುತ್ತಿದೆ. ದಸರಾ ಮಹೋತ್ಸವದ ಪ್ರಮುಖ ಆಕ ರ್ಷಣೆಯಾದ ವಸ್ತು ಪ್ರದರ್ಶನ ಆವರಣ ದಲ್ಲಿ ಅರಣ್ಯ ಇಲಾಖೆ ನಿರ್ಮಿಸುತ್ತಿರುವ ಮಳಿಗೆಯಲ್ಲಿ ಈ ಕಾನನ ಸೃಷ್ಟಿಯಾಗು ತ್ತಿದೆ….

ಚಾಮುಂಡಿಬೆಟ್ಟ, ಟೌನ್‍ಹಾಲ್ ಸುತ್ತ ನಿಷೇಧಾಜ್ಞೆ ಜಾರಿ
ಮೈಸೂರು

ಚಾಮುಂಡಿಬೆಟ್ಟ, ಟೌನ್‍ಹಾಲ್ ಸುತ್ತ ನಿಷೇಧಾಜ್ಞೆ ಜಾರಿ

September 27, 2019

ಮೈಸೂರು, ಸೆ.26(ಎಸ್‍ಪಿಎನ್)- `ಮಹಿಷ ದಸರಾ’ ಆಚರಣೆಗೆ ಮೈಸೂ ರಿನ ಸಂಘ-ಸಂಸ್ಥೆಗಳು, ಸಾರ್ವ ಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ವ್ಯಾಪ್ತಿ ಹಾಗೂ ಟೌನ್ ಹಾಲ್ ಮುಂಭಾಗದ 500 ಮೀಟರ್ ಸುತ್ತಲೂ ನಾಳೆ (ಸೆ.27)ಬೆಳಿಗ್ಗೆ 6ರಿಂದ ರಾತ್ರಿ 12ರವ ರೆಗೆ ಯಾವುದೇ ಸಭೆ-ಸಮಾರಂಭ, ಮೆರವಣಿಗೆ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇಶಿಸಿದ್ದಾರೆ. ಯಾವುದೇ ಸಂW Àಟನೆ ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿ, ಸಭೆ-ಸಮಾ ರಂಭ, ಮೆರವಣಿಗೆಯನ್ನು ನಡೆಸಲು ಪ್ರಯತ್ನಿಸಿದಲ್ಲಿ, ಅಲ್ಲಿ…

ದರ್ಬಾರ್ ಹಾಲ್‍ನಲ್ಲಿ `ರತ್ನಖಚಿತ ಸಿಂಹಾಸನ’ ಜೋಡಣೆ
ಮೈಸೂರು

ದರ್ಬಾರ್ ಹಾಲ್‍ನಲ್ಲಿ `ರತ್ನಖಚಿತ ಸಿಂಹಾಸನ’ ಜೋಡಣೆ

September 25, 2019

ಮೈಸೂರು,ಸೆ.24(ಎಂಟಿವೈ)- ದಸರಾ ಮಹೋತ್ಸವ ವೇಳೆ ಅರಮನೆಯಲ್ಲಿ ನಡೆಯುವ ಪ್ರಮುಖ ಧಾರ್ಮಿಕ ಆಚರಣೆ ಯಲ್ಲಿ ಖಾಸಗಿ ದರ್ಬಾರ್ ಒಂದಾಗಿದ್ದು, ಮಂಗಳವಾರ ಶಸ್ತ್ರಸಜ್ಜಿತ ಪೊಲೀಸರ ಕಣ್ಗಾವಲಿನಲ್ಲಿ ಸ್ಟ್ರಾಂಗ್ ರೂಮ್‍ನಿಂದ `ರತ್ನ ಖಚಿತ ಸಿಂಹಾಸನ’ದ ಬಿಡಿಭಾಗಗಳನ್ನು ಹೊರತಂದು ದರ್ಬಾರ್ ಹಾಲ್ ನಲ್ಲಿ ಹಾಗೂ ಕನ್ನಡಿ ತೊಟ್ಟಿಯಲ್ಲಿ `ಭದ್ರಾಸನ’ ಜೋಡಿಸಲಾಯಿತು. ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯವಾಗಿದ್ದು, ದರ್ಬಾರ್ ಹಾಲ್‍ನಲ್ಲಿ ರತ್ನ ಖಚಿತ ಸಿಂಹಾ ಸನದ ಮೇಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಆಸೀನರಾಗಿ ಖಾಸಗಿ ದರ್ಬಾರ್ ನಡೆಸ…

ದಸರಾ ಕಾರ್ಯಕ್ರಮಗಳಿಗೆ ಇಲ ನೀತಿ ಸಂಹಿತೆ ಕರಿನೆರಳು
ಮೈಸೂರು

ದಸರಾ ಕಾರ್ಯಕ್ರಮಗಳಿಗೆ ಇಲ ನೀತಿ ಸಂಹಿತೆ ಕರಿನೆರಳು

September 23, 2019

ಹುಣಸೂರು ಉಪವಿಭಾಗ ವ್ಯಾಪ್ತಿಗಷ್ಟೇ ನಿಯಮ ಮೀಸಲು ಹೊಸ ಯೋಜನೆಗಳನ್ನು ಪ್ರಕಟಿಸದೇ ನಾನಾ ಕಾರ್ಯಕ್ರಮಗಳಲ್ಲಿಜನಪ್ರತಿನಿಧಿಗಳು ಪಾಲ್ಗೊಳ್ಳಬಹುದು ಉಪಸಮಿತಿ ಅಧ್ಯಕ್ಷರು, ಸದಸ್ಯರು ವೇದಿಕೆ ಹಂಚಿಕೊಳ್ಳಲು ಅನುಮತಿ ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವಿವಿಧ ಕಾರ್ಯ ಕ್ರಮಗಳಿಗೆ ಚುನಾವಣಾ ನೀತಿಸಂಹಿತೆಯಿಂದ ವಿನಾಯಿತಿ ದೊರೆತಿದ್ದು, ಜನಪ್ರತಿನಿಧಿ ಗಳು ಪಾಲ್ಗೊಳ್ಳಲು ಅವಕಾಶ ಸಿಕ್ಕಂತಾಗಿದೆ. ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿರುವುದರಿಂದ ಹುಣಸೂರು ಉಪ ವಿಭಾಗದ ವ್ಯಾಪ್ತಿಗಷ್ಟೇ ನೀತಿ ಸಂಹಿತೆ ಅನ್ವಯವಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ…

ಭಾರವಾದ ಮನಸ್ಸಿಂದಲೇ ಮನೆಗೆ ಮರಳಿದ ‘ವರಲಕ್ಷ್ಮಿ’
ಮೈಸೂರು

ಭಾರವಾದ ಮನಸ್ಸಿಂದಲೇ ಮನೆಗೆ ಮರಳಿದ ‘ವರಲಕ್ಷ್ಮಿ’

September 21, 2019

ಮೈಸೂರು,ಸೆ.20(ಎಂಟಿವೈ)- ದಸರಾ ಜಂಬೂ ಸವಾರಿಯಲ್ಲಿ ಭಾಗಿಯಾಗಲು ಸಂತಸದಿಂದ ಬಂದಿದ್ದ `ವರಲಕ್ಷ್ಮೀ’ ಭಾರವಾದ ಮನಸ್ಸಿನಲ್ಲೇ ಶಿಬಿರಕ್ಕೆ ವಾಪಸ್ಸಾದಳು. ದಸರಾ ಗಜಪಡೆಯ ಮೊದಲ ತಂಡ ದಲ್ಲೇ ಮೈಸೂರಿಗೆ ಬಂದು, ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದ `ವರಲಕ್ಷ್ಮಿ’ ಗರ್ಭಿಣಿ ಆಗಿರುವ ಕಾರಣ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಅನಿವಾರ್ಯವಾಗಿ ಶಿಬಿರಕ್ಕೆ ವಾಪಸ್ಸಾಗ ಬೇಕಾಯಿತು. `ವರಲಕ್ಷ್ಮಿ’ಗೆ ಶುಕ್ರವಾರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಮತ್ತಿ ಗೋಡು ಶಿಬಿರಕ್ಕೆ ಬೀಳ್ಕೊಡಲಾಯಿತು. ಕರೆದೊಯ್ಯಲು ಲಾರಿ ಹತ್ತಿರ ಬಂದಾಗ ಅದು `ನನ್ನನ್ನೇ ಕರೆದೊಯ್ಯಲು ಬಂದಿದೆ’ ಎಂಬುದನ್ನು ಅರಿತಂತೆ ವರ್ತಿಸಿದ ವರ…

ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೇವಲ 8 ದಿನ ಬಾಕಿಆರಂಭವಾಗಿದೆ ವಿಶೇಷ ಸ್ವಚ್ಛತಾ ಅಭಿಯಾನ
ಮೈಸೂರು

ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೇವಲ 8 ದಿನ ಬಾಕಿಆರಂಭವಾಗಿದೆ ವಿಶೇಷ ಸ್ವಚ್ಛತಾ ಅಭಿಯಾನ

September 21, 2019

ಮೈಸೂರು, ಸೆ.20(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಸ್ವಚ್ಛತಾ ವಿಶೇಷ ಅಭಿಯಾನ ಆರಂಭಿಸಿರುವ ನಗರ ಪಾಲಿಕೆ, ಗುತ್ತಿಗೆದಾರರ ಸಹಕಾರ ಪಡೆದು ನೂರಾರು ವಾಹನಗಳೊಂದಿಗೆ ಸೆ.25ವರೆಗೆ ಎಲ್ಲಾ ವಲಯ ಗಳಲ್ಲೂ ಸ್ವಚ್ಛತಾ ಕಾರ್ಯ ನಡೆಸಲಿದೆ. ಪ್ರತಿ ವರ್ಷದಂತೆ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ಪಾಲಿಕೆ, ಮುಡಾ, ನೀರಾವರಿ, ಒಳಚರಂಡಿ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆ ಗಳ ಗುತ್ತಿಗೆದಾರರ ಸಂಘ ಈ ಬಾರಿಯೂ ತಮ್ಮಲ್ಲಿರುವ 33 ಜೆಸಿಬಿ, 34 ಟ್ರಾಕ್ಟರ್, 2 ಹಿಟಾಚಿ, 5 ಡೋಜóರ್,…

1 2 3 4 5
Translate »