Tag: G.T. Devegowda

ಇನ್ನು ಮುಂದೆ ಆನ್‍ಲೈನ್‍ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲಾ ಪರೀಕ್ಷೆ
ಮೈಸೂರು

ಇನ್ನು ಮುಂದೆ ಆನ್‍ಲೈನ್‍ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲಾ ಪರೀಕ್ಷೆ

January 10, 2019

ಬೆಂಗಳೂರು: ಸಿಇಟಿ ಸೇರಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಎಲ್ಲ ಪರೀಕ್ಷೆಗಳನ್ನು ಇನ್ನು ಮುಂದೆ ಆನ್‍ಲೈನ್‍ನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಇಂದಿಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಆನ್‍ಲೈನ್‍ನಲ್ಲಿ ಪರೀಕ್ಷೆಗಳನ್ನು ನಡೆಸಲು ಪೂರಕವಾಗಿ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದೆ ಎಂದರು. ಪಿಯುಸಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಪ ನ್ಯಾಸಕರು ಸೇರಿದಂತೆ ಒಟ್ಟು 3800 ಮಂದಿಯನ್ನು ನೇಮಕ ಮಾಡಿಕೊಳ್ಳುವುದಾಗಿ ನುಡಿದ ಅವರು,ಈ ಪೈಕಿ 394 ಜನ ಪ್ರಿನ್ಸಿಪಾಲರಿರುತ್ತಾರೆ ಎಂದು ವಿವರ ನೀಡಿದರು. ಕಾಲೇಜುಗಳಿಗೆ ಉಪನ್ಯಾಸಕರು ಹಾಗೂ…

ಬಡವರಿಗಾಗಿ ಅಗ್ಗದಲ್ಲಿ ಅಂದದ ಮನೆ ನಿರ್ಮಿಸಿ
ಮೈಸೂರು

ಬಡವರಿಗಾಗಿ ಅಗ್ಗದಲ್ಲಿ ಅಂದದ ಮನೆ ನಿರ್ಮಿಸಿ

November 24, 2018

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಹಲವರಿಗೆ ಸ್ವಂತ ಮನೆ ಹೊಂದಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಸುಂದರವಾದ ಮನೆಯನ್ನು ಬಡವರಿಗಾಗಿ ನಿರ್ಮಿಸಿಕೊಡುವತ್ತ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮನವಿ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಶುಕ್ರವಾರ ಬಿಲ್ಡರ್ಸ್ ಅಸೋಸಿ ಯೇಷನ್ ಮೈಸೂರು ಘಟಕ ಆಯೋಜಿಸಿದ್ದ ಬಿಲ್ಡ್‍ಟೆಕ್-2018 ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸೇರಿದಂತೆ…

ದಸರಾ ಉತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‍ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ
ಮೈಸೂರು

ದಸರಾ ಉತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‍ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ

October 7, 2018

ಮೈಸೂರು:  ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಈ ಬಾರಿಯ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಶನಿ ವಾರ ಅಧಿಕೃತವಾಗಿ ಆಹ್ವಾನಿಸಲಾಯಿತು. ಮೈಸೂರು ಅರಮನೆಗೆ ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ ಆಹ್ವಾನಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್, ಪರಿಷತ್ ಸದಸ್ಯ ಧರ್ಮಸೇನಾ ಹಾಗೂ ಜಿಲ್ಲಾಧಿಕಾರಿ…

ಬಡವರಿಗೆ ಮನೆ ಕಟ್ಟಿಸಲು ಭೂಮಿ ಗುರುತಿಸಿ
ಮೈಸೂರು

ಬಡವರಿಗೆ ಮನೆ ಕಟ್ಟಿಸಲು ಭೂಮಿ ಗುರುತಿಸಿ

October 2, 2018

ಮೈಸೂರು:  ಬಡವರಿಗೆ ಮನೆ ಕಟ್ಟಿಸಿಕೊಡಲು ಅಗತ್ಯ ವಾದ ಭೂಮಿ ಗುರುತಿಸಲು ಸಮಿತಿ ರಚಿಸುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು, ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ನಿವೇಶನ ಹಾಗೂ ಮನೆಯಿಲ್ಲದವರ ಅಂಕಿಅಂಶ ಪಡೆದ ಅವರು, ತಹಶೀಲ್ದಾರ್‍ಗಳು ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ(ಇಓ)ಗಳು ಜಂಟಿಯಾಗಿ ಪರಿ ಶೀಲನೆ ನಡೆಸಿ, ಭೂಮಿ ಗುರುತಿಸದಿದ್ದರೆ, ಬಡವರಿಗೆ ಮನೆ ನೀಡುವುದು ಹೇಗೆ? ಎಂದು ಪ್ರಶ್ನಿಸಿದರಲ್ಲದೆ,…

ದಸರಾ ಕುಸ್ತಿ ಪಂದ್ಯಾವಳಿ: ಕುಸ್ತಿ ಕಟ್ಟುವ ಕಾರ್ಯಕ್ಕೆ ಚಾಲನೆ
ಮೈಸೂರು

ದಸರಾ ಕುಸ್ತಿ ಪಂದ್ಯಾವಳಿ: ಕುಸ್ತಿ ಕಟ್ಟುವ ಕಾರ್ಯಕ್ಕೆ ಚಾಲನೆ

October 1, 2018

ಮೈಸೂರು: ನಶಿಸಿ ಹೋಗುತ್ತಿರುವ ಕುಸ್ತಿ, ಕಬಡ್ಡಿ, ಖೋಖೋ ಸೇರಿದಂತೆ ಗ್ರಾಮೀಣ ಕ್ರೀಡೆಗಳಲ್ಲಿ ಯುವ ಜನತೆ ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇವುಗಳ ರಕ್ಷಣೆಗೆ ಯುವ ಸಮುದಾಯ ಪಣ ತೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಸಲಹೆ ನೀಡಿದ್ದಾರೆ. ಮೈಸೂರಿನ ದಸರಾ ವಸ್ತು ಪ್ರದರ್ಶ ನದ ಆವರಣದಲ್ಲಿರುವ ಬಿ.ವಿ. ಕಾರಂತ ರಂಗಮಂದಿರದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿ ಯೇಷನ್ ವತಿಯಿಂದ ಆಯೋಜಿಸ ಲಾಗಿದ್ದ…

ಸೆಪ್ಟೆಂಬರ್‌ನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಗೆ ಸಿಎಂ ಚಾಲನೆ
ಮೈಸೂರು

ಸೆಪ್ಟೆಂಬರ್‌ನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಗೆ ಸಿಎಂ ಚಾಲನೆ

August 5, 2018

ಮೈಸೂರು: ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿಗೆ ಇದೇ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಮೈಸೂರು-ಬೆಂಗಳೂರು ನಡುವೆ 10 ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಸೆಪ್ಟೆಂಬರ್‌ನಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಮೈಸೂರು ನಗರ ಹಾಗೂ ಜಿಲ್ಲೆಗೆ ಸಮರ್ಪಕ ಕುಡಿಯುವ…

ರೈತರ ಬದುಕಿಗೆ ಮುಖ್ಯ ಆಧಾರ ಹೈನುಗಾರಿಕೆ
ಮೈಸೂರು

ರೈತರ ಬದುಕಿಗೆ ಮುಖ್ಯ ಆಧಾರ ಹೈನುಗಾರಿಕೆ

August 5, 2018

ಮೈಸೂರು: ಬರಗಾಲದ ಸಂದರ್ಭದಲ್ಲೂ ರೈತನ ಬದುಕಿಗೆ ನೆರವಾಗುವುದು ಹೈನುಗಾರಿಕೆ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ದಾರ್ಥನಗರದ ಜಿಲ್ಲಾ ಹಾಲು ಒಕ್ಕೂಟ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಶನಿ ವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬರಗಾಲದಲ್ಲೂ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸಾಲ ತೀರಿಸಲು, ಜೀವನ ನಡೆಸಲು ಹೈನುಗಾರಿಕೆ ನೆರವು ನೀಡಿದೆ. ಕೆಲವು ಹಾಲು ಉತ್ಪಾದಕರ ಸೊಸೈಟಿಗಳು ಗುಣಮಟ್ಟದ ಹಾಲು ಒದಗಿಸುತ್ತಿದ್ದು, ಅಂತಹ ಕೇಂದ್ರಗಳು…

ಕನ್ನಡ ಕರ್ನಾಟಕದಲ್ಲಿ ಮಾತ್ರವಲ್ಲ ಈಗ ವಿಶ್ವ ಕನ್ನಡವಾಗಿದೆ
ಮೈಸೂರು

ಕನ್ನಡ ಕರ್ನಾಟಕದಲ್ಲಿ ಮಾತ್ರವಲ್ಲ ಈಗ ವಿಶ್ವ ಕನ್ನಡವಾಗಿದೆ

August 5, 2018

ಮೈಸೂರು: ಜಾಗತೀಕರಣದಿಂದಾಗಿ ಕನ್ನಡ ಭಾಷೆ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬೆಳೆಯುವ ಮೂಲಕ ವಿಶ್ವಕನ್ನಡವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕಲಾಮಂದಿರದಲ್ಲಿ ನಾವಿಕ (ನಾವು ವಿಶ್ವ ಕನ್ನಡಿಗರು)ಸಂಸ್ಥೆ ಆಯೋಜಿಸಿದ್ದ ನಾವಿಕೋತ್ಸವ-2018 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಭಾಷೆಗೂ ತನ್ನದೇ ಆದ ಶಕ್ತಿ ಇದ್ದು, ಯಾವುದೇ ಭಾಷೆಯನ್ನು ಹೆಚ್ಚು ಬಳಸಿದಂತೆ ಆ ಭಾಷೆ ಬೆಳೆಯಲಿದೆ. ಆದರೆ ರಾಜ್ಯದಲ್ಲಿ ಪ್ರಸ್ತುತ ಕನ್ನಡ ಭಾಷೆ ಅವನತಿಯ ಅಂಚಿನಲ್ಲಿದ್ದು, ನಮ್ಮವರಿಗೆ ಕನ್ನಡದ ಬಗ್ಗೆ ಕೀಳರಿಮೆ ಇರುವುದು ನಿಜಕ್ಕೂ ಶೋಚನೀಯ….

ಬಲ್ಲಹಳ್ಳಿ ಬಡಾವಣೆ ಸಂಬಂಧ  ಆ.6ಕ್ಕೆ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಚರ್ಚೆ
ಮೈಸೂರು

ಬಲ್ಲಹಳ್ಳಿ ಬಡಾವಣೆ ಸಂಬಂಧ  ಆ.6ಕ್ಕೆ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಚರ್ಚೆ

August 3, 2018

ಮೈಸೂರು: ವಸತಿ ಬಡಾವಣೆ ರಚಿಸಿ ನಿವೇಶನ ಹಂಚಿಕೆ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದೆ. ಮೈಸೂರು ಸುತ್ತಮುತ್ತ 5 ಹೊಸ ಬಡಾವಣೆಗಳನ್ನು ನಿರ್ಮಿಸಲು ಮುಂದಾಗಿದೆ. ಬಲ್ಲಹಳ್ಳಿ ಬಡಾವಣೆಯಲ್ಲಿ ಸರಿ ಸುಮಾರು 4 ಸಾವಿರ ಮಂದಿಗೆ ನಿವೇಶನ ಒದಗಿಸಲು ಯೋಜನೆ ರೂಪಿಸುತ್ತಿದೆ. ಈಗಾಗಲೇ ಸರ್ಕಾರದ ಅನುಮೋದನೆ ದೊರೆತಿರುವ ಬಲ್ಲಹಳ್ಳಿ ಬಡಾವಣೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಬಲ್ಲಹಳ್ಳಿ ಯೋಜನೆಯನ್ನು 285 ಎಕರೆ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಿದ್ದು, ಒಟ್ಟು 4,000 ನಿವೇಶನ ರಚಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ. ಬಲ್ಲಹಳ್ಳಿ…

ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿ 2 ಕೋಟಿಯ ವಿವಿಧ ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿ 2 ಕೋಟಿಯ ವಿವಿಧ ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ

July 29, 2018

ಮೈಸೂರು: ಮೈಸೂರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದಾಜು 2 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ (ಜಿಟಿಡಿ) ಚಾಲನೆ ನೀಡಿದರು. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-3ರ ವ್ಯಾಪ್ತಿಯ ವಾರ್ಡ್ ನಂ.24, 22 ಹಾಗೂ 16ರಲ್ಲಿ ಪಾಲಿಕೆ ಉಸ್ತುವಾರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೈಗೆತ್ತಿಕೊಂಡಿರುವ ಉದ್ಯಾನವನ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಗುದ್ದಲಿ ಪೂಜೆ ನೆರವೇರಿಸಿದರು. ಬೋಗಾದಿ 2ನೇ ಹಂತದಲ್ಲಿರುವ ವಿದ್ಯಾಗಣಪತಿ ದೇವಸ್ಥಾನದಲ್ಲಿ…

1 2 3 4 5
Translate »