ಬಡವರಿಗಾಗಿ ಅಗ್ಗದಲ್ಲಿ ಅಂದದ ಮನೆ ನಿರ್ಮಿಸಿ
ಮೈಸೂರು

ಬಡವರಿಗಾಗಿ ಅಗ್ಗದಲ್ಲಿ ಅಂದದ ಮನೆ ನಿರ್ಮಿಸಿ

November 24, 2018

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಹಲವರಿಗೆ ಸ್ವಂತ ಮನೆ ಹೊಂದಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಸುಂದರವಾದ ಮನೆಯನ್ನು ಬಡವರಿಗಾಗಿ ನಿರ್ಮಿಸಿಕೊಡುವತ್ತ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮನವಿ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಶುಕ್ರವಾರ ಬಿಲ್ಡರ್ಸ್ ಅಸೋಸಿ ಯೇಷನ್ ಮೈಸೂರು ಘಟಕ ಆಯೋಜಿಸಿದ್ದ ಬಿಲ್ಡ್‍ಟೆಕ್-2018 ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸೇರಿದಂತೆ ದೇಶದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಸಂಸ್ಥೆಯ ಪದಾಧಿಕಾರಿಗಳು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಪ್ರಶಂಸೆ ಗಳಿಸಿದ್ದಾರೆ. ವಸತಿ ಸಮುಚ್ಚಯಗಳು, ಮಾಲ್‍ಗಳು ಸೇರಿ ದಂತೆ ದೊಡ್ಡ ಕಟ್ಟಡಗಳ ನಿರ್ಮಾಣದಲ್ಲಿ ಪ್ರಾವೀಣ್ಯತೆ ಪಡೆದಿದ್ದೀರಿ. ಕಟ್ಟಡ ನಿರ್ಮಾ ಣದ ವೇಳೆ ಹೊಸ ಹೊಸ ತಂತ್ರಜ್ಞಾನ ಬಳಸಿ ಮನೆ ನಿರ್ಮಿಸಲಾಗುತ್ತಿದೆ. ಈ ಹಿಂದೆ ಮಣ್ಣು, ಸಿಮೆಂಟ್, ಮರ, ಮರಳು ಬಳಸಿ ಮನೆ ನಿರ್ಮಿಸಲಾಗುತ್ತಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ಮರ, ಮಣ್ಣು, ಕಲ್ಲು, ಸಿಮೆಂಟ್ ಬಳಸದೆ ಹೊಸ ಹೊಸ ತಂತ್ರಜ್ಞಾನ ಬಳಸಿ ಸುಂದರ ಹಾಗೂ ಸುಸಜ್ಜಿತ ಮನೆ ನಿರ್ಮಿಸ ಲಾಗುತ್ತಿರುವುದು ಬಿಲ್ಡರ್ಸ್‍ಗಳ ನೈಪು ಣ್ಯತೆಯನ್ನು ಎತ್ತಿ ತೋರಿಸುತ್ತಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದೆ. ಆದರೂ ಸಾವಿರಾರು ಜನರು ಸ್ವಂತ ಮನೆಯನ್ನು ಕಟ್ಟಿಕೊಂಡಿಲ್ಲ. ಮನೆ ಯಿಲ್ಲದೆ ಸಂಕಷ್ಟದಲ್ಲಿ ಜೀವಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಸ್ವಂತ ಮನೆಗಾಗಿ ಕನಸು ಕಾಣುತ್ತಿರುವವರ ಹಿತ ಕಾಪಾಡ ಬೇಕಾಗಿದೆ. ಸೂರು ಇಲ್ಲದವರಿಗೆ ಮನೆ ನಿರ್ಮಿಸಿಕೊಡುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷ ಲಕ್ಷಾಂತರ ಮನೆ ಮಂಜೂರು ಮಾಡುತ್ತಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ವಸತಿ ನಿರ್ಮಾಣ ಯೋಜನೆಯನ್ನು ಪೂರ್ಣ ಪ್ರಮಾಣ ದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದಿಸಿದರು.

ವಸತಿ ಯೋಜನೆ ದುರುಪಯೋಗವಾಗು ವುದನ್ನು ತಪ್ಪಿಸುವುದಕ್ಕಾಗಿ ಸರ್ಕಾರ ಫಲಾ ನುಭವಿಗಳಿಗೆ ನೇರವಾಗಿ ಆರ್ಥಿಕ ನೆರವು ನೀಡಿ ಮನೆ ಕಟ್ಟುವುದಕ್ಕೆ ಅವಕಾಶ ನೀಡಿದೆ. ಆದರೆ ಅನುಭವದ ಕೊರತೆ, ಆರ್ಥಿಕ ಮುಗ್ಗಟ್ಟು, ತಂತ್ರಜ್ಞಾನದ ಮಾಹಿತಿ ಇಲ್ಲದೆ ಇರುವುದ ರಿಂದ ಫಲಾನುಭವಿಗಳು ಕಾಲಮಿತಿಯೊ ಳಗೆ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗು ತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬಡವರಿಗೆ ಕಡಿಮೆ ವೆಚ್ಚದಲ್ಲಿ ಸುಂದರ ವಾದ ಮನೆ ನಿರ್ಮಿಸಿಕೊಡುವುದಕ್ಕೆ ಬಿಲ್ಡರ್ಸ್ ಗಳು ಮುಂದಾಗಬೇಕು. ಬಿಲ್ಡರ್ಸ್‍ಗಳು ಮನಸ್ಸು ಮಾಡಿದರೆ ಬಡವರಿಗೆ ಸೂಕ್ತ ಸಮಯಕ್ಕೆ ಮನೆ ಕಟ್ಟಿಕೊಡಬಹುದು. ಬಿಲ್ಡ್‍ಟೆಕ್ ವಿಚಾರ ಸಂಕಿರಣದಲ್ಲಿ ವಿಸ್ತೃತವಾಗಿ ಚರ್ಚಿಸಿ ಬಡವರ ಪರ ನಿಲುವು ತೆಗೆದುಕೊಳ್ಳಬೇಕು. ಆ ನಂತರ ಸರ್ಕಾರದೊಂದಿಗೆ ಚರ್ಚಿಸಲು ನಾನೇ ವೇದಿಕೆ ಸೃಷ್ಟಿಸಿಕೊಡುತ್ತೇನೆ. ಇದರಿಂದ ಸರ್ಕಾರದ ಮನೆ ನಿರ್ಮಿಸಿಕೊಡುವ ಯೋಜನೆಯನ್ನು ಬಿಲ್ಡರ್ಸ್‍ಗಳ ಮೂಲಕ ನಡೆಸಿದರೆ ಫಲಾನುಭವಿಗಳಿಗೆ ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಮೈಸೂರು, ಬೆಂಗಳೂರು, ಚೆನ್ನೈ, ಆಂಧ್ರ, ಕೇರಳ, ತಮಿಳುನಾಡು ಸೇರಿ ದಂತೆ ವಿವಿಧೆಡೆಯಿಂದ 500ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಬಿಲ್ಡರ್ಸ್ ಅಸೋ ಸಿಯೇಷನ್ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಸೋಮಶೇಖರ್ ರೆಡ್ಡಿ, ಸ್ಟಾರ್ ವರ್ಥ್ ಇನ್ಫ್ರಾ ಅಂಡ್ ಕನ್ಸ್‍ಟ್ರಕ್ಟರ್ ಲಿ. ವ್ಯವಸ್ಥಾಪಕ ನಿರ್ದೇಶಕ ರಾಜ್ ಪಿಳ್ಳೈ, ಬಿಲ್ಡರ್ಸ್ ಅಸೋಸಿ ಯೇಷನ್ ಮೈಸೂರು ಘಟಕದ ಅಧ್ಯಕ್ಷ ಕೆ. ಸುಬ್ರಹ್ಮಣ್ಯರಾವ್, ಕಾರ್ಯದರ್ಶಿ ಕೆ.ಅಜಿತ್ ನಾರಾಯಣ್, ಬಿಲ್ಡ್‍ಟೆಕ್ ಅಧ್ಯಕ್ಷ ವಿ.ಶ್ರೀನಾಥ್, ಕಾರ್ಯದರ್ಶಿ ಸಿ.ಎಸ್.ಶ್ರೀಕಾಂತ್ ಇದ್ದರು.

Translate »