ಮಡಿಕೇರಿ: ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಯಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಕಾಫಿ, ಕರಿಮೆಣಸು ಸೇರಿದಂತೆ ಆರ್ಥಿಕ ಬೆಳೆಗಳನ್ನು ನಂಬಿಕೊಂಡಿರುವ ಜಿಲ್ಲೆಯ ಕೃಷಿಕರು, ಸಾಲಮನ್ನಾ, ಕೃಷಿಭಾಗ್ಯ, ಕಾಡಾನೆ ಹಾವಳಿ ಸಮಸ್ಯೆ ಪರಿಹಾರ, ಬೆಳೆಹಾನಿ ಪರಿಹಾರ ಹೆಚ್ಚಳ ಸೇರಿದಂತೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಕುರಿತು ಆಶಾಭಾವನೆ ಹೊಂದಿದ್ದರು. ವಿಶೇಷವಾಗಿ ಈ ಹಿಂದಿನ ಸರ್ಕಾರ ದಂತೆ ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ…
ಬಜೆಟ್‍ನಲ್ಲಿ ಸಾಲಮನ್ನಾ ಘೋಷಿಸಿದ ಸಿಎಂ ಕುಮಾರಸ್ವಾಮಿ ಬನ್ನೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮ
July 6, 2018ಬನ್ನೂರು: ಸಿಎಂ ಕುಮಾರಸ್ವಾಮಿ ಯವರು ರೈತರ ಸಾಲವನ್ನು ಮನ್ನಾ ಮಾಡಿದ್ದ ರಿಂದ ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಸಂಜಯ್, ಇಂದು ರಾಜ್ಯದ ರೈತಾಪಿ ಕುಟುಂಬದವರು ಆರ್ಥಿಕ ವಾಗಿ ಜರ್ಜರಿತವಾಗಿದ್ದು, ಅವರು ಬದುಕು ನಡೆಸುವುದು ಕಷ್ಟವಾಗಿದೆ. ರಾಜ್ಯದ ರೈತರ ನೋವನ್ನು ಕಣ್ಣಾರೆ ಕಂಡಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಚುನಾವಣೆಗೂ ಮೊದಲೇ ನೀಡಿದ್ದ ಆಶ್ವಾಸನೆ ಯಂತೆ ರೈತರ ಸಾಲವನ್ನು ಮನ್ನಾ ಮಾಡುವ ದೃಢ ನಿರ್ಧಾರವನ್ನು ಕೈಗೊಂಡು ನುಡಿ ದಂತೆ…
ಆಧಾರವಿಲ್ಲದೆ ನಮ್ಮ ಕುಟುಂಬ ಅಕ್ರಮ ಆಸ್ತಿ ಮಾಡಿದೆ ಎಂದು ಹೇಳಬೇಡಿ ಟೀಕಾಕಾರರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನುಡಿ
July 5, 2018ಬೆಂಗಳೂರು: ದೇವೇಗೌಡರ ಕುಟುಂಬ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಪಾಸ್ತಿ ಮಾಡಿದೆ ಎಂದು ದಾಖಲೆಗಳಿಲ್ಲದೆ ದೂರುವ ಪ್ರವೃತ್ತಿ ಸರಿಯಲ್ಲ, ಅಂತಹ ದೇನೇ ಇದ್ದರೂ ದಾಖಲೆಗಳನ್ನು ಒದಗಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಮ್ಮ ಟೀಕಾಕಾರರ ಮೇಲೆ ಎರಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಬಿಎಂಪಿಯ ಬಿಜೆಪಿ ನಾಯಕರೊಬ್ಬರು,ದೇವೇಗೌಡರ ಕುಟುಂಬ ಅಕ್ರಮವಾಗಿ ಅಪಾರ ಪ್ರಮಾಣದ ಆಸ್ತಿ ಮಾಡಿದೆ ಎಂದು ದೂರಿರುವ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿ ದರು. ದೇವೇಗೌಡರ ಕುಟುಂಬ ಹಾಗೇನಾದರೂ ಅಕ್ರಮ ಆಸ್ತಿ ಪಾಸ್ತಿ ಮಾಡಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು…
ಕಾಫಿ ಬೆಳೆಗಾರರ ಸಾಲಮನ್ನಾಗೆ ಆಗ್ರಹಿಸಿ ಅಮ್ಮತ್ತಿಯಲ್ಲಿ ಪ್ರತಿಭಟನೆ
July 5, 2018ಗೋಣಿಕೊಪ್ಪಲು: ಕೊಡಗಿನ ಕಾಫಿ ಬೆಳೆಗಾರರ ಸಾಲಮನ್ನಾ ಮಾಡು ವಂತೆ ಒತ್ತಾಯಿಸಿ ಅಮ್ಮತ್ತಿಯಲ್ಲಿ ದಕ್ಷಿಣ ಕೊಡಗಿನ ವಿವಿಧ ಭಾಗದ ರೈತರು ಹಾಗೂ ಕಾಫಿ ಬೆಳೆಗಾರರು ರಸ್ತೆ ತಡೆ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕೆ.ಯು. ಗಣಪತಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10 ಗಂಟೆಗೆ ಜಮಾವಣೆಗೊಂಡ ಪ್ರತಿಭಟನಾ ಕಾರರು ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಆರಂಭಿಸಿದರು. ಕೊಡ ಗಿನ ವಾಣಿಜ್ಯ ಬೆಳೆಯಾದ ಕಾಫಿ, ಕರಿ ಮೆಣಸು, ಅಡಿಕೆ ಬೆಳೆಗಳ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ…
ರೈತರ ಸಾಲ ಮನ್ನಾಕ್ಕೆ ಖಜಾನೆ ತುಂಬಿಸಲು ಸಂದು ಗೊಂದಿಗೆ ಕೈ ಹಾಕಿದ ಮುಖ್ಯಮಂತ್ರಿ ಕುಮಾರಸ್ವಾಮಿ
July 4, 2018ಬೆಂಗಳೂರು: ರೈತರ ಕೃಷಿ ಸಾಲ ಮನ್ನಾ ಮಾಡಲು ಹೊರಟಿ ರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಯೋಜನೆಗಳಿಗೆ ಮೀಸಲಿರಿಸಿದ ಹಣ ವೆಚ್ಚ ಮಾಡದೆ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇಟ್ಟಿರುವ ಸಾವಿರಾರು ಕೋಟಿ ರೂ. ಗಳನ್ನು ಹಿಂದಕ್ಕೆ ಪಡೆಯಲು ಹಣಕಾಸು ಇಲಾಖೆಗೆ ಆದೇಶ ನೀಡಿದ್ದಾರೆ. ಗ್ರಾಮೀಣ ಅಭಿವೃದ್ಧಿ, ನಗರಾಭಿವೃದ್ಧಿ, ಮುಜರಾಯಿ, ವಸತಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಳೆದ ಕೆಲವಾರು ವರ್ಷಗಳಿಂದ ಮೀಸಲಿಟ್ಟಿದ್ದ ಹಣವನ್ನು ಅಧಿಕಾರಿಗಳು ವೆಚ್ಚ ಮಾಡಿಲ್ಲ. ಇಲಾಖೆಯ ಗಮನಕ್ಕೂ ತಾರದೆ, ಕೆಲವು ಅಧಿಕಾರಿಗಳು ನೂರಾರು ಕೋಟಿ…
ಖಾಸಗಿ ಸಾಲ ಮನ್ನಾ ಸಂಬಂಧ ಹಾಲಿ, ಮಾಜಿ ಸಿಎಂಗಳ ಜಟಾಪಟಿ
July 4, 2018ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜು.5ರಂದು ಮಂಡಿಸಲಿರುವ ಬಜೆಟ್‍ನಲ್ಲಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆ ಬೆನ್ನಲ್ಲೇ ರೈತರ ಖಾಸಗಿ ಸಾಲ ಮನ್ನಾ ಬಗ್ಗೆ ವಿಧಾನಸಭೆಯಲ್ಲಿ ಇಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಕಾವೇರಿದ ಚರ್ಚೆ ನಡೆಯಿತು. ಮುಖ್ಯಮಂತ್ರಿಗಳು ಚುನಾವಣೆಗೂ ಮುನ್ನ ರೈತರು ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯ…
ಹಾಲಿ ಕುಮಾರಸ್ವಾಮಿಯವರ 12 ವರ್ಷದ ಹಿಂದಿನ ಗ್ರಾಮ ವಾಸ್ತವ್ಯದ ಭರವಸೆ ಈಡೇರುವ ನಿರೀಕ್ಷೆಯಲ್ಲಿ ಬಡ ಜೀವಗಳು
July 4, 2018ಮೈಸೂರು: ಕಳೆದ 12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಗ್ರಾಮ ವಾಸ್ತವ್ಯ ಮಾಡಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ತಾವು ನೀಡಿದ್ದ ಭರವಸೆಗಳನ್ನು ಈಗಲಾದರೂ ಈಡೇರಿಸುವರೇ ಎಂದು ಮೈಸೂರಿನ ನೂರಾರು ಕುಟುಂಬ ಕಾದು ಕುಳಿತಿವೆ. 2006ರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು, ಮೈಸೂರಿನ ಮೇದರ್ ಬ್ಲಾಕ್‍ನ ಕೊಳಗೇರಿಯಲ್ಲಿರುವ ಲಕ್ಷ್ಮಮ್ಮ ಅವರ ಗುಡಿಸಲಲ್ಲಿ ವಾಸ್ತವ್ಯ ಹೂಡಿದ್ದರು. ಮುದ್ದೆ, ಸೊಪ್ಪಿನ ಸಾರು, ವಡೆ ಮತ್ತು ಪಾಯಸ ಸವಿದಿದ್ದ ಅವರು, ಅಲ್ಲಿನ ಜನರ ಸಮಸ್ಯೆ ಗಳನ್ನ ಆಲಿಸಿ, ಗುಡಿಸಲಿನಲ್ಲಿ…
ಕಾಫಿ ಬೆಳೆಗಾರರ ಸಾಲಮನ್ನಾ ಮಾಡದಿದ್ದರೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ
July 4, 2018ನಾಪೋಕ್ಲು: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡ ದಿದ್ದರೆ ಕೊಡಗು ಜಿಲ್ಲೆಯ ಎಲ್ಲಾ ಸಂಘ-ಸಂಸ್ಥೆಗಳ ಬೆಳೆಗಾರರ ಸಹಕಾರದಿಂದ ಪಕ್ಷಬೇಧವಿಲ್ಲದೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಉಗ್ರ ಹೋರಾಟ ನಡೆಸಬೇಕಾದೀತು ಎಂದು ನಾಪೋಕ್ಲು ವಿಭಾಗದ ಕಾಫಿ ಬೆಳೆಗಾರರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎನ್.ಎಸ್. ಉದಯ ಶಂಕರ್, ಕೆ.ಪಿ.ರಮೇಶ್ ಮುದ್ದಯ್ಯ, ಬಿ.ಸಿ. ಜಿನ್ನು ನಾಣಯ್ಯ. ಎಂ.ಎ. ಮನ್ಸೂರ್ ಆಲಿ ಅವರು ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯು ಪ್ರಮುಖ ಬೆಳೆಯಾಗಿದ್ದು ಜಿಲ್ಲೆಯ ರೈತರು…
ಮೈತ್ರಿ ಸರ್ಕಾರದ ಚೊಚ್ಚಲ ಅಧಿವೇಶನ ಆರಂಭ: ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ವಾಲಾ ಭಾಷಣ
July 3, 2018ಸಮಗ್ರ ಕರ್ನಾಟಕ ಕಲ್ಯಾಣಕ್ಕೆ ದೋಸ್ತಿ ಸಂಕಲ್ಪ ಹಿಂದಿನ ಸರ್ಕಾರದ ಭಾಗ್ಯಗಳ ಜೊತೆಗೆ ರೈತರ ಸಂಕಷ್ಟಕ್ಕೆ ನೆರವು ಪರಿಶಿಷ್ಟ ಜಾತಿ, ವರ್ಗದ ಕುಟುಂಬಗಳಿಗೆ ಅಡುಗೆ ಅನಿಲ, ಕೌಶಲ್ಯ ಅಭಿವೃದ್ಧಿ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಕೇರ್ ಘಟಕ ಆರಂಭ ಪೇದೆಗಳಿಗೆ ಠಾಣಾ ವ್ಯಾಪ್ತಿಯಲ್ಲಿ ಭೌಗೋಳಿಕ ಸರಹದ್ದು ನಿಗದಿ ಬೆಂಗಳೂರು: ಸಮ್ಮಿಶ್ರ ಸರ್ಕಾರದ ಚೊಚ್ಚಲ ಅಧಿವೇಶನದಲ್ಲಿ ಸರ್ಕಾರದ ಮುಂದಿನ ಐದು ವರ್ಷದ ಸ್ಥಿರತೆಯ ಖಾತರಿಯೊಂದಿಗೆ ಆಯ್ದ ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಕರ್ನಾಟಕದ ಕಲ್ಯಾಣಕ್ಕೆ ಶ್ರಮಿಸುವುದಾಗಿ ರಾಜ್ಯಪಾಲರ ಮೂಲಕ ಭರವಸೆ…
ರೈತರ ಸಾಲ ಮನ್ನಾಗೆ ಸಮನ್ವಯ ಸಮಿತಿ ಅಸ್ತು
July 2, 20185 ವರ್ಷದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ, ನಿರ್ಗತಿಕರಿಗೆ 20 ಲಕ್ಷ ಮನೆ ನಿರ್ಮಾಣ ನೀರಾವರಿಗೆ ಹೆಚ್ಚು ಅನುದಾನ ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಬಜೆಟ್‍ನಲ್ಲಿ ರೈತರ ಸಾಲ ಮನ್ನಾಗೆ ಸಮ್ಮತಿ ಸೂಚಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ ಆದ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿದ್ದ ಸಮನ್ವಯ ಸಮಿತಿ ಸಭೆ ಇಂದು ಮಧ್ಯಾಹ್ನ…