ಕಾಫಿ ಬೆಳೆಗಾರರ ಸಾಲಮನ್ನಾಗೆ ಆಗ್ರಹಿಸಿ ಅಮ್ಮತ್ತಿಯಲ್ಲಿ ಪ್ರತಿಭಟನೆ
ಕೊಡಗು

ಕಾಫಿ ಬೆಳೆಗಾರರ ಸಾಲಮನ್ನಾಗೆ ಆಗ್ರಹಿಸಿ ಅಮ್ಮತ್ತಿಯಲ್ಲಿ ಪ್ರತಿಭಟನೆ

July 5, 2018

ಗೋಣಿಕೊಪ್ಪಲು:  ಕೊಡಗಿನ ಕಾಫಿ ಬೆಳೆಗಾರರ ಸಾಲಮನ್ನಾ ಮಾಡು ವಂತೆ ಒತ್ತಾಯಿಸಿ ಅಮ್ಮತ್ತಿಯಲ್ಲಿ ದಕ್ಷಿಣ ಕೊಡಗಿನ ವಿವಿಧ ಭಾಗದ ರೈತರು ಹಾಗೂ ಕಾಫಿ ಬೆಳೆಗಾರರು ರಸ್ತೆ ತಡೆ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.

ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕೆ.ಯು. ಗಣಪತಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10 ಗಂಟೆಗೆ ಜಮಾವಣೆಗೊಂಡ ಪ್ರತಿಭಟನಾ ಕಾರರು ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಆರಂಭಿಸಿದರು. ಕೊಡ ಗಿನ ವಾಣಿಜ್ಯ ಬೆಳೆಯಾದ ಕಾಫಿ, ಕರಿ ಮೆಣಸು, ಅಡಿಕೆ ಬೆಳೆಗಳ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಧ್ವಿಮುಖ ನೀತಿ ಅನು ಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತ ನಾಡಿದ ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ಕೊಡಗಿನ ಕಾಫಿ ಬೆಳೆಗಾರರ ಹಿತವನ್ನು ಕಾಪಾಡಲು ಮುಂಗಡ ಪತ್ರದಲ್ಲಿ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇದೀಗ ಹೋರಾಟ ಸಾಂಕೇತಿಕವಾಗಿ ಆರಂ ಭವಾಗಿದೆ. ಸಾಲಮನ್ನಾ ವಿಚಾರದಲ್ಲಿ ಕಾಫಿ ಬೆಳೆಗಾರರಿಗೆ ಅನ್ಯಾಯವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದ ಅವರು ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಕಳ್ಳಕಾಕರು ಹೆಚ್ಚಾಗಿದ್ದಾರೆ. ಪಟ್ಟಣ ದಲ್ಲಿ ಕೋವಿ ಕಳ್ಳತನ ನಡೆದು ಆರು ತಿಂಗಳು ಕಳೆದರು ಕಳ್ಳರನ್ನು ಹಿಡಿಯುವ ಪ್ರಯತ್ನದಲ್ಲಿ ಪೊಲೀಸರು ಯಶಸ್ವಿಯಾ ಗಿಲ್ಲ. ಇವರನ್ನು ಸದೆ ಬಡಿಯುವ ಕೆಲಸ ದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರೀಯ ಗೊಂಡಿದೆ ಎಂದು ಆರೋಪಿಸಿದರು.

ರೆವೆನ್ಯೂ ಇಲಾಖೆಯಲ್ಲಿ ಭಷ್ಟಚಾರಕ್ಕೆ ಮಿತಿ ಇಲ್ಲದಂತಾಗಿದೆ. ಒಂದು ಕಡತ ವನ್ನು ವಿಲೇವಾರಿ ಮಾಡಲು ಇಂತಿಷ್ಟು ಹಣ ನೀಡುವಂತೆ ಒತ್ತಾಯಿಸುತ್ತಾರೆ. ಹಣ ನೀಡದೇ ಇರುವವರ ಕಡತಗಳು ಹಾಗೆಯೇ ಉಳಿದಿವೆ. ಇವುಗಳ ವಿರುದ್ದ ಮುಂದೆ ಧ್ವನಿ ಎತ್ತುತ್ತೇವೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯ ಮಾಡ ಮನು ಸೋಮಯ್ಯ ಮಾತನಾಡಿ, ರೈತ ಸ್ನೇಹಿ ಮುಖ್ಯಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ರೈತ ಮುಖಂಡರೊಂದಿಗೆ ಸಂಪೂರ್ಣ ಕೃಷಿ ಸಾಲ ಮನ್ನಾ ವಿಚಾರದಲ್ಲಿ ಚರ್ಚೆ ನಡೆಸಿದ್ದಾರೆ. ಈ ಸಂದರ್ಭ ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆ ವಿಚಾರದಲ್ಲಿ ಚರ್ಚೆ ನಡೆದಿದೆ. ಸಾಲಮನ್ನಾ ಮಾಡುವ ಭರವಸೆಯೂ ನೀಡಿದ್ದಾರೆ. ಮುಂದಿನ ಮುಂಗಡ ಪತ್ರ ಮಂಡಿಸುವ ಸಂದರ್ಭ ಕಾಫಿ ಬೆಳೆಗಾರರ ಸಾಲಮನ್ನಾ ಆಗಲೇ ಬೇಕು. ಇಲ್ಲದಿದ್ದಲ್ಲಿ ಹೋರಾಟ ಉಗ್ರ ರೂಪ ತಾಳಲಿದೆ ಎಂದ ಅವರು, ಕೊಡಗಿನ ಅರಣ್ಯ ಅಧಿಕಾರಿಗಳಾದ ಸಿಸಿ ಎಫ್‍ರವರು ರೈತ ವಿರೋಧಿ ಅಧಿಕಾರಿಯಾಗಿದ್ದಾರೆ. ಇವರಿಂದ ನಾವು ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆನೆ-ಮಾನವ ಸಂಘರ್ಷ, ಹುಲಿ ದಾಳಿಯಿಂದ ಸಾಕಷ್ಟು ರೈತರು ನೊಂದಿದ್ದರೂ ಇದರ ಬಗ್ಗೆ ಸರ್ಕಾರಕ್ಕೆ ವರದಿ ಮಾಡುವಲ್ಲಿ ಸತತವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಹಲವು ಮುಖಂಡರು ಮಾತನಾಡಿದರು.

ಅಮ್ಮತ್ತಿ ರೈತ ಸಂಘದ ಕಾರ್ಯದರ್ಶಿ ಎಂ.ಜಿ.ಪೊನ್ನಪ್ಪ. ಸಂಚಾಲಕರಾದ ಕೇಚಂಡ ಕುಶಾಲಪ್ಪ, ಖಜಾಂಚಿ, ಪಿ.ಬಿ.ಅರುಣ್, ಜಂಟಿ ಕಾರ್ಯದರ್ಶಿ ಎಂ.ಸಿ.ವಿಜಯ, ಕಾನೂನು ಸಲಹೆಗಾರರಾದ ಬಿದ್ದಂಡ ಸುಬ್ಬಯ್ಯ ರಾಜ್ಯ ರೈತ ಸಂಘದ ಕೊಡಗು ಘಟಕದ ಸಂಚಾಲಕ ಚಿಮ್ಮಂಗಡ ಗಣೇಶ್, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಮುಖಂಡರಾದ ಪುಚ್ಚಿಮಾಡ ಸುಭಾಶ್, ಸುರೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಸುವಿನ್ ಗಣಪತಿ, ಮುಕ್ಕಾಟೀರ ಮಿಕ್ಕಿ, ಪಟ್ಟಡ ಅರುಣ್, ಆರ್‍ಎಂಸಿ ಮಾಜಿ ಅಧ್ಯಕ್ಷ ವಸಂತ್, ಮದ್ರಿರ ಗಣೇಶ್, ಕೊಂಗಂಡ ಪ್ರಶಾಂತ್ ಮುಂತಾದವರು ಭಾಗವಹಿಸಿದ್ದರು.

ವಿರಾಜಪೇಟೆ ಸಿಪಿಐ ಕುಮಾರ್ ಆರಾಧ್ಯ ನೇತೃತ್ವದಲ್ಲಿ ಪೊನ್ನಂಪೇಟೆ, ಗೋಣಿಕೊಪ್ಪ, ಶ್ರೀಮಂಗಲ, ವಿರಾಜಪೇಟೆ ಗ್ರಾಮೀಣ ಠಾಣೆಯ ಠಾಣಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದರು. ಪ್ರತಿಭಟನೆ ಯಿಂದಾಗಿ ಒಂದು ಗಂಟೆಯ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ತಾಲೂಕು ದಂಡಾಧಿಕಾರಿ ಮೂಲಕ ಮನವಿ: ಸರಕಾರದ ಮುಂಗಡ ಪತ್ರದಲ್ಲಿ ಭತ್ತ ಬೆಳೆಯುವ ರೈತರ ಸಾಲವನ್ನು ಮನ್ನಾ ಮಾಡಲಿರುವುದು ಸ್ವಾಗತರ್ಹ ವಾಗಿದೆ. ಆದರೆ ಇಲ್ಲಿಯ ಕಾಫಿ, ಕರಿ ಮೆಣಸು ಮತ್ತು ಅಡಿಕೆ ಬೆಳೆಯನ್ನು ಬೆಳೆ ಯಲು ಹೆಚ್ಚಿನ ಕ್ರಮವಹಿಸಿ ಬೆಳೆಯ ಬೇಕಾ ಗಿರುತ್ತದೆ. ಇತ್ತೀಚೆಗೆ ಅತೀ ವೃಷ್ಠಿ/ಅನಾವೃಷ್ಠಿಯಿಂದಾಗಿ ಕಾಫಿಯ ಗಿಡಗಳು ನಾಶವಾಗುವುದು, ಕಾಫಿಯು ಉದು ರುತ್ತಿರುವುದು, ಮೆಣಸು ಬಳ್ಳಿಗೆ ರೋಗ ಬರುವುದು ಮತ್ತು ಅಡಿಕೆಗೆ ಕೊಳೆರೋಗ ಬರುವುದು ವಿಪರೀತವಾಗಿದೆ.
ಇಲ್ಲಿಯ ಕಾರ್ಮಿಕರ ದುಬಾರಿ ವೇತನ, ರಸ ಗೊಬ್ಬರದ ವಿಪರೀತ ಬೆಲೆ, ಕೀಟ ನಾಶಕ ಔಷಧಿಗಳ ಬೆಲೆ ಹೆಚ್ಚಳ ವಿಚಾರದಲ್ಲಿ ರೈತರಿಗೆ ಅನ್ಯಾಯ ವಾಗಿರುವ ಬಗ್ಗೆ ತಾಲೂಕು ದಂಡಾ ಧಿಕಾರಿ ಗೋವಿಂದರಾಜು ಮೂಲಕ ಮನವಿ ಪತ್ರವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಕಳುಹಿಸಿಕೊಡಲಾಯಿತು.

Translate »