Tag: Hanur

ಗಾಂಜಾ ಸಾಗಾಣೆ; ಆರೋಪಿ ಬಂಧನ
ಚಾಮರಾಜನಗರ

ಗಾಂಜಾ ಸಾಗಾಣೆ; ಆರೋಪಿ ಬಂಧನ

June 21, 2018

ಹನೂರು:  ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹನೂರು ಪೊಲೀಸರು ಬಂಧಿಸಿದ್ದಾರೆ. ಹನೂರು ತಾಲೂಕಿನ ಅರ್ಧನಾರಿಪುರ ಗ್ರಾಮದ ರಂಗಸ್ವಾಮಿ ಬಂಧಿತ ಆರೋಪಿ. ಅರ್ಧನಾರಿಪುರ ಗ್ರಾಮದ ಬಳಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆ ಸಿಪಿಐ ಮೋಹಿತ್ ಸಹದೇವ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 500 ಗ್ರಾಂ ನಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಮುಖ್ಯಪೇದೆ ಸಿದ್ದೇಶ್, ರಾಜು, ಬಿಳಿಗೌಡ, ಚಂದ್ರಶೇಖರ್ ಮತ್ತು ವೀರಭದ್ರಸ್ವಾಮಿ ಭಾಗವಹಿಸಿದ್ದರು.

ಹಲ್ಲೆ ಆರೋಪ: ಪ್ರಕರಣ ದಾಖಲು
ಚಾಮರಾಜನಗರ

ಹಲ್ಲೆ ಆರೋಪ: ಪ್ರಕರಣ ದಾಖಲು

June 16, 2018

ಹನೂರು:  ತಾಲೂಕಿನ ರಾಮಾಪುರ ಠಾಣೆಯ ವ್ಯಾಪ್ತಿಯ ಗೊಲ್ಲರದಿಂಬ ಗ್ರಾಮದ ದಿನ್ನಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮುರುಗೇಶ್ ವಿರುದ್ಧ ಹಲ್ಲೆ ಆರೋಪದಡಿ ದೂರು ದಾಖಲಾಗಿದೆ. ಘಟನೆ ವಿವರ : ಗೊಲ್ಲರದಿಂಬ ಗ್ರಾಮದಲ್ಲಿ ಕಳೆದ 1 ವಾರದಿಂದ ಟ್ರಾನ್ಸ್‍ಪಾರಂ ಸುಟ್ಟು ಹೋಗಿದ್ದು, ಈ ಸಂಬಂಧ ಗ್ರಾಪಂ ಸದಸ್ಯ ಮುರುಗೇಶ್ ಇಂದು ಬೆಳಿಗ್ಗೆ ರಾಮಾಪುರದ ಚೆಸ್ಕಾಂ ಕಛೇರಿಗೆ 11.30ರಲ್ಲಿ ಬಂದು ಗ್ರಾಮಕ್ಕೆ ಟಿ.ಸಿ ಅಳವಡಿಸುವ ವಿಚಾರವಾಗಿ ಗಲಾಟೆ ಮಾಡಿಕೊಂಡು ಅಲ್ಲೇ ಇದ್ದ ಲೈನ್‍ಮೈನ್ ಜೊತೆಯಲ್ಲಿ ಗಲಾಟೆ ಮಾಡಿ ಎಳೆದಾಡಿರುವ ಬಗ್ಗೆ ಲೈನ್‍ಮೇನ್…

ಮಾದಪ್ಪನಿಗೆ ಅಮಾವಾಸ್ಯೆ ವಿಶೇಷ ಪೂಜೆ
ಚಾಮರಾಜನಗರ

ಮಾದಪ್ಪನಿಗೆ ಅಮಾವಾಸ್ಯೆ ವಿಶೇಷ ಪೂಜೆ

June 14, 2018

ಹನೂರು:  ಹನೂರು ತಾಲೂಕಿನ ಪ್ರಸಿದ್ಧ ಪುಣ್ಯಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಲೆಮಹ ದೇಶ್ವರಸ್ವಾಮಿ ದೇಗುಲದಲ್ಲಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗಿನ ಜಾವ 3 ಗಂಟೆಯಿಂದಲೇ ಶ್ರೀ ಸ್ವಾಮಿಗೆ ಅಭಿಷೇಕ, ವಿಶೇಷಪೂಜೆ, ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಸಹ ಮಾದಪ್ಪನ ದರುಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆಯಲು ಜಮಾಯಿಸಿದ್ದರು. ಮಂಗಳವಾರ ರಾತ್ರಿ ನಡೆದ ಎಣ್ಣೆ ಮಜ್ಜನ ಸೇವೆಗೆ ಸೋಮವಾರದಿಂದಲೇ ರಾಜ್ಯದ ನಾನಾ ಭಾಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮಾದಪ್ಪನ…

ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ: ಮಂಜುನಾಥ್
ಚಾಮರಾಜನಗರ

ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ: ಮಂಜುನಾಥ್

June 10, 2018

ಹನೂರು:  ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಕೃತಜ್ಞತಾ ಸಭೆಯನ್ನು ಜೆಡಿಎಸ್ ಪರಾಜಿತ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಷೇತ್ರದ ಜನತೆ ನನ್ನನ್ನು ಮನೆ ಮಗನಂತೆ ಸ್ವಾಗತಿಸಿದರು. ನನಗೆ ತೋರಿದ ಅಭೂತಪೂರ್ವವಾದ ಬೆಂಬಲ ನನ್ನ ಜೀವನದಲ್ಲಿ ಸ್ಮರಣ ೀಯವಾದದ್ದು, ಕ್ಷೇತ್ರದ ಜನತೆ ಬದಲಾವಣೆ ಬಯಸಿ ನನಗೆ ಸುಮಾರು 45 ಸಾವಿರ ಮತಗಳನ್ನು ನೀಡಿದ್ದಾರೆ. ಸೋಲಿಗೆ ಧೃತಿಗೆಡದೆ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಂತು ಮುಂಬರುವ ಎಲ್ಲ ಚುನಾವಣೆಗಳಿಗೆ ಪಕ್ಷದ ಸಂಘಟನೆಯನ್ನು…

ಜಿಂಕೆ ಮಾಂಸ ಸಾಗಾಣೆ; ಆರೋಪಿ ಬಂಧನ
ಚಾಮರಾಜನಗರ

ಜಿಂಕೆ ಮಾಂಸ ಸಾಗಾಣೆ; ಆರೋಪಿ ಬಂಧನ

June 8, 2018

ಹನೂರು: ಅರಣ್ಯದೊಳಗೆ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸು ತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿ ಗಳು ಬಂಧಿಸಿದ್ದಾರೆ. ಹನೂರು ಸಮೀಪದ ಸೊಪ್ಪಿನಗುಡ್ಡೆ ಗ್ರಾಮದ ರಾಮಚಂದ್ರ ಬಂಧಿತ ಆರೋಪಿ. ಪಿ.ಜಿ. ಪಾಳ್ಯ ವನ್ಯಜೀವಿ ವಲಯದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಾಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಅರಣ್ಯಾಧಿಕಾರಿ ಗಳು ದಾಳಿ ಮಾಡಿ ಜಿಂಕೆ ಚರ್ಮ ಮತ್ತು ಎರಡು ಕೆ.ಜಿ ಮಾಂಸವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಮಸಿಬಾವಿದೊಡ್ಡಿ ಗ್ರಾಮದ ದೊರೆ ಹಾಗೂ ಸೊಪ್ಪಿನಗುಡ್ಡೆ ಗ್ರಾಮದ ಸೋಮ…

ಆನೆ ದಂತ ಚೋರನ ಬಂಧನ
ಚಾಮರಾಜನಗರ

ಆನೆ ದಂತ ಚೋರನ ಬಂಧನ

May 31, 2018

ಹನೂರು:  ಆನೆ ದಂತವನ್ನು ತಂದು ಮನೆಯಲ್ಲಿ ಅಡಗಿಸಿಟ್ಟಿದ್ದ ವ್ಯಕ್ತಿಯನ್ನು ಮಂಗಳವಾರ ಅರಣ್ಯಾಧಿಕಾರಿಗಳು ಬಂಧಿಸಿ ದಂತವನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಸೂಳೆಕೋಬೆ ಗ್ರಾಮದ ಸಣ್ಣಪುಟ್ಟ ಬಂಧಿತ ಆರೋಪಿ. ಹೂಗ್ಯಂ ವನ್ಯಜೀವಿ ವಲಯದ ಅರಣ್ಯ ಪ್ರದೇಶ ದಲ್ಲಿ ನೀರು ಕುಡಿಯಲು ಬಂದ 35 ವರ್ಷದ ಗಂಡಾನೆ ಯೊಂದು ಕಾಲು ಜಾರಿ ಬಿದ್ದು ಮೃತಪಟ್ಟಿದೆ. ಕಾಡಿಗೆ ತೆರಳಿದ್ದ ಸಣ್ಣಪುಟ್ಟ ಸತ್ತಿರುವ ಆನೆಯ ಎರಡು ದಂತ ಗಳನ್ನು ಕಡಿದು ಮನೆಯಲ್ಲಿ ಅಡಗಿಸಿಕೊಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಸುಂದರ್ ನೇತೃತ್ವದ ತಂಡ ದಾಳಿ…

ಕರ್ನಾಟಕ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ
ಚಾಮರಾಜನಗರ

ಕರ್ನಾಟಕ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

May 28, 2018

 ಗುಂಡ್ಲುಪೇಟೆಯಲ್ಲಿ ಉತ್ತಮ  ಉಳಿದೆಡೆ ಪ್ರತಿಭಟನೆಗೆ ಮಾತ್ರ ಸೀಮಿತ  ಎಂದಿನಂತೆ ಸಂಚರಿಸಿದ ವಾಹನಗಳು   ಸಾಲ ಮನ್ನಾಕ್ಕೆ ಬಿಜೆಪಿ ಮುಖಂಡರಿಂದ ಆಗ್ರಹ ಚಾಮರಾಜನಗರ: ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಬಿಜೆಪಿಯಿಂದ ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಾಮರಾಜ ನಗರದಲ್ಲಿ ಬಿಜೆಪಿ ಮುಖಂಡರು ಪ್ರತಿ ಭಟನಾ ಮೆರವಣ ಗೆ ನಡೆಸಿದರು. ಕೊಳ್ಳೇಗಾಲದಲ್ಲಿ ಬೈಕ್ ರ್ಯಾಲಿ ನಡೆಸಲಾ ಯಿತು. ಹನೂರಿನಲ್ಲಿ ಪರಿಮಳಾ ನಾಗಪ್ಪ ಅವರ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ಗುಂಡ್ಲುಪೇಟೆಯಲ್ಲಿ ಬಂದ್‍ಗೆ…

ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಸಿಎಂ ವಲಸೆ
ಚಾಮರಾಜನಗರ

ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಸಿಎಂ ವಲಸೆ

May 5, 2018

ಕೊಳ್ಳೇಗಾಲ:  ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಗೆ ವಲಸೆ ಬಂದಿದ್ದಾರೆ. ನಾನು ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದು, ಎರಡು ಕ್ಷೇತ್ರದಲ್ಲೂ ಕಾರ್ಯಕರ್ತರು ಹಾಗೂ ಮತದಾರರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಸಂಸದ ಹಾಗೂ ಮಾಜಿ ಸಚಿವ ಶ್ರೀರಾಮುಲು ಹೇಳಿದರು. ಅವರು ಹನೂರು ಕ್ಷೇತ್ರ ವ್ಯಾಪ್ತಿಯ ಪಾಳ್ಯ ಹಾಗೂ ಕೌದಳ್ಳಿ ಗ್ರಾಮದಲ್ಲಿ ಅಯೋಜಿಸಲಾಗಿದ್ದ ರೋಡ್ ಶೋನಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಮತಯಾಚಿಸಿ ಮಾತನಾಡಿ. ರಾಜ್ಯದಲ್ಲಿ 80 ಕ್ಷೇತ್ರಗಳಲ್ಲಿ ಈಗಾಗಲೇ ಪ್ರಚಾರ…

ಬರ ಪರಿಹಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ನರೇಂದ್ರಗೆ 2 ಸಾವಿರ ರೂ. ಪರಿಹಾರ ನೀಡಿದ ಕಂದಾಯ ಇಲಾಖೆ.. !  ಶಾಸಕ ನರೇಂದ್ರರ ಸಹಿ ಫೋರ್ಜರಿ ಮಾಡಿರುವ ದಾಖಲೆ ಬಿಡುಗಡೆ ಮಾಡಿದ ಆರ್‍ಟಿಐ ಕಾರ್ಯಕರ್ತ
ಚಾಮರಾಜನಗರ

ಬರ ಪರಿಹಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ನರೇಂದ್ರಗೆ 2 ಸಾವಿರ ರೂ. ಪರಿಹಾರ ನೀಡಿದ ಕಂದಾಯ ಇಲಾಖೆ.. ! ಶಾಸಕ ನರೇಂದ್ರರ ಸಹಿ ಫೋರ್ಜರಿ ಮಾಡಿರುವ ದಾಖಲೆ ಬಿಡುಗಡೆ ಮಾಡಿದ ಆರ್‍ಟಿಐ ಕಾರ್ಯಕರ್ತ

May 4, 2018

ಕೊಳ್ಳೇಗಾಲ: ಬರಪರಿಹಾರದಲ್ಲಿ ಹನೂರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ನರೇಂದ್ರ ಅವರಿಗೆ ಕಂದಾಯ ಇಲಾಖೆ 2014 ರಲ್ಲಿ 2ಸಾವಿರ ರೂ. ಪರಿಹಾರ ನೀಡಿದೆ. ಇದು ಮಾಹಿತಿ ಹಕ್ಕು ಕಾರ್ಯಕರ್ತ ಅಣಗಳ್ಳಿ ದಶರಥ್ ಪಡೆದಿರುವ ಮಾಹಿತಿಯಿಂದ ಬಹಿರಂಗಗೊಂಡಿದೆ. ಹನೂರು ಶಾಸಕ ನರೇಂದ್ರ ಅವರು ದೊಡ್ಡಿಂದುವಾಡಿ ಗ್ರಾಮದಲ್ಲಿ 1 ಎಕರೆ 89 ಸೆಂಟ್ ಜಮೀನು ಹೊಂದಿದ್ದಾರೆ. ಸರ್ವೆನಂಬರ್ 5ಎ, 6ಎರಲ್ಲಿ ನರೇಂದ್ರ ಲೇಟ್ ರಾಜೂಗೌಡ ಹೆಸರಿನಲ್ಲಿ ಜಮೀನು ಇದೆ. 2013-14ನೇ ಸಾಲಿ ನಲ್ಲಿ ನರೇಂದ್ರ ಅವರು 2ಸಾವಿರ ರೂ. ಬರ…

ಹನೂರಿನಲ್ಲಿ ಇಂಧನ ಸಚಿವ ಡಿಕೆಶಿ ರೋಡ್ ಶೋ
ಚಾಮರಾಜನಗರ

ಹನೂರಿನಲ್ಲಿ ಇಂಧನ ಸಚಿವ ಡಿಕೆಶಿ ರೋಡ್ ಶೋ

May 1, 2018

ಹನೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ವಿದ್ಯಾ ಸಿರಿ, ಆರೋಗ್ಯ ಭಾಗ್ಯ, ಅನ್ನಭಾಗ್ಯ ಮುಂತಾದ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಪಾರ ಜನ ಮನ್ನಣೆ ಗಳಿಸಿದೆ ಎಂದು ಇಂಧನ ಸಚಿವ ಡಿ. ಕೆ. ಶಿವಕುಮಾರ್ ತಿಳಿಸಿದರು. ಹನೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಶಾಸಕ ನರೇಂದ್ರ ಅವರ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು. ಹನೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಇಲ್ಲಿನ ಶಾಸ ಕರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕ್ಷೇತ್ರದ…

1 2 3 4 5
Translate »