ಹಲ್ಲೆ ಆರೋಪ: ಪ್ರಕರಣ ದಾಖಲು
ಚಾಮರಾಜನಗರ

ಹಲ್ಲೆ ಆರೋಪ: ಪ್ರಕರಣ ದಾಖಲು

June 16, 2018

ಹನೂರು:  ತಾಲೂಕಿನ ರಾಮಾಪುರ ಠಾಣೆಯ ವ್ಯಾಪ್ತಿಯ ಗೊಲ್ಲರದಿಂಬ ಗ್ರಾಮದ ದಿನ್ನಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮುರುಗೇಶ್ ವಿರುದ್ಧ ಹಲ್ಲೆ ಆರೋಪದಡಿ ದೂರು ದಾಖಲಾಗಿದೆ.

ಘಟನೆ ವಿವರ : ಗೊಲ್ಲರದಿಂಬ ಗ್ರಾಮದಲ್ಲಿ ಕಳೆದ 1 ವಾರದಿಂದ ಟ್ರಾನ್ಸ್‍ಪಾರಂ ಸುಟ್ಟು ಹೋಗಿದ್ದು, ಈ ಸಂಬಂಧ ಗ್ರಾಪಂ ಸದಸ್ಯ ಮುರುಗೇಶ್ ಇಂದು ಬೆಳಿಗ್ಗೆ ರಾಮಾಪುರದ ಚೆಸ್ಕಾಂ ಕಛೇರಿಗೆ 11.30ರಲ್ಲಿ ಬಂದು ಗ್ರಾಮಕ್ಕೆ ಟಿ.ಸಿ ಅಳವಡಿಸುವ ವಿಚಾರವಾಗಿ ಗಲಾಟೆ ಮಾಡಿಕೊಂಡು ಅಲ್ಲೇ ಇದ್ದ ಲೈನ್‍ಮೈನ್ ಜೊತೆಯಲ್ಲಿ ಗಲಾಟೆ ಮಾಡಿ ಎಳೆದಾಡಿರುವ ಬಗ್ಗೆ ಲೈನ್‍ಮೇನ್ ರವಿ ಹಿರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ದಾಖಲು: ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅನಿಲ್ ಮತ್ತು ರಾಮಾಪುರ ಸಹಾಯಕ ಇಂಜಿನಿಯರ್ ಸಂತೋಷ್, ಲೈನ್‍ಮೇನ್ ರವಿ ರಾಮಾಪುರ ಪೊಲೀಸ್ ಠಾಣೆಗೆ ತೆರಳಿ ಗ್ರಾಪಂ ಸದಸ್ಯ ಮುರುಗೇಶ್ ಮೇಲೆ ದೂರು ದಾಖಲಿಸಿದ್ದಾರೆ.

Translate »