ಬೈಕ್ ಕಳ್ಳನ ಬಂಧನ
ಚಾಮರಾಜನಗರ

ಬೈಕ್ ಕಳ್ಳನ ಬಂಧನ

June 16, 2018

ಗುಂಡ್ಲುಪೇಟೆ: ಕದ್ದ ಬೈಕಿನ ನಂಬರ್ ಪ್ಲೇಟ್ ಬದ ಲಿಸಿ ಓಡಿಸುತ್ತಿದ್ದವನನ್ನು ತಾಲೂಕಿನ ತೆರಕಣಾಂಬಿ ಪೆÇಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಬಸವರಾಜಪ್ಪ ಎಂಬುವರು ತಮ್ಮ ಹೀರೊ ಹೋಂಡಾ ಬೈಕನ್ನು 2017 ಡಿಸೆಂಬರ್‍ನಲ್ಲಿ ತೆರಕಣಾಂಬಿ ಗ್ರಾಮದ ಸಂತೇಮಾಳದಲ್ಲಿ ನಿಲ್ಲಿಸಿದ್ದಾಗ ಕಳ್ಳ ತನವಾಗಿತ್ತು. ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂದಿನಂತೆ ತೆರಕಣಾಂಬಿ ಪೆÇಲೀಸ್ ಠಾಣೆಯ ಪಿಎಸ್‍ಐ ರವಿಕಿರಣ್, ಸಿಬ್ಬಂದಿಗಳಾದ ಮಲ್ಲೇಶ್, ಅಸಾದುಲ್ಲಾ ಅವರು ವಾಹನಗಳ ದಾಖಲಾತಿ ತಪಾಸಣೆ ಮಾಡು ವಾಗ ತೆರಕಣಾಂಬಿಹುಂಡಿ ಗ್ರಾಮದ ಮಹದೇವಸ್ವಾಮಿ(30) ಎಂಬಾತನ ವಾಹನ ತಪಾಸಣೆ ಮಾಡಿದಾಗ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದು ಕಂಡು ಬಂದು ಅನುಮಾನಗೊಂಡು ತನಿಖೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ನಂತರ ವಾಹನ ಹಾಗೂ ಆರೋಪಿಯನ್ನು ಬಂಧಿಸಿದ ಪೆÇಲೀಸರು ನ್ಯಾಯಾ ಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Translate »