ಜೂ. 20ರಂದು ಯೋಗ ಜಾಗೃತಿ ಜಾಥಾ
ಚಾಮರಾಜನಗರ

ಜೂ. 20ರಂದು ಯೋಗ ಜಾಗೃತಿ ಜಾಥಾ

June 16, 2018

ಚಾಮರಾಜನಗರ:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜೂನ್ 20ರಂದು ಬೆಳಿಗ್ಗೆ 9 ಗಂಟೆಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಠಿಯಿಂದ ಸಾಮಾಹಿಕ ಜಾಥಾ ಕಾರ್ಯಕ್ರಮ ಆಯೋಜಿಸಲಗಿದೆ.

ಜಾಥಾ ಕಾರ್ಯಕ್ರಮ ನ್ಯಾಯಾಲಯದ ಆವರಣದಿಂದ ಹೊರಟು ಜಿಲ್ಲಾಡಳಿತ ಭವನದ ಆವರಣ ತಲುಪಲಿದೆ. ಶಾಲಾ ಮಕ್ಕಳು, ಯೋಗಪಟುಗಳು ಮತ್ತು ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಳ್ಳುವರು. ಜಾಥಾ ನಂತರ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಯೋಗ ಕುರಿತು ಉಪನ್ಯಾಸ ನೀಡಲಾಗುವುದು ಎಂದು ಜಿಲ್ಲಾ ಅಯುಷ್ ಅಧಿಕಾರಿಗಳು ತಿಳಿಸಿದ್ದಾರೆ.

Translate »