ಇಂದು ಜಿಲ್ಲೆಯಾದ್ಯಂತ ರಂಜಾನ್ ಆಚರಣೆ
ಚಾಮರಾಜನಗರ

ಇಂದು ಜಿಲ್ಲೆಯಾದ್ಯಂತ ರಂಜಾನ್ ಆಚರಣೆ

June 16, 2018

ಚಾಮರಾಜನಗರ:  ಮುಸ್ಲಿಂ ಸಮುದಾಯ ಒಂದು ತಿಂಗಳು ಗಳ ಕಾಲ ಉಪವಾಸ ವ್ರತವಿದ್ದು ಆಚರಿ ಸುವ ಈದ್ ಉಲ್ ಫಿತರ್ (ರಂಜಾನ್) ಹಬ್ಬವನ್ನು ಜಿಲ್ಲೆಯಾದ್ಯಂತ ನಾಳೆ (ಜೂ.16) ಆಚರಿಸಲಾಗುವುದು.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಇಂದೇ ಮುಸ್ಲಿಂ ಸಮುದಾಯದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮುಸ್ಲಿಂ ಸಮುದಾಯ ಇದಕ್ಕಾಗಿ ಭರದ ಸಿದ್ಧತೆ ಯಲ್ಲಿ ತೊಡಗಿದ್ದು ಶುಕ್ರವಾರ ಕಂಡು ಬಂತು. ನಗರದ ಬಟ್ಟೆ ಅಂಗಡಿಗಳಲ್ಲಿ, ಬ್ಯಾಂಗಲ್ಸ್ ಸ್ಟೋರ್‍ಗಳಲ್ಲಿ ಜನಜಂಗುಳಿ ಕಂಡು ಬಂತು. ಬೆಳಿಗ್ಗೆ ಹೊಸಬಟ್ಟೆ ತೊಟ್ಟು, ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವರು. ನಂತರ ಒಬ್ಬರಿಗೊ ಬ್ಬರು ಅಪ್ಪಿಕೊಂಡು ಹಬ್ಬದ ಶುಭಾಶಯ ವನ್ನು ವಿನಿಮಯ ಮಾಡಿಕೊಳ್ಳಲಾಗುವುದು.

ನಗರದ ಸೋಮವಾರಪೇಟೆ ಬಳಿ ಇರುವ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 8.30ಕ್ಕೆ, ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಈದ್ಗಾ ಮೈದಾನ ದಲ್ಲಿ ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಈದ್ಗಾ ಮೈದಾನಕ್ಕೆ ಆಗಮಿಸಲು ಆಗದ ವೃದ್ಧರು, ಆಸಕ್ತರು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸ ಲಿದ್ದಾರೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಬಡವರಿಗೆ ತಮ್ಮ ಕೈಲಾದ ದಾನ ಧರ್ಮವನ್ನು ಮಾಡುವುದು ಪ್ರತೀತಿ.

Translate »