ಜಿಲ್ಲೆಯಲ್ಲಿ ಚುನಾವಣೆ ವೇಳೆ ಮದ್ಯದ ಹೊಳೆ: ಜಿಲ್ಲಾಡಳಿತ ಕಳವಳ ಹಾಸನ: ಲೋಕಸಭಾ ಚುನಾ ವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನಿಂದ ತಪಾ ಸಣೆ ನಡೆಸುತ್ತಿದ್ದು, ಕಳೆದ 10 ದಿನಗಳಲ್ಲಿ 209 ಕಡೆ ದಾಳಿ ನಡೆಸಿ ಒಟ್ಟು 1.61 ಕೋಟಿ ರೂ ಮೌಲ್ಯದ ಮದ್ಯ ವಶಪಡಿಸಿ ಕೊಂಡಿದೆ. ಒಂದು ಪ್ರಕರಣದಲ್ಲಿ ಮದ್ಯ ಮಾರಾಟ ಪರವಾನಗಿ ಅಮಾನತು ಪಡಿಸಿ, 70 ಮಂದಿ ವಿರುದ್ಧ ಅಪರಾಧ ಪ್ರಕರಣಗಳನ್ನೂ ದಾಖಲಿಸಿದೆ. ಮಾ.10ರಿಂದ ಈವರೆಗೆ 209 ಕಡೆ ದಾಳಿ ನಡೆಸಲಾಗಿದೆ. ಈವರೆಗೆ…
ಯುವಕ ಅನುಮಾನಾಸ್ಪದ ಸಾವು
March 20, 2019ಹಾಸನ: ಹಾಸನದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಎನ್‍ಟಿಸಿಯಲ್ಲಿ ಕೆಲಸ ಮಾಡುವ ಯುವಕನೋರ್ವ ರೈಲು ಹಳಿ ಮೇಲೆ ಅನುಮಾನ ಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಂಗರಹಳ್ಳಿಯಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕು ಹನುಮನಹಳ್ಳಿ ಗ್ರಾಮದ ನಿವಾಸಿ ರಘು ಸಾವನ್ನಪ್ಪಿರುವ ಯುವಕ. ಈಗಾಗಲೇ ಹಾಸನ ತಾಲೂಕಿನ ಮಿನರ್ವ ಮಿಲ್ ಕಾರ್ಮಿಕರು ಕಳೆದ ಹಲವಾರು ದಿನದಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದು, ಈ ಯುವಕನೂ ಪಾಲ್ಗೊಂಡಿದ್ದನು. ಸೋಮವಾರ ತನ್ನ ಹೀರೋ ಹೋಂಡ ಸ್ಪ್ಲೆಂಡರ್ ಬೈಕಿನಲ್ಲಿ ಬಂದಿದ್ದು, ರೈಲ್ವೆ ಹಳಿ ಬಳಿ ನಿಲ್ಲಿಸಿ ರೈಲು ಬರುವ ವೇಳೆ…
ರಾಜಕೀಯ ಕಡು ವೈರಿಗಳು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ದೋಸ್ತಿಗಳು ಬಿ.ಶಿವರಾಂ ಮನೆಗೆ ಸಚಿವ ರೇವಣ್ಣ ಭೇಟಿ: ಪುತ್ರನ ಬೆಂಬಲಿಸಲು ಮನವಿ
March 20, 2019ಹಾಸನ: ಕಳೆದ ಹಲವಾರು ವರ್ಷ ಗಳಿಂದ ಕಡು ವೈರಿಯಾಗಿದ್ದ ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ದಿಢೀರ್ ಭೇಟಿ ನೀಡಿ ತಮ್ಮ ಪುತ್ರ ಪ್ರಜ್ವಲ್‍ಗೆ ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಮಂಗಳವಾರ ಬೆಳಿಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಿ.ಶಿವರಾಂ ಮನೆಗೆ ಮೊದಲು ಲೋಕ ಸಭೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಗ ಮಿಸಿ ಕಾಲಿಗೆರಗಿ ಆಶೀರ್ವಾದ ಪಡೆದರು. ಈ ವೇಳೆ ಕೆಲಕಾಲ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ…
ಚುನಾವಣಾ ವೆಚ್ಚ ವೀಕ್ಷಕರಿಂದ ಚೆಕ್‍ಪೋಸ್ಟ್‍ಗೆ ಭೇಟಿ, ಪರಿಶೀಲನೆ
March 20, 2019ಹಾಸನ: ಲೋಕಸಭಾ ಚುನಾ ವಣೆ ವೆಚ್ಚ ವೀಕ್ಷಕರು ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತಾ ಜಿಲ್ಲೆಯಲ್ಲಿ ಮಾಡಲಾಗಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿದ ಅವರು ಅಲ್ಲಿ ನಡೆಯುತ್ತಿರುವ ತಪಾಸಣೆ ವ್ಯವಸ್ಥೆ ಗಮ ನಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್‍ಗೌಡ ಅವರು ವೀಕ್ಷಕರೊಂದಿಗೆ ಹಾಜರಿದ್ದು, ಲೋಕಸಭಾ ಚುನಾವಣೆಗೆ ಮಾಡಿ ಕೊಂಡಿರುವ ಸಿದ್ಧತೆಗಳು, ಚೆಕ್‍ಪೋಸ್ಟ್ ಗಳ ಬಗ್ಗೆ ವಿವರಿಸಿದರು. ಮಾಧ್ಯಮ ಮೇಲ್ವಿಚಾರಣೆ…
ಲೋಕಸಭಾ ಚುನಾವಣೆಯಲ್ಲಿ ಗೌಡರ ಕುಟುಂಬ ರಾಜಕಾರಣ ಅಂತ್ಯ
March 20, 2019ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ಬೇಲೂರು: ಜೆಡಿಎಸ್‍ನಲ್ಲಿ ಕಾರ್ಯಕರ್ತರ ಅಭಿ ವೃದ್ಧಿಗಿಂತ ಅಪ್ಪ-ಮಕ್ಕಳು ಹಾಗೂ ಮೊಮ್ಮಕ್ಕಳ ಸಾಧನೆ ಜೋರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಮತದಾ ರರು ಗೌಡರ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿ ಜಾತ್ಯಾತೀತ ಸಿದ್ಧಾಂತವನ್ನು ನೆಪ ಮಾತ್ರಕ್ಕೆ ಹೇಳುತ್ತಾರೆ. ಆದರೆ ಜೆಡಿಎಸ್‍ನಲ್ಲಿ ಸ್ವಜನಪಕ್ಷಪಾತ ಹಾಗೂ ಸ್ವಾರ್ಥ ದಿಂದ…
ನಾಳೆಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
March 20, 2019ಹಾಸನ: ಜಿಲ್ಲೆಯ 91 ಪರೀಕ್ಷಾ ಕೇಂದ್ರಗಳಲ್ಲಿ ಮಾ.21ರಿಂದ ಏ.4ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯ ಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇ ಶಕ ಹೆಚ್.ಮಂಜುನಾಥ್ ತಿಳಿಸಿದ್ದಾರೆ. 2019ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ 10,840 ಹೆಣ್ಣು ಮಕ್ಕಳು, 11,164 ಗಂಡು ಮಕ್ಕಳು ಸೇರಿದಂತೆ ಒಟ್ಟು 22, 004 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಜಿಲ್ಲಾಧಿಕಾರಿ ಅಕ್ರಂ ಪಾಷ ಅಧ್ಯಕ್ಷತೆ ಯಲ್ಲಿ ಮತ್ತು ಜಿಪಂ ಸಿಇಓ ಡಾ.ಕೆ.ಎನ್. ವಿಜಯಪ್ರಕಾಶ್ ಉಪಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ…
ಹಾಸನ ಲೋಕಸಭಾ ಕ್ಷೇತ್ರಕ್ಕೆ ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭ
March 19, 2019ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾ ಚುನಾವಣಾ ಧಿಕಾರಿ ಅಕ್ರಂ ಪಾಷ ಮಾ.19ರಂದು ಅಧಿ ಸೂಚನೆ ಹೊರಡಿಸಲಿದ್ದಾರೆ. ಇದರೊಂ ದಿಗೆ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭ ವಾಗಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮ ಪತ್ರಗಳನ್ನು ಸ್ವೀಕರಿಸಲಾಗುವುದು. ಮಾ.19ರಿಂದ ಮಾ.26ರವರೆಗೆ ನಾಮ ಪತ್ರ ಸಲ್ಲಿಕೆಗೆ ಅವಕಾಶ ಇದ್ದು, 4ನೇ ಶನಿವಾರವಾದ ಮಾ.23 ರಂದು ನೆಗೋ ಷೆಬಲ್ ಇನ್ಸ್‍ಟ್ರುಮೆಂಟ್ ಕಾಯ್ದೆಯ ನ್ವಯ ಹಾಗೂ ಮಾ.24ರಂದು ಭಾನು ವಾರ ರಜೆ ಕಾರಣ ಆ ದಿನಗಳಲ್ಲಿ ನಾಮ ಪತ್ರ ಸ್ವೀಕಾರಕ್ಕೆ ಅವಕಾಶ ಇರುವುದಿಲ್ಲ….
ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್
March 19, 2019ಬೇಲೂರು: ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹರಡ ದಂತೆ ಜಾಗ್ರತೆ ವಹಿಸ ಬೇಕು ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ.ವಿಜಯ್ ತಿಳಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸಿದ್ದರಹಳ್ಳಿ ಗ್ರಾಮದಲ್ಲಿ ಕಳೆದ ವಾರ ಮಂಗ ಸತ್ತಿರುವ ಮಾಹಿತಿ ಬಂದಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಮಂಗದ ಶವವನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಶವ ಪರೀಕ್ಷಾ ವರದಿಯಲ್ಲಿ ಮಂಗನ ಕಿಡ್ನಿಯಲ್ಲಿ ಕಾಯಿಲೆಯ ಸೋಂಕು ಇರುವುದು ಪತ್ತೆಯಾಗಿದೆ ಎಂಬ ಮಾಹಿತಿ ತಿಳಿದ…
ಮಾ.21ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭ
March 19, 2019ಹೊಳೆನರಸೀಪುರ: ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ 2018-19ನೇ ಸಾಲಿನ ಎಸ್‍ಎಸ್ ಎಲ್‍ಸಿ ಪರೀಕ್ಷೆಗಳು ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪರೀಕ್ಷೆಗೆ ಕೈಗೊಂಡಿರುವ ಪೂರ್ವಸಿದ್ಧತೆ ಮತ್ತು ಕ್ರಮಗಳ ಬಗ್ಗೆ ವಿವರಿಸಿದ ಅವರು, ತಾಲೂಕಿನ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ವರ್ಷ ಒಟ್ಟು 2,416 ವಿದ್ಯಾರ್ಥಿಗಳು ಪರೀಕ್ಷೆ ತೆಗದು ಕೊಂಡಿದ್ದು, ಇದರಲ್ಲಿ 1,229 ಗಂಡು ಮಕ್ಕಳು ಮತ್ತು 1,187 ಹೆಣ್ಣು ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆಂದು ಹೇಳಿದರು. ಈ…
184.96 ಕೋಟಿ ರೂ. ತಂಬಾಕು ವಹಿವಾಟು
March 19, 2019ರಾಮನಾಥಪುರ: ಕಳೆದ 132 ದಿನಗಳಲ್ಲಿ ನಡೆದ ತಂಬಾಕು ವಹಿವಾಟು 2 ಹರಾಜು ಮಾರುಕಟ್ಟೆಗಳಿಂದ 184 ಕೋಟಿ 96 ಲಕ್ಷ 59 ಸಾವಿರ 680 ರೂ. ವಹಿವಾಟು ನಡೆದಿದ್ದು, 131 ಲಕ್ಷ 86 ಸಾವಿರ, 853 ಕೆ.ಜಿ ತಂಬಾಕು ಬಂದಿದ್ದು, ಪ್ರತಿ ಕೆ.ಜಿ ತಂಬಾಕಿಗೆ ಸರಾಸರಿ 141.30 ರೂ. ಬೆಲೆ ಸಿಕ್ಕಿದೆ ಎಂದು ಹರಾಜು ಅಧೀಕ್ಷಕ ಎಸ್.ಎಸ್.ಪಾಟೀಲ್ ತಿಳಿಸಿದರು. ಇಲ್ಲಿಯ ಸುಬ್ರಹ್ಮಣ್ಯ ನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆ ನಂತರ ಮಾತನಾಡಿದ ಅವರು, ಪ್ಲಾಟ್ ಫಾರಂ…