ಚುನಾವಣಾ ವೆಚ್ಚ ವೀಕ್ಷಕರಿಂದ  ಚೆಕ್‍ಪೋಸ್ಟ್‍ಗೆ ಭೇಟಿ, ಪರಿಶೀಲನೆ
ಹಾಸನ

ಚುನಾವಣಾ ವೆಚ್ಚ ವೀಕ್ಷಕರಿಂದ ಚೆಕ್‍ಪೋಸ್ಟ್‍ಗೆ ಭೇಟಿ, ಪರಿಶೀಲನೆ

March 20, 2019

ಹಾಸನ: ಲೋಕಸಭಾ ಚುನಾ ವಣೆ ವೆಚ್ಚ ವೀಕ್ಷಕರು ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತಾ ಜಿಲ್ಲೆಯಲ್ಲಿ ಮಾಡಲಾಗಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ.

ಮಂಗಳವಾರ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿದ ಅವರು ಅಲ್ಲಿ ನಡೆಯುತ್ತಿರುವ ತಪಾಸಣೆ ವ್ಯವಸ್ಥೆ ಗಮ ನಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್‍ಗೌಡ ಅವರು ವೀಕ್ಷಕರೊಂದಿಗೆ ಹಾಜರಿದ್ದು, ಲೋಕಸಭಾ ಚುನಾವಣೆಗೆ ಮಾಡಿ ಕೊಂಡಿರುವ ಸಿದ್ಧತೆಗಳು, ಚೆಕ್‍ಪೋಸ್ಟ್ ಗಳ ಬಗ್ಗೆ ವಿವರಿಸಿದರು.

ಮಾಧ್ಯಮ ಮೇಲ್ವಿಚಾರಣೆ ಘಟಕಕ್ಕೆ ವೆಚ್ಚ ವೀಕ್ಷಕರ ಭೇಟಿ: ಲೋಕಸಭಾ ಚುನಾವಣೆ ವೆಚ್ಚ ವೀಕ್ಷಕರಾದ ರಾಜೀವ್ ಮಗೊ ಅವರು ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆಯಲ್ಲಿ ತೆರೆ ಯಲಾಗಿರುವ ಮಾಧ್ಯಮ ಮೇಲ್ವಿಚಾರಣೆ ಘಟಕಕ್ಕೆ ಭೇಟಿ ನೀಡಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೇಲ್ವಿಚಾರಣೆಗೆ ಮಾಡಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಮಾಧ್ಯಮ ದೃಢೀಕರಣ ಮತ್ತು ಮೇಲ್ವಿಚಾರಣೆಗೆ ಮಾಡಿಕೊಂಡಿರುವ ವ್ಯವಸ್ಥೆಗಳ ಕುರಿತು ವಿವರಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಎಂ. ಎಲ್.ವೈಶಾಲಿ, ಜಿಪಂ ಮುಖ್ಯ ಲೆಕ್ಕಾಧಿ ಕಾರಿ ಶ್ರೀನಿವಾಸ್‍ಗೌಡ, ತಹಶೀಲ್ದಾರ್ ಶ್ರೀನಿವಾಸಯ್ಯ, ಚುನಾವಣಾ ತಹ ಶೀಲ್ದಾರ್ ನಾಗಭೂಷಣ್ ಹಾಜರಿದ್ದರು.

Translate »