ರಾಜಕೀಯ ಕಡು ವೈರಿಗಳು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ದೋಸ್ತಿಗಳು ಬಿ.ಶಿವರಾಂ ಮನೆಗೆ ಸಚಿವ ರೇವಣ್ಣ ಭೇಟಿ: ಪುತ್ರನ ಬೆಂಬಲಿಸಲು ಮನವಿ
ಹಾಸನ

ರಾಜಕೀಯ ಕಡು ವೈರಿಗಳು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ದೋಸ್ತಿಗಳು ಬಿ.ಶಿವರಾಂ ಮನೆಗೆ ಸಚಿವ ರೇವಣ್ಣ ಭೇಟಿ: ಪುತ್ರನ ಬೆಂಬಲಿಸಲು ಮನವಿ

March 20, 2019

ಹಾಸನ: ಕಳೆದ ಹಲವಾರು ವರ್ಷ ಗಳಿಂದ ಕಡು ವೈರಿಯಾಗಿದ್ದ ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ದಿಢೀರ್ ಭೇಟಿ ನೀಡಿ ತಮ್ಮ ಪುತ್ರ ಪ್ರಜ್ವಲ್‍ಗೆ ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು.

ಮಂಗಳವಾರ ಬೆಳಿಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಿ.ಶಿವರಾಂ ಮನೆಗೆ ಮೊದಲು ಲೋಕ ಸಭೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಗ ಮಿಸಿ ಕಾಲಿಗೆರಗಿ ಆಶೀರ್ವಾದ ಪಡೆದರು. ಈ ವೇಳೆ ಕೆಲಕಾಲ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು. ಅಲ್ಲದೇ ಪ್ರಜ್ವಲ್ ಮನೆಯಿಂದ ವಾಪಸ್ ತೆರಳುವಾಗ ಜೊತೆಯಲ್ಲಿಯೇ ಮನೆ ಬಾಗಿ ಲಿಗೆ ಬಂದು ಬಿ.ಶಿವರಾಂ ಬೀಳ್ಕೊಟ್ಟರು. ಮಗನ ಹಿಂದೆಯೇ ತಂದೆ ಹೆಚ್.ಡಿ.ರೇವಣ್ಣ ಬಿ.ಶಿವರಾಂ ಮನೆಗೆ ಆಗಮಿಸುವ ಮೂಲಕ ಹಾಸನ ಜಿಲ್ಲಾ ರಾಜ ಕೀಯದಲ್ಲಿ ಆಶ್ಚರ್ಯವನ್ನುಂಟು ಮಾಡಿದರು.

ಬಿ.ಶಿವರಾಂ ರಾಜಕೀಯವಾಗಿ ಎಂದೂ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಕುಟುಂಬ ದೊಂದಿಗೆ ರಾಜಿಯಾದ ಉದಾಹರಣೆಗಳಿಲ್ಲ. ಅಂತಹ ವ್ಯಕ್ತಿತ್ವದ ಶಿವರಾಂ ಇಂದು ರೇವಣ್ಣ ಅವರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿ ಕೊಂಡು ಪಕ್ಕದಲ್ಲಿ ಕೂರಿಸಿಕೊಂಡು ಕೆಲ ಸಮಯ ರಾಜಕೀಯ ಕುರಿತು ಚರ್ಚೆ ನಡೆಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ರಾಜಕೀಯ ಕಡು ವೈರಿಗಳು. ಈ ಇಬ್ಬರು ನಾಯಕರು ಒಬ್ಬರಿಗೊಬ್ಬರೂ ಭಾಷಣ ಇಲ್ಲವೇ ಸುದ್ದಿಗೋಷ್ಠಿಯಲ್ಲಿ ನಿಂದಿಸುತ್ತಿ ದ್ದರು. ಆದರೆ ಪ್ರಸ್ತುತ ಲೋಕಸಭೆ ಚುನಾವಣೆ ಯಲ್ಲಿ ದೋಸ್ತಿಗಳಾಗುವ ಮೂಲಕ ಈ ಇಬ್ಬರು ಹಿರಿಯ ಮುಖಂಡರು ಪಕ್ಕ ಪಕ್ಕದಲ್ಲೇ ಕುಳಿತು ನಗು ನಗುತ್ತಲೇ ರಾಜಕೀಯ ಚರ್ಚೆ ಮಾಡಿ, ಪ್ರಜ್ವಲ್ ಬೆಂಬಲಿಸುವ ಭರವಸೆ ನೀಡಿದ್ದು ಮಾತ್ರ ರಾಜಕೀಯ ಕಡು ವೈರಿಗಳಿಗೆ ನುಂಗಲಾರದ ತುಪ್ಪವಾಗಿದೆ.

ಬಿ.ಶಿವರಾಂ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ರೇವಣ್ಣ, ನಮ್ಮೊಳಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಇಬ್ಬರು ಒಟ್ಟಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳು ತ್ತೇವೆ ಎನ್ನುತ್ತಿದ್ದಂತೆ, ಮಾಜಿ ಸಚಿವ ಬಿ.ಶಿವರಾಂ ನಾನು ಈಗಲೂ ಸ್ಪಷ್ಟವಾಗಿ ಹೇಳುತ್ತಿದ್ದೇನೆ ಮೈತ್ರಿ ಅಭ್ಯರ್ಥಿ ಬೆಂಬಲಿಸಲು ತಾವು ಸಿದ್ಧವಿದ್ದು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಆದರೆ ರಾಜ್ಯ ದಲ್ಲಿ ಮೈತ್ರಿ ಸರ್ಕಾರವಿದ್ದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿ ಸಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಯಲ್ಲಿಯೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಪರಿಗಣಿಸು ವಂತಾಗಬೇಕೆಂದು ಹೇಳಿದರಲ್ಲದೆ. ಈ ಬಗ್ಗೆ ರೇವಣ್ಣ ಅವರಿಗೂ ಸ್ಪಷ್ಟವಾಗಿ ತಿಳಿಸಿದ್ದೇನೆ. ಚುನಾವಣೆಗೆ ಮಾತ್ರ ಮೈತ್ರಿ ಸೀಮಿತವಾಗಬಾರದು. ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂ ಬುದು ನಮ್ಮ ಪ್ರಮುಖ ಬೇಡಿಕೆ ಎಂದು ಶಿವರಾಂ ಹೇಳಿದರು. ಇದಕ್ಕುತ್ತರಿಸಿದ ರೇವಣ್ಣ ಈಗಾಗಲೇ ಜಿಪಂ ಅಧ್ಯಕ್ಷರು, ಸ್ಥಾಯಿ ಸಮಿತಿಗಳಲ್ಲಿ ಹೊಂದಾ ಣಿಕೆಯಿದೆ. ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮುಂದುವರೆಯಲಿದೆ ಎಂದರು.

ಎ.ಮಂಜು ವಿರುದ್ಧ ಶಿವರಾಂ ಆಕ್ರೋಶ: ಎ.ಮಂಜು ಕಾಂಗ್ರೆಸ್‍ನÀಲ್ಲಿ ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿ ಇಂದು ಪಕ್ಷದ ಸಿದ್ಧಾಂತ ಮರೆತು ಕೋಮುವಾದಿ ಪಕ್ಷ ಬಿಜೆಪಿ ಸೇರಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದರು. ಹಾಸನದ ಹಲವು ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರನ್ನು ತಮ್ಮ ಗುರುಗಳು, ಅವರ ಆಣತಿ ಯಂತೆ ನಡೆಯುವೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾ ವಂತ ಕಾರ್ಯಕರ್ತ ಎಂದು ಹೇಳಿಕೊಂಡು ತಿರುಗುತ್ತಿದ್ದ ಎ.ಮಂಜು ಅವರು ಇಂದು ಗುರು ವಿಗೇ ತಿರುಮಂತ್ರ ಹಾಕಿದ್ದಾರೆ ಎಂದು ಸಚಿವ ಬಿ.ಶಿವರಾಂ ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರ ನೆಪವೂಡ್ಡಿ ಬಿಜೆಪಿ ಪಕ್ಷ ಸೇರಿ ರುವ ಮಂಜು ಕುಟುಂಬ ರಾಜಕಾರಣ ಎಂದು ಹೇಳುವುದು ಸರಿಯಲ್ಲ. ಅವರ ಮಗನು ಕೂಡ ಜಿಪಂ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯೂತ್ ಪ್ರೆಸಿಡೆಂಟ್ ಆಗಿದ್ದಾರೆ. ಈಗಿರುವಾಗ ಗೌಡರ ಕುಟುಂಬ ರಾಜಕಾರಣ ಟೀಕಿಸುವುದು ಸರಿಯಲ್ಲ ಎಂದು ಮಂಜು ವಿರುದ್ಧ ಕಿಡಿಕಾರಿದರಲ್ಲದೆ, ಆತ ನೊಬ್ಬ ಪಕ್ಷದ್ರೋಹಿ ಎಂದು ಟೀಕಿಸಿದರು. ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದು, ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಜೆಡಿಎಸ್ ಬೆಂಬಲಿಸಿ ಮೈತ್ರಿ ಧರ್ಮ ಪಾಲಿಸುವುದಾಗಿ ಶಿವರಾಂ ಹೇಳಿದರು.

ಇದೇ ವೇಳೆ ನಮ್ಮ ಜೀವನದಲ್ಲಿ ಯಾವುದೇ ರೀತಿಯ ವಾಸ್ತುನೂ ಇಲ್ಲ, ನಿಂಬೆಹಣ್ಣು ಕೂಡ ಇಲ್ಲ. ಜೀವನ ಹೇಗೆ ನಡೆದುಕೊಂಡು ಹೋಗುತ್ತೋ ಹಾಗೆ ಹೋಗುವುದು ಅಷ್ಟೇ ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳುವ ಮೂಲಕ ಹೆಚ್.ಡಿ. ರೇವಣ್ಣ ಅವರಿಗೆ ಇದೇ ವೇಳೆ ಟಾಂಗ್ ಕೊಟ್ಟರು. ರಾಜಕೀಯದಲ್ಲಿ ನಮಗೆ ಗುರುವೂ ಇಲ್ಲ, ಗುರಿಯೂ ಇಲ್ಲ. ಹೇಗೆ ನಡೆಯುತ್ತೋ ಹಾಗೆ ನಡೆಯಲಿ. ಮೈತ್ರಿ ಸರ್ಕಾರದ ಸೂಚನೆಯಂತೆ ಬೆಂಬಲ ನೀಡುವುದಾಗಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಕೋಮುವಾದಿ ಶಕ್ತಿ ದೂರವಿಡ ಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ 8 ಸ್ಥಾನ ನೀಡಲಾಗಿದೆ. ರಾಜಕಾರಣ ಒಂದು ಕಡೆ ಇಟ್ಟು, ಜಿಲ್ಲೆ ಅಭಿವೃದ್ಧಿಯಾಗಬೇಕು ಎಂಬ ನಡೆ ಯಲ್ಲಿ ಹೋಗುವುದು. ಸಣ್ಣ-ಪುಟ್ಟ ಗೊಂದಲ ಏನೇ ಇದ್ದರೂ ಒಟ್ಟಿಗೆ ಕುಳಿತು ಮಾತನಾಡೋಣ. ಇಂದು ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ನಂತರ ಜಿಲ್ಲೆಯಲ್ಲಿ ನಾನು ಮತ್ತು ಶಿವರಾಂಣ್ಣ ಕುಳಿತು, ಕಾಂಗ್ರೆಸ್ ಮುಖಂಡರೊಳ ಗೊಂಡ ಎಲ್ಲರೊಂದಿಗೆ ಚರ್ಚಿಸಲಾಗುವುದು. ಚುನಾವಣೆ ಪ್ರಚಾರವನ್ನು ಒಟ್ಟಿಗೆ ಮಾಡುವ ಮೂಲಕ ಪ್ರಜ್ವಲ್‍ನನ್ನು ಗೆಲ್ಲಿಸೋಣ ಎಂದರು.

ಇದಕ್ಕೂ ಮುನ್ನಾ ಬಿ. ಶಿವರಾಂ ನಿವಾಸಕ್ಕೆ ತೆರಳಿದ ರೇವಣ್ಣ, ಶಿವರಾಂ ಅವರೊಂದಿಗೆ ಮೊದಲು ಔಪಚಾರಿಕವಾಗಿ ಮಾತನಾಡಿ, ಕೆಲ ಸಮಯ ಒಂದು ರೂಂನ ಬಾಗಿಲನ್ನು ಹಾಕಿಕೊಂಡು ರಾಜ ಕೀಯದ ಕೆಲ ವಿಚಾರವನ್ನು ಗುಪ್ತವಾಗಿ ಮಾತ ನಾಡುವ ಮೂಲಕ ಅಚ್ಚರಿ ಮೂಡಿಸಿದರು. ಕಳೆದ 30 ವರ್ಷಗಳ ಕಾಲ ಕಡು ವೈರಿಗಳಾಗಿ ಹಾಸನ ಜಿಲ್ಲೆಯಲ್ಲಿ ಬಿಂಬಿಸಿಕೊಂಡಿದ್ದ ಬಿ.ಶಿವರಾಂ ಮತ್ತು ಹೆಚ್.ಡಿ.ರೇವಣ್ಣನವರು ಲೋಕಸಭೆ ಚುನಾ ವಣೆಯಲ್ಲಿ ದಿಢೀರ್ ಒಂದಾಗುವ ಮೂಲಕ ರಾಜ ಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಈ ವೇಳೆ ಜಿಪಂ ಸದಸ್ಯ ಹೆಚ್.ಪಿ. ಸ್ವರೂಪ್, ಗಿರೀಶ್ ಚನ್ನವೀರಪ್ಪ, ಎಂ.ಕೆ. ಕಮಲ್ ಕುಮಾರ್, ಗಿರಿಗೌಡ, ನಗರಸಭೆ ಸದಸ್ಯ ಸಿ.ಆರ್. ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »