ಹೋರಾಟಗಾರರನ್ನು ಕಣ್ಣುಮುಚ್ಚಿ ನಂಬಿದ ಅಯೋಗ್ಯರು ನಾವು
ಮಂಡ್ಯ

ಹೋರಾಟಗಾರರನ್ನು ಕಣ್ಣುಮುಚ್ಚಿ ನಂಬಿದ ಅಯೋಗ್ಯರು ನಾವು

March 20, 2019

ನ್ಯಾಯಾಲಯಕ್ಕೆ 6,750 ರೂ. ದಂಡ ಕಟ್ಟಿ ಹೊರಬಂದ ಕಾವೇರಿ ಹೋರಾಟಗಾರರ ಬೇಸರದ ನುಡಿ
ಮಂಡ್ಯ: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ವಾದಾಗ ಹಾಗೂ ತಮಿಳುನಾಡಿಗೆ ರಾತ್ರೋ ರಾತ್ರಿ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದ ಕಾವೇರಿ ಹೋರಾಟಗಾರರನ್ನು ನಂಬಿ ಜಿಲ್ಲೆಯಲ್ಲಿ ಅಲ್ಲಲ್ಲಿ ರಸ್ತೆ ತಡೆ ಪ್ರತಿಭಟನೆಗಳನ್ನು ನಡೆಸಿದ್ದ `ನೈಜ’ ಹೋರಾಟಗಾರರು ಈಗ ಪಶ್ಚಾತ್ತಾಪಪಡುತ್ತಿದ್ದಾರೆ.

ತಾಲ್ಲೂಕಿನ ಹಳೆಬೂದನೂರು ಗ್ರಾಪಂ ಸದಸ್ಯರಾದ ಬಿ.ಕೆ.ಕುಮಾರ್, ಸತೀಶ್, ಬಿ.ಟಿ.ಚಂದ್ರಶೇಖರ್, ಬೂದನೂರು ಶಿವು, ಚಿಕ್ಕಸಿದ್ದು, ಲೋಹಿತ್ ಕುಮಾರ್, ಸಿದ್ದರಾಮು, ಸಾಗರ್ ಹಾಗೂ ಸಂತೋಷ್ ಮಂಡ್ಯ ನ್ಯಾಯಾಲಯಕ್ಕೆ ವಿಚಾರಣೆ ಗೆಂದು ಮಂಗಳವಾರ ಹಾಜರಾಗಿದ್ದರು. ಬೆಳಿಗ್ಗೆ ತಿಂಡಿಯನ್ನೂ ತಿನ್ನಲಾಗದೇ ಹಸಿದು ಹೊಟ್ಟೆಯಲ್ಲಿಯೇ ನ್ಯಾಯಾಲಯದ ಕರೆಗಾಗಿ ಕಾದು ಕುಳಿತಿದ್ದರು.

ಈ ಸಂದರ್ಭ ಸುದ್ದಿಗಾರರ ಜತೆ ಮಾತ ನಾಡಿದ ಈ ನೈಜ ಹೋರಾಟಗಾರರು, `ಕಾವೇರಿ ಹೋರಾಟಗಾರ ಪ್ರಮುಖರ ಕರೆ ಮೇರೆಗೆ ಕಾವೇರಿ ನೀರಿಗಾಗಿ ಚಳವಳಿಯಲ್ಲಿ ಭಾಗವಹಿಸಿದ್ದೆವು. ಪರಿಣಾಮ ತಿಂಗಳುಗಟ್ಟಲೆ ನ್ಯಾಯಾಲಯಕ್ಕೆ ಅಲೆ ದಾಡುವಂತಾಗಿದೆ’ ಎಂದು ಅಳಲು ತೋಡಿಕೊಂಡರು. ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು `ಹಳೆಬೂದನೂರು ಗ್ರಾಮ ದಲ್ಲಿ ರಸ್ತೆ ತಡೆ ಮಾಡಿದ್ದಾರೆ’ ಎಂದು ಇವರ ವಿರುದ್ಧ ಜೆಎಂಎಫ್‍ಸಿ ನ್ಯಾಯಾ ಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು.

ಬಳಿಕ 9 ಮಂದಿಯೂ ಮಂಡ್ಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರಾಗಿ, ನ್ಯಾಯಾಧೀಶರೆದುರು ತಪ್ಪೊಪ್ಪಿಕೊಂಡು ತಲಾ 750 ರೂ.ಗಳಂತೆ ಒಟ್ಟು 6750 ರೂ.ಗಳ ದಂಡ ಕಟ್ಟಿ ಹೊರಬಂದರು.

ಜಿಲ್ಲೆಯ ಅಭಿವೃದ್ಧಿ, ಮಣ್ಣು, ಮಸಿ ಎನ್ನುವ ಕಾವೇರಿ ಹೋರಾಟಗಾರ ಪಿತಾಮಹರು ಮತ್ತು ಜನಪ್ರತಿನಿಧಿಗಳು 2 ವರ್ಷಗಳಿಂದ ನಮ್ಮ ಬಗ್ಗೆ ಕ್ಯಾರೆ ಎನ್ನ ಲಿಲ್ಲ. ಇನ್ನು ಕೇಸ್ ವಾಪಸ್ ಪಡೆಯುವ ಆಸೆ ಹುಟ್ಟಿಸಿದ್ದ ಸರ್ಕಾರಗಳಿಗೆ ನಮ್ಮ ಅಳಲು ಕೇಳಲೇ ಇಲ್ಲ ಎಂದು 9 ಮಂದಿಯೂ ಬೇಸರ ಹೊರಹಾಕಿದ್ದಾರೆ. ಮನದಾಳದ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಹಾಕಿರುವ ಇವರು, `ಹುಟ್ಟ್ಟು ಹೋರಾಟ ಗಾರರ ಮಾತನ್ನು ನಂಬಿ ಹೋರಾಟ ಕ್ಕಿಳಿದು ತಪ್ಪು ಮಾಡಿದೆವು. ಈ ಹೋರಾಟ ಗಾರರ ಕರೆಗೆ ಓಗೊಟ್ಟ ಆಯೋಗ್ಯರು ನಾವು’ ಎಂದು ಸರ್ಕಾರ, ಜನಪ್ರತಿನಿಧಿಗಳು, ಮುಂಚೂಣಿ ಹೋರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Translate »