ಲೋಕಸಭಾ ಚುನಾವಣೆಯಲ್ಲಿ  ಗೌಡರ ಕುಟುಂಬ ರಾಜಕಾರಣ ಅಂತ್ಯ
ಹಾಸನ

ಲೋಕಸಭಾ ಚುನಾವಣೆಯಲ್ಲಿ ಗೌಡರ ಕುಟುಂಬ ರಾಜಕಾರಣ ಅಂತ್ಯ

March 20, 2019

ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ
ಬೇಲೂರು: ಜೆಡಿಎಸ್‍ನಲ್ಲಿ ಕಾರ್ಯಕರ್ತರ ಅಭಿ ವೃದ್ಧಿಗಿಂತ ಅಪ್ಪ-ಮಕ್ಕಳು ಹಾಗೂ ಮೊಮ್ಮಕ್ಕಳ ಸಾಧನೆ ಜೋರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಮತದಾ ರರು ಗೌಡರ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿ ಜಾತ್ಯಾತೀತ ಸಿದ್ಧಾಂತವನ್ನು ನೆಪ ಮಾತ್ರಕ್ಕೆ ಹೇಳುತ್ತಾರೆ. ಆದರೆ ಜೆಡಿಎಸ್‍ನಲ್ಲಿ ಸ್ವಜನಪಕ್ಷಪಾತ ಹಾಗೂ ಸ್ವಾರ್ಥ ದಿಂದ ಕಾರ್ಯಕರ್ತರನ್ನು ಕಡೆಗಣಿಸಿ ಕುಟುಂಬ ರಾಜ ಕಾರಣ ಮಾಡುತ್ತಿದ್ದಾರೆ. ಇಂತಹ ರಾಜಕಾರಣದಿಂದಲೇ ಜೆಡಿಎಸ್ ಪಕ್ಷದ ಬಹುತೇಕ ಮುಖಂಡರು ಗೌಡರ ಕುಟುಂಬ ರಾಜಕಾರಣ ನಿರ್ಮೂಲನೆ ಮಾಡಲು ತೆರೆ ಮರೆಯಲ್ಲಿ ರಾಜಕೀಯ ನಡೆಸಿದ್ದಾರೆ. ಹಾಸನ ಮತ್ತು ಮಂಡ್ಯ ಮತದಾರರು ಇಂತಹ ಅವಕಾಶವನ್ನು ಉಪಯೋಗಿಸಿ ಕೊಂಡು ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಬೇಕು. ಜೆಡಿಎಸ್ ಭದ್ರಕೋಟೆ ಛಿದ್ರಗೊಳಿಸುವ ಮೂಲಕ ಹಾಸನದಲ್ಲಿ ಕಮಲ ಅರಳಲು ಮತದಾರರು ಮುಂದಾಗ ಬೇಕು ಎಂದು ಕರೆ ನೀಡಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ದಲ್ಲಿ ಬಿಜೆಪಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಥಾನಗಳಿಗೆ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇನ್ನು 2 ದಿನಗಳಲ್ಲಿ ರಾಜ್ಯದ 28 ಸ್ಥಾನಗಳ ಅಭ್ಯರ್ಥಿಗಳ ಹೆಸರು ಘೋಷಣೆ ಯಾಗಲಿದೆ. ಪ್ರಧಾನಿ ನರೇಂದ್ರಮೋದಿ ಅವರು ಕಳೆದ 4 ವರ್ಷ 8 ತಿಂಗಳಲ್ಲಿ ಮಾಡಿದ ಸಾಧನೆ ಅಗಮ್ಯ. ವಿಶೇಷವಾಗಿ ದೇಶಕ್ಕೆ ಅಭದ್ರತೆಯಾದ ವೇಳೆ ರಕ್ಷಣಾ ಇಲಾಖೆ ತೆಗೆದು ಕೊಂಡ ನಿರ್ಧಾರದಿಂದ ದೇಶದ ಜನರು ಮೋದಿ ಪುನಃ ದೇಶದ ಪ್ರಧಾನಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಮಹಿಳೆಯರಿಗೆ ನೀಡಿದ ಉಚಿತ ಗ್ಯಾಸ್ ಸೌಲಭ್ಯ, ರೈತರಿಗೆ ಸನ್ಮಾನ್ ಯೋಜನೆ, ಜನಧನ್ ಇನ್ನು ಮುಂತಾದ ಯೋಜನೆಗಳಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನವನ್ನು ಗಳಿಸುತ್ತದೆ. ರಾಜ್ಯದಲ್ಲಿನ ಮೈತ್ರಿ ಸರ್ಕಾರ ಜನರಿಗೆ ಸಾಲಮನ್ನಾ ಯೋಜನೆ ಬಗ್ಗೆ ಸುಳ್ಳು ಹೇಳುತ್ತಾ ಬಂದಿದೆ. ಲೋಕಸಭಾ ಚುನಾ ವಣೆ ಬಳಿಕ ರಾಜ್ಯದ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು. ಈ ವೇಳೆ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ರೇಣುಕುಮಾರ್, ಬಿಜೆಪಿ ಮುಖಂಡರಾದ ಪರ್ವತಯ್ಯ, ರಾಜು, ಕೇಬಲ್ ರಾಜಣ್ಣ, ಜುಂಜಯ್ಯ, ಮಲ್ಲಿಕಾರ್ಜನ್, ಮಧು ಮುಂತಾದವರಿದ್ದರು.

Translate »