ಹಾಸನ,ಜು14- ಮಹಿಳಾ ಬ್ಯಾಂಕ್ ಆರಂಭಿಸಿ…, ರಾಜ್ಯ ಲೇಖಕಿಯರ ಸಂಘದ ಶಾಖೆಯನ್ನು ಹಾಸನದಲ್ಲೂ ತೆರೆಯಬೇಕು…, ಜಿಲ್ಲೆಯಲ್ಲಿ ಅರಣ್ಯ ಸಂಪತ್ತನ್ನು ರಕ್ಷಿಸಬೇಕು…, ಮಹಿಳೆಯರು ಕೀಳರಿಮೆ ತೊರೆದು ಎಲ್ಲವನ್ನೂ ಸಾಧಿಸಬೇಕು.., ಹೀಗೆ ಹಲವು ಸಲಹೆಗಳು ನಗರದಲ್ಲಿ ಭಾನುವಾರ ನಡೆದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿಬಂದವು. ಅಭಿನಂದನಾ ಬಳಗ ಮತ್ತು ಜಿಲ್ಲಾ ಲೇಖಕಿಯರ ಬಳಗ ಒಟ್ಟಾಗಿ ಆಯೋಜಿ ಸಿದ್ದ ಸಮ್ಮೇಳನವನ್ನು ಹಿರಿಯ ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತ ದಲ್ಲಿ ಮಹಿಳೆಯರನ್ನು ದೇವತೆಗೆ ಹೋಲಿಸ ಲಾಗುತ್ತದೆ. ಆದರೆ,…
ಕಚೇರಿಗೆ ತಡವಾಗಿ ಬರುವ ಸಿಬ್ಬಂದಿ ವಿರುದ್ಧ ಡಿಸಿ ಗರಂ
July 15, 2019ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳಕ್ಕೆ ಕತ್ತರಿ: ಅಕ್ರಂ ಪಾಷ ಎಚ್ಚರಿಕೆ ಹಾಸನ, ಜು.14- ಜಿಲ್ಲೆಯ ಪ್ರಧಾನ ಆಡಳಿತ ಕೇಂದ್ರವಾದ ಜಿಲ್ಲಾಧಿಕಾರಿ ಕಚೇರಿ ಯಲ್ಲೇ ಅಧಿಕಾರಿ ಬಹಳ ತಡವಾಗಿ ಕಚೇರಿಗೆ ಬರುವುದು ಈ ವಾರ ಜಗ ಜ್ಜಾಹೀರಾಯಿತು. ಇದು ಖುದ್ದು ಜಿಲ್ಲಾ ಧಿಕಾರಿಗಳೇ ದಿಗ್ಬ್ರಮೆಗೊಳಗಾಗುವಂತೆ ಮಾಡಿತು. ಕೆಲವು ವಿಭಾಗಗಳ ಮುಖ್ಯ ಸ್ಥರೇ ಸಮಯಕ್ಕೆ ಹಾಜರಾಗುವುದನ್ನು ಕಂಡು ಜಿಲ್ಲಾಧಿಕಾರಿ ಅಕ್ರಂ ಪಾಷ ಸಿಟ್ಟಾದರು. ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ…
ಚಿಕ್ಕ ತಿರುಪತಿಯಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವ
July 14, 2019ಗೋವಿಂದನ ನಾಮಸ್ಮರಣೆ ಮಾಡುತ್ತಾ ರಥ ಎಳೆದ ಸಾವಿರಾರು ಭಕ್ತರು ಅರಸೀಕೆರೆ, ಜು.13- ರಾಜ್ಯದ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧವಾದ ತಾಲೂ ಕಿನ ಅಮರಗಿರಿ ಮಾಲೇಕಲ್ಲು ತಿರುಪತಿ ಯಲ್ಲಿ ಶನಿವಾರ ಅದ್ಧೂರಿಯಾಗಿ ನಡೆದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಗೋವಿಂದನ ನಾಮಸ್ಮರಣೆ ಮಾಡುತ್ತಾ ರಥವನ್ನು ಎಳೆದರು. ಆಷಾಢ ಮಾಸದ ದ್ವಾದಶಿಯಲ್ಲಿ ನಡೆಯುವ ಮಹಾರಥೋತ್ಸವ ಹಿನ್ನೆಲೆ ಯಲ್ಲಿ ಅರ್ಚಕರಾದ ರಾಮಪ್ರಸಾದ್, ವರದರಾಜು ಮತ್ತು ಸಂಗಡಿಗರು ಪ್ರಾತಃ ಕಾಲದಲ್ಲಿ ಯಾತ್ರಾ ದಾನೋತ್ಸವ, ಶ್ರೀಕೃಷ್ಣ ಗಂಧೋತ್ಸವ, ಹೂವಿನ…
ರಾಮನಾಥಪುರದಲ್ಲಿ ಐವರಿಗೆ ಡೆಂಗ್ಯು
July 14, 2019ಸೊಳ್ಳೆ ನಿವಾರಣೆಗೆ ಗ್ರಾಪಂನಿಂದ ಫಾಗಿಂಗ್, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರಾಮನಾಥಪುರ, ಜು.13- ರಾಮನಾಥಪುರದಲ್ಲಿ 5 ಡೆಂಗ್ಯು ಪ್ರಕರಣಗಳು ಪತ್ತೆಯಾಗಿವೆ ಎಂದು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂಜ್ಯ ತಿಳಿಸಿದ್ದಾರೆ. ವಾಡಿಕೆಯಷ್ಟು ಮಳೆ ಆಗದಿರುವುದು ಮತ್ತು ತ್ಯಾಜ್ಯದಲ್ಲಿ ಹೆಚ್ಚಳ, ಜನವಸತಿ ಪ್ರದೇಶಗಳಲ್ಲಿ ಕೊಳಚೆನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ವಾಗಿರುವುದರಿಂದಲೇ ಡೆಂಗ್ಯು ಜ್ವರದ ಪ್ರಕರಣಗಳು ಹೆಚ್ಚುತ್ತಿರಲು ಮುಖ್ಯ ಕಾರಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು, ಜನತಾ ಕಾಲೋನಿ,…
ಹೆಣ್ಣು ಮಗುವಾಗಲಿದೆ ಎಂದು ಭ್ರೂಣ ಹತ್ಯೆಗೆ ಮುಂದಾಗಿದ್ದ ಗರ್ಭಿಣಿ
July 14, 2019ಪಿಸಿ-ಪಿಎನ್‍ಡಿಟಿ ಕಾಯ್ದೆ ಉಲ್ಲಂಘಿಸಿದ ತಿಪಟೂರಿನ ಸ್ಕ್ಯಾನಿಂಗ್ ಸೆಂಟರ್‍ಗೆ ಬೀಗ ಹಾಸನ,ಜು.13- ಕೇಂದ್ರ ಸರ್ಕಾರ `ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಜಾಗೃತಿ ಆಂದೋಲನವನ್ನೇ ನಡೆಸಿದ್ದರೂ, ರಾಜ್ಯ ಸರ್ಕಾರ ಭಾಗ್ಯಲಕ್ಷ್ಮಿ ಬಾಂಡ್ ನೀಡುವುದರ ಜತೆಗೇ ಪದವಿ ವರೆಗೂ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದರೂ ಕೆಲವು ಪೋಷಕರಿಗೆ ಈಗಲೂ ಹೆಣ್ಣು ಮಗು ಬೇಡವೇ ಬೇಡ ಎಂಬಂತಾಗಿದೆ. ಹಾಸನ ಜಿಲ್ಲೆಯ ಒಬ್ಬಾಕೆ ಈಗ 5 ತಿಂಗಳ ಗರ್ಭಿಣಿ. ಅವರಿಗೆ ಹೆಣ್ಣು ಮಗು ಆಗುವುದು ಬೇಕಿಲ್ಲ. ಹಾಗಾಗಿಯೇ ಭ್ರೂಣ ಲಿಂಗ ಪತ್ತೆಗಾಗಿ ಪ್ರಯತ್ನಿಸಿದ್ದಾರೆ….
ಖಾಸಗೀಕರಣದ ಆವೇಗ: ಜೆ.ಸುರೇಶ್ ಕಳವಳ
July 14, 2019ಹಾಸನ, ಜು.13- ಪ್ರಸ್ತುತ ಮೋದಿ ಸರ್ಕಾರ ಸಹ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಕಂಪನಿಗಳಿಗೆ ಮಾರಲು ಹೊರಟಿದೆ. ಬಿಎಸ್‍ಎನ್‍ಎಲ್ ಮುಚ್ಚುವ ಹಂತಕ್ಕೆ ಬಂದಿದೆ. 45 ಸಾವಿರ ನೌಕರರು ನೌಕರಿ ನಷ್ಟ ಭೀತಿಯಲ್ಲಿದ್ದಾರೆ. ರೈಲ್ವೆ ಯನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಸಾರ್ವ ಜನಿಕ ಉದ್ದಿಮೆಗಳಿಗೆ ಬೀಗ ಹಾಕಲಾಗುತ್ತಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಸುರೇಶ್ ಕಳವಳ ವ್ಯಕ್ತಪಡಿಸಿದರು. ನಗರದಲ್ಲಿ ಆ.7ರಿಂದ 4 ದಿನ ನಡೆಯಲಿರುವ ಸಿಐಟಿಯು ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆಗೆ…
ಬ್ಯಾಸ್ಕೆಟ್‍ಬಾಲ್ ವಲ್ರ್ಡ್ ಚಾಂಪಿಯನ್‍ಶಿಪ್‍ಗೆ ಹಾಸನದ ಬಾಲಕ ಮನೋಜ್ ಆಯ್ಕೆ
July 14, 2019ಪ್ರಥಮ ಪಿಯು ವಿದ್ಯಾರ್ಥಿಯ ಎತ್ತರ 6.6 ಅಡಿ ಹಾಸನ, ಜು.13- ಶಿಕ್ಷಣದ ಜತೆಗೇ ಕ್ರೀಡೆ ಯತ್ತಲೂ ಅಪಾರ ಆಸಕ್ತಿ ಹೊಂದಿದ್ದ ಹಾಸನದ ಬಾಲಕ ಮನೋಜ್ ಬ್ಯಾಸ್ಕೆಟ್‍ಬಾಲ್‍ನ ಪೈಭಾ ಅಂಡರ್ 16 ಮೆನ್ಸ್ ವಲ್ರ್ಡ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾನೆ. ಜೀವನ ನಿರ್ವಹಣೆಗಾಗಿ ನಗರದ ಆರ್.ಸಿ. ರಸ್ತೆಯಲ್ಲಿ ಮೊಬೈಲ್ ಕ್ಯಾಂಟಿನ್ ನಡೆಸುತ್ತಿರುವ ಮಂಜುನಾಥ್-ರೂಪಾ ದಂಪತಿ ಪುತ್ರನಾದ ಮನೋಜ್ ಈಗಿನ್ನೂ 16 ವರ್ಷದ ವಿದ್ಯಾರ್ಥಿ. ಆದರೆ, ಎತ್ತರ ದಲ್ಲಿ ಮಾತ್ರ 6.6 ಅಡಿ ದಾಟಿದ್ದಾನೆ. ಆತನ ಈ ಎತ್ತರದ ದೇಹವೇ ಬ್ಯಾಸ್ಕೆಟ್‍ಬಾಲ್ ನಲ್ಲಿ…
2018-19ರ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ: ಇನ್ನಷ್ಟು ಗುಣಾತ್ಮಕ ಸುಧಾರಣೆಗೆ ಜಿಲ್ಲಾಡಳಿತ ಕ್ರಮ
July 13, 2019ಎಸ್ಸೆಸ್ಸೆಲ್ಸಿ: ಈ ವರ್ಷವೂ ಹಾಸನ ನಂ.1 ಗುರಿ ಹಾಸನ,ಜು.12-ಕಳೆದ ಸಾಲಿನಲ್ಲಿ ಎಸ್‍ಎಸ್ ಎಲ್‍ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಇಡೀ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆ ಯಿತು. ಶಿಕ್ಷಣ ಕ್ಷೇತ್ರದಲ್ಲಿ ಅಚ್ಚರಿದಾಯಕ ವಾಗಿ ನಂ.1 ಸ್ಥಾನ ಪಡೆದ ಕೃಷಿ ಪ್ರಧಾನ ಜಿಲ್ಲೆ, ಆ ಸ್ಥಾನವನ್ನು ಪ್ರಸಕ್ತ ಶೈಕ್ಷಣಿಕ ವರ್ಷವೂ ಮುಂದುವರಿಸಿಕೊಂಡು ಹೋಗಲು ಸಜ್ಜಾಗುತ್ತಿದೆ. ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ದೊರೆತ ಮೊದಲ ಸ್ಥಾನವನ್ನು ಉಳಿಸಿಕೊಂಡು ಇನ್ನಷ್ಟು ಬೆಳವಣಿಗೆ ಕಾಣಬೇಕೆಂದು ನಿರ್ಧರಿಸಿ ರುವ ಹಾಸನ ಜಿಲ್ಲಾಡಳಿತ, ಗುಣಾತ್ಮಕ ವಾಗಿ ಸುಧಾರಣೆ ಮಾಡಿಕೊಳ್ಳಲು ನಿರ್ಧ…
ರಾಜ್ಯದಲ್ಲಿ ಮಠ ಸ್ಥಾಪನೆಯಲ್ಲಿ ಕೋಡಿ ಮಠದ ಕೊಡುಗೆ ಅಪಾರ
July 13, 2019ಅರಸೀಕೆರೆ,ಜು.12-ರಾಜ್ಯದಲ್ಲಿ ಇರುವ ಅನೇಕ ವೀರಶೈವ ಮಠಗಳ ಸ್ಥಾಪನೆ ಮತ್ತು ಅದರ ಪೀಠಾದ್ಯಕ್ಷರ ನೇಮಕಕ್ಕೆ ಹಾರನಹಳ್ಳಿ ಕೋಡಿ ಮಠವು ತನ್ನದೇ ಕೊಡುಗೆಯನ್ನು ನೀಡುತ್ತಾ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಎಲ್ಲ ಬೆಳವಣಿಗೆಗಳಿಗೆ ಕಂಚುಗಲ್ ಬಿದರೆ ದೊಡ್ಡಮಠದ ಮೂಲ ಪುರುಷರು ಲಿಂಗೈಕ್ಯ ಯೋಗಿರಾಜ ಪಟ್ಟಾಧ್ಯಕ್ಷರು ಕಾರಣರಾ ಗಿದ್ದಾರೆ ಎಂದು ಚಿಕ್ಕಲ್ಮಠ ಮಲ್ಲಿಕಾರ್ಜುನ ಮುರುಘಾಮಠ ಸ್ವಾಮೀಜಿ ಹೇಳಿದರು. ತಾಲೂಕಿನ ಹಾರನಹಳ್ಳಿ ಕೋಡಿಮಠ ಸುಕ್ಷೇತ್ರದಲ್ಲಿ ಶುಕ್ರವಾರದಂದು ಏರ್ಪಡಿ ಸಿದ್ದ ಕಂಚುಗಲ್ ಬಿದರೆ ದೊಡ್ಡಮಠದ ಮೂಲ ಪುರುಷರು ಲಿಂಗೈಕ್ಯ ಯೋಗಿ ರಾಜ ಪಟ್ಟಾಧ್ಯಕ್ಷರ ಸ್ಮರಣೆ…
ಜನಸಂಖ್ಯಾ ಸ್ಫೋಟದಿಂದ ಸೌಲಭ್ಯ ಕೊರತೆ
July 13, 2019ಬೇಲೂರು,ಜು.12-ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ಮೂಲ ಸೌಲಭ್ಯ ಸೇರಿದಂತೆ, ನಿರುದ್ಯೋಗದಂತಹ ಹಲವು ಸಮಸ್ಯೆಗಳು ಹೆಚ್ಚಾಗಲಿದೆ ಎಂದು ತಾಲೂಕು ಪಂಚಾ ಯಿತಿ ಅಧ್ಯಕ್ಷ ರಂಗೇಗೌಡ ಹೇಳಿದರು. ವಿಶ್ವ ಜನಸಂಖ್ಯಾ ದಿನಾಚರಣೆ ಅಂಗ ವಾಗಿ ಪಟ್ಟಣದ ವಿಶ್ವ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆರೋಗ್ಯಾಧಿ ಕಾರಿ ಕಚೇರಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳ ದಿಂದಾಗಿ ಅಭಿವೃದ್ಧಿಯಲ್ಲಿ ದೇಶ ಹಿಂದು ಳಿಯಲು ಕಾರಣವಾಗುತ್ತಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ಸಾಕಷ್ಟು ಸಂಕಷ್ಟ ಗಳು ಹೆಚ್ಚಾಗುತ್ತಿವೆ. ಜನರಿಗೆ ಸೌಲಭ್ಯ ಒದಗಿಸಲು…