ಹೆಣ್ಣು ಮಗುವಾಗಲಿದೆ ಎಂದು ಭ್ರೂಣ ಹತ್ಯೆಗೆ ಮುಂದಾಗಿದ್ದ ಗರ್ಭಿಣಿ
ಹಾಸನ

ಹೆಣ್ಣು ಮಗುವಾಗಲಿದೆ ಎಂದು ಭ್ರೂಣ ಹತ್ಯೆಗೆ ಮುಂದಾಗಿದ್ದ ಗರ್ಭಿಣಿ

July 14, 2019

ಪಿಸಿ-ಪಿಎನ್‍ಡಿಟಿ ಕಾಯ್ದೆ ಉಲ್ಲಂಘಿಸಿದ ತಿಪಟೂರಿನ ಸ್ಕ್ಯಾನಿಂಗ್ ಸೆಂಟರ್‍ಗೆ ಬೀಗ

ಹಾಸನ,ಜು.13- ಕೇಂದ್ರ ಸರ್ಕಾರ `ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಜಾಗೃತಿ ಆಂದೋಲನವನ್ನೇ ನಡೆಸಿದ್ದರೂ, ರಾಜ್ಯ ಸರ್ಕಾರ ಭಾಗ್ಯಲಕ್ಷ್ಮಿ ಬಾಂಡ್ ನೀಡುವುದರ ಜತೆಗೇ ಪದವಿ ವರೆಗೂ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದರೂ ಕೆಲವು ಪೋಷಕರಿಗೆ ಈಗಲೂ ಹೆಣ್ಣು ಮಗು ಬೇಡವೇ ಬೇಡ ಎಂಬಂತಾಗಿದೆ.

ಹಾಸನ ಜಿಲ್ಲೆಯ ಒಬ್ಬಾಕೆ ಈಗ 5 ತಿಂಗಳ ಗರ್ಭಿಣಿ. ಅವರಿಗೆ ಹೆಣ್ಣು ಮಗು ಆಗುವುದು ಬೇಕಿಲ್ಲ. ಹಾಗಾಗಿಯೇ ಭ್ರೂಣ ಲಿಂಗ ಪತ್ತೆಗಾಗಿ ಪ್ರಯತ್ನಿಸಿದ್ದಾರೆ. ಹಾಸನದಲ್ಲೆಲ್ಲೂ ಅವಕಾಶವಾಗಲಿಲ್ಲ ಎಂದೋ, ಜಿಲ್ಲೆಯಲ್ಲಿ ಮಾಡಿಸಿದರೆ ಬಂಧು ಗಳಿಗೆ ತಿಳಿದುಬಿಡುತ್ತದೇ ಎಂದೋ ಪಕ್ಕದ ತುಮಕೂರು ಜಿಲ್ಲೆಗೆ ಹೋಗಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ಭ್ರೂಣದ ಲಿಂಗ ಪತ್ತೆ ಮಾಡಿಸಿದ್ದಾರೆ. ಆ ಸ್ಕ್ಯಾನಿಂಗ್ ಸೆಂಟರ್‍ನ ವೈದ್ಯರು ಎಲ್ಲಾ ನಿಯಮಗಳನ್ನೂ ಮೀರಿ ಭ್ರೂಣದ ಲಿಂಗ ಯಾವುದೆಂದು ಪೋಷಕರಿಗೆ ತಿಳಿಸಿ ದ್ದಾರೆ. ಗರ್ಭದಲ್ಲಿ ಹೆಣ್ಣು ಭ್ರೂಣ ಇರು ವುದು ತಿಳಿದ ಗರ್ಭಿಣಿಗೆ ಆಘಾತವಾಗಿದೆ.

ಊರಿಗೆ ಮರಳಿದವರೇ ಮನೆಯವ ರೊಂದಿಗೆ ಚರ್ಚಿಸಿ ಹೆಣ್ಣು ಭ್ರೂಣವನ್ನು ತೆಗೆಸಿ ಬಿಡುವ ಯತ್ನ ನಡೆಸಿದ್ದಾರೆ.ಜಿಲ್ಲೆಯಲ್ಲೇ ಹೆಣ್ಣು ಭ್ರೂಣ ಹತ್ಯೆಗೆ ಪ್ರಯತ್ನ ನಡೆದಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಎಚ್ಚೆತ್ತ ಹಾಸನ ಜಿಲ್ಲೆ ಮತ್ತು ಚನ್ನರಾಯಪಟ್ಟಣ ತಾಲೂಕಿನ ಕುಟುಂಬ ಕಲ್ಯಾಣ ಇಲಾಖೆ ಮತ್ತು ಅಧಿ ಕಾರಿಗಳು ಅದಕ್ಕೆ ತಡೆ ಒಡ್ಡಿದ್ದಾರೆ.

ನಂತರ ಹಾಸನ ಮತ್ತು ಚನ್ನರಾಯ ಪಟ್ಟಣದ ಅಧಿಕಾರಿಗಳು ತುಮಕೂರು ಜಿಲ್ಲೆ ಮತ್ತು ತಿಪಟೂರು ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೂಡಿ ತಿಪಟೂರಿನ ಬಿ.ಹೆಚ್.ರಸ್ತೆಯ ಲ್ಲಿನ ಶ್ರೀ ವಿಜಯ ನರ್ಸಿಂಗ್ ಹೋಂಗೆ ಜು.10ರಂದು ತೆರಳಿ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ.

ಚನ್ನರಾಯಪಟ್ಟಣದ ಗರ್ಭಿಣಿಯು ಮನೆಯವರೊಂದಿಗೆ ಶ್ರೀ ವಿಜಯ ನರ್ಸಿಂಗ್ ಹೋಂಗೆ ಭೇಟಿ ನೀಡಿರು ವುದು, ಅಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ತಾರಾದೇವಿ ಜಗದೀಶ್ ಅವರು ಸ್ಕ್ಯಾನಿಂಗ್ ಮಾಡಿರುವುದು ಎರಡೂ ಜಿಲ್ಲೆಗಳ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ವೇಳೆ ದೃಢಪಟ್ಟಿದೆ.

ವೈದ್ಯರು ಮತ್ತು ಸ್ಕ್ಯಾನಿಂಗ್ ಸೆಂಟರ್ ಪಿಸಿ&ಪಿಎನ್‍ಡಿಟಿ (ಭ್ರೂಣ ಲಿಂಗಪತ್ತೆ ನಿಷೇಧ) ಕಾಯ್ದೆಯ ಸೆಕ್ಷನ್ (29)ರ ಉಲ್ಲಂಘನೆ ಮಾಡಿರುವುದು ಖಚಿತ ವಾಗಿದೆ. ಒಖಿP ಕಾಯ್ದೆ ಮತ್ತು ಕೆಪಿ ಎಂಇ ಕಾಯ್ದೆ ಉಲ್ಲಂಘನೆ ಆಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಸಕ್ಷಮ ಪ್ರಾಧಿಕಾರದ ಅಧಿಕಾರಿ ಗಳಿಂದ ಸ್ಥಳ ಪಂಚನಾಮೆ ಬರೆಸಿ ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾ ಗಿದೆ. ಈ ಬಗ್ಗೆ ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Translate »