ಚಿಕ್ಕ ತಿರುಪತಿಯಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವ
ಹಾಸನ

ಚಿಕ್ಕ ತಿರುಪತಿಯಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವ

July 14, 2019

ಗೋವಿಂದನ ನಾಮಸ್ಮರಣೆ ಮಾಡುತ್ತಾ ರಥ ಎಳೆದ ಸಾವಿರಾರು ಭಕ್ತರು
ಅರಸೀಕೆರೆ, ಜು.13- ರಾಜ್ಯದ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧವಾದ ತಾಲೂ ಕಿನ ಅಮರಗಿರಿ ಮಾಲೇಕಲ್ಲು ತಿರುಪತಿ ಯಲ್ಲಿ ಶನಿವಾರ ಅದ್ಧೂರಿಯಾಗಿ ನಡೆದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಗೋವಿಂದನ ನಾಮಸ್ಮರಣೆ ಮಾಡುತ್ತಾ ರಥವನ್ನು ಎಳೆದರು.

ಆಷಾಢ ಮಾಸದ ದ್ವಾದಶಿಯಲ್ಲಿ ನಡೆಯುವ ಮಹಾರಥೋತ್ಸವ ಹಿನ್ನೆಲೆ ಯಲ್ಲಿ ಅರ್ಚಕರಾದ ರಾಮಪ್ರಸಾದ್, ವರದರಾಜು ಮತ್ತು ಸಂಗಡಿಗರು ಪ್ರಾತಃ ಕಾಲದಲ್ಲಿ ಯಾತ್ರಾ ದಾನೋತ್ಸವ, ಶ್ರೀಕೃಷ್ಣ ಗಂಧೋತ್ಸವ, ಹೂವಿನ ಸೇವೆ, ನಿತ್ಯೋತ್ಸವ, ಪ್ರಕಾರೋತ್ಸವ, ಸೂರ್ಯ ಮಂಡಲೋತ್ಸವ, ರಥ ಮಂಟಪಸೇವೆ ಮತ್ತು ವಸಂತಸೇವೆ ನಡೆಸಿದರು. ಬೆಟ್ಟದ ತಪ್ಪಲಿನಲ್ಲಿರುವ ಗೋವಿಂದರಾಜಸ್ವಾಮಿ, ಪದ್ಮಾವತಿ ಅಮ್ಮ ನವರು, ಆಂಜನೇಯ, ಕೆಂಚರಾಯ ಸ್ವಾಮಿ ದೇವರುಗಳಿಗೆ ವಿಶೇಷ ಹೂವಿನ ಅಲಂಕಾರ ಗಳನ್ನು ಮಾಡಲಾಗಿತ್ತು. ರಾತ್ರಿ ಪುಷ್ಪ ಗಂಧೋತ್ಸವ, ಉಯ್ಯಾಲೋತ್ಸವ ಮತ್ತಿ ತರ ಪೂಜಾ ವಿಧಿಗಳನ್ನು ನಡೆಸಲಾಯಿತು.

ವಿವಿಧ ಹೂವಿಗಳಿಂದ ಅಲಂಕೃತ ವಾದ ರಥದಲ್ಲಿ ದೇವರ ಮೂರ್ತಿಯನ್ನಿರಿಸಿ ಉತ್ಸವ ನಡೆಸಲಾಯಿತು. ಶಾಸಕ ಕೆ.ಎಂ.ಶಿವಲಿಂಗೇಗೌಡ ಈಡುಗಾಯಿ ಒಡೆದು ರಥ ಎಳೆಯಲು ಚಾಲನೆ ನೀಡಿದರು.

ಶ್ರೀ ಕ್ಷೇತ್ರದಲ್ಲಿ ಬ್ರಾಹ್ಮಣ, ಆರ್ಯವೈಶ್ಯ, ದೇವಾಂಗ ಸೇರಿದಂತೆ ವಿವಿಧ ಸಮಾಜ ದವರು ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಬೆಟ್ಟದ ತಪ್ಪಲಿನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದಿಂದ ಕುಡಿಯುವ ನೀರು ವ್ಯವಸ್ಥೆ ಮಾಡ ಲಾಗಿತ್ತು. ಪೊಲೀಸರು ಬಂದೋಬಸ್ತ್ ನಡೆಸಿದರು. ಕೆಎಸ್‍ಆರ್‍ಟಿಸಿ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಿತ್ತು. ಭಕ್ತರಿಗೆ ಸರತಿ ಸಾಲಿನಲ್ಲಿ ಸಾಗುವಂತೆ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ನೋಡಿಕೊಂಡರು. ವಯೋವೃದ್ಧರಿಗೆ ನೆರವಾದರು.

ಉತ್ಸವ ಸಮಿತಿ ಅಧ್ಯಕ್ಷ ಆರುಣ್‍ಕುಮಾರ್, ಸದಸ್ಯ ನಾಗರಾಜು, ಪ್ರಭಾರಿ ಎಸ್‍ಪಿ ಸ್ನೇಹಾ, ಡಿವೈಎಸ್‍ಪಿ ಸದಾನಂದ ತಿಪ್ಪಣ್ಣ ನವರ್, ತಹಸೀಲ್ದಾರ್ ಸಂತೋಷ್ ಕುಮಾರ್, ತಹಸೀಲ್ದಾರ್ ಗ್ರೇಡ್-2 ಪಾಲಾಕ್ಷ, ಪೊಲೀಸ್ ಇನ್ಸ್‍ಪೆಕ್ಟರ್ ಸಿದ್ದರಾಮೇಶ್, ಪೌರಾಯುಕ್ತ ಪರಮೇಶ್ವರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಶಮೀವುಲ್ಲಾ, ಸ್ಥಳೀಯ ಯೋಜನಾ ಪ್ರಾಧಿಕಾರ ಸದಸ್ಯ ಮನು ಕುಮಾರ್, ಅಗ್ಗುಂದ ಗ್ರಾ.ಪಂ ಸದಸ್ಯ ಗಿರೀಶ್, ಬಿಜೆಪಿ ಮುಖಂಡರಾದ ಮರಿಸ್ವಾಮಿ, ಶಿವನ್‍ರಾಜ್, ರಮೆಶ್ ನಾಯ್ಡು, ರಾಘ ವೇಂದ್ರ, ಕರವೇ ಅಧ್ಯಕ್ಷ ನಾರಾಯಣ ಗೌಡ, ತಾ. ಅಧ್ಯಕ್ಷ ಹೇಮಂತ್ ಕುಮಾರ್, ನಗರಾಧ್ಯಕ್ಷ ಕಿರಣ್‍ಕುಮಾರ್, ಉತ್ಸವ ಸಮಿತಿ ಸದಸ್ಯರಾದ ವಿಶ್ವನಾಥ್, ಗೋವಿಂದ ರಾಜ್, ವೆಂಕಟೇಶ್ ಬಾಬು, ಚಂದ್ರು, ವಿಶ್ವನಾಥ್, ರೈಲ್ವೇ ರಂಗಸ್ವಾಮಿ, ಯೋಗೀಶ್, ಕೃಷ್ಣೇಗೌಡ, ಶಂಕರ್, ಪಾರುಪತ್ತೇದಾರ ಲೋಕೇಶಯ್ಯ, ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.

Translate »