ಡೆಂಗ್ಯೂ, ಚಿಕೂನ್ ಗುನ್ಯಾ ನಿಯಂತ್ರಣದ ಬಗ್ಗೆ ಜನ ಜಾಗೃತಿ
ಮೈಸೂರು

ಡೆಂಗ್ಯೂ, ಚಿಕೂನ್ ಗುನ್ಯಾ ನಿಯಂತ್ರಣದ ಬಗ್ಗೆ ಜನ ಜಾಗೃತಿ

July 14, 2019

ಮೈಸೂರು,ಜು.13-ಜಲಪುರಿ ಪೆÇಲೀಸ್ ಕ್ವಾರ್ಟರ್ಸ್‍ನ ಸುತ್ತಮುತ್ತ ಪರಿಸರ ಸ್ನೇಹಿ ತಂಡದ ವತಿಯಿಂದ ಶನಿವಾರ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ನಿಯಂತ್ರಣದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಮನೆ ಮನೆಗೆ ತೆರಳಿ ಕರಪತ್ರ ನೀಡಿ ಅರಿವು ಮೂಡಿಸ ಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಲಪುರಿ ಸರ್ಕಾರಿ ಆಸ್ಪತ್ರೆ ವೈದ್ಯೆ ಪುಷ್ಪಲತಾ ಮಾತನಾಡಿ, ಸೊಳ್ಳೆಗಳ ನಿಯಂತ್ರಣ ಮಾಡು ವಲ್ಲಿ ಸಾರ್ವಜನಿಕರ ಪಾತ್ರ ಅತೀ ಮುಖ್ಯ ವಾಗಿದೆ. ಸಾರ್ವಜನಿಕರು ಸೊಳ್ಳೆಗಳ ನಿಯಂ ತ್ರಣದಲ್ಲಿ ಮುತುವರ್ಜಿ ವಹಿಸದಿದ್ದರೆ ಸೊಳ್ಳೆ ಗಳ ನಿಯಂತ್ರಣ ಅಸಾಧ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸ ಬೇಕು. ಡೆಂಗ್ಯೂ ಜ್ವರದ ಬಗ್ಗೆ ಸಾರ್ವಜನಿಕ ರಲ್ಲಿ ಅರಿವು ಮೂಡಿಸಲು ಪರಿಸರ ತಂಡ ಹಿಂದುಳಿದ ಪ್ರದೇಶಗಳಲ್ಲಿ ಕಾರ್ಯಕ್ರಮ ಹಾಕಿಕೊಂಡಿರುವುದು ಸಂತೋಷದ ವಿಚಾರ. ಹಾಗೆಯೇ ಇತರ ಸಂಘಟನೆಗಳು ನಗರ ಮತ್ತು ಹಳ್ಳಿಗಳಲ್ಲಿ ಡೆಂಗ್ಯೂ ಜ್ವರ ಹಾಗೂ ಚಿಕೂನ್ ಗುನ್ಯಾ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಅರಿವು ಮೂಡಿಸಬೇಕು ಎಂದರು.

ಪರಿಸರ ತಂಡದ ಅಧ್ಯಕ್ಷ ಡಿ.ಲೋಹಿತ್ ಮಾತನಾಡಿ, ಮಳೆಗಾಲ ಶುರುವಾಗಿರುವುದ ರಿಂದ ನೀರಿನ ಸೌಲಭ್ಯ ಕಡಿಮೆಯಾಗಿ ಜನ ರಲ್ಲಿ ನೀರು ಶೇಖರಣೆ ಮಾಡಿಟ್ಟುಕೊಳ್ಳುವ ಹವ್ಯಾಸ ಹೆಚ್ಚಾಗುತ್ತದೆ. ಇದರಿಂದ ಸೊಳ್ಳೆ ಗಳ ಉತ್ಪತ್ತಿ ಹೆಚ್ಚಾಗಿ ಕಂಡುಬರುತ್ತದೆ. ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳು ವ್ಯಾಪಕವಾಗಿ ಹರಡುವ ಸಂಭವವಿರು ವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜ ನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಅಂದರೆ ತೆಂಗಿನ ಚಿಪ್ಪು, ಹಳೇಟೈರು, ಒಡೆದ ಬಾಟಲು, ಎಳನೀರು ಬುರುಡೆ, ಅನುಪ ಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಸೂಕ್ತ ರೀತಿ ಯಲ್ಲಿ ವಿಲೇವಾರಿಗೆ ನಿಗಾ ವಹಿಸಬೇಕು. ಮನೆಯೊಳಗೆ ಸೊಳ್ಳೆಗಳು ಬರದಂತೆ ಕಿಟಕಿ ಗಳಿಗೆ ಜಾಲರಿ ಅಳವಡಿಸಬೇಕು. ರಾತ್ರಿ ವೇಳೆ ಅಲ್ಲದೇ ಹಗಲು ವೇಳೆಯೂ ವಿಶ್ರಾಂತಿ ತೆಗೆದುಕೊಳ್ಳುವವರು ಸೊಳ್ಳೆಗಳು ಕಚ್ಚ ದಂತೆ ಸೊಳ್ಳೆ ಪರದೆ ಉಪಯೋಗಿಸಬೇಕು.

ವಾರದಲ್ಲಿ ಎರಡು ಬಾರಿ ನೀರು ಸಂಗ್ರಹ ತೊಟ್ಟಿಗಳಲ್ಲಿನ ನೀರು ಖಾಲಿ ಮಾಡಬೇಕು. ಉಜ್ಜಿ ತೊಳೆದು ಒಣಗಿಸಿ. ಪುನಃ ನೀರು ಸಂಗ್ರಹಿಸಿ ಸೊಳ್ಳೆಗಳು ಅದರಲ್ಲಿ ಪ್ರವೇಶ ಮಾಡದಂತೆ ಮುಚ್ಚಿಟ್ಟುಕೊಳ್ಳುವುದು; ಹೂವಿನ ಕುಂಡಗಳ ಕೆಳಗಿನ ಪ್ಲೇಟ್‍ಗಳಲಿ,್ಲ ಫ್ರಿಡ್ಜ್, ಏರ್‍ಕೂಲರ್‍ಗಳಲ್ಲಿ ನೀರು ನಿಲ್ಲದಂತೆ ಆಗಾಗ್ಗೆ ಖಾಲಿ ಮಾಡಲು ಕ್ರಮವಹಿಸ ಬೇಕು. ಮನೆಯ ನಲ್ಲಿ ಗುಂಡಿಗಳಲ್ಲಿ ಲಾರ್ವಾ (ಸೊಳ್ಳೆಯ ಮರಿಗಳು) ಉತ್ಪತ್ತಿ ಯಾಗದಂತೆ ಕ್ರಮ ವಹಿಸಬೇಕು. ಅದ ಕ್ಕಾಗಿ ಆರೋಗ್ಯ ಇಲಾಖೆ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಅರಿವು ಮೂಡಿಸಬೇಕು ಎಂದರು.

Translate »