ಜನಸಂಖ್ಯಾ ಸ್ಫೋಟದಿಂದ ಸೌಲಭ್ಯ ಕೊರತೆ
ಹಾಸನ

ಜನಸಂಖ್ಯಾ ಸ್ಫೋಟದಿಂದ ಸೌಲಭ್ಯ ಕೊರತೆ

July 13, 2019

ಬೇಲೂರು,ಜು.12-ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ಮೂಲ ಸೌಲಭ್ಯ ಸೇರಿದಂತೆ, ನಿರುದ್ಯೋಗದಂತಹ ಹಲವು ಸಮಸ್ಯೆಗಳು ಹೆಚ್ಚಾಗಲಿದೆ ಎಂದು ತಾಲೂಕು ಪಂಚಾ ಯಿತಿ ಅಧ್ಯಕ್ಷ ರಂಗೇಗೌಡ ಹೇಳಿದರು.

ವಿಶ್ವ ಜನಸಂಖ್ಯಾ ದಿನಾಚರಣೆ ಅಂಗ ವಾಗಿ ಪಟ್ಟಣದ ವಿಶ್ವ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆರೋಗ್ಯಾಧಿ ಕಾರಿ ಕಚೇರಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳ ದಿಂದಾಗಿ ಅಭಿವೃದ್ಧಿಯಲ್ಲಿ ದೇಶ ಹಿಂದು ಳಿಯಲು ಕಾರಣವಾಗುತ್ತಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ಸಾಕಷ್ಟು ಸಂಕಷ್ಟ ಗಳು ಹೆಚ್ಚಾಗುತ್ತಿವೆ. ಜನರಿಗೆ ಸೌಲಭ್ಯ ಒದಗಿಸಲು ಅರಣ್ಯ ಸಂಪತ್ತನ್ನು ಕಡಿದು ನಾಶಗೊಳಿಸಲಾಗುತ್ತಿದೆ. ಇದರಿಂದ ಮಳೆ ಇಲ್ಲದಂತಾಗಿದೆ, ಭೂಮಿ ಫಲವತ್ತತೆ ಕಳೆದುಕೊಂಡು ಬೆಳೆ ಬಾರದಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, ಜನಸಂಖ್ಯೆ ಹೆಚ್ಚ ಳದ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊ ಬ್ಬರು ಎಚ್ಚರ ವಹಿಸಬೇಕಿದೆ. ಇಲ್ಲವಾ ದ್ದಲ್ಲಿ ಕಾಡು ನಾಶವಾಗಿ ಮಳೆ ಕೊರತೆ ಕಾಡುತ್ತದೆ. ಕುಡಿಯುವ ನೀರಿಗೂ ಹಾಹಾಕಾರವಾಗುತ್ತದೆ. ಇದನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಜನಸಂಖ್ಯೆ ದಿನಾಚರಣೆ ಮೂಲಕ ಜನರಲ್ಲಿ ಅರಿವು ಮೂಡಿಸ ಲಾಗುತ್ತಿದೆ ಎಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಮುನಾ, ಸದಸ್ಯೆ ಕಮಲ, ವಿಶ್ವ ಪಿಯು ಕಾಲೇಜು ಪ್ರಾಂಶುಪಾಲ ಆದರ್ಶ, ಆರೋಗ್ಯ ಇಲಾಖೆಯ ಕೃಷ್ಣಪ್ಪ, ದಯಾ ನಂದ್, ಹಕ್ಯಣ್ಣ, ಪುಷ್ಪ ಇನ್ನಿತರರಿದ್ದರು.

Translate »