ಜನಸಂಖ್ಯೆ ಸ್ಫೋಟ ತಡೆಗೆ ಪ್ರಬುದ್ಧ ಜನತೆ ಎಚ್ಚೆತ್ತುಕೊಳ್ಳಲಿ
ಹಾಸನ

ಜನಸಂಖ್ಯೆ ಸ್ಫೋಟ ತಡೆಗೆ ಪ್ರಬುದ್ಧ ಜನತೆ ಎಚ್ಚೆತ್ತುಕೊಳ್ಳಲಿ

July 13, 2019

ಅರಸೀಕೆರೆ,ಜು.12-ಜನಸಂಖ್ಯೆ ಹೆಚ್ಚಳ ದೇಶಕ್ಕೆ ನುಂಗಲಾರದ ತುತ್ತಾಗಿದೆ. ಇಂತಹ ಮಹಾಸ್ಫೋಟದಿಂದಾಗುವ ದುಷ್ಪರಿಣಾಮ ಗಳಿಂದ ಪ್ರಬುದ್ಧ ನಾಗರೀಕರು ಎಚ್ಚೆತ್ತು ಕೊಂಡರಷ್ಟೇ ದೇಶದ ಅಭಿವೃದ್ದಿ ಸಾಧ್ಯ ವಾಗುತ್ತದೆ ಎಂದು ತಹಸಿಲ್ದಾರ್ ಸಂತೋಷ್ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಶ್ರೀ ವೆಂಕಟೇಶ್ವರ ಕಲಾ ಭವನ ದಲ್ಲಿ ತಾಲೂಕು ಆರೋಗ್ಯ ಇಲಾಖೆ, ಎನ್‍ಎಸ್‍ಎಸ್, ಅನಂತ ಸದ್ವಿದ್ಯಾ ಸ್ಕೂಲ್ ಆಫ್ ನರ್ಸಿಂಗ್, ಬಾಲಕಿಯರ ಸರಕಾರಿ ಪಿಯು ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಅಧುನಿಕತೆ ಬೆಳೆದಂತೆ ಆಹಾರ, ನೀರು, ಬಟ್ಟೆ, ವಸತಿ, ಸಸ್ಯ ಸಂಪ ತ್ತಿನ ಕೊರತೆ ಎದ್ದು ಕಾಣುತ್ತಿದೆ. ಮಾನವ ಸಂಪನ್ಮೂಲ ಎಂದೂ ಪ್ರಕೃತಿಗೆ ಪೂರಕ ವಾಗಿರಬೇಕೇ ಹೊರತು ವಿರುದ್ಧವಾಗಿ ರಬಾರದು ಎಂದರು. ನಾಗರಿಕ ಸಮಾಜ ಜನಸಂಖ್ಯಾ ಸ್ಫೋಟವನ್ನು ಗಂಭೀರವಾಗಿ ಪರಿಗಣಿಸದಿರುವುದು ಆತಂಕಕಾರಿ. ಶಿಕ್ಷಣ ಆರೋಗ್ಯ ಸೇವೆಗಳ ಕೊರತೆ ಸೇರಿದಂತೆ ಸಾಮಾಜಿಕ ಅಸಮಾನತೆ ಹೆಚ್ಚಲಿರುವ ಈ ಸಂದರ್ಭದಲ್ಲಿ ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ನೀಡಬೇಕು. ಪ್ರತಿ ಮಗುವಿನ ಜನನದ ನಡುವೆ 4 ವರ್ಷಗಳ ಅಂತರವಿರಬೇಕು ಎಂದು ಮಾರ್ಗದರ್ಶನ ಮಾಡಿದರು.

ಜಿಪಂ ಸದಸ್ಯ ಪಟೇಲ್ ಶಿವಪ್ಪ ಮಾತ ನಾಡಿ, ಸರ್ಕಾರದ ಸೌಲಭ್ಯಗಳು ಬೇಕಾ ದಲ್ಲಿ ಕುಟುಂಬದಲ್ಲಿ ಜನಸಂಖ್ಯೆ ನಿಯಂ ತ್ರಣ ಎಂಬ ಕಾನೂನು ಕಡ್ಡಾಯಗೊಳಿಸ ಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯ ವಿಲ್ಲ. 130 ಕೋಟಿಗೂ ಅಧಿಕ ಜನರಿರುವ ದೇಶದಲ್ಲಿ ಜನಸಂಖ್ಯೆ ನಿಯಂತ್ರಣದ ಅವಶ್ಯಕತೆ ಇದೆ. ಕುಟುಂಬಕ್ಕೆ ಒಂದೇ ಮಗು ಸಾಕು ಎಂದು ನಿಶ್ಚಯಿಸುವ ಮೂಲಕ ದೇಶದ ಜನಸಂಖ್ಯೆ ನಿಯಂತ್ರಿಸಬೇಕಿದೆ. ಇಲ್ಲದಿದ್ದರೆ ದೊಡ್ಡ ಗಂಡಾಂತರ ಎದುರಾದರೂ ಆಶ್ವರ್ಯವಿಲ್ಲ ಎಂದರು.

ಟಿಹೆಚ್‍ಓ ನಾಗಪ್ಪ ಮಾತನಾಡಿ, ಮಕ್ಕ ಳನ್ನು ಹಡೆಯುವುದು ಆಯ್ಕೆಯಾಗಿರ ಬೇಕೇ ಹೊರತು ಅನಿವಾರ್ಯವಾಗ ಬಾರದು. ಮಹಿಳೆಯರು ಮತ್ತು ಪುರುಷರು ಮಕ್ಕಳ ಜನನ ತಡೆಗೆ ಶಾಶ್ವತವಾಗಿ ಮತ್ತು ತಾತ್ಕಾಲಿಕವಾಗಿ ಹಲವು ವಿಧಾನಗಳಿವೆ. ಮಹಿಳೆಯರು ಟ್ಯುಬೆಕ್ಟಮಿ, ಉದರದರ್ಶಕ ಶಸ್ತ್ರ ಚಿಕಿತ್ಸೆ, ವಂಕಿಧಾರಣೆ, ಕಾಪರ್ ಟಿ, ಪಿಪಿಐಯುಸಿಡಿ, ಪಿಎಐಯುಸಿಡಿ, ಇಂಟರ್‍ವಲ್ ಐಯುಸಿಡಿ, ಗರ್ಭ ನಿರೋಧಕ ಗುಳಿಗೆಗಳು ಹಾಗೂ ಪುರುಷರು ಸಂತನ ನಿಯಂತ್ರಣ ಶಸ್ತ್ರ ಚಿಕಿತ್ಸೆ, ನಿರೋಧ್ ಬಳಕೆ ಮಾಡುವಂತೆ ಸಲಹೆ ನೀಡಿದರು.

ಬಿಆರ್‍ಸಿ ಗಂಗಾಧರಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಪರಮೇಶ್ ಮಾತನಾಡಿ ದರು. ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಉಪನ್ಯಾಸಕ ಗೋವಿಂದರಾಜು, ಹೊಯ್ಸಳೇಶ್ವರ ಕಾಲೇಜಿನ ಉಪನ್ಯಾಸಕಿ ರೇಖಾ ಉಪನ್ಯಾಸ ನೀಡಿದರು.

Translate »