ರಾಜ್ಯದಲ್ಲಿ ಮಠ ಸ್ಥಾಪನೆಯಲ್ಲಿ ಕೋಡಿ ಮಠದ ಕೊಡುಗೆ ಅಪಾರ
ಹಾಸನ

ರಾಜ್ಯದಲ್ಲಿ ಮಠ ಸ್ಥಾಪನೆಯಲ್ಲಿ ಕೋಡಿ ಮಠದ ಕೊಡುಗೆ ಅಪಾರ

July 13, 2019

ಅರಸೀಕೆರೆ,ಜು.12-ರಾಜ್ಯದಲ್ಲಿ ಇರುವ ಅನೇಕ ವೀರಶೈವ ಮಠಗಳ ಸ್ಥಾಪನೆ ಮತ್ತು ಅದರ ಪೀಠಾದ್ಯಕ್ಷರ ನೇಮಕಕ್ಕೆ ಹಾರನಹಳ್ಳಿ ಕೋಡಿ ಮಠವು ತನ್ನದೇ ಕೊಡುಗೆಯನ್ನು ನೀಡುತ್ತಾ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಎಲ್ಲ ಬೆಳವಣಿಗೆಗಳಿಗೆ ಕಂಚುಗಲ್ ಬಿದರೆ ದೊಡ್ಡಮಠದ ಮೂಲ ಪುರುಷರು ಲಿಂಗೈಕ್ಯ ಯೋಗಿರಾಜ ಪಟ್ಟಾಧ್ಯಕ್ಷರು ಕಾರಣರಾ ಗಿದ್ದಾರೆ ಎಂದು ಚಿಕ್ಕಲ್ಮಠ ಮಲ್ಲಿಕಾರ್ಜುನ ಮುರುಘಾಮಠ ಸ್ವಾಮೀಜಿ ಹೇಳಿದರು.

ತಾಲೂಕಿನ ಹಾರನಹಳ್ಳಿ ಕೋಡಿಮಠ ಸುಕ್ಷೇತ್ರದಲ್ಲಿ ಶುಕ್ರವಾರದಂದು ಏರ್ಪಡಿ ಸಿದ್ದ ಕಂಚುಗಲ್ ಬಿದರೆ ದೊಡ್ಡಮಠದ ಮೂಲ ಪುರುಷರು ಲಿಂಗೈಕ್ಯ ಯೋಗಿ ರಾಜ ಪಟ್ಟಾಧ್ಯಕ್ಷರ ಸ್ಮರಣೆ ಆರಾಧನೆ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನೂರಾರು ವರ್ಷಗಳ ಹಿಂದೆ ಅನಕ್ಷರಸ್ಥರಾಗಿದ್ದ ಅಸಂಖ್ಯ ವೀರಶೈವರಿಗೆ ಅಕ್ಷರ ದಾಸೋಹದಂತಹ ಮಹತ್ಕಾರ್ಯಕ್ಕೆ ಮುನ್ನುಡಿ ಬರೆದದ್ದು, ಹಾರನಹಳ್ಳಿ ಕೋಡಿಮಠವಾಗಿದೆ. ಶ್ರೀಮಠವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಕಾಲಕಾಲಕ್ಕೆ ತನ್ನ ಗರ್ಭದಲ್ಲಿ ಮಹಾ ತಪಸ್ವಿಗಳಿಗೆ, ಸಿದ್ದರಿಗೆ, ಸಿದ್ದಶಿವಯೋಗಿ ಗಳಿಗೆ ಆಶ್ರಯನ್ನು ನೀಡುವ ಮೂಲಕ ಶಿವಯೋಗಿ ಸಾಮ್ರಾಜ್ಯದ ತಪೋಭೂಮಿ ಎಂದೆನಿಸಿದೆ ಎಂದರು.

ಮೂಲ ತಪಸ್ವಿ ಶ್ರೀ ಶಿವಲಿಂಗ ಮಹಾ ಸ್ವಾಮಿಗಳೇ ಕರ್ತೃಗಳಾಗಿ ಶ್ರೀಮಠಕ್ಕೆ ದೊಡ್ಡ ಶಕ್ತಿಯಾಗಿದ್ದರು. ಮಠದ ಪರಂ ಪರೆ ಮುಂದುವರೆಸಿಕೊಂಡು ಬಂದಿರುವ ಕ್ಷೇತ್ರವು ಈಗ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರ ಆಜ್ಞಾನುಸಾರ ಅಪಾರ ಭಕ್ತವೃಂದ ದೊಂದಿಗೆ ಸಾಗುತ್ತಾ ಎಲ್ಲರ ಬಾಳಿಗೆ ದಾರಿ ದೀಪವಾಗಿ ಸನ್ಮಾರ್ಗ ಕರುಣಿಸುತ್ತಿದೆ ಎಂದರು.

ಪ್ರಭುಕುಮಾರ ಪಟ್ಟಾಧ್ಯಕ್ಷರು ಶ್ರೀ ಹಾನ ಗಲ್ ಕುಮಾರ ಸ್ವಾಮಿಗಳಿಂದ ಸ್ಥಾಪಿಸ ಲ್ಪಟ್ಟ ಶಿವಯೋಗ ಮಂದಿರದಲ್ಲಿ ಏಳು ಜನ ಪ್ರಥಮ ಸಾಧಕರಲ್ಲಿ ಒಬ್ಬರಾಗಿ ಸಾಧಕ ವೃತ್ತಿ ಪ್ರಾರಂಭಿಸಿ, ಯೋಗ ಶಿಕ್ಷಣ ವಿದ್ಯಾಭ್ಯಾಸ ವನ್ನು ಹೊಂದಿ ಯೋಗದಲ್ಲಿ ಪ್ರಖಾಂಡ ಪಂಡಿತರಾಗಿ ಆಗಿನ ಕಾಲ ನಾಸಿಕದಲ್ಲಿ ನಡೆದ ಸಹ ಸ್ರಾರು ಜನ ಯೋಗ ಸಾಧಕ ರಲ್ಲಿ ಯೋಗ ಸಿದ್ದಿಯನ್ನು ಪ್ರದರ್ಶಿಸಿ ಯೋಗಿರಾಜ ಎಂಬ ಪ್ರಶಸ್ತಿಯನ್ನು ಆಗಿನ ಸಾಧು ಮಂಡಲದಿಂದ ಪಡೆದು ಇಡೀ ಭರತ ಖಂಡದಲ್ಲಿಯೇ ಯೋಗ ಸಿದ್ಧಿಯನ್ನು ಸಾಧಿಸಿದ ಕರ್ನಾಟಕದ ಹೆಮ್ಮೆಯ ಸಂತರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸುಕ್ಷೇತ್ರ ಕೋಡಿ ಮಠ ಮಹಾಸಂಸ್ಥಾನದ ಶಿವಾನಂದ ಶಿವ ಯೋಗಿ ರಾಜೇಂದ್ರ ಮಹಾಸ್ವಾಮೀಜಿ ಇವರು ದಿವ್ಯಸಾನಿಧ್ಯ ವಹಿಸಿದ್ದರು. ಸೊರಬ ತಾಲೂಕಿನ ಶ್ರೀ ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಮತ್ತು ಶ್ರೀಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ವಿವಿಧ ಯೋಗಾಸನಗಳನ್ನು ಕಾರ್ಯ ಕ್ರಮದಲ್ಲಿ ಪ್ರದರ್ಶಿಸಿದರು.

ಹುಣಸಘಟ್ಟದ ಹಾಲಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮೂರು ಕಳಸ ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಚಿಲುಮೆ ಮಠದ ಜಯದೇವ ಸ್ವಾಮೀಜಿ, ಮಾಡಳು ವಿರಕ್ತ ಮಠದ ರುದ್ರಮುನಿ ಸ್ವಾಮೀಜಿ, ಕೋಳ ಗುಂದ ಕೇದಿಗೆ ಮಠದ ಜಯಚಂದ್ರ ಶೇಖರ ಸ್ವಾಮೀಜಿ, ಬೊಮ್ಮನಹಳ್ಳಿ ವಿರಕ್ತ ಮಠದ ಶಿವಯೋಗ ಸ್ವಾಮೀಜಿ, ಕತ್ರಿಘಟ್ಟ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಮಹಾಸಂಸ್ಥಾನದ ವ್ಯವಸ್ಥಾಪಕ ದಕ್ಷಿಣಾ ಮೂರ್ತಿ, ಸಂಚಾಲಕ ಮಲ್ಲೀಕಾರ್ಜುನ, ಕಾರ್ಯದರ್ಶಿ ಸಿದ್ದೇಶ್ ನಾಗೇಂದ್ರ, ಕಾರ್ಯ ದರ್ಶಿ ಚನ್ನಬಸವಯ್ಯ ಉಪಸ್ಥಿತರಿದ್ದರು .ಅಂತರಾಷ್ಟ್ರೀಯ ಯೋಗಪಟುಗಳ ಕಾರ್ಯ ನಿರ್ವಾಹಕ ಹೆಚ್.ಟಿ.ಮಹ ದೇವ್ ಇವರನ್ನು ಸನ್ಮಾನಿಸಲಾಯಿತು.

Translate »