2018-19ರ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ: ಇನ್ನಷ್ಟು ಗುಣಾತ್ಮಕ ಸುಧಾರಣೆಗೆ ಜಿಲ್ಲಾಡಳಿತ ಕ್ರಮ
ಹಾಸನ

2018-19ರ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ: ಇನ್ನಷ್ಟು ಗುಣಾತ್ಮಕ ಸುಧಾರಣೆಗೆ ಜಿಲ್ಲಾಡಳಿತ ಕ್ರಮ

July 13, 2019

ಎಸ್ಸೆಸ್ಸೆಲ್ಸಿ: ಈ ವರ್ಷವೂ ಹಾಸನ ನಂ.1 ಗುರಿ

ಹಾಸನ,ಜು.12-ಕಳೆದ ಸಾಲಿನಲ್ಲಿ ಎಸ್‍ಎಸ್ ಎಲ್‍ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಇಡೀ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆ ಯಿತು. ಶಿಕ್ಷಣ ಕ್ಷೇತ್ರದಲ್ಲಿ ಅಚ್ಚರಿದಾಯಕ ವಾಗಿ ನಂ.1 ಸ್ಥಾನ ಪಡೆದ ಕೃಷಿ ಪ್ರಧಾನ ಜಿಲ್ಲೆ, ಆ ಸ್ಥಾನವನ್ನು ಪ್ರಸಕ್ತ ಶೈಕ್ಷಣಿಕ ವರ್ಷವೂ ಮುಂದುವರಿಸಿಕೊಂಡು ಹೋಗಲು ಸಜ್ಜಾಗುತ್ತಿದೆ.

ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ದೊರೆತ ಮೊದಲ ಸ್ಥಾನವನ್ನು ಉಳಿಸಿಕೊಂಡು ಇನ್ನಷ್ಟು ಬೆಳವಣಿಗೆ ಕಾಣಬೇಕೆಂದು ನಿರ್ಧರಿಸಿ ರುವ ಹಾಸನ ಜಿಲ್ಲಾಡಳಿತ, ಗುಣಾತ್ಮಕ ವಾಗಿ ಸುಧಾರಣೆ ಮಾಡಿಕೊಳ್ಳಲು ನಿರ್ಧ ರಿಸಿದೆ. ಅದಕ್ಕಾಗಿ ಹೊಸ ಹೊಸ ಕಾರ್ಯಕ್ರಮ ಗಳನ್ನು ರೂಪಿಸಿಕೊಳ್ಳುತ್ತಿದೆ. ಮುಖ್ಯವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರಿಗೆ ಬೋಧನಾ ಕೌಶಲ ತರಬೇತಿ ಶಿಬಿರವನ್ನು ಏರ್ಪಡಿಸಿದೆ.

ಜಿಲ್ಲಾಧಿಕಾರಿ ಅಕ್ರಂಪಾಷ ಅವರ ಸೂಚನೆ ಯಂತೆ ಜು.15ರಿಂದ ಆ.3ರವರೆಗೆ ಎಲ್ಲಾ ತಾಲೂಕುಗಳಲ್ಲಿ ನಿಗದಿತ ಶಾಲೆಯಲ್ಲಿ ಜಿಲ್ಲೆಯ ಪ್ರೌಢಶಾಲೆಗಳ ಎಲ್ಲಾ ಶಿಕ್ಷಕರಿಗೂ ಕೌಶಲ ಅಭಿವೃದ್ಧಿ ಕಾರ್ಯಾಗಾರ ಹಮ್ಮಿಕೊಳ್ಳ ಲಾಗಿದೆ. ಪ್ರತಿ ವಿಷಯದ ಬಗೆಗೂ 3 ದಿನಗಳ ಕಾಲ ಶಿಕ್ಷಕರಿಗೆ ನುರಿತ ಶಿಕ್ಷಣ ತಜ್ಞರಿಂದ ತರಬೇತಿ ಕೊಡಿಸಲು ಕಾರ್ಯಕ್ರಮ ರೂಪಿಸÀಲಾಗಿದೆ.

ಸಂಪನ್ಮೂಲ ವ್ಯಕ್ತಿ ಆಯ್ಕೆ: ತರಬೇತಿ ಒಳಗೊಳ್ಳಬೇಕಾದ ಬೋಧನಾ ಪರಿಕಲ್ಪನೆ ಗಳನ್ನು ಚರ್ಚಿಸಿ ನಿರ್ಧರಿಸಲು ಹಾಗೂ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗಾಗಿ ಎಲ್ಲಾ ತಾಲೂಕುಗಳಿಂದ ಆಯ್ದ ಸಂಪನ್ಮೂಲ ಶಿಕ್ಷಕರ ಒಂದು ದಿನದ ಕಾರ್ಯಾಗಾರ ವನ್ನು ಜಿಲ್ಲಾ ಹಂತದಲ್ಲಿ ನಡೆಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.

ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಪೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 2310 ಶಿಕ್ಷಕರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.

ಪ್ರತಿ ತಾಲೂಕಿನಲ್ಲಿ ಸುಸಜ್ಜಿತವಾದ ಶಾಲೆಯಲ್ಲಿ ಹಾಗೂ ಮೊರಾರ್ಜಿ ವಸತಿ ಶಾಲೆಗಳಲ್ಲಿ 3 ದಿನಗಳ ಕಾರ್ಯಾಗಾರ ನಡೆಸಲಾಗುತ್ತದೆ. ಜು.15 ರಿಂದ ಆಗಸ್ಟ್ 3ರವರೆಗೂ ಒಟ್ಟು 6 ವಿಷಯಗಳಿಗೆ ಪುನಶ್ಚೇತನ ತರಬೇತಿ ನಡೆಸಲಾಗುವುದು. ದಿನಕ್ಕೊಂದು ವಿಷಯದಂತೆ ಬೇರೆ ಬೇರೆ ತಾಲೂಕಿನ ಶಿಕ್ಷಕರಿಗೆ ತರಬೇತಿ ನಡೆಯು ವಂತೆ ವೇಳಾಪಟ್ಟಿ ತಯಾರಿಸಲಾಗಿದೆ. ಪ್ರತಿ ಶಾಲೆಯಿಂದ ಒಬ್ಬರು ಶಿಕ್ಷಕರನ್ನು ಮಾತ್ರವೇ ತರಬೇತಿಗೆ ನಿಯೋಜಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

18 ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಎಲ್ಲಾ ವಿಷಯಗಳ ತರಬೇತಿ ಪೂರ್ಣ ಗೊಳ್ಳಲಿದೆ. ತರಬೇತಿ ನಡೆಯುವ 3 ದಿನ ಗಳಲ್ಲಿ ಪ್ರತಿದಿನವೂ 4 ಅಧಿವೇಶನಗಳನ್ನು ನಡೆಸಲಾಗುವುದು. ನುರಿತ ಶಿಕ್ಷಕರಿಂದ ವಿಷಯ ಬೋಧನೆ ಮಾಡಿಸಲಾಗುವುದು. ಶಿಕ್ಷಕರಿಗೆ ಊಟದ ವ್ಯವಸ್ಥೆಯನ್ನೂ ಕಲ್ಪಿಸ ಲಾಗಿದೆ. ತರಬೇತಿಯನ್ನು 8, 9 ಮತ್ತು 10ನೇ ತರಗತಿಗಳ ಕ್ಲಿಷ್ಟ ವಿಷಯಗಳನ್ನು ತರಗತಿಗಳಲ್ಲಿ ಸುಲಭವಾಗಿ ಬೋಧಿಸಲು ಅನುಕೂಲವಾಗುವಂತೆ ಆಯೋಜಿಸಲಾ ಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೋಧನೋಪಕರಣ ಹಾಗೂ ತಂತ್ರ ಜ್ಞಾನದ ಬಳಕೆಯೊಂದಿಗೆ ಪರಿಣಾಮ ಕಾರಿ ಕಲಿಕೆ ಉಂಟು ಮಾಡುವಂತೆ ತರ ಬೇತಿ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ವಿದ್ವತ್ ಸಂಸ್ಥೆಯಿಂದ ಎಲ್ಲಾ ವಿಷಯಗಳ ಶಿಕ್ಷಕರಿಗೂ ತರಗತಿಗಳ ವಿಷಯ ಬೋಧನೆಯಲ್ಲಿ ಸ್ಮಾರ್ಟ್‍ಕ್ಲಾಸ್‍ಗಳ ಬಳಕೆ ಬಗ್ಗೆ ಒಂದು ಅವಧಿಯನ್ನೂ ನಿಗದಿ ಪಡಿಸಲಾಗಿದೆ.

ಗಣಿಯಿಂದ ಅನುದಾನ: ಈ ತರಬೇತಿ ಆಯೋಜನೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಮುದಾಯ ಅಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸ ಲಾಗುತ್ತಿದೆ.

ಜು.15ರಿಂದ 17, ಜು.18ರಿಂದ 20, ಜು.22ರಿಂದ 24, ಜು.25ರಿಂದ 27, ಜು.29ರಿಂದ 31, ಜು.1ರಿಂದ 3ರವರೆಗೆ ಅಭ್ಯರ್ಥಿಗಳಿಗೆ ಪ್ರತ್ಯೇಕ ಬ್ಯಾಚ್‍ಗಳಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದೆ.

ಎಲ್ಲಾ ಶಿಕ್ಷಕರು ಈ ಅವಕಾಶವನ್ನು ಬಳಸಿಕೊಂಡು ಸ್ವಯಂ ಕೌಶಲ ಅಭಿವೃದ್ಧಿ ಹೊಂದುವುದರ ಜತೆಗೆ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ವೃದ್ಧಿಗೆ ಸಹಕರಿಸಬೇಕು ಎಂದು ಜಿಲ್ಲಾಧಿ ಕಾರಿ ಅಕ್ರಂ ಪಾಷ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಕೋರಿದ್ದಾರೆ.

 

 

Translate »