ಅರಸೀಕೆರೆ,ಜು.12-ಜನಸಂಖ್ಯೆ ಹೆಚ್ಚಳ ದೇಶಕ್ಕೆ ನುಂಗಲಾರದ ತುತ್ತಾಗಿದೆ. ಇಂತಹ ಮಹಾಸ್ಫೋಟದಿಂದಾಗುವ ದುಷ್ಪರಿಣಾಮ ಗಳಿಂದ ಪ್ರಬುದ್ಧ ನಾಗರೀಕರು ಎಚ್ಚೆತ್ತು ಕೊಂಡರಷ್ಟೇ ದೇಶದ ಅಭಿವೃದ್ದಿ ಸಾಧ್ಯ ವಾಗುತ್ತದೆ ಎಂದು ತಹಸಿಲ್ದಾರ್ ಸಂತೋಷ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ಶ್ರೀ ವೆಂಕಟೇಶ್ವರ ಕಲಾ ಭವನ ದಲ್ಲಿ ತಾಲೂಕು ಆರೋಗ್ಯ ಇಲಾಖೆ, ಎನ್‍ಎಸ್‍ಎಸ್, ಅನಂತ ಸದ್ವಿದ್ಯಾ ಸ್ಕೂಲ್ ಆಫ್ ನರ್ಸಿಂಗ್, ಬಾಲಕಿಯರ ಸರಕಾರಿ ಪಿಯು ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಅಧುನಿಕತೆ ಬೆಳೆದಂತೆ ಆಹಾರ, ನೀರು, ಬಟ್ಟೆ,…
ಸುರಿವ ಮಳೆಯಲ್ಲೂ ಅಂಗನವಾಡಿ ಪ್ರತಿಭಟನೆ
July 11, 2019ಹಾಸನದಲ್ಲಿ ಛತ್ರಿ ಹಿಡಿದು ಧರಣಿ ನಡೆಸಿದ ಕಾರ್ಯಕರ್ತೆಯರು ಹಾಸನ, ಜು.10- ಅಂಗನವಾಡಿ ಕೇಂದ್ರಗಳಲ್ಲಿ ಎಲ್‍ಕೆಜಿ-ಯುಕೆಜಿ ಆರಂಭಿಸಲು ಒತ್ತಾಯಿಸಿ, ಬಾಕಿ ಗೌರವಧನ, ಕೋಳಿ ಮೊಟ್ಟೆ, ತರಕಾರಿ ಹಣ ಮತ್ತು ಕೇಂದ್ರ ಸರ್ಕಾರದಿಂದ 2018ರ ಅಕ್ಟೋಬರ್ ನಲ್ಲಿ ಹೆಚ್ಚಳವಾದ ಗೌರವಧನ ಬಿಡುಗಡೆಗಾಗಿ ಒತ್ತಾಯಿಸಿ ಅಂಗನ ವಾಡಿ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ದರು. ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮೊದಲಿಗೆ ನಗರದ ಮಹಾರಾಜ ಉದ್ಯಾನವನದಲ್ಲಿ ಸಭೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು, ನಂತರ ಹೇಮಾವತಿ ಪ್ರತಿಮೆಯಿಂದ ಡಿಸಿ ಕಚೇರಿವರೆಗೂ…
ಜನರನ್ನು ಅಲೆದಾಡಿಸುವ ತಾಲೂಕು ಕಚೇರಿ: ತಾಪಂ ಕೆಡಿಪಿ ಸಭೆಯಲ್ಲಿ ರಾಂಗ್ ಆದ ಅಧ್ಯಕ್ಷ ರಂಗೇಗೌಡ
July 11, 2019ಬೇಲೂರು, ಜು.10- ತಾಲೂಕು ಕಚೇರಿಯ ಕಾರ್ಯವೈಖರಿ ಜನವಿರೋಧಿಯಂತಿದೆ, ವಿವಿಧ ಸೇವೆಗಳನ್ನು ಬಯಸಿ ಹೋಗುವ ಜನಸಾಮಾನ್ಯರಿಗೆ ಬಹಳ ತೊಂದರೆಯಾಗುತ್ತಿದೆ, ತಾಲೂಕು ಕೇಂದ್ರದ ಸರಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಮತ್ತು ಸಿಬ್ಬಂದಿ ಕೊರತೆಯಿಂದ ರೋಗಿಗಳು ಬಸವಳಿಯುತ್ತಿದ್ದಾರೆ, ತಾಲೂಕಿನ ವಿದ್ಯಾರ್ಥಿನಿಲಯಗಳಲ್ಲಿ ವಾರ್ಡನ್‍ಗಳ ಕರ್ತವ್ಯಲೋಪ ಈ ವಿಚಾರಗಳು ತಾಲೂಕು ಪಂಚಾಯಿತಿ ಯಲ್ಲಿ ಬುಧವಾರ ನಡೆದ ಕರ್ನಾಟಕ ಪ್ರಗತಿ ಪರಿಶೀಲನಾ(ಕೆಡಿಪಿ) ಸಭೆಯಲ್ಲಿ ಬಹಳ ಮುಖ್ಯ ವಾಗಿ ಪ್ರಸ್ತಾಪವಾದವು. ಕೆಲವು ಸದಸ್ಯರು ತಾಲೂಕು ಆಡಳಿತದಲ್ಲಿನ ಲೋಪಗಳ ಬಗ್ಗೆ ತೀವ್ರ ಅಸಮಾಧಾನಗಳು ವ್ಯಕ್ತಪಡಿಸಿದರು. ತಾಲೂಕು ಕಚೇರಿಯಲ್ಲಿ ಜನಸಾಮಾನ್ಯರ…
ಗಂಟೆಗಟ್ಟಲೆ ಕಾದು ಕುಳಿತರೂ ಕಂದಾಯ ಅದಾಲತ್ ಖಾಲಿ! ಸಮಸ್ಯೆಗಳಿವೆ ಎಂದು ನಗರಸಭೆಗೆ ಬಾರದೇ ದೂರ ಉಳಿದ ನಾಗರಿಕರು
July 11, 2019ಹಾಸನ,ಜು.10- ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳಾದ ಖಾತೆ ಬದ ಲಾವಣೆ, ಇ-ಖಾತೆಯಲ್ಲಿ ವಿಳಂಬ, ತೆರಿಗೆ ಯಲ್ಲಿ ವ್ಯತ್ಯಾಸ ಮೊದಲಾದ ಸಮಸ್ಯೆಗಳಿ ದ್ದರೆ ಪರಿಹಾರ ಒದಗಿಸುವ ಸಲುವಾಗಿ ಹಾಸನ ನಗರಸಭೆ ಆಡಳಿತ ಬುಧವಾರ ಆಯೋಜಿಸಿದ್ದ `ಕಂದಾಯ ಅದಾಲತ್’ ವೃಥಾ ವ್ಯರ್ಥವಾಯಿತು. ಅಧಿಕಾರಿಗಳು ಮತ್ತು ಇಲಾಖೆ ಸಿಬ್ಬಂದಿ ಸುಮ್ಮನೆ ಕಾದು ಕುಳಿತಿದ್ದು ವ್ಯರ್ಥವಾಯಿತು. ಏಕೆಂದರೆ, ಸಮಸ್ಯೆಗಳಿವೆ ಎಂದು ಒಬ್ಬ ನಾಗರೀಕರೂ ಕಂದಾಯ ಅದಾಲತ್‍ಗೆ ಬರಲೇ ಇಲ್ಲ! ನಗರಸಭೆ ಆವರಣಲ್ಲಿರುವ ಕುವೆಂಪು ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ `ಕಂದಾಯ ಅದಾಲತ್’…
ಡೆಂಗ್ಯೂ, ಚಿಕೂನ್ ಗುನ್ಯಾ ಭೀತಿಯಲ್ಲಿ ಬೇಲೂರು
July 10, 2019* ತಾಲೂಕು ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಸಿಬ್ಬಂದಿ ಕೊರತೆ * ಗ್ರಾಮೀಣ ಭಾಗದಿಂದ ಬರುವ ರೋಗಿಗಳಿಗೆ ಪರದಾಟ * ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಬೇಲೂರು: ತಾಲೂಕಿನಲ್ಲಿ ದಿನ ದಿಂದ ದಿನಕ್ಕೆ ಚಿಕನ್ ಗುನ್ಯಾ, ಡೆಂಗ್ಯೂ ಶಂಕೆಯ ಜ್ವರದಿಂದ ನರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ರೋಗ ಪತ್ತೆಗಾಗಿ ರಕ್ತ ಪರೀಕ್ಷೆ ಅತ್ಯಗತ್ಯವಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯ ರಕ್ತ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ನಿತ್ಯವೂ ನೂರಾರು ರೋಗಿಗಳು ಪರದಾಡುವಂತಾಗಿದೆ. ತಾಲೂಕಿನ ಎಲ್ಲೆಡೆಯೂ ಚಿಕೂನ್ ಗುನ್ಯಾ ಹಾಗೂ ಡೆಂಗ್ಯೂ…
ಸಿಎಂ ಹೆಚ್‍ಡಿಕೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
July 10, 2019ಹಾಸನ, ಜು.9- ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೊದಲಿಗೆ ನಗರದಲ್ಲಿನ ಹೇಮಾವತಿ ಪ್ರತಿಮೆ ಎದುರು ಜಮಾವಣೆಗೊಂಡ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು, ರಾಜ್ಯದಲ್ಲಿನ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಗತ್ಯ ಸಂಖ್ಯೆಯ ಶಾಸಕರ ಬೆಂಬಲ ಇಲ್ಲದಿದ್ದರೂ ಭಂಡತನದಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಕುಮಾರಸ್ವಾಮಿ ಕುಳಿತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನ 14 ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರ ಅಲ್ಪಮತಕ್ಕೆ…
ಅರಸೀಕೆರೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
July 10, 2019ಅರಸೀಕೆರೆ,ಜು.9- ಬಿಜೆಪಿಯ ಅರಸೀಕೆರೆ ಗ್ರಾಮಾಂತರ ಹಾಗೂ ನಗರ ಮಂಡಲ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ನಗರದ ಪಿ.ಪಿ.ವೃತ್ತದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಸದಸ್ಯತ್ವ ಅಭಿಯಾನದ ತಾಲೂಕು ಉಸ್ತುವಾರಿ ಲಕ್ಷ್ಮಣ್, ಬಿಜೆಪಿ ಬೇರು ಮಟ್ಟದಿಂದಲೂ ಸದೃಢÀವಾಗಿದೆ. ಹೊಸ ದಾಗಿ ಸದಸ್ಯತ್ವ ಅಭಿಯಾನ ನಡೆದಿದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಸಂಘಟ ನೆಗೆ ಒತ್ತು ನೀಡಬೇಕು. ಎಲ್ಲಿ ಪಕ್ಷದ ವರ್ಚಸ್ಸು ಕಡಿಮೆ ಇದೆಯೋ ಅಲ್ಲೆಲ್ಲಾ ಹೆಚ್ಚು ಸದಸ್ಯತ್ವ ನೋಂದಾಯಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು. ಗ್ರಾಮಾಂತರ…
‘ಪದವೀಧರ ಶಿಕ್ಷಕರು’ ಎಂದು ಪರಿಗಣಿಸುವಂತೆ ಆಗ್ರಹ
July 10, 2019ಸಮರ್ಪಕ ವೇತನ ನಿಗದಿಪಡಿಸಿ: ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ ಹಾಸನ,ಜು.9- ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರ ನ್ಯಾಯಯುತವಾದ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಆಗ್ರಹಿಸಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ಮಂಗಳವಾರ ಪಾಠ ಪ್ರವಚನ ಸ್ಥಗಿತಗೊಳಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು. ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಹ…
ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ; ಬೇಲೂರು ಪ್ರತಿಭೆಗಳ ಸಾಧನೆ
July 10, 2019ಬೇಲೂರು, ಜು.9- ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಮತ್ತು ಬೇಲೂರಿನ ಎನ್‍ಎಸ್ ಕೆಎಂಎಫ್ ಶಾಲೆ ಯಿಂದ ಸೋಮವಾರ ಆಯೋ ಜಿಸಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೇಲೂರಿನ ವಿವಿಧ ಶಾಲೆಗಳ ಕರಾಟೆ ಪಟುಗಳು ಭಾಗವಹಿಸಿ ಹಲವು ಬಹು ಮಾನಗಳನ್ನು ಗೆದ್ದು ಕೊಂಡರು. 25 ಕೆಜಿ ವಿಭಾಗದಲ್ಲಿ ಬೇಲೂರು ಸರ್ಕಾರಿ ಪ್ರೌಢಶಾಲೆಯ ಬಿ.ಆರ್.ಪೂರ್ಣೇಶ್ ಪ್ರಥಮ, ಧ್ರುವ ಮೌಂಟ್ ಕಾರ್ಮೆಲ್ ಶಾಲೆಯ ಚಿರಂಜೀವಿ ದ್ವಿತೀಯ ಸ್ಥಾನ, 30 ಕೆಜಿ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ಶಾಲೆಯ ಚಿರಂತ್ ಡಿ.ರಾವ್ ಪ್ರಥಮ, 45ಕೆಜಿ…
ಕೃಪೆ ತೋರಿದ ವರುಣ: ಕೃಷಿ ಚಟುವಟಿಕೆ ಆರಂಭ
July 9, 2019* ಸಕಲೇಶಪುರದಲ್ಲಿ ಜೂನ್‍ನಲ್ಲಿ ಶೇ.30 ಕಡಿಮೆ ಮಳೆ; ಜುಲೈನಲ್ಲಿ ಚುರುಕು * ಹೇಮಾವತಿ ನದಿಯಲ್ಲಿ ಹೆಚ್ಚಿದ ಒಳ ಹರಿವು-ಅಣೆಕಟ್ಟೆ ನೀರಿನ ಮಟ್ಟ ಏರಿಕೆ ಹಾಸನ, ಜು.8- ಮುಂಗಾರು ಈ ಬಾರಿ ತಡವಾಗಿ ಆಗಮಿಸಿದರೂ, ಈಗ 2-3 ದಿನಗಳಿಂದ ಜಿಲ್ಲೆಯ ಕೆಲವೆಡೆ ಉತ್ತಮ ಮಳೆ ಸುರಿಸುತ್ತಿದೆ. ಮುಖ್ಯವಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ 3 ದಿನಗಳಿಂದ ಸಕಲೇಶಪುರ ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾ ಗುತ್ತಿದೆ. ಕೊನೆಗೂ ಮುನಿಸು ಕೈಬಿಟ್ಟು ಅವತರಿಸಿದ ವರುಣನನ್ನು ಹರ್ಷದಿಂದ ಬರಮಾಡಿಕೊಂಡಿರುವ ತಾಲೂಕಿನ…