ಗಂಟೆಗಟ್ಟಲೆ ಕಾದು ಕುಳಿತರೂ ಕಂದಾಯ ಅದಾಲತ್ ಖಾಲಿ! ಸಮಸ್ಯೆಗಳಿವೆ ಎಂದು ನಗರಸಭೆಗೆ ಬಾರದೇ ದೂರ ಉಳಿದ ನಾಗರಿಕರು
ಹಾಸನ

ಗಂಟೆಗಟ್ಟಲೆ ಕಾದು ಕುಳಿತರೂ ಕಂದಾಯ ಅದಾಲತ್ ಖಾಲಿ! ಸಮಸ್ಯೆಗಳಿವೆ ಎಂದು ನಗರಸಭೆಗೆ ಬಾರದೇ ದೂರ ಉಳಿದ ನಾಗರಿಕರು

July 11, 2019

ಹಾಸನ,ಜು.10- ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳಾದ ಖಾತೆ ಬದ ಲಾವಣೆ, ಇ-ಖಾತೆಯಲ್ಲಿ ವಿಳಂಬ, ತೆರಿಗೆ ಯಲ್ಲಿ ವ್ಯತ್ಯಾಸ ಮೊದಲಾದ ಸಮಸ್ಯೆಗಳಿ ದ್ದರೆ ಪರಿಹಾರ ಒದಗಿಸುವ ಸಲುವಾಗಿ ಹಾಸನ ನಗರಸಭೆ ಆಡಳಿತ ಬುಧವಾರ ಆಯೋಜಿಸಿದ್ದ `ಕಂದಾಯ ಅದಾಲತ್’ ವೃಥಾ ವ್ಯರ್ಥವಾಯಿತು. ಅಧಿಕಾರಿಗಳು ಮತ್ತು ಇಲಾಖೆ ಸಿಬ್ಬಂದಿ ಸುಮ್ಮನೆ ಕಾದು ಕುಳಿತಿದ್ದು ವ್ಯರ್ಥವಾಯಿತು. ಏಕೆಂದರೆ, ಸಮಸ್ಯೆಗಳಿವೆ ಎಂದು ಒಬ್ಬ ನಾಗರೀಕರೂ ಕಂದಾಯ ಅದಾಲತ್‍ಗೆ ಬರಲೇ ಇಲ್ಲ!

ನಗರಸಭೆ ಆವರಣಲ್ಲಿರುವ ಕುವೆಂಪು ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ `ಕಂದಾಯ ಅದಾಲತ್’ ಆರಂಭ ಗೊಂಡಿತು. ನಗರಸಭೆ ಆಯುಕ್ತ ಪರ ಮೇಶ್ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ನಗರದ `ಪ್ರಜೆ’ಗಳಿಗಾಗಿ ಕಾದು ಕುಳಿತರು. ಗಂಟೆಗಳು ಉರುಳು ತ್ತಿದ್ದರೂ ಒಬ್ಬ ನಾಗರಿಕರೂ ಅದಾಲತ್‍ಗೆ ದೂರು ಹೊತ್ತು ಬರಲೇ ಇಲ್ಲ. ಸಂಜೆ ವರೆಗೂ ಕಾಯುತ್ತಿದ್ದು, ಅರ್ಜಿಗಳೇ ಇಲ್ಲದೇ ಅದಾಲತ್ ಕೊನೆಗೊಳಿಸಲಾಯಿತು.

ನಗರಸಭೆ ವ್ಯಾಪ್ತಿಯ ನಾಗರೀಕರಿಗೆ ಅನುಕೂಲವಾಗಲೆಂದೇ ಕಂದಾಯ ಅದಾಲತ್ ಆಯೋಜಿಸಲಾಗಿತ್ತು. ದೀರ್ಘ ಕಾಲದಿಂದ ಬಾಕಿಯಾಗಿರುವ ಕಂದಾಯ ಇಲಾಖೆ ಸಮಸ್ಯೆಗಳಿದ್ದರೆ ಬಗೆಹರಿಸೋಣ ಎಂದು ಸಾಕಷ್ಟು ಸಿದ್ಧತೆಯನ್ನೂ ಮಾಡಿ ಕೊಳ್ಳಲಾಗಿತ್ತು. ಖಾತೆ ಬದಲಾವಣೆ, ಇ- ಖಾತೆಯಲ್ಲಿ ವಿಳಂಬ, ತೆರಿಗೆ ಲೆಕ್ಕಾಚಾರ ದಲ್ಲಿ ವ್ಯತ್ಯಾಸ ಇದ್ದರೆ ಪರಿಹರಿಸಿಕೊಳ್ಳಲು ಅವಕಾಶವೂ ಇದ್ದಿತು. ಆದರೆ, ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಗರಸಭೆ ಆಯುಕ್ತ ಪರಮೇಶ್ ಅವರು ಸುದ್ದಿಗಾರರಿಗೆ ತಿಳಿಸಿದರು. ಬೆಳಿಗ್ಗೆ 11 ಗಂಟೆ ಯಿಂದ ಕಾದು ಕುಳಿತಿದ್ದಕ್ಕೆ ಅಕ್ರಮ-ಸಕ್ರಮ ದಲ್ಲಿ ಮಾಹಿತಿ ನೀಡುವಂತೆ 1 ಅರ್ಜಿ ಬಂದಿದೆ ಅಷ್ಟೆ. ಇದನ್ನು ಗಮನಿಸಿದರೆ ನಗರಸಭೆ ಯಲ್ಲಿ, ಅದೂ ಕಂದಾಯ ಇಲಾಖೆಗೆ ಸಂಬಂ ಧಿಸಿದಂತೆ ನಾಗರಿಕರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ ಎನಿಸುತ್ತದೆ ಎಂದರು.

ಕಂದಾಯ ಅದಾಲತ್ ನಡೆಸುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಜಾಹಿರಾತು ಕೊಡಲಾ ಗಿತ್ತು. ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರವನ್ನೂ ನಡೆಸಲಾಗಿತ್ತು. ಮತ್ತೆ ಆಗಸ್ಟ್‍ನಲ್ಲಿಯೂ ಕಂದಾಯ ಅದಾಲತ್ ನಡೆಸಲಾಗುವುದು. ನಾಗರಿಕರಿಗೆ ಅವಶ್ಯ ಕತೆ ಇದೆ ಎನಿಸಿದರೆ ಪ್ರತಿ ತಿಂಗಳೂ ಕಂದಾಯ ಅದಾಲತ್ ನಡೆಸಲು ನಗರ ಸಭೆ ಸಿದ್ಧವಿದೆ ಎಂದು ಹೇಳಿದರು.

Translate »