ಅರಸೀಕೆರೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
ಹಾಸನ

ಅರಸೀಕೆರೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

July 10, 2019

ಅರಸೀಕೆರೆ,ಜು.9- ಬಿಜೆಪಿಯ ಅರಸೀಕೆರೆ ಗ್ರಾಮಾಂತರ ಹಾಗೂ ನಗರ ಮಂಡಲ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ನಗರದ ಪಿ.ಪಿ.ವೃತ್ತದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಸದಸ್ಯತ್ವ ಅಭಿಯಾನದ ತಾಲೂಕು ಉಸ್ತುವಾರಿ ಲಕ್ಷ್ಮಣ್, ಬಿಜೆಪಿ ಬೇರು ಮಟ್ಟದಿಂದಲೂ ಸದೃಢÀವಾಗಿದೆ. ಹೊಸ ದಾಗಿ ಸದಸ್ಯತ್ವ ಅಭಿಯಾನ ನಡೆದಿದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಸಂಘಟ ನೆಗೆ ಒತ್ತು ನೀಡಬೇಕು. ಎಲ್ಲಿ ಪಕ್ಷದ ವರ್ಚಸ್ಸು ಕಡಿಮೆ ಇದೆಯೋ ಅಲ್ಲೆಲ್ಲಾ ಹೆಚ್ಚು ಸದಸ್ಯತ್ವ ನೋಂದಾಯಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು.

ಗ್ರಾಮಾಂತರ ಸಂಚಾಲಕ ಪುಟ್ಟನಕಟ್ಟೆ ದಿನೇಶ್ ಮಾತನಾಡಿ, ಗ್ರಾಮೀಣ ಭಾಗ ದಲ್ಲಿ ಯುವ ಸಮುದಾಯ ಬಿಜೆಪಿ ಸದಸ್ಯ ತ್ವಕ್ಕೆ ಆಸಕ್ತಿ ತೋರಿದೆ. ತಾಲೂಕಿನಲ್ಲಿ 1 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಮಾಡುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಠ ಗೊಳಿಸಲಾಗುವುದು ಎಂದರು.

ಈ ಸಂದರ್ಭ ತಾಲೂಕು ಸಂಯೋಜಕ ಚಂದ್ರಶೇಖರ್, ಜಿಲ್ಲಾ ವಕ್ತಾರ ಎನ್.ಡಿ. ಪ್ರಸಾದ್, ನಗರ ಅಭಿಯಾನ ಸಂಚಾಲಕ ಶಿವನ್‍ರಾಜ್, ಸಹ ಸಂಚಾಲಕ ಚಂದ್ರು, ತಾಲೂಕು ಸಹ ಸಂಚಾಲಕ ಶಶಿಧರ್ ನಾಗ ಸಮುದ್ರ, ಮಾದನಹಳ್ಳಿ ಚಂದ್ರಶೇಖರ್, ಎಸ್‍ಎಲ್‍ಎನ್ ವಿಜಿ, ಹಿರಿ ಸಾದರಹಳ್ಳಿ ಯೋಗೀಶ್, ಸುವರ್ಣಮ್ಮ, ಉಮಾ ಕುಮಾರ್, ಗಾಯಿತ್ರಿ, ಶಿಲ್ಪಾ, ಪ್ರಭಾಕರ್, ಲೋಕೇಶ್ ದುಮ್ಮೇನಹಳ್ಳಿ ಮತ್ತಿತರರಿದ್ದರು.

ಜನಸಂಘ ಸಂಸ್ಥಾಪಕ ಶ್ಯಾಮಪ್ರಕಾಶ್ ಮುಖರ್ಜಿ ಅವರ ಜನ್ಮದಿನವಾದ ಜು.6 ರಂದು ಸದಸ್ಯತ್ವ ನೋಂದಣಿ ಅಭಿಯಾನ ದೇಶಾದ್ಯಂತ ಆರಂಭವಾಗಿದ್ದು ಆ.11ರವರೆಗೂ ನಡೆಯಲಿದೆ. ಸಕ್ರಿಯ ಸದಸ್ಯತ್ವಕ್ಕೆ 3 ವರ್ಷ, ಸಾಮಾನ್ಯ ಸದಸ್ಯತ್ವಕ್ಕೆ 6 ವರ್ಷ ಅವಧಿ ಇದೆ. 3 ವರ್ಷಗಳ ಹಿಂದೆ ಸದಸ್ಯರಾದವರು ಮತ್ತೆ ಸದಸ್ಯರಾಗಬೇಕಿಲ್ಲ. ಸದಸ್ಯರಾಗಲು 8980808080ಗೆ ಮಿಸ್ ಕಾಲ್ ನೀಡಿದರೆ ಮಾಹಿತಿ ನೀಡಬಹುದು.- ಮನೋಜ್ ಕುಮಾರ್, ನಗರ ಮಂಡಲ ಅಧ್ಯಕ್ಷ

Translate »