ಡೆಂಗ್ಯೂ, ಚಿಕೂನ್ ಗುನ್ಯಾ ಭೀತಿಯಲ್ಲಿ ಬೇಲೂರು
ಹಾಸನ

ಡೆಂಗ್ಯೂ, ಚಿಕೂನ್ ಗುನ್ಯಾ ಭೀತಿಯಲ್ಲಿ ಬೇಲೂರು

July 10, 2019

* ತಾಲೂಕು ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಸಿಬ್ಬಂದಿ ಕೊರತೆ
* ಗ್ರಾಮೀಣ ಭಾಗದಿಂದ ಬರುವ ರೋಗಿಗಳಿಗೆ ಪರದಾಟ
* ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ
ಬೇಲೂರು:  ತಾಲೂಕಿನಲ್ಲಿ ದಿನ ದಿಂದ ದಿನಕ್ಕೆ ಚಿಕನ್ ಗುನ್ಯಾ, ಡೆಂಗ್ಯೂ ಶಂಕೆಯ ಜ್ವರದಿಂದ ನರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ರೋಗ ಪತ್ತೆಗಾಗಿ ರಕ್ತ ಪರೀಕ್ಷೆ ಅತ್ಯಗತ್ಯವಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯ ರಕ್ತ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ನಿತ್ಯವೂ ನೂರಾರು ರೋಗಿಗಳು ಪರದಾಡುವಂತಾಗಿದೆ.

ತಾಲೂಕಿನ ಎಲ್ಲೆಡೆಯೂ ಚಿಕೂನ್ ಗುನ್ಯಾ ಹಾಗೂ ಡೆಂಗ್ಯೂ ರೋಗ ಲಕ್ಷಣಗಳು ಕಾಣಿಸಿ ಕೊಂಡಿವೆ. ಶಂಕಿತ ಜ್ವರ ವಿಪರೀತವಾಗಿ ಹರಡುತ್ತಿದ್ದು ತಾಲೂಕು ಕೇಂದ್ರದಲ್ಲಿನ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಪ್ರತಿ ನಿತ್ಯವೂ ಮುಗಿಬೀಳುತ್ತಿದ್ದಾರೆ.

ವಿಪರೀತ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಚಿಕೂನ್ ಗುನ್ಯಾ ಅಥವಾ ಡೆಂಗ್ಯೂ ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ರಕ್ತ ಪರೀಕ್ಷೆ ಕಡ್ಡಾಯ ವಾಗಿದೆ. ರಕ್ತವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರವಷ್ಟೇ ವೈದ್ಯರಿಗೂ ರೋಗಲಕ್ಷಣ ತಿಳಿಯಲು ಸಾಧ್ಯ. ಆದರೆ ತಾಲೂಕು ಕೇಂದ್ರದಲ್ಲಿನ ಸರ್ಕಾರಿ ಆಸ್ಪತ್ರೆಯ ರಕ್ತ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಪರಿಣಾಮ ಸೂಕ್ತ ಸಮಯ ದಲ್ಲಿ ರಕ್ತ ಪರೀಕ್ಷೆಯ ಫಲಿತಾಂಶ ದೊರ ಕದೆ ರೋಗಿಗಳು ಬೆಳಗಿನಿಂದ ಸಂಜೆವರೆಗೂ ವೃಥಾ ಕಾಯಬೇಕಾದ ಪರಿಸ್ಥಿತಿ ಇದೆ.

ಈ ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರಕುತ್ತದೆ ಎಂಬ ವಿಶ್ವಾಸದಲ್ಲಿ ಬಂದೆವು. ಆದರೆ, ಇಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳು ವುದಕ್ಕೇ ದಿನಗಟ್ಟಲೇ ಕಾಯಬೇಕಾಗಿದೆ ಎಂದು ಗ್ರಾಮಾಂತರ ಪ್ರದೇಶಗಳಿಂದ ಬಂದ ರೋಗಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮೂಲ ಸೌಕರ್ಯ ಕೊರತೆ: ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿನ ಮೂಲ ಸೌಲಭ್ಯ ಗಳ ಕೊರತೆಯೂ ಇದ್ದು. ರೋಗಿಗಳು ಪರದಾಡುವಂತಾಗಿದೆ. ರಕ್ತ ಪರೀಕ್ಷಾ ಕೇಂದ್ರ ಇದ್ದರೂ ಪ್ರಯೋಗಾಲಯ ತಜ್ಞರ ಕೊರತೆಯಿಂದಾಗಿ ರೋಗಿಗಳ ರಕ್ತ ಪರೀಕ್ಷೆ ಮೊದಲಾದವು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ರೋಗಿಗಳ ಬಂಧು ಗಳು ಆರೋಪಿಸುತ್ತಾರೆ.

ಬೇಲೂರು ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆ ಸಾಮಥ್ರ್ಯಕ್ಕೆ ಮೇಲ್ದರ್ಜೆಗೆ ಏರಿಸಲಾಗಿದೆ. ಹಾಗಿದ್ದೂ ಮೂಲ ಸೌಕರ್ಯಗಳ ಸಮಸ್ಯೆ ಇದೆ. ರಕ್ತ ಪರೀಕ್ಷಾ ಕೇಂದ್ರಕ್ಕೆ ಅಗತ್ಯ ಪ್ರಮಾಣದ ಸಿಬ್ಬಂದಿ ನೇಮಿಸಿಲ್ಲ. ಕೇವಲ 4 ಮಂದಿ ತಂತ್ರಜ್ಞರಷ್ಟೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 3 ಮಂದಿ ಪ್ರಯೋಗಾಲಯ ತಂತ್ರಜ್ಞರ ನೇಮಕವಾಗಬೇಕಿದೆ.

ಡೆಪ್ಯುಟೇಷನ್: ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿ ರುವುದರಿಂದ ಗೆಂಡೇಹಳ್ಳಿ, ಗಂಗೂರು, ಅಡಗೂರು ಆಸ್ಪತ್ರೆಗಳಿಂದ ತಾತ್ಕಾಲಿಕ ವಾಗಿಯಷ್ಟೇ ಸಿಬ್ಬಂದಿಗಳನ್ನು ನಿಯೋಜಿಸ ಲಾಗುತ್ತಿದೆ. ಆದರೂ ರೋಗಿಗಳ ಸಂಖ್ಯೆ ಅಧಿಕ ವಾಗಿರುವುದರಿಂದ ರಕ್ತ ಪರೀಕ್ಷೆಗಾಗಿ ಬೆಳಗಿ ನಿಂದ ಸಂಜೆಯವರೆಗೆ ಕಾಯುವಂತಾಗಿದೆ.

ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಗಳು, ಜಿಲ್ಲಾಡಳಿತ, ಶಾಸಕರು ಮತ್ತು ಸಂಸ ದರು ಈ ಕೂಡಲೇ ಬೇಲೂರು ಸರ್ಕಾರಿ ಆಸ್ಪತ್ರೆಯತ್ತ ಗಮನಹರಿಸಬೇಕು. ಅಗತ್ಯ ಮೂಲ ಸೌಕರ್ಯವನ್ನು ತಕ್ಷಣ ಒದಗಿಸ ಬೇಕು. ಮುಖ್ಯವಾಗಿ ರಕ್ತ ಪರೀಕ್ಷಾ ಕೇಂದ್ರಕ್ಕೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ತಾಲೂಕಿನ ಜನತೆ ಆಗ್ರಹಿಸಿದ್ದಾರೆ.

ಸಮಸ್ಯೆಯ ಚಿತ್ರಣ
ಅಡಗೂರು ಆಸ್ಪತ್ರೆಯಿಂದ ಬೇಲೂರು ಸರ್ಕಾರಿ ಆಸ್ಪತ್ರೆಗೆ ನಿಯೋಜನೆ ಮೇಲೆ ಬಂದಿರುವ ಪ್ರಯೋಗಾಲಯ ತಜ್ಞ ಸಿಬ್ಬಂದಿ ಶಂಭುಗೌಡ ಅವರು, ಕಳೆದೊಂದು ವಾರದಿಂದ ವಿವಿಧ ಬಗೆಯ ಜ್ವರಗಳಿಂದ ನರಳುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಲ್ಲಿನ ದತ್ತ ಪರೀಕ್ಷಾ ಕೇಂದ್ರದಲ್ಲಿ ಒಬ್ಬರೇ ಸಿಬ್ಬಂದಿ ಇದ್ದು, ಅವರೇ ಪರೀಕ್ಷಾ ವರದಿ ಬರೆಯಬೇಕು, ಒಬ್ಬರೇ ಟೆಸ್ಟಿಂಗ್ ಮಾಡಬೇಕು, ನಂತರ ಪರೀಕ್ಷೆಯ ಫಲಿತಾಂಶವನ್ನು ಬರೆದು ರೋಗಿಗಳಿಗೆ ಅವರೇ ಕೊಡಬೇಕು ಎಂಬಂತಹ ದುಸ್ಥಿತಿ ಇದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ಪ್ರಯೋಗಾಲಯದ ಪರೀಕ್ಷಾ ಫಲಿತಾಂಶ ವರದಿಯನ್ನು ನೀಡಲಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರಕ್ತ ಪರೀಕ್ಷೆ ಎಂಬುದು ಅತ್ಯಂತ ಸೂಕ್ಷ್ಮ ಕೆಲಸವಾಗಿದೆ. ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕಿದೆ. ಆದರೆ ರೋಗಿಗಳು ಮುಗಿಬಿದ್ದು. ಕೂಗಾಟ ನಡೆಸುವುದರಿಂದ ಪ್ರಯೋಗಾಲಯ ಸಿಬ್ಬಂದಿ ಒತ್ತಡಕ್ಕೊಳಗಾಗುವಂತಾಗಿದೆ. ಇಲ್ಲಿ 4 ಟೆಕ್ನಿಷಿಯನ್‍ಗಳ ಕೊರತೆ ಇದೆ ಎಂದು ಪರಿಸ್ಥಿತಿಯ ಚಿತ್ರಣ ನೀಡಿದ್ದಾರೆ.

ರಕ್ತ ಪರೀಕ್ಷೆ ಅತ್ಯಗತ್ಯ
ಈಗಾಗಲೇ ಹಲವು ಬಗೆಯ ಜ್ವರಗಳಿಂದ ಬಾಧಿತರಾದ ನೂರಾರು ರೋಗಿಗಳು ತಾಲೂಕು ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ಅವರಿಗೆ ಚಿಕೂನ್ ಗುನ್ಯಾ ಅಥವಾ ಡೆಂಗ್ಯೂ ಅಥವಾ ಮಲೇರಿಯಾ ಅಥವಾ ಫ್ಲ್ಯೂ ಸೇರಿದಂತೆ ಯಾವ ಬಗೆಯ ಜ್ವರ ಬಾಧಿಸುತ್ತಿದೆ ಎಂಬುದನ್ನು ನಿಖರವಾಗಿ ತಿಳಿದು ವೈದ್ಯರು ಸಮರ್ಪಕ ಚಿಕಿತ್ಸೆ ನೀಡಬೇಕಾದರೆ ಪ್ರತಿಯೊಬ್ಬ ರೋಗಿಯ ರಕ್ತವನ್ನೂ ಪ್ರಯೋಗಾಲಯದಲ್ಲಿ ತಜ್ಞರು ಪರೀಕ್ಷಿಸಿ ವರದಿ ನೀಡಬೇಕಿರುತ್ತದೆ.

Translate »