ಸುರಿವ ಮಳೆಯಲ್ಲೂ ಅಂಗನವಾಡಿ ಪ್ರತಿಭಟನೆ
ಹಾಸನ

ಸುರಿವ ಮಳೆಯಲ್ಲೂ ಅಂಗನವಾಡಿ ಪ್ರತಿಭಟನೆ

ಹಾಸನದಲ್ಲಿ ಛತ್ರಿ ಹಿಡಿದು ಧರಣಿ ನಡೆಸಿದ ಕಾರ್ಯಕರ್ತೆಯರು
ಹಾಸನ, ಜು.10- ಅಂಗನವಾಡಿ ಕೇಂದ್ರಗಳಲ್ಲಿ ಎಲ್‍ಕೆಜಿ-ಯುಕೆಜಿ ಆರಂಭಿಸಲು ಒತ್ತಾಯಿಸಿ, ಬಾಕಿ ಗೌರವಧನ, ಕೋಳಿ ಮೊಟ್ಟೆ, ತರಕಾರಿ ಹಣ ಮತ್ತು ಕೇಂದ್ರ ಸರ್ಕಾರದಿಂದ 2018ರ ಅಕ್ಟೋಬರ್ ನಲ್ಲಿ ಹೆಚ್ಚಳವಾದ ಗೌರವಧನ ಬಿಡುಗಡೆಗಾಗಿ ಒತ್ತಾಯಿಸಿ ಅಂಗನ ವಾಡಿ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ದರು. ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮೊದಲಿಗೆ ನಗರದ ಮಹಾರಾಜ ಉದ್ಯಾನವನದಲ್ಲಿ ಸಭೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು, ನಂತರ ಹೇಮಾವತಿ ಪ್ರತಿಮೆಯಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‍ಕೆಜಿ-ಯುಕೆಜಿ ಪ್ರಾರಂಭಿಸ ಬೇಕು. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಾರ್ಯಕರ್ತೆಯರಿಗೆ ಕಳೆದ 3-4 ತಿಂಗಳಿಂದ ಗೌರವಧನ ಬಂದಿಲ್ಲ. ಕೋಳಿಮೊಟ್ಟೆ, ತರಕಾರಿ ಖರೀದಿಗೆ ನೀಡುವ ಹಣವೂ 3-4 ತಿಂಗಳಿಂದ ಬಂದಿಲ್ಲ. ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸರಿಯಾಗಿ ಗ್ಯಾಸ್ ಸಿಲಿಂಡರ್ ವಿತರಣೆಯಾಗುತ್ತಿಲ್ಲ. ಅಂಗನ ವಾಡಿ ನೌಕರರು ಖಾಯಿಲೆ ಬಿದ್ದಾಗ ಮತ್ತು ಮರಣ ಹೊಂದಿ ದಾಗ ಬರುವ ಹಣ ಬರುತ್ತಿಲ್ಲ. ಅಲ್ಲದೆ ನಿವೃತ್ತ ಕಾರ್ಯಕರ್ತೆ ಯರಿಗೆ ಯಾವುದೇ ಸೌಲಭ್ಯವಿಲ್ಲ. ಇನ್ನೊಂದೆಡೆ ಅಂಗನವಾಡಿ ನೌಕರರ ಮೇಲೆ ಶಿಸ್ತು ಕ್ರಮ ಮಾತ್ರ ಜರುಗುತ್ತಲೇ ಇದೆ. ಗೌರವಧನದ ಆಧಾರದಲ್ಲಿ ದುಡಿಯುವ ಇವರನ್ನು ಮತ್ತಷ್ಟು ಶೋಷಿಸಬಾರದು ಎಂದು ಮನವಿ ಮಾಡಿದರು.

ಈಗಿರುವ ನಿವೃತ್ತಿ ಸೌಲಭ್ಯ ಬದಲಾಯಿಸಿ ಎಲ್‍ಐಸಿ ಆಧಾರಿತ ಪಿಂಚಣಿ ಸೌಲಭ್ಯ ಒದಗಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ಎನ್‍ಪಿಎಸ್ ಮಾನದಂಡವನ್ನೇ ಅನುಸರಿಸ ಬೇಕು. ನಿವೃತ್ತರಾದ ಕಾರ್ಯಕರ್ತೆ, ಸಹಾಯಕಿಯರಿಗೆ ತಕ್ಷಣ ಇಡುಗಂಟು ಬಿಡುಗಡೆ ಆಗಬೇಕು ಎಂದು ಒತ್ತಾಯಿಸಿದರು.

5 ವರ್ಷಗಳನ್ನು ಪೂರೈಸಿದ ಮೇಲ್ವಿಚಾರಕಿಯರನ್ನು ಕಡ್ಡಾಯ ವರ್ಗಾವಣೆ ಮಾಡಬೇಕು ಎಂದೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸ ಲಾಯಿತು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಇಂದ್ರಮ್ಮ, ಖಜಾಂಚಿ ಜೆ.ಪಿ.ಶೈಲಜ, ಪ್ರಧಾನ ಕಾರ್ಯ ದರ್ಶಿ ಎಂ.ಬಿ.ಪುಷ್ಪ, ಉಪಾಧ್ಯಕ್ಷರಾದ ವಿ.ಲತಾ, ಶಾರದ, ಕೆ.ಪಿ.ವೀಣಾ, ಕಾಮಾಕ್ಷಿ, ಟಿ.ಹೆಚ್.ಜಯಂತಿ, ಮೀನಾಕ್ಷಿ, ಸಾವಿತ್ರಿ, ಧರ್ಮೇಶ್ ಇತರರು ಇದ್ದರು.

July 11, 2019

Leave a Reply

Your email address will not be published. Required fields are marked *