ಸಂಸ್ಕøತ, ಸಂಸ್ಕಾರದಿಂದ ಭಾರತಕ್ಕೆ ವಿಶ್ವದಲ್ಲೇ ವಿಶೇಷ ಸ್ಥಾನ
ಮೈಸೂರು

ಸಂಸ್ಕøತ, ಸಂಸ್ಕಾರದಿಂದ ಭಾರತಕ್ಕೆ ವಿಶ್ವದಲ್ಲೇ ವಿಶೇಷ ಸ್ಥಾನ

July 11, 2019

ಮೈಸೂರು, ಜು.10(ಎಂಕೆ)- ಸಂಸ್ಕøತಿ, ಸಂಸ್ಕಾರದಿಂದ ವಿಶ್ವದಲ್ಲಿಯೇ ಭಾರತ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದು ಕರ್ನಾಟಕ ಸಂಸ್ಕøತ ವಿವಿ ಹಂಗಾಮಿ ಕುಲಪತಿ ಪೆÇ್ರ.ವಿ.ಗಿರೀಶ್‍ಚಂದ್ರ ತಿಳಿಸಿದರು.
ಮೈಸೂರಿನ ಕುವೆಂಪುನಗರದ ಬಂದಂತಮ್ಮ ಕಾಳಮ್ಮ ಸಮುದಾಯ ಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪತಂಜಲಿ ಯೋಗ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ‘ಯೋಗ ಜೀವನ ದರ್ಶನ-2019’ ಅಂತರರಾಷ್ಟ್ರ-ರಾಷ್ಟ್ರ-ರಾಜ್ಯ ಮಟ್ಟದ ಯೋಗ ಶಿಕ್ಷಕರ ಪ್ರಶಿಕ್ಷಣಾ ಶಿಬಿರಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗ, ಆಯುರ್ವೇದ, ಸಂಸ್ಕøತ ನಮ್ಮ ಪರಂಪರೆಯಾಗಿದ್ದು, ದೈಹಿಕ, ಮಾನಸಿಕ ಆರೋಗ್ಯ ರಕ್ಷಣೆಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಯೋಗ ಕಲಿಯುವುದಕ್ಕೆ ಗುರುವಿನ ಮಾರ್ಗದರ್ಶನವಿದ್ದರೆ ಸಾಕು ಮತ್ತು ಎಲ್ಲಾ ಕಾಲದಲ್ಲಿಯೂ ಯೋಗವನ್ನು ಮನೆಯೊಳಗೆ ಮಾಡಬಹುದು. ಅದಕ್ಕೆ ಯಾವುದೇ ರೀತಿಯ ಸಲಕರಣೆಗಳು ಬೇಕಾಗುವುದಿಲ್ಲ. ಜಿಮ್‍ಗಳಲ್ಲಿ ಹಣವನ್ನು ವೆಚ್ಚ ಮಾಡುವುದರ ಜೊತೆಗೆ ಎಚ್ಚರಿಕೆಯಿಂದ ವ್ಯಾಯಾಮ ಮಾಡಬೇಕಾಗುತ್ತದೆ. ವಾಕಿಂಗ್ ಮಾಡುತ್ತೇವೆ ಎಂದರೂ ಮಳೆಗಾಲದಲ್ಲಿ ಹೊರಗೆ ಹೋಗುವುದು ಕಷ್ಟ. ಹಾಗಾಗಿ, ಯೋಗ ಎಲ್ಲಾ ರೀತಿಯ ಲ್ಲಿಯೂ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಹಾಯಕವಾಗಿದೆ ಎಂದರು.

ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಯೋಗ ಕಲಿತು ಅದನ್ನು ನಿತ್ಯ ಮಾಡುವುದು ಅವಶ್ಯಕವಾಗಿದೆ. ಯೋಗವು ನಕಾರಾತ್ಮಕ ಆಲೋಚನೆಗಳನ್ನು ಮರೆಸಿ, ಸಕರಾತ್ಮಕ ಆಲೋಚನೆಗಳನ್ನು ಮೂಡಿಸುವುದಲ್ಲದೇ, ಒತ್ತಡವನ್ನು ನಿವಾರಣೆ ಮಾಡುತ್ತದೆ ಎಂದರು. ಇದೇ ವೇಳೆ ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ, ಸಾಮ್ರಾಟ್ ಕಲ್ಯಾಣ ಮಂಟಪ ಹಾಗೂ ಪತಂಜಲಿ ಯೋಗ ಮಂದಿರದ ವಿವಿಧ ವೇದಿಕೆಗಳಲ್ಲಿ ಏಕಕಾಲದಲ್ಲಿ ಯೋಗ ಶಿಬಿರ ನಡೆಸಲಾಯಿತು. ಶಿಬಿರಕ್ಕೆ ನೂರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅರಮನೆ ಜಪದಕಟ್ಟೆ ಮಠದ ಅಧ್ಯಕ್ಷ ಡಾ.ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಎಸ್‍ಪಿವೈ ಎಸ್‍ಎಸ್‍ನ ಪುಟ್ಟಶಾಮಯ್ಯ, ರವಿಶಂಕರ್, ಎನ್.ಎಸ್.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »