ನಾಳೆ ಪಾಂಡುರಂಗ ವಿಠಲಸ್ವಾಮಿಗೆ ವಿಶೇಷ ಹೂವಿನ ಅಲಂಕಾರ
ಮೈಸೂರು

ನಾಳೆ ಪಾಂಡುರಂಗ ವಿಠಲಸ್ವಾಮಿಗೆ ವಿಶೇಷ ಹೂವಿನ ಅಲಂಕಾರ

ಮೈಸೂರು, ಜು.10(ಆರ್‍ಕೆಬಿ)- ಆಷಾಢದ ಪ್ರಥಮ ಏಕಾದಶಿ ಪ್ರಯುಕ್ತ ಮೈಸೂರಿನ ಕಬೀರ್ ರಸ್ತೆ ಪಾಂಡುರಂಗ ವಿಠಲ ಸ್ವಾಮಿ ದೇವಸ್ಥಾನದಲ್ಲಿ ಜು.12ರಂದು ವಿಶೇಷ ಹೂವಿನ ಅಲಂ ಕಾರ ಏರ್ಪಡಿಸಲಾಗಿದೆ. ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಆರ್.ವಿ.ಶಿವಾಜಿರಾವ್ ರಂಪೂರೆ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಂದು ಮುಂಜಾನೆ 5 ಗಂಟೆಯಿಂದ ಪಾಂಡುರಂಗ ವಿಠಲ ಸ್ವಾಮಿಗೆ ಕಾಕಡಾರತಿ ಭಜನೆ, ವಿಶೇಷ ಹಾಲಿನ ಅಭಿಷೇಕ, ಫಲ ಪಂಚಾಮೃತ, ಅಷ್ಟೋತ್ತರ ಪೂಜೆ ಇತ್ಯಾದಿ ಪೂಜಾ ಕಾರ್ಯಗಳನ್ನು ಆಯೋಜಿಸಲಾಗಿದೆ.

ಸಂಜೆ 4 ಗಂಟೆಗೆ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿ ಯಿಂದ ದೇವರನಾಮ, ಭಜನೆ, ಸಂಜೆ 6 ಗಂಟೆಗೆ ಗಣೇಶ್ ಶರ್ಮಾ ಅವರಿಂದ ಪ್ರವಚನ, ರಾತ್ರಿ 9.30 ಗಂಟೆಗೆ ಸಾಂಪ್ರ ದಾಯಿಕ ಪಂಡರಿ ಭಜನೆ ನಡೆಯಲಿದೆ. ಜು.13ರಂದು ಸಂಜೆ 5.30 ಗಂಟೆಗೆ ಚಿ.ಮೊನಿಶಾ ರಂಪೂರೆ ತಂಡದಿಂದ ಭರತನಾಟ್ಯ, ಸಂಜೆ 6.30 ಗಂಟೆಗೆ ನಿಹಾಲ್ ಎನ್.ಪತಂಗೆ ಅವರಿಂದ ಕೊಳಲು ವಾದನ ಏರ್ಪಡಿಸಲಾಗಿದೆ ಎಂದು ಮಂಡಳಿಯ ಪದಾಧಿಕಾರಿ ಎನ್.ಜಿ.ಬಾಲಾಜಿರಾವ್ ನಾಯಕ್ ತಿಳಿಸಿದ್ದಾರೆ.

July 11, 2019

Leave a Reply

Your email address will not be published. Required fields are marked *