ಬಿಜೆಪಿ ಕುತಂತ್ರ ಆರೋಪ: ಒಕ್ಕಲಿಗ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
ಮೈಸೂರು

ಬಿಜೆಪಿ ಕುತಂತ್ರ ಆರೋಪ: ಒಕ್ಕಲಿಗ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

July 11, 2019

ಸಿಎಂ ಹೆಚ್‍ಡಿಕೆ, ಸಚಿವ ಡಿಕೆಶಿ ಪರ ಘೋಷಣೆ
ಮೈಸೂರು, ಜು.10(ಆರ್‍ಕೆಬಿ)- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಇಳಿಸಲು ಕುತಂತ್ರ ನಡೆಸುತ್ತಿರುವ ಬಿಜೆಪಿ ವಿರುದ್ಧ ಒಕ್ಕಲಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬುಧವಾರ ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಪರ ಘೋಷಣೆ ಗಳನ್ನು ಕೂಗಿದ ಪ್ರತಿಭಟನಾಕಾರರು, ಬಿಜೆಪಿ ನಾಯಕರ ಒಕ್ಕಲಿಗ ವಿರೋಧಿ ಧೋರಣೆ ಯನ್ನು ಖಂಡಿಸಿದರು. ಆಪರೇಷನ್ ಹೆಸರಿನಲ್ಲಿ ಶಾಸಕರನ್ನು ಖರೀದಿಸುತ್ತಿರುವ ಬಿಜೆಪಿ ಆಪರೇಷನ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಒಕ್ಕಲಿಗ ನಾಯಕರ ವಿರುದ್ಧ ಇದೇ ರೀತಿ ಕುತಂತ್ರ ಮುಂದುವರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕರಾದ ಜಯರಾಂ, ಸುಶೀಲಾ ನಂಜಪ್ಪ, ಸತೀಶ್‍ಗೌಡ, ಮುಖಂಡ ರಾದ ಜೀವನ್, ಮನೋಹರಗೌಡ, ಕಾಂತರಾಜು, ಬೆಟ್ಟೇಗೌಡ, ಬಸವರಾಜು, ಹರೀಶ್‍ಗೌಡ, ಅಭಿಷೇಕ್ ಇನ್ನಿತರರು ಭಾಗವಹಿಸಿದ್ದರು.