Tag: Hassan

ಜಿಲ್ಲೆಗೆ ಹೊಸ ತೋಟಗಾರಿಕಾ ಕಾಲೇಜು ಲೋಕೋಪಯೋಗಿ ಸಚಿವ ರೇವಣ್ಣ ಭರವಸೆ
ಹಾಸನ

ಜಿಲ್ಲೆಗೆ ಹೊಸ ತೋಟಗಾರಿಕಾ ಕಾಲೇಜು ಲೋಕೋಪಯೋಗಿ ಸಚಿವ ರೇವಣ್ಣ ಭರವಸೆ

June 16, 2018

ಹಾಸನ: ಜಿಲ್ಲೆಯಲ್ಲಿ ಹೊಸ ದಾಗಿ ತೋಟಗಾರಿಕಾ ಕಾಲೇಜು ಹಾಗೂ ಸೋಮನಹಳ್ಳಿ ಕಾವಲ್‍ನ ಆಲೂಗೆಡ್ಡೆ ಸಂಶೋಧನಾ ಕೇಂದ್ರದಲ್ಲಿ ಚಿಪ್ಸ್ ತಯಾ ರಿಕಾ ಘಟಕ ಪ್ರಾರಂಭಿಸಲು ನಿರ್ಧರಿಸಿದ್ದು, ಶೀಘ್ರದಲ್ಲಿ ತೋಟಗಾರಿಕಾ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಇಲಾಖಾವಾರು ಅಧಿ ಕಾರಿಗಳ ಸಭೆ ನಡೆಸಿದ ಅವರು, ಹತ್ತು ಹಲವು ಹೊಸ ಉದ್ದೇಶಿತ ಅಭಿವೃದ್ಧಿ ಯೋಜನೆಗಳನ್ನು ಸಭೆ ಮುಂದಿಟ್ಟರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ತಮ್ಮ ಆದ್ಯತೆಯಾಗಿದ್ದು, ಎಲ್ಲಾ ಅಧಿಕಾರಿಗಳು ಇದಕ್ಕೆ…

ನಿಗದಿತ ಅವಧಿಯೊಳಗೆ ಪಿಂಚಣ ಸೌಲಭ್ಯ ಒದಗಿಸಿ
ಹಾಸನ

ನಿಗದಿತ ಅವಧಿಯೊಳಗೆ ಪಿಂಚಣ ಸೌಲಭ್ಯ ಒದಗಿಸಿ

June 15, 2018

ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್‍ಗಳಿಗೆ ಸಚಿವ ಹೆಚ್.ಡಿ.ರೇವಣ್ಣ ಸೂಚನೆ ಹಾಸನ: ‘ಮುಂದಿನ ಎರಡು ತಿಂಗಳೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಎಲ್ಲ ಸಾಮಾಜಿಕ ಭದ್ರತಾ ಪಿಂಚಣ ಗಳು ಬಿಪಿಎಲ್ ಕಾರ್ಡ್‍ಗಳ ವಿತರಣೆ ಪೂರ್ಣ ಗೊಳಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ ರಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪ್ರತಿ ಗ್ರಾಮವಾರು ವೃದ್ಯಾಪ್ಯ ವೇತನ, ವಿಧವಾ ವೇತನ,…

ರೈಲಿನಿಂದ ಆಯತಪ್ಪಿ ಬಿದ್ದು ಯುವತಿ ಸಾವು
ಹಾಸನ

ರೈಲಿನಿಂದ ಆಯತಪ್ಪಿ ಬಿದ್ದು ಯುವತಿ ಸಾವು

June 15, 2018

ಹಾಸನ: ಸಂಚರಿಸುತ್ತಿದ್ದ ರೈಲಿನಿಂದ ಆಯ ತಪ್ಪಿ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರೀಸಾವೆ ನಿಲ್ದಾಣದಲ್ಲಿ ಗುರುವಾರ ನಡೆದಿದೆ. ದಿವ್ಯಶ್ರೀ ಅಲಿಯಾಸ್ ಮೇಘನಾ (21) ಮೃತಪಟ್ಟ ಯುವತಿ. ಮಂಡ್ಯ ಜಿಲ್ಲೆಯ ಮೇಟಿಮೆಳ್ಳಲ್ಲಿ ಮೇಘನಾ ಅವರು ನಿನ್ನೆ(ಬುಧವಾರ) ಶ್ರವಣಬೆಳಗೊಳದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವಾಗ ಹಿರೀಸಾವೆ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಇದರಿಂದ ಮೇಘನಾ ಅವರಿಗೆ ತೀವ್ರ ಪೆಟ್ಟಾಯಿತು. ಕೂಡಲೇ ಅವರನ್ನು ಬೆಳ್ಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೇಘನಾ ಡಿಪ್ಲೊಮಾ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ…

ಅನುಮಾನಾಸ್ಪದವಾಗಿ ವ್ಯಕ್ತಿ ಸಾವು
ಹಾಸನ

ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

June 15, 2018

ಹಾಸನ: ನಗರದ ರಿಂಗ್ ರಸ್ತೆ ಬಳಿ ಇರುವ ಸುಪ್ರಿಯಾ ಬಾರ್ ಮುಂದೆ ವ್ಯಕ್ತಿ ಓರ್ವ ಅನುಮಾನಸ್ಪದವಾಗಿ ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಸುಪ್ರಿಯಾ ಬಾರ್ ಮುಂದೆ ಕುಳಿತಿದ್ದ ಯತೀಶ್ ಎಂಬುವವರು ಸಾವನಪ್ಪಿದ್ದು, ರಾತ್ರಿ ಕಂಠಪೂರ್ತಿ ಕುಡಿದು ಹೃದಯಾಘಾತದಿಂದ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ತಾಲೂಕಿನ ಬೂವನಹಳ್ಳಿ ನಿವಾಸಿ ಯತೀಶ್ (32) ಎಂದು ತಿಳಿದು ಬಂದಿದೆ. ವಿಷಯ ತಿಳಿದ ಬಡಾವಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಚಿತ ಬಸ್‍ಪಾಸ್‍ಗಾಗಿ ಎಸ್‍ಎಫ್‍ಐ ಪ್ರತಿಭಟನೆ
ಹಾಸನ

ಉಚಿತ ಬಸ್‍ಪಾಸ್‍ಗಾಗಿ ಎಸ್‍ಎಫ್‍ಐ ಪ್ರತಿಭಟನೆ

June 14, 2018

ಹಾಸನ:  ರಾಜ್ಯದಲ್ಲಿ ಉನ್ನತ ಶಿಕ್ಷಣದವರೆಗೂ ಸಾರ್ವತ್ರಿಕವಾಗಿ ಉಚಿತ ಬಸ್‍ಪಾಸ್ ನೀಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್‍ಎಫ್‍ಐ ನೇತೃತ್ವ ದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ ವಿದ್ಯಾರ್ಥಿಗಳು, ಘೋಷಣೆ ಗಳನ್ನು ಕೂಗುವ ಮೂಲಕ ಬೇಡಿಕೆ ಈಡೇ ರಿಕೆಗೆ ಆಗ್ರಹಿಸಿದರು. ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡ ಬೇಕೆಂದು ಹಿಂದಿನಿಂದಲೂ ಎಸ್‍ಎಫ್‍ಐ ಸಂಘಟನೆ ಹೋರಾಡುತ್ತಾ ಬಂದಿದೆ. ರಾಜ್ಯ ಕಳೆದ ಮೂರು ವರ್ಷಗಳಿಂದ ತೀವ್ರ ಬರ ಎದುರಿಸುತ್ತಿದೆ. ಇದರಿಂದ ಪೋಷಕರು ಶಾಲಾ…

ಅರ್ಥಪೂರ್ಣ ಯೋಗ ದಿನಾಚರಣೆಗೆ ಎಡಿಸಿ ಸೂಚನೆ
ಹಾಸನ

ಅರ್ಥಪೂರ್ಣ ಯೋಗ ದಿನಾಚರಣೆಗೆ ಎಡಿಸಿ ಸೂಚನೆ

June 14, 2018

ಹಾಸನ: ವಿಶ್ವ ಯೋಗ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಯೋಜಿಸುವಂತೆ ಎಡಿಸಿ ಬಿ.ಆರ್.ಪೂಣ ್ಮಾ ಆಯುಷ್ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜೂ.21ರ ಯೋಗ ದಿನದಂದು ಯೋಗ ಪ್ರದರ್ಶನವನ್ನು ಜಿಲ್ಲಾ ಕ್ರೀಡಾಂಗಣ ಹಾಗೂ ಮಲೆ ನಾಡು ತಾಂತ್ರಿಕ ವಿದ್ಯಾಲಯದ ಒಳಾಂಗಣ ಸಭಾಂಗಣದಲ್ಲಿ ಆಯೋ ಜಿಸುವಂತೆ ನಿರ್ದೇಶನ ನೀಡಿದರು. ವಿಶ್ವ ಯೋಗ ದಿನವನ್ನು ಉತ್ತಮವಾಗಿ ಆಚರಿಸಲು ಸರ್ಕಾರದ ನಿರ್ದೇಶನವಿದೆ. ಇದಕ್ಕೆ ಸಂಘ ಸಂಸ್ಥೆಗಳ…

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ಥಳ ಪರಿಶೀಲನೆ ದಶಕಗಳಿಂದ ನೆನೆಗುದಿಗೆ ಬಿದ್ದ ಕಾಮಗಾರಿಗಳ ಪುನಾರಂಭಕ್ಕೆ ಸೂಚನೆ
ಹಾಸನ

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ಥಳ ಪರಿಶೀಲನೆ ದಶಕಗಳಿಂದ ನೆನೆಗುದಿಗೆ ಬಿದ್ದ ಕಾಮಗಾರಿಗಳ ಪುನಾರಂಭಕ್ಕೆ ಸೂಚನೆ

June 13, 2018

ಹಾಸನ: ಜಿಲ್ಲೆಯ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪುನಾರಂಭಿ ಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಬೆಳಿಗ್ಗೆಯಿಂದಲೇ ಜಿಲ್ಲೆಯ ಹೊಳೆನರಸೀಪುರ ಹಾಗೂ ಹಾಸನ ತಾಲೂಕುಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಸನ ನಗರದ ಹೊಸ ಬಸ್ ನಿಲ್ದಾಣದ ಬಳಿ ಸ್ಥಗಿತಗೊಂಡಿರುವ ಪ್ರವಾಸಿ ಹೋಟೆಲ್ ಮತ್ತು ಮನರಂಜನಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಇನ್ನಷ್ಟು ವಿನೂತನತೆ ಸೇರ್ಪಡೆಗೊಳಿಸಿ ಕಾಮಗಾರಿ ಮುಕ್ತಾಯ ಗೊಳಿಸಲು ಚಿಂತಿಸಿದ್ದು, ಇದಕ್ಕಾಗಿ ಲೋಕೋಪಯೋಗಿ, ಅರಣ್ಯ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ…

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕರೆ :ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಕರೆ
ಹಾಸನ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕರೆ :ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಕರೆ

June 13, 2018

ಹಾಸನ: ಹದಿನಾಲ್ಕು ವರ್ಷ ದೊಳಗಿನ ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಶಾಲೆಯಿಂದ ಹೊರಗುಳಿದು ಬಾಲ ಕಾರ್ಮಿಕರಾಗಿ ದುಡಿಯುವ ಮಕ್ಕಳನ್ನು ಪತ್ತೆ ಹಚ್ಚಿ ಮುಖ್ಯ ವಾಹಿನಿಗೆ ತರುವ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸ ಬೇಕು ಎಂದು ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ ಅಧ್ಯಕ್ಷರೂ ಆದ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್. ತಿಮ್ಮಣ್ಣಾ ಚಾರ್ ಕರೆ ನೀಡಿದ್ದಾರೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ…

ಹಾಸನದಲ್ಲಿ ವರುಣನ ಆರ್ಭಟ
ಹಾಸನ

ಹಾಸನದಲ್ಲಿ ವರುಣನ ಆರ್ಭಟ

June 12, 2018

ಹೇಮಾವತಿ ಜಲಾಶಯದಲ್ಲಿ ಜೀವಕಳೆ ಶಾಲಾ-ಕಾಲೇಜುಗಳಿಗೆ ರಜೆ ವಿದ್ಯುತ್, ರಸ್ತೆ-ರೈಲು ಸಂಚಾರ ವ್ಯತ್ಯಯ ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ರಸ್ತೆ, ರೈಲು ಸಂಚಾರ ಅಸ್ತವ್ಯಸ್ತವಾಗಿರುವುದಲ್ಲದೆ, ಅನೇಕ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮುಂಗಾರಿನ ಆರ್ಭಟ ಕಳೆದ ನಾಲ್ಕು ದಿನದಿಂದ ಜೋರಾಗಿದ್ದು, ಭಾನುವಾರ ಸುರಿದ ಭಾರೀ ಮಳೆಗೆ ಜನರು ತತ್ತರಿಸಿದ್ದಾರೆ. ಹಲವೆಡೆ ಮರಗಳು ಧರೆಗುರುಳಿದ್ದು, ಮನೆಗಳ ಗೋಡೆಗಳು ಕುಸಿದಿವೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯೂ ಸಂಭವಿಸಿದೆ. ಹಾಸನ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ರೈಲು…

ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯ: ಶಾಸಕ ಪ್ರೀತಮ್ ಜೆ.ಗೌಡ
ಹಾಸನ

ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯ: ಶಾಸಕ ಪ್ರೀತಮ್ ಜೆ.ಗೌಡ

June 11, 2018

ಹಾಸನ: ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಯೋಗಾಭ್ಯಾಸ ಅವಶ್ಯಕ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ತಿಳಿಸಿದರು.ನಗರದ ಶ್ರೀ ಶಂಕರ ಮಠದಲ್ಲಿ ವೇದ ಭಾರತಿ ಸಹಕಾರದೊಂದಿಗೆ ಪತಂಜಲಿ ಪರಿ ವಾರದಿಂದ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ರಾಷ್ಟ್ರಯಜ್ಞದಲ್ಲಿ ಭಾಗವಹಿಸಿ ನಂತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇಂದಿನ ಜೀವನ ಪದ್ಧತಿಯಲ್ಲಿ ಯೋಗಾ ಭ್ಯಾಸ ಅನಿವಾರ್ಯ. ಪ್ರತಿ ವಾರ್ಡಿನಲ್ಲೂ ಒಂದು ಯೋಗ ಕೇಂದ್ರ ತೆರೆದು ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಿ ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಡಬೇಕು ಎಂದರು. ಅಂದು ಪತಂಜಲಿ ಪರಿವಾರ ಆಶೀರ್ವದಿಸಿದಂತೆ…

1 95 96 97 98 99 103
Translate »