Tag: HD Revanna

ಜನತೆಗೆ 24×7 ಕುಡಿಯುವ ನೀರು ಸರಬರಾಜು
ಹಾಸನ

ಜನತೆಗೆ 24×7 ಕುಡಿಯುವ ನೀರು ಸರಬರಾಜು

August 28, 2018

ಹೊಳೆನರಸೀಪುರ: ಪಟ್ಟಣದ ಜನತೆಗೆ 24×7 ಕುಡಿಯುವ ನೀರು ಸರಬ ರಾಜು ಮಾಡಲಾಗುವುದು ಎಂದು ಲೋಕೋ ಪಯೋಗಿ, ಜಿಲ್ಲಾ ಉಸ್ತವಾರಿ ಸಚಿವ ಹೆಚ್.ಡಿ.ರೇವಣ್ಣ ಭರವಸೆ ನೀಡಿದರು. ಇದೇ ತಿಂಗಳ 31ರಂದು ನಡೆಯುವ ಪುರಸಭೆ ಚುನಾವಣೆ ಹಿನ್ನೆಲೆ ಅಭ್ಯರ್ಥಿ ಗಳ ಪರ ಪ್ರಚಾರಕ್ಕೂ ಮುನ್ನ ಪಟ್ಟಣದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, 20 ವರ್ಷಗಳಿಂದಲೂ ಜೆಡಿಎಸ್ ಪುರ ಸಭಾ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಪ್ರಸ್ತುತ ಚುನಾವಣೆಯಲ್ಲೂ 23 ವಾರ್ಡ್ ಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರ ಹಿಡಿಯಲಿದೆ…

ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ರೇವಣ್ಣ ಭೇಟಿ, ಪರಿಶೀಲನೆ
ಹಾಸನ

ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ರೇವಣ್ಣ ಭೇಟಿ, ಪರಿಶೀಲನೆ

August 24, 2018

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ನೆರೆ ಪೀಡಿತ ಹಾಗೂ ಬಿಸಲೆ ಬಳಿ ಭೂ ಕುಸಿತಗೊಂಡಿರುವ ಪ್ರದೇಶಗಳಿಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ, ನಿರಾಶ್ರಿತ ಕೇಂದ್ರಕ್ಕೂ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ತಾಲೂಕಿನ ಬಿಸಲೆ, ಮಾಗೇರಿ, ವಣ ಗೂರು, ಹಿಜ್ಜನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ನೆರೆ ಪೀಡಿತ ಪ್ರದೇಶಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸೌಕರ್ಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ….

ನಿರಾಶ್ರಿತರ ಶಿಬಿರದಲ್ಲಿ ಸಚಿವ ಹೆಚ್.ಡಿ.ರೇವಣ್ಣ ನಡೆಗೆ ವ್ಯಾಪಕ ಟೀಕೆ
ಹಾಸನ

ನಿರಾಶ್ರಿತರ ಶಿಬಿರದಲ್ಲಿ ಸಚಿವ ಹೆಚ್.ಡಿ.ರೇವಣ್ಣ ನಡೆಗೆ ವ್ಯಾಪಕ ಟೀಕೆ

August 21, 2018

ರಾಮನಾಥಪುರ: ಇಲ್ಲಿನ ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವ ಎಚ್.ಡಿ.ರೇವಣ್ಣ ಪ್ರಾಣಿಗಳಿಗೆ ನೀಡುವಂತೆ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿರುವ ನಡೆಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ರಾಮನಾಥಪುರದ ಸರ್ಕಾರಿ ಶಾಲೆಯೊಂದರಲ್ಲಿ ತೆರೆದಿದ್ದ ನೆರೆ ಪರಿಹಾರ ಕೇಂದ್ರಕ್ಕೆ ನಿರಾಶ್ರಿತ ಸಮಸ್ಯೆ ಆಲಿಸಲು ಶಾಸಕ ಎ.ಟಿ.ರಾಮಸ್ವಾಮಿ ಆವರೊಡನೆ ಸಚಿವ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ನಿರಾಶ್ರಿತರಿಗೆ ಬಿಸ್ಕೆಟ್ ಪ್ಯಾಕ್‍ಗಳನ್ನು ನೀಡಲು ಮುಂದಾದರು. ಆದರೆ ಇವರ ಬಿಸ್ಕೆಟ್ ವಿತರಿಸಿದ ಪರಿ ನೋಡುಗರನ್ನು ಮುಜುಗರಕ್ಕೀಡು ಮಾಡಿತು. ನಿರಾಶ್ರಿತರ ಕೈಗೆ…

ಕೊಡಗು ಭಾಗದ ಹೆದ್ದಾರಿ ದುರಸ್ತಿಗೆ ತಿಂಗಳುಗಳೇ ಬೇಕು: ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ
ಕೊಡಗು

ಕೊಡಗು ಭಾಗದ ಹೆದ್ದಾರಿ ದುರಸ್ತಿಗೆ ತಿಂಗಳುಗಳೇ ಬೇಕು: ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ

August 20, 2018

ಮಡಿಕೇರಿ:  ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೊಡಗಿನಲ್ಲಿ ರಸ್ತೆಗಳ ದುರಸ್ಥಿಗೆ ಹಲವು ತಿಂಗಳುಗಳೇ ಬೇಕಾಗಬಹುದು. ಮಡಿಕೇರಿ – ಮಂಗ ಳೂರು ರಾಜ್ಯ ಹೆದ್ದಾರಿ ದುರಸ್ಥಿಯಾಗಿ ಲಘು ವಾಹನ ಸಂಚಾರಕ್ಕೆ ಕನಿಷ್ಟ 30 ದಿನಗಳು ಬೇಕಾಗಿದ್ದು ಇದೇ ಮಾರ್ಗದಲ್ಲಿ ಬಸ್, ಲಾರಿ ಸಂಚಾರಕ್ಕೆ 6 ತಿಂಗಳಾದರೂ ಬೇಕಾಗಲಿದೆ. ಇದರಿಂದಾಗಿ ಶಿಕ್ಷಣ, ಆರೋಗ್ಯ ಸಂಬಂಧಿತ ಚಟು ವಟಿಕೆಗಳಿಗೆ ಮಂಗಳೂರನ್ನೇ ಬಹುಪಾಲು ಆಶ್ರಯಿಸಿರುವ ಕೊಡಗಿನ ಜನತೆಗೆ ಸಾಕಷ್ಟು ಸಮಸ್ಯೆಯಾಗಲಿದೆ. ಮಂಗಳೂರು ರಾಜ್ಯ ಹೆದ್ದಾರಿ ತಾಳತ್ತಮನೆಯಿಂದ ಸಂಪಾಜೆ ಯವರೆಗೆ 37 ಕಿ.ಮೀ. ಸಂಪೂರ್ಣ ಕುಸಿದಿದ್ದು,…

ಪ್ರವಾಹ ಪೀಡಿತರ ಸಂಕಷ್ಟ ಆಲಿಸಿದ ಸಚಿವ ಹೆಚ್.ಡಿ.ರೇವಣ್ಣ
ಹಾಸನ

ಪ್ರವಾಹ ಪೀಡಿತರ ಸಂಕಷ್ಟ ಆಲಿಸಿದ ಸಚಿವ ಹೆಚ್.ಡಿ.ರೇವಣ್ಣ

August 19, 2018

ರಾಮನಾಥಪುರ: ಪಟ್ಟಣದಲ್ಲಿ ತೆರೆದಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ತರ ಸಂಕಷ್ಟ ಆಲಿಸಿದರು. ಕಾವೇರಿ ನದಿ ಪ್ರವಾಹ ಸಂತ್ರಸ್ತರಿಗೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರುವ ತೆರೆದಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಹಾಲು, ಬಿಸ್ಕತ್ ವಿತರಿಸಿ ಸಾಂತ್ವನ ಹೇಳಿದರು. ಈ ವೇಳೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು. ನಂತರ ಇಲ್ಲಿನ ಕಾವೇರಿ ನದಿ ದಂಡೆಯಲ್ಲಿ ನೀರಿನ ರಭಸಕ್ಕೆ ಮನೆಗಳು ಕುಸಿದಿರುವ ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಮಾತನಾಡಿದರು. ಕಾವೇರಿ ನದಿ ದಂಡೆಯಲ್ಲಿರುವ ಮನೆ…

ಬಿಜೆಪಿಯ 20 ಶಾಸಕರು ಜೆಡಿಎಸ್‍ಗೆ ಬರಲು ಸಿದ್ಧ
ಹಾಸನ

ಬಿಜೆಪಿಯ 20 ಶಾಸಕರು ಜೆಡಿಎಸ್‍ಗೆ ಬರಲು ಸಿದ್ಧ

August 11, 2018

ಹಾಸನ: ಬಿಜೆಪಿಯ 20 ಶಾಸಕರು ಜೆಡಿಎಸ್‍ಗೆ ಬರಲು ಸಿದ್ಧರಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಗ್ಯದ ದೃಷ್ಟಿಯಿಂದ ಆಪರೇಷನ್ ಕಮಲ ಮಾಡಲು ನಾವು ಸಿದ್ಧರಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದರು. ನಗರದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್, ಜೆಡಿಎಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಆಪರೇಷನ್ ಕಮಲ…

ಹಾಸನ ನಗರಸಭೆಯ 35 ವಾರ್ಡ್‍ನಲ್ಲೂ ಸ್ಪರ್ಧೆ:ಸಚಿವ ಹೆಚ್.ಡಿ.ರೇವಣ್ಣ
ಹಾಸನ

ಹಾಸನ ನಗರಸಭೆಯ 35 ವಾರ್ಡ್‍ನಲ್ಲೂ ಸ್ಪರ್ಧೆ:ಸಚಿವ ಹೆಚ್.ಡಿ.ರೇವಣ್ಣ

August 9, 2018

ಹಾಸನ: ಆಗಸ್ಟ್ 29ರಂದು ನಡೆಯುವ ಹಾಸನ ನಗರಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗದಂತೆ 35 ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು. ನಗರದ ಎಂ.ಜಿ ರಸ್ತೆಯ ಶ್ರೀ ಆದಿ ಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‍ನಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಜೆಡಿಎಸ್ ನಾಯಕರ ಅಭಿಪ್ರಾಯ ಪಡೆದು ನಗರಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಜಿಲ್ಲೆಯಲ್ಲಿ 2 ನಗರ ಸಭೆ ಸೇರಿದಂತೆ ಪುರಸಭೆಗಳಿಗೆ ಚುನಾವಣೆ ನಡೆಯಲಿದೆ….

ಅಧಿಕಾರಿಗಳ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ
ಹಾಸನ

ಅಧಿಕಾರಿಗಳ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ

August 7, 2018

ಹಾಸನ: ವಿವಿಧ ಇಲಾಖೆ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ನಾನು ಯಾವುದೇ ಇಲಾಖೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕಾರಿಣಿ ಸಭೆಯ ವೊಂದರಲ್ಲಿ ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು. ಯಾವ ಸಚಿವರ ಬಳಿಯೂ ವರ್ಗಾವಣೆ ವಿಚಾರದಲ್ಲಿ ಚರ್ಚಿಸಿಲ್ಲ. ನನ್ನ ವೈಯಕ್ತಿಕ ಕೆಲಸಗಳನ್ನು ಯಾರಿಂದಲೂ ಮಾಡಿಸಿಕೊಂಡಿಲ್ಲ. ನನ್ನ ಇಲಾಖೆಯಲ್ಲಿ ನಡೆದಿರುವ ವರ್ಗಾವಣೆ ದಾಖಲೆಗಳನ್ನು…

ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆ ಪರಿಶೀಲಿಸಿದ ಹೆಚ್.ಡಿ. ರೇವಣ್ಣ: ಅಭಿವೃದ್ಧಿಗೆ ಉತ್ತರ-ದಕ್ಷಿಣ ತಾರತಮ್ಯವಿಲ್ಲ
ಹಾಸನ

ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆ ಪರಿಶೀಲಿಸಿದ ಹೆಚ್.ಡಿ. ರೇವಣ್ಣ: ಅಭಿವೃದ್ಧಿಗೆ ಉತ್ತರ-ದಕ್ಷಿಣ ತಾರತಮ್ಯವಿಲ್ಲ

August 3, 2018

ಹಾಸನ:  ‘ಅಭಿವೃದ್ಧಿ ಕುರಿತು ರಾಜ್ಯ ಸರ್ಕಾರಕ್ಕೆ ಉತ್ತರ, ದಕ್ಷಿಣವೆಂಬ ಯಾವುದೇ ತಾರತಮ್ಯವಿಲ್ಲ. ಜಿಲ್ಲಾ ಅಭಿವೃದ್ಧಿ ನಮ್ಮ ಗುರಿ’ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ಹೊಳೆನರಸೀಪುರ ತಾಲೂಕು ಹುಚ್ಚನ ಕೊಪ್ಪಲು ಏತ ನೀರಾವರಿ ಮೊದಲ ಹಂತದ ಯೋಜನೆ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಿಲ್ಲಿಟ್ಟುಕೊಂಡು ಶ್ರಮಿಸುತ್ತಿದ್ದಾರೆ ಎಂದರು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಅನುದಾನ ನೀಡಿದ್ದು ಹಾಗೂ ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ ಕುಮಾರಸ್ವಾಮಿ, ದೇವೇಗೌಡರ ಕೊಡುಗೆ ಅಪಾರವಾಗಿದೆ….

ಹಾಸನ ಮಾದರಿ ಜಿಲ್ಲೆಯಾಗಿಸುವುದೇ ನಮ್ಮ ಗುರಿ: ಸಚಿವ ಹೆಚ್.ಡಿ.ರೇವಣ್ಣ
ಹಾಸನ

ಹಾಸನ ಮಾದರಿ ಜಿಲ್ಲೆಯಾಗಿಸುವುದೇ ನಮ್ಮ ಗುರಿ: ಸಚಿವ ಹೆಚ್.ಡಿ.ರೇವಣ್ಣ

August 2, 2018

ಹಾಸನ: ಸರ್ವಾಂಗೀಣ ಅಭಿವೃದ್ಧಿ ಮೂಲಕ ಹಾಸನವನ್ನು ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿಸುವುದು ತಮ್ಮ ಗುರಿಯಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು. ಶ್ರವಣಬೆಳಗೊಳದ ಮಠದಲ್ಲಿಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗೆ ಗೌರವ ಸರ್ಮಪಿಸಿ ಮಾತನಾಡಿದ ಸಚಿವರು, ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲಾ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಹೇಳಿದರು. ಶ್ರವಣಬೆಳಗೊಳದಲ್ಲಿ ಬಾಕಿ ಇರುವ 60 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು, ರಾಜ್ಯದಲ್ಲಿ 37 ಸಾವಿರ ಕೋಟಿ…

1 2 3 4 5 6 7
Translate »