Tag: HD Revanna

ಮೈಸೂರು-ಬೆಂಗಳೂರು ಆರು ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸೆಪ್ಟೆಂಬರ್ ನಲ್ಲಿ ಚಾಲನೆ
ಮೈಸೂರು

ಮೈಸೂರು-ಬೆಂಗಳೂರು ಆರು ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸೆಪ್ಟೆಂಬರ್ ನಲ್ಲಿ ಚಾಲನೆ

July 24, 2018

ಬೆಂಗಳೂರು: ಮೈಸೂರು-ಬೆಂಗಳೂರು ನಡುವಿನ 6,800 ಕೋಟಿ ರೂ. ವೆಚ್ಚದ ಆರು ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸೆಪ್ಟೆಂಬರ್‍ನಲ್ಲಿ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ನಡುವಿನ ಆರು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದು, ಸಮ್ಮತಿ ನೀಡಿದ್ದಾರೆ. ಸೆಪ್ಟೆಂಬರ್ ಮೊದಲ ವಾರ ಕಾಮಗಾರಿ ಆರಂಭ ವಾಗಲಿದೆ ಎಂದರು. ಈ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಶೇ. 63ರಷ್ಟು…

ಹಾಸನ-ಬೇಲೂರು-ಚಿಕ್ಕಮಗಳೂರು-ಶೃಂಗೇರಿ ರೈಲ್ವೆ ಕಾಮಗಾರಿ ಅನುಷ್ಠಾನ
ಹಾಸನ

ಹಾಸನ-ಬೇಲೂರು-ಚಿಕ್ಕಮಗಳೂರು-ಶೃಂಗೇರಿ ರೈಲ್ವೆ ಕಾಮಗಾರಿ ಅನುಷ್ಠಾನ

July 21, 2018

ಹಾಸನ:  ಹಾಸನ-ಬೇಲೂರು- ಚಿಕ್ಕಮಗಳೂರು-ಶೃಂಗೇರಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಶೇ. 50:50 ಅನುಪಾತದಲ್ಲಿ ಕೇಂದ್ರದ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳ ಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕೇಂದ್ರದ ಅನುದಾನ ಸಹಭಾಗಿತ್ವದಲ್ಲಿ ಹಲವು ಕಾಮ ಗಾರಿಗಳನ್ನು ಕೈಗೊಳ್ಳಲಿದ್ದು, ಹಾಸನ ದಿಂದ ಹೆಚ್ಚು ರೈಲುಗಳ ಸಂಚಾರಕ್ಕೆ ಮನವಿ ಮಾಡಲಾಗಿದೆ. ರೈಲ್ವೆ ಸಚಿವರು ಸಕಾ ರಾತ್ಮಕವಾಗಿ ಸ್ಪಂದಿಸಿದ್ದಾರೆ. ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ 60 ಕೋಟಿ ರೂ.ವೆಚ್ಚದ 6…

ಸಚಿವ ಹೆಚ್.ಡಿ.ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಸರ್ಕಲ್ ಇನ್ಸ್‍ಪೆಕ್ಟರ್ ಎತ್ತಂಗಡಿ
ಹಾಸನ

ಸಚಿವ ಹೆಚ್.ಡಿ.ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಸರ್ಕಲ್ ಇನ್ಸ್‍ಪೆಕ್ಟರ್ ಎತ್ತಂಗಡಿ

July 18, 2018

ಚನ್ನರಾಯಪಟ್ಟಣ: ಚುನಾವಣಾ ಸಮಯದಲ್ಲಿ ಸಚಿವ ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಹಿನ್ನೆಲೆ ತಮ್ಮ ಪ್ರಭಾವ ಬಳಸಿ ಪಟ್ಟಣದ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ರನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂದು ಜಿಪಂ ಸದಸ್ಯ ಶ್ರೇಯಸ್ ಎಂ.ಪಾಟೀಲ್ ಆರೋಪಿಸಿದ್ದಾರೆ. ಪಟ್ಟಣದ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್‍ರನ್ನು ನಿನ್ನೆ ಒಒಡಿ ಮೂಲಕ ಎತ್ತಂಗಡಿ ಮಾಡಿ, ಕೋಲಾರದ ಜಿಲ್ಲಾ ಸ್ಪೆಷಲ್ ಬ್ರಾಂಚ್‍ಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೇಯಸ್ ಎಂ.ಪಾಟೀಲ್, ಚುನಾವಣಾ ಸಮಯದಲ್ಲಿ ರೇವಣ್ಣ…

ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ
ಮೈಸೂರು

ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ

July 16, 2018

ಮೈಸೂರು: ಕಾಂಕ್ರಿಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸಂಚಾರ ಸ್ಥಗಿತಗೊಂಡಿದ್ದ ಶಿರಾಡಿ ಘಾಟ್ ರಸ್ತೆಯನ್ನು ಇಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ರಾಜಧಾನಿ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು ಸಕಲೇಶಪುರ ತಾಲೂಕು ಕೆಂಪುಹೊಳೆ ಜಂಕ್ಷನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಲೋಕಾರ್ಪಣೆ ಮಾಡಿದರು. ತೀವ್ರ ಹದಗೆಟ್ಟಿದ್ದ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ 12.38 ಕಿ.ಮೀ. ಉದ್ದದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಕಳೆದ ಜನವರಿ 20ರಂದು ಕೈಗೆತ್ತಿಕೊಳ್ಳಲಾಗಿತ್ತು….

ಮೈದುಂಬಿದ ಹೇಮಾವತಿಗೆ ರೇವಣ್ಣ ದಂಪತಿ ಬಾಗಿನ
ಹಾಸನ

ಮೈದುಂಬಿದ ಹೇಮಾವತಿಗೆ ರೇವಣ್ಣ ದಂಪತಿ ಬಾಗಿನ

July 16, 2018

ಸಕಲೇಶಪುರದ: ಮಲೆನಾಡಿನಲ್ಲಿ ಪುನರ್ವಸು ಮಳೆಯ ಅಬ್ಬರದಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಇಂದು ಲೋಕೋಪಯೋಗಿ ಸಚಿವ ರೇವಣ್ಣ ದಂಪತಿ ಇಲ್ಲಿನ ಹೊಳೆಮಲ್ಲೇಶ್ವರ ದೇವಾಲಯದ ಮುಂಭಾಗ ಬಾಗಿನ ಅರ್ಪಿಸಿದರು. ವರುಣನ ಅಬ್ಬರದಿಂದ ಮಲೆನಾಡಿನ ಹಲವೆಡೆ ಕೆರೆ-ಕಟ್ಟೆಗಳು ತುಂಬಿಹರಿಯು ತ್ತಿರುವುದರಿಂದ ಹೇಮಾವತಿ ನದಿಯಲ್ಲೂ ನೀರು ಹೆಚ್ಚಿ ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಲೋಕೋಪಯೋಗಿ ಸಚಿವ ರೇವಣ್ಣ ದಂಪತಿ ಇಲ್ಲಿನ ಹೊಳೆಮಲ್ಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇಗುಲದ ಮುಂಭಾಗ ಹರಿ ಯುವ ನದಿಯಲ್ಲಿ ಬಾಗಿನ ಸಲ್ಲಿಸಿದರು. ಈಶ್ವರ ದೇವಾಲಯ ಮುಳುಗಡೆ: ನದಿ…

ನಾಲ್ಕು ವರ್ಷದ ಬಳಿಕ  ಹೇಮಾವತಿ ಜಲಾಶಯ ಭರ್ತಿ
ಮೈಸೂರು, ಹಾಸನ

ನಾಲ್ಕು ವರ್ಷದ ಬಳಿಕ  ಹೇಮಾವತಿ ಜಲಾಶಯ ಭರ್ತಿ

July 15, 2018

ಹಾಸನ: ತಾಲೂಕಿನ ಗೊರೂರಿನಲ್ಲಿರುವ ಹೇಮಾ ವತಿ ಜಲಾಶಯ 4 ವರ್ಷಗಳ ಬಳಿಕ ಭರ್ತಿಯಾಗಿದ್ದು, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಪತ್ನಿ ಜಿಪಂ ಸದಸ್ಯೆ ಭವಾನಿ ರೇವಣ್ಣ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವ ಮೂಲಕ 15,000ಕ್ಯೂಸೆಕ್ಸ್ ನೀರು ನದಿಗೆ ಬಿಡಲು ಚಾಲನೆ ನೀಡಿದರು. ಜಲಾಶಯ ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ಜುಲೈ ತಿಂಗಳ ಮಧ್ಯದಲ್ಲೇ ಭರ್ತಿಯಾಗಿರುವುದು ವಿಶೇಷ. ಇಂದು ಹೇಮಾವತಿ ಅಣೆಕಟ್ಟೆಯ 6 ಕ್ರೆಸ್ಟ್‍ಗೇಟ್‍ಗಳಿಂದ ನೀರು ಬಿಡಲಾಯಿತು. ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿ…

ಮೈಸೂರು-ಬೆಂಗಳೂರು ವಿಶ್ವದರ್ಜೆ ರಸ್ತೆ 2020ಕ್ಕೆ ಸಂಚಾರಕ್ಕೆ ರೆಡಿ
ಮೈಸೂರು

ಮೈಸೂರು-ಬೆಂಗಳೂರು ವಿಶ್ವದರ್ಜೆ ರಸ್ತೆ 2020ಕ್ಕೆ ಸಂಚಾರಕ್ಕೆ ರೆಡಿ

July 11, 2018

ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಶ್ವದರ್ಜೆ ರಸ್ತೆಯಾಗಿ ಪರಿವರ್ತನೆಗೊಳಿ ಸುವ ಕಾಮಗಾರಿ ಸದ್ಯದಲ್ಲೇ ಆರಂಭಗೊಳ್ಳಲಿದೆ. ಮೈಸೂರು-ಬೆಂಗಳೂರು ಎರಡೂ ಬದಿಯಿಂದ ಏಕಕಾಲಕ್ಕೆ ಕೆಲಸ ಪ್ರಾರಂಭ ಗೊಳ್ಳಲಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 2020ರ ಆರಂಭಕ್ಕೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ರಾಜ್ಯ ಲೋಕೋಪಯಾಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ. ವಿಧಾನ ಪರಿಷತ್‍ನಲ್ಲಿ ಸಂದೇಶ್ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಗೆ ಒಟ್ಟಾರೆ 6000 ಕೋಟಿ ರೂ. ವೆಚ್ಚ ತಗುಲಲಿದ್ದು, ಇದರಲ್ಲಿ ರಸ್ತೆ ಕಾಮಗಾರಿಗೆ 4153 ಕೋಟಿ ಹಾಗೂ ಉಳಿದ…

ಹನೂರು-ಕೊಳ್ಳೇಗಾಲ ರಸ್ತೆಯ ದುರಸ್ತಿಗೆ ಕ್ರಮ ಸಂದೇಶ್ ಪ್ರಸ್ತಾಪಕ್ಕೆ” ಸಚಿವ ರೇವಣ್ಣ ಭರವಸೆ
ಮೈಸೂರು

ಹನೂರು-ಕೊಳ್ಳೇಗಾಲ ರಸ್ತೆಯ ದುರಸ್ತಿಗೆ ಕ್ರಮ ಸಂದೇಶ್ ಪ್ರಸ್ತಾಪಕ್ಕೆ” ಸಚಿವ ರೇವಣ್ಣ ಭರವಸೆ

July 11, 2018

ಬೆಂಗಳೂರು: ಕೊಳ್ಳೇಗಾಲ ದಿಂದ ಹನೂರುವರೆಗಿನ ರಾಜ್ಯ ಹೆದ್ದಾರಿಯು 24.10 ಕಿ.ಮೀ. ಉದ್ದ ಇದ್ದು, ಇತ್ತೀಚಿನ ಸತತ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿದೆ. ಈ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು. ಕೊಳ್ಳೇಗಾಲ-ಹನೂರು-ಮಲೆಮಹ ದೇಶ್ವರನ ಬೆಟ್ಟ ರಸ್ತೆಯು ಗುಂಡಿಬಿದ್ದು ಸಾರ್ವಜನಿಕ ಹಾಗೂ ಪ್ರವಾಸಿಗರ ವಾಹನ ಗಳ ಸಂಚಾರಕ್ಕೆ ತೊಂದರೆ ಆಗಿರುವುದರ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. 2017-18 ನೇ ಸಾಲಿನಲ್ಲಿ ಕೊಳ್ಳೇಗಾಲ-…

ನೀರಿಗಾಗಿ ಕೈಕಟ್ಟಿ ನಿಲ್ಲುವ ದುಸ್ಥಿತಿ ನಿರ್ಮಾಣ: ಕೇಂದ್ರದ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಸಮಾಧಾನ
ಹಾಸನ

ನೀರಿಗಾಗಿ ಕೈಕಟ್ಟಿ ನಿಲ್ಲುವ ದುಸ್ಥಿತಿ ನಿರ್ಮಾಣ: ಕೇಂದ್ರದ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಸಮಾಧಾನ

July 9, 2018

ಬೇಲೂರು: ರಾಜ್ಯದ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ, ರೈತರು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ನಾಲ್ಕು ಜಲಾಶಯ ಇದ್ದರೂ ನೀರಿಗಾಗಿ ಕೇಂದ್ರ ಸರ್ಕಾರದ ಅನುಮತಿಗಾಗಿ ಕೈಕಟ್ಟಿ ನಿಲ್ಲಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಹಗರೆ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕಾಮ ಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.ರೈತರ 34 ಸಾವಿರ ಕೋಟಿ ರೂ. ಸಾಲವನ್ನು ಒಂದೇ ಬಾರಿ ಮನ್ನಾ…

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರಿಗೆ  ಬೆಂಗಳೂರಲ್ಲಿರಲು ಮನೆಯಿಲ್ಲ!?
ಮೈಸೂರು

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರಿಗೆ ಬೆಂಗಳೂರಲ್ಲಿರಲು ಮನೆಯಿಲ್ಲ!?

July 5, 2018

ನಿತ್ಯ ಹೊಳೆನರಸೀಪುರ-ಬೆಂಗಳೂರಿಗೆ ಅಪ್ ಅಂಡ್ ಡೌನ್ ಬೆಂಗಳೂರು: ಲೋಕೋಪಯೋಗಿ ಸಚಿವ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪುತ್ರ ಹೆಚ್.ಡಿ. ರೇವಣ್ಣ ಅವರಿಗೆ ಬೆಂಗಳೂರಿನಲ್ಲಿ ಮನೆ ಇಲ್ಲವಂತೆ. ಮನೆ ಇಲ್ಲದ ಕಾರಣ ಪ್ರತಿ ನಿತ್ಯ ರಾಜಧಾನಿಯಿಂದ 172 ಕಿಲೋ ಮೀಟರ್ ದೂರವಿರುವ ಹೊಳೆನರಸೀಪುರದಿಂದ ವಿಧಾನ ಸೌಧಕ್ಕೆ ಬಂದು ಹೋಗುತ್ತಿದ್ದಾರೆ. ರಾಜ್ಯ ಸರ್ಕಾರ ರೇವಣ್ಣ ಅವರಿಗೆ ಕುಮಾರ ಪಾರ್ಕ್‍ನಲ್ಲಿ ನಿವಾಸ ಮಂಜೂರು ಮಾಡಿದೆ. ಇವರಿಗೆ ನೀಡಿರುವ ನಿವಾಸವನ್ನು ಹಿಂದಿನ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ತೆರವುಗೊಳಿಸಿಲ್ಲ. ಅವರು…

1 3 4 5 6 7
Translate »