ಹನೂರು-ಕೊಳ್ಳೇಗಾಲ ರಸ್ತೆಯ ದುರಸ್ತಿಗೆ ಕ್ರಮ ಸಂದೇಶ್ ಪ್ರಸ್ತಾಪಕ್ಕೆ” ಸಚಿವ ರೇವಣ್ಣ ಭರವಸೆ
ಮೈಸೂರು

ಹನೂರು-ಕೊಳ್ಳೇಗಾಲ ರಸ್ತೆಯ ದುರಸ್ತಿಗೆ ಕ್ರಮ ಸಂದೇಶ್ ಪ್ರಸ್ತಾಪಕ್ಕೆ” ಸಚಿವ ರೇವಣ್ಣ ಭರವಸೆ

July 11, 2018

ಬೆಂಗಳೂರು: ಕೊಳ್ಳೇಗಾಲ ದಿಂದ ಹನೂರುವರೆಗಿನ ರಾಜ್ಯ ಹೆದ್ದಾರಿಯು 24.10 ಕಿ.ಮೀ. ಉದ್ದ ಇದ್ದು, ಇತ್ತೀಚಿನ ಸತತ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿದೆ. ಈ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು.

ಕೊಳ್ಳೇಗಾಲ-ಹನೂರು-ಮಲೆಮಹ ದೇಶ್ವರನ ಬೆಟ್ಟ ರಸ್ತೆಯು ಗುಂಡಿಬಿದ್ದು ಸಾರ್ವಜನಿಕ ಹಾಗೂ ಪ್ರವಾಸಿಗರ ವಾಹನ ಗಳ ಸಂಚಾರಕ್ಕೆ ತೊಂದರೆ ಆಗಿರುವುದರ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.

2017-18 ನೇ ಸಾಲಿನಲ್ಲಿ ಕೊಳ್ಳೇಗಾಲ- ಹನೂರು ರಸ್ತೆಯ ನಿರ್ವಹಣೆಗೆ 56.30 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ, ಪ್ರಸ್ತುತ ಸಾಲಿನಲ್ಲಿ ಕೊಳ್ಳೇಗಾಲ-ಹನೂರು ನಡುವೆ 5.50 ಕಿಮೀ ಉದ್ದದ ಘಾಟ್ ರಸ್ತೆಯಲ್ಲಿ ಮುಂಗಾರುಪೂರ್ವ ದಿನಗಳ ನಿರ್ವಹಣೆಗೆ 0.64 ಲಕ್ಷ ರೂ. ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಗಿದೆ. ಉಳಿ ದಂತೆ ಶ್ರೀರಂಗಪಟ್ಟಣ-ಮಲೆಮಹದೇಶ್ವರ ಬೆಟ್ಟದ ರಾಜ್ಯ ಹೆದ್ದಾರಿಯಲ್ಲಿ 67 ಕಿ.ಮೀ. ಯಿಂದ 85.60 ಕಿಮೀ ವರೆಗಿನ ರಸ್ತೆಯ ಮುಂಗಾರು ಪೂರ್ವ ದಿನಗಳ ನಿರ್ವ ಹಣೆಗೆ 4.65 ಲಕ್ಷ ರೂ. ಅಂದಾಜುಗಳು ಅನುಮೋದನೆ ಆಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಗುತ್ತಿಗೆದಾರರನ್ನು ನೇಮಿಸಿದ ಕೂಡಲೇ ಸದರಿ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ತುರ್ತಾಗಿ ಕೈಗೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗು ವುದೆಂದು ಸಂದೇಶ್ ನಾಗರಾಜ್ ಅವರಿಗೆ ಸಚಿವರು ತಿಳಿಸಿದರು.

ಪ್ರಸ್ತಾವನೆ ಇಲ್ಲ: ಪೊಲೀಸ್ ಕಾನ್‍ಸ್ಟೇಬಲ್ ಮತ್ತು ಹೆಡ್ ಕಾನ್‍ಸ್ಟೇಬಲ್ ವೃಂದದ ವರು, ವಾರದ ಬಿಡುವಿನ ದಿನಗಳಲ್ಲಿ (ವೀಕ್ಲಿ ಆಫ್) ರಜೆ ಪಡೆಯದೆ, ಇಲಾಖಾ ಕೆಲಸ ಮತ್ತು ಅಧಿಕೃತ ಕೆಲಸಕಾರ್ಯ ಗಳನ್ನು ನಿರ್ವಹಿಸಿದಲ್ಲಿ, ಅವರಿಗೆ 12-6-2014ರಲ್ಲಿ ಹೊರಡಿಸಿರುವ ಆದೇಶದ ಅನ್ವಯ 200/- (ಇನ್ನೂರು) ರೂಗಳ ವಾರದ ರಜಾ ಭತ್ಯೆಯನ್ನು ನೀಡುತ್ತಿದ್ದು, ಬಿಡುವಿನ ದಿನದ ಕಾರ್ಯನಿರ್ವಹಣೆಗೆ ಒಂದು ದಿನದ ವೇತನ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು.

ವಾರದ ಬಿಡುವಿನ ದಿನದ ಕಾರ್ಯ ನಿರ್ವಹಣೆಗೆ ಪೊಲೀಸ್ ಕಾನ್‍ಸ್ಟೇಬಲ್ ಮತ್ತು ಹೆಡ್ ಕಾನ್‍ಸ್ಟೇಬಲ್‍ಗಳಿಗೆ ಒಂದು ದಿನದ ವೇತನ ನೀಡಬೇಕೆಂದು ಸಂದೇಶ್ ನಾಗರಾಜ್ ಕೇಳಿದ್ದ ಪ್ರಶ್ನೆಗೆ ಸಚಿವರು ಪ್ರತಿಕ್ರಿಯೆ ನೀಡಿದರು.

Translate »