ವಿದ್ಯಾರ್ಥಿಗಳಿಬ್ಬರ ಬಲಿ ಪಡೆದ ಹುಂಡೈ ಕ್ರೆಟಾ ಕಾರಿಗಾಗಿ ತೀವ್ರ ಶೋಧ
ಮೈಸೂರು

ವಿದ್ಯಾರ್ಥಿಗಳಿಬ್ಬರ ಬಲಿ ಪಡೆದ ಹುಂಡೈ ಕ್ರೆಟಾ ಕಾರಿಗಾಗಿ ತೀವ್ರ ಶೋಧ

July 11, 2018
  •  ಘಟನೆಯ ಮರುದಿನ ಬೆಂಗಳೂರಿನತ್ತ ತೆರಳಿದ ಮಾಹಿತಿ ಲಭ್ಯ
  • ಸಿಸಿ ಕ್ಯಾಮರಾ ಫುಟೇಜ್ ಸಂಗ್ರಹಕ್ಕೆ ಮುಂದಾದ ಪೊಲೀಸರು

ಮೈಸೂರು: ಚಾಮುಂಡಿಬೆಟ್ಟದ ಐ-ವಾಚ್ ಟವರ್ ಬಳಿ ಬುಲೆಟ್‍ಗೆ ಡಿಕ್ಕಿ ಹೊಡೆದು, ಇಬ್ಬರು ವಿದ್ಯಾರ್ಥಿಗಳ ಬಲಿ ಪಡೆದ ಕ್ರೆಟಾ ಕಾರು ಪತ್ತೆಗೆ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ನಡುವೆ ಸಾರ್ವಜನಿಕರೊಬ್ಬರು ನೀಡಿದ ಸುಳಿವಿನ ಮೇರೆಗೆ ಮೈಸೂರು-ಬೆಂಗಳೂರು ರಸ್ತೆಯ ಪೊಲೀಸ್ ಚೆಕ್‍ಪೋಸ್ಟ್ ಸೇರಿ ದಂತೆ ವಿವಿಧೆಡೆ ಇರುವ ಸಿಸಿ ಕ್ಯಾಮರಾ ಗಳ ಫುಟೇಜ್ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಗುರುವಾರ ಸಂಜೆ ಸಾರಿಗೆ ಸಂಸ್ಥೆ ಬಸ್ಸನ್ನು ಹಿಂದಿಕ್ಕಿ ಮುಂದೆ ಸಾಗುವಾಗ ಬುಲೆಟ್‍ಗೆ ಡಿಕ್ಕಿ ಹೊಡೆದು, ಬೈಕ್ ಸವಾರರನ್ನು 150 ಅಡಿ ದೂರ ಎಳೆದುಕೊಂಡು ಹೋಗಿರು ವುದು ಹುಂಡೈ ಕ್ರೆಟಾ ಕಾರೆಂಬ ಸುಳಿವು ದೊರೆತಿದೆ. ನಂದಿ ಮೂರ್ತಿಯ ಕಡೆಗೆ ಸಾಗಿದ ಆ ಕಾರು ಉತ್ತನಹಳ್ಳಿ ಕಡೆಯ ರಸ್ತೆ ಮೂಲಕ ನಂಜನಗೂಡು ರಸ್ತೆಯಲ್ಲಿ ಹಾದು ಹೋಗಿದೆ. ಅಪಘಾತ ನಡೆದ ಮರು ದಿನ ಬೆಳಿಗ್ಗೆ 9.45ರಲ್ಲಿ ಮುಂಭಾಗ ಹಾಗೂ ಬಲ ಬದಿಯಲ್ಲಿ ಹಾನಿಗೊಳಗಾಗಿದ್ದ ಕ್ರೆಟಾ ಕಾರು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಜಂಕ್ಷನ್ ಮೂಲಕ ಬೆಂಗಳೂರು ರಸ್ತೆಯಲ್ಲಿ ಹೋಗುತ್ತಿದ್ದನ್ನು ನೋಡಿರುವ ಸಾರ್ವ ಜನಿಕರೊಬ್ಬರು ಸೋಮವಾರ ಪೊಲೀಸ ರಿಗೆ ಮಾಹಿತಿ ನೀಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಿದ್ಧಾರ್ಥನಗರ ಸಂಚಾರ ಠಾಣೆಯ ಚೆಕ್ ಪೋಸ್ಟ್ ಹಾಗೂ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜಂಕ್ಷನ್‍ನಲ್ಲಿರುವ ಸಿಸಿ ಕ್ಯಾಮರಾಗಳ ಫುಟೇಜನ್ನು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇ ಶ್ವರ ರಾವ್ ಅವರ ಸೂಚನೆಯ ಮೇರೆಗೆ ಮಂಗಳವಾರ ಪರಿಶೀಲಿಸಿದ್ದಾರೆ. ಈ ವೇಳೆ ಶುಕ್ರವಾರ ಬೆಳಿಗ್ಗೆ 9.45ರಿಂದ 10 ಗಂಟೆಯೊಳಗೆ ಹುಂಡೈ ಕ್ರೆಟಾ ಕಾರೊಂದು ಬೆಂಗಳೂರಿನತ್ತ ಹೋಗು ತ್ತಿರುವುದು ಕಂಡು ಬಂದಿದೆ. ಆ ಕಾರಿನ ಮುಂಭಾಗದ ಲೈಟ್, ಬಾನೆಟ್, ಸೈಡ್ ಮಿರರ್‍ಗೆ ಹಾನಿಯಾಗಿರುವುದು ಕಂಡು ಬಂದಿದೆ. ಈ ದೃಶ್ಯಾವಳಿಯನ್ನು ಸೂಕ್ಷ್ಮ ವಾಗಿ ಪರಿಶೀಲಿಸಿದ ಪೊಲೀಸರಿಗೆ ಕಾರಿನ ನಂಬರ್ ಸರಿಯಾಗಿ ಗೋಚರಿ ಸಿಲ್ಲ. ಆದರೆ ಕಾರಿಗೆ ಹಾನಿಯಾಗಿರು ವುದು ಮಾತ್ರ ಸ್ಪಷ್ಟವಾಗಿ ಕಂಡುಬಂದಿದೆ. ಇದರಿಂದ ಶ್ರೀರಂಗಪಟ್ಟಣ, ಮಂಡ್ಯ ಸೇರಿದಂತೆ ಮಾರ್ಗ ಮಧ್ಯೆ ಇರುವ ಸಿಸಿ ಕ್ಯಾಮರಾಗಳಲ್ಲಿ ಕ್ರೆಟಾ ಕಾರಿನ ನಂಬರ್ ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಈ ಪ್ರಕರಣದಲ್ಲಿ ಜೆಎಸ್‍ಎಸ್ ಕಾಲೇಜಿನ ವಿದ್ಯಾರ್ಥಿಗಳಾದ ಅರವಿಂದ್ ರಾವ್ ಹಾಗೂ ಎಂ.ಸಿ. ನಮನ ಮೃತಪಟ್ಟಿ ದ್ದರು. ನಮನಳ ವಿವಿಧ ಅಂಗಾಂಗಗಳನ್ನು ದಾನ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »