ಹಿಟ್ ಅಂಡ್ ರನ್ ಪ್ರಕರಣ: ಚಾಮುಂಡಿಬೆಟ್ಟದಲ್ಲಿ ಸಂಜೆ ವೇಳೆ ಜಾಲಿ ರೈಡ್‍ಗೆ ಕಡಿವಾಣ
ಮೈಸೂರು

ಹಿಟ್ ಅಂಡ್ ರನ್ ಪ್ರಕರಣ: ಚಾಮುಂಡಿಬೆಟ್ಟದಲ್ಲಿ ಸಂಜೆ ವೇಳೆ ಜಾಲಿ ರೈಡ್‍ಗೆ ಕಡಿವಾಣ

July 11, 2018
  •  ಪೆಟ್ರೋಲ್ ಉಳಿಸಲು ಇಂಜಿನ್ ಆಫ್ ಮಾಡಿಕೊಂಡು ಬರುವ ಬೈಕ್ ಸವಾರರಿಗೆ ಶಾಸ್ತಿ
  • ಪ್ರತಿದಿನ ಸಂಜೆ ತಪಾಸಣೆ ನಡೆಸಲು ನಿರ್ಧಾರ
  • ದೇವಾಲಯಕ್ಕೆ ಹೋಗುವ ಭಕ್ತರು, ಪ್ರವಾಸಿಗರಿಗೆ ಮಾತ್ರ ಇನ್ನು ಮುಂದೆ ಸಂಜೆ ಪ್ರವೇಶ ಅವಕಾಶ

ಮೈಸೂರು:  ಹಿಟ್ ಅಂಡ್ ರನ್ ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿ ಗಳು ಬಲಿಯಾದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಸಂಜೆ ವೇಳೆ ಜಾಲಿ ರೈಡ್‍ಗೆ ಹೋಗುವುದನ್ನು ನಿರ್ಬಂಧಿಸಲು ಪೊಲೀಸರು ಮುಂದಾಗಿದ್ದು, ಪ್ರತಿದಿನ ತಾವರೆಕಟ್ಟೆ ಬಳಿ ವಾಹನ ತಪಾಸಣೆ ನಡೆಸಿ, ಭಕ್ತರು ಹಾಗೂ ಪ್ರವಾಸಿಗರಿಗೆ ಮಾತ್ರ ಈ ವೇಳೆ ಬೆಟ್ಟಕ್ಕೆ ಅವಕಾಶ ನೀಡಲು ಉದ್ದೇಶಿಸಲಾಗಿದೆ.

ಪ್ರತಿದಿನ ಸಂಜೆ ಆರು ಗಂಟೆ ನಂತರ ಯುವಕ-ಯುವತಿಯರು ದ್ವಿಚಕ್ರ ವಾಹನ ಗಳಲ್ಲಿ ಚಾಮುಂಡಿಬೆಟ್ಟಕ್ಕೆ ಜಾಲಿ ರೈಡ್‍ಗೆ ಹೋಗುವುದು ಮಾಮೂಲಾಗಿದೆ. ವಿವಿಧ ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿ ನಿಲಯ, ಪಿಜಿಗಳಲ್ಲಿರುವವರೇ ಹೆಚ್ಚಾಗಿ ಈ ವೇಳೆ ಬೈಕ್, ಸ್ಕೂಟರ್‍ಗಳಲ್ಲಿ ಜೋಡಿ ಯಾಗಿ ಚಾಮುಂಡಿಬೆಟ್ಟಕ್ಕೆ ಹೋಗುತ್ತಿರುವು ದನ್ನು ಗುರುತಿಸಿರುವ ಪೊಲೀಸರು, ಕಳೆದ ಗುರುವಾರ ನಡೆದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಮರು ಕಳಿಸದಂತೆ ಕಟ್ಟೆಚ್ಚರಕ್ಕೆ ನಿರ್ಧರಿಸಿದ್ದಾರೆ.

ಮೋಜಿಗಾಗಿ ಬರುವವರು: ಪ್ರತಿ ಸಂಜೆ ಬೈಕ್, ಸ್ಕೂಟರ್‍ಗಳಲ್ಲಿ ಬರುವ ಯುವ ಜೋಡಿಗಳು ಅತೀ ವೇಗ ಹಾಗೂ ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡು ತ್ತಾರೆ. ತಿರುವು ಇದ್ದರೂ ಅಜಾಗರೂಕ ಚಾಲನೆ, ಓವರ್‍ಟೇಕ್, ಸ್ಟಂಟ್ ಮಾಡುವುದು ಸೇರಿದಂತೆ ಇತರೆ ಸಾಹಸಕ್ಕೆ ಮುಂದಾಗಿ ಅಮಾಯಕರಿಗೆ ತೊಂದರೆ ನೀಡುತ್ತಿರುವ ಘಟನೆಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಇದೀಗ ಸಿದ್ದಾರ್ಥನಗರ ಸಂಚಾರ ಪೊಲೀಸರು ಚಾಮುಂಡಿಬೆಟ್ಟಕ್ಕೆ ಸಂಜೆ ಬರುವವರ ಮೇಲೆ ನಿಗಾ ವಹಿಸಿದ್ದಾರೆ.

ಜಿಪುಣತನಕ್ಕೆ ಬೀಳಲಿದೆ ದಂಡ: ಚಾಮುಂಡಿಬೆಟ್ಟಕ್ಕೆ ಹೋಗುವವರು ವಾಪಸ್ಸಾ ಗುವಾಗ ಪೆಟ್ರೋಲ್ ಉಳಿಸಲು, ಇಂಜಿನ್ ಆಫ್ ಮಾಡಿಕೊಂಡು ಬರುವುದು ಮಾಮೂಲಾಗಿದೆ. ರಾತ್ರಿ ವೇಳೆ ಸಹ ಈ ರೀತಿ ವಾಹನ ಚಾಲನೆ, ಇತರರ ಪ್ರಾಣಕ್ಕೆ ಕುತ್ತು ತರುವ ಕೃತ್ಯಗಳು ದ್ವಿಚಕ್ರ ವಾಹನ ಸವಾರರಿಂದ ನಡೆಯುತ್ತಿರುವುದರಿಂದ ಅಂತಹವರಿಗೆ ಸರಿಯಾಗಿ ಬರೆ ಎಳೆಯಲು ಸಿದ್ಧಾರ್ಥನಗರ ಪೊಲೀಸರು ನಿರ್ಧರಿಸಿದ್ದಾರೆ.

ಅಪಘಾತ ನಡೆದರೆ ನೆರವಾಗಿ: ಚಾಮುಂಡಿ ಬೆಟ್ಟ ಸೇರಿದಂತೆ ಯಾವುದೇ ಸ್ಥಳದಲ್ಲಿ ಅಪಘಾತ ಸಂಭವಿಸಿದರೆ ಗಾಯಾಳುಗಳ ರಕ್ಷಣೆಗೆ ಸಾರ್ವಜನಿಕರು ಮುಂದಾಗು ವಂತೆ ಪೊಲೀಸರು ಮನವಿ ಮಾಡಿದ್ದಾರೆ. ಕಳೆದ ಗುರುವಾರ ಸಂಜೆ ನಡೆದ ಅಪಘಾತದ ವೇಳೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಲು ತುರ್ತಾಗಿ ನೆರವಿಗೆ ಬಾರದೆ ಇರುವ ಅಂಶ ತಿಳಿದು ಬಂದಿದೆ.

ಬುಲೆಟ್ ಸವಾರ ಅರವಿಂದ್‍ರಾವ್‍ನನ್ನು ಕಾರು ಎಳೆದು ಸಾಗಿದೆ. ಬಳಿಕ ಕಾರಿನ ಚಾಲಕ ಕಾರು ನಿಲ್ಲಿಸಿ ಬೈಕ್ ಸವಾರನನ್ನು ಕಾರ್ ನಿಂದ ಬೇರ್ಪಡಿಸಿ ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ವೇಳೆ ಮಾರ್ಗ ಮಧ್ಯೆ ಬಂದ ಇತರ ವಾಹನ ಸವಾರರು ಗಾಯಾಳುಗಳ ನೆರವಿಗೆ ಬಾರದೆ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಅಪಘಾತ ನಡೆದ ವಿಷಯ ತಿಳಿದ ಕೂಡಲೇ ಸಿದ್ಧಾರ್ಥನಗರ ಸಂಚಾರ ಠಾಣೆಯ ಇನ್ಸ್‍ಪೆಕ್ಟರ್ ಎನ್. ಮುನಿಯಪ್ಪ, ಪೇದೆಗಳಾದ ಶ್ರೀಕಂಠ ಮೂರ್ತಿ, ಕುಮಾರ ಸ್ವಾಮಿ, ಹೋಮ್ ಗಾರ್ಡ್ ಗೋಪಾಲ್ ಅವರು ಗಾಯಾಳುಗಳನ್ನು ಇಲಾಖೆಯ ಜೀಪ್‍ನಲ್ಲಿ ಹಾಕಿಕೊಂಡು ಬಂದು ಕುರುಬಾರಹಳ್ಳಿ ವೃತ್ತದ ಬಳಿ 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾರ್ವ ಜನಿಕರು ಗಾಯಾಳುಗಳಿಗೆ ನೆರವಾಗಿದ್ದರೆ ಪೊಲೀಸರು ಅಪಘಾತವೆಸಗಿದ ಕಾರನ್ನು ಅಂದೇ ಪತ್ತೆ ಮಾಡಬಹುದಿತ್ತು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Translate »