Tag: Hunsur Road

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ವ್ಯಕ್ತಿ ಸಾವು
ಮೈಸೂರು

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ವ್ಯಕ್ತಿ ಸಾವು

December 4, 2020

ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ಘಟನೆ ಮೈಸೂರು, ಡಿ.3(ಆರ್‍ಕೆ)-ಕಾರೊಂದು ವಿದ್ಯುತ್ ಕಂಭಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಮೈಸೂರಿನ ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಬುಧವಾರ ಮಧ್ಯ ರಾತ್ರಿ ಸಂಭವಿಸಿದೆ. ಮೂಲತಃ ಹಾಸನ ಜಿಲ್ಲೆಯವರಾದ ಮೈಸೂರಿನ ಬೋಗಾದಿ ನಿವಾಸಿ ಚಿರಂಜೀವಿ (34) ಸಾವನ್ನಪ್ಪಿದವರು. ಕಾರಿನಲ್ಲಿದ್ದ ಅಜೀಜ್ ಅಹಮದ್ ಮತ್ತು ಪುನೀತ್ ಎಂಬು ವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೇಂಟ್ ಜೋಸೆಫ್ ಕಾಲೇಜು ಕಡೆಯಿಂದ ಫೋರ್ಡ್…

ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಸರಣಿ ಅಪಘಾತ
ಮೈಸೂರು

ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಸರಣಿ ಅಪಘಾತ

December 6, 2018

ಮೈಸೂರು:  ಮೈಸೂರಿನ ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ಕು ಕಾರುಗಳು ಜಖಂಗೊಂಡಿದ್ದು ಚಾಲಕರು ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಹುಂಡೈ ಕ್ರೆಟಾ (ಕೆಎಲ್58, ಆರ್.555), ಹುಂಡೈ ಐ-10 (ಕೆಎ.09, ಎಂಎ 9664), ಮಾರುತಿ ಸುಜುಕಿ ಇಕೋ (ಕೆಎ 09, ಎಂಬಿ 5063) ಹಾಗೂ ಫೋರ್ಡ್ ಫಿಯಸ್ಟಾ (ಕೆಎ 17, ಎಂ.9487) ಕಾರುಗಳು ಜಖಂಗೊಂಡಿವೆ. ಘಟನೆಯಿಂದಾಗಿ ಪಡುವಾರಹಳ್ಳಿ ಬಳಿ ಭೂದೇವಿ ಫಾರಂ ಎದುರು ಸುಮಾರು ಅರ್ಧ ಗಂಟೆ ವಾಹನ ಸಂಚಾರಕ್ಕೆ…

ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿ ಐದು ಮರ ತೆರವುಗೊಳಿಸಲು ನಿರ್ಧಾರ
ಮೈಸೂರು

ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿ ಐದು ಮರ ತೆರವುಗೊಳಿಸಲು ನಿರ್ಧಾರ

July 13, 2018

ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಮುಂಭಾಗದಿಂದ ಪಡುವಾರಹಳ್ಳಿ ಸಿಗ್ನಲ್ ಜಂಕ್ಷನ್‍ವರೆಗಿನ ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿಗೆ ಅಡ್ಡಿಯಾಗಿರುವ 5 ಮರಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಮರಗಳ ತೆರವಿಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧವಿದ್ದ ಹಿನ್ನೆಲೆಯಲ್ಲಿ ಯೋಜಿತ ರೀತಿಯಲ್ಲಿ ಕಾಮಗಾರಿ ಸಾಧ್ಯವಾಗಿರಲಿಲ್ಲ. ಹಾಗಾಗಿ ಸಂಸದ ಪ್ರತಾಪ್‍ಸಿಂಹ ಅವರು ಗುರುವಾರ ಮೈಸೂರು ಗ್ರಾಹಕರ ಪರಿಷತ್ ಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಹಾಗೂ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕೇವಲ 5 ಮರಗಳ ತೆರವಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಂಸದ…

ಬೈಕಿಗೆ ಸಾರಿಗೆ ಬಸ್ ಡಿಕ್ಕಿ: ಸವಾರ ಸಾವು
ಮೈಸೂರು

ಬೈಕಿಗೆ ಸಾರಿಗೆ ಬಸ್ ಡಿಕ್ಕಿ: ಸವಾರ ಸಾವು

July 6, 2018

ಮೈಸೂರು: ಕೆ.ಎಸ್.ಆರ್.ಟಿ.ಸಿ ಗ್ರಾಮಾಂತರ ಸಾರಿಗೆ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಳಿಕೆರೆ ಸಮೀಪ ಹುಣಸೂರು ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಹುಣಸೂರು ತಾಲೂಕಿನ ಮಧುಗಿರಿಕೊಪ್ಪಲು ನಿವಾಸಿ ನಂಜಪ್ಪಾಚಾರಿ ಅವರ ಮಗ ದೇವರಾಜಚಾರಿ(25) ಸಾವನ್ನಪ್ಪಿದವರು. ಬೆಳವಾಡಿ ಬಳಿಯ ಟೈಟನ್ ವಾಲ್ವ್ ಉದ್ಯೋಗಿಯಾಗಿದ್ದ ಅವರು, ಬೈಕ್ (ಕೆಎ 45, ವೈ 7119)ನಲ್ಲಿ ಬರುತ್ತಿದ್ದಾಗ ಹುಣಸೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ಮಂಡ್ಯ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿಬಸ್ (ಕೆಎ 11, ಎಫ್ 0421) ಬಿಳಿಕೆರೆ ಸಮೀಪ…

‘ಸಿಂಹ’ ಘರ್ಜನೆ ಫಲ: ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಆರಂಭ
ಮೈಸೂರು

‘ಸಿಂಹ’ ಘರ್ಜನೆ ಫಲ: ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಆರಂಭ

June 24, 2018

ಮೈಸೂರು: ಮೈಸೂರಿನ ಜಲದರ್ಶಿನಿ ಬಳಿ ಅಪಘಾತ ವಲಯ ಎನಿಸಿದ್ದ ಹುಣಸೂರು ರಸ್ತೆ ತಿರುವನ್ನು ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಈಗ ಆರಂಭವಾಗಿದೆ. ತಿರುವನ್ನು ನೇರಗೊಳಿಸಿ ಅಪಘಾತಗಳನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳು 12 ಕೋಟಿ ರೂ. ಕೇಂದ್ರ ರಸ್ತೆ ನಿಧಿಯಡಿ ಯೋಜನೆ ರೂಪಿಸಿದ್ದ ರಾದರೂ, ಕಡೆಗೆ ಕೇವಲ ರಸ್ತೆ ಅಗಲೀಕರಣ ಗೊಳಿಸಿ, ಡಾಂಬ ರೀಕರಣ ಮಾಡಿ ಸುಮ್ಮನಾಗಿದ್ದರು. ರಸ್ತೆ ನೇರಗೊಳಿಸಿಲ್ಲ, ಇಕ್ಕೆಲಗಳಲ್ಲಿ ಪಾದಚಾರಿ ರಸ್ತೆಗೆ ಜಾಗವನ್ನೂ ಬಿಟ್ಟಿಲ್ಲ. ಇದರಿಂದ ಇಲ್ಲಿರುವ ಮಹಾರಾಣಿ ಕಾಮರ್ಸ್ ಕಾಲೇಜು…

ಮೆಟ್ರೊಪೋಲ್‍ನಿಂದ ಹಿನಕಲ್‍ವರೆಗೂ ರಸ್ತೆ ಡಾಂಬರೀಕರಣವಾಗಿದೆ ರಾಷ್ಟ್ರೀಯ ಹೆದ್ದಾರಿ ಎಇಇ ಹೆಚ್.ಪಿ. ಚಂದ್ರಪ್ಪ ಸ್ಪಷ್ಟನೆ
ಮೈಸೂರು

ಮೆಟ್ರೊಪೋಲ್‍ನಿಂದ ಹಿನಕಲ್‍ವರೆಗೂ ರಸ್ತೆ ಡಾಂಬರೀಕರಣವಾಗಿದೆ ರಾಷ್ಟ್ರೀಯ ಹೆದ್ದಾರಿ ಎಇಇ ಹೆಚ್.ಪಿ. ಚಂದ್ರಪ್ಪ ಸ್ಪಷ್ಟನೆ

June 24, 2018

ಮೈಸೂರು:  ಜಲ ದರ್ಶಿನಿ ಬಳಿ ಹುಣಸೂರು ರಸ್ತೆ ತಿರುವು ನೇರಗೊಳಿಸಲು ಮಂಜೂರಾದ ಕೇಂದ್ರ ರಸ್ತೆ ಅನುದಾನದಲ್ಲೇ ಮೆಟ್ರೊಪೋಲ್ ಸರ್ಕಲ್‍ನಿಂದ ಹಿನಕಲ್‍ವರೆಗೆ 5.45 ಕಿ.ಮೀ. ಡಾಂಬರೀಕರಣಗೊಳಿಸಿ ಅಭಿವೃದ್ಧಿಗೊಳಿ ಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಪಿ.ಚಂದ್ರಪ್ಪ ತಿಳಿಸಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಜಲದರ್ಶಿನಿ ಅತಿಥಿ ಗೃಹದಿಂದ ಪಡುವಾರಹಳ್ಳಿಯ ಮೂಳೆ ಆಸ್ಪತ್ರೆ ಕ್ರಾಸ್‍ವರೆಗೆ ಹುಣಸೂರು ರಸ್ತೆಯ ಅಪ ಘಾತ ತಿರುವನ್ನು ನೇರಗೊಳಿಸಲೆಂದು ಸೆಂಟ್ರಲ್ ರೋಡ್ ಫಂಡ್ ಅಡಿ 2016ರ ನವೆಂಬರ್ 2ರಂದು 12…

ಜಲದರ್ಶಿನಿ ಬಳಿ ಹುಣಸೂರು ರಸ್ತೆ ಅಗಲೀಕರಣದಲ್ಲಿ ಭಾರೀ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಜಲದರ್ಶಿನಿ ಬಳಿ ಹುಣಸೂರು ರಸ್ತೆ ಅಗಲೀಕರಣದಲ್ಲಿ ಭಾರೀ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ

June 21, 2018

ಮೈಸೂರು: ಮೈಸೂರು-ಹುಣಸೂರು ಮುಖ್ಯ ರಸ್ತೆಯನ್ನು ಜಲದರ್ಶಿನಿ ಅತಿಥಿ ಗೃಹದ ಬಳಿ ಅಗಲೀಕರಣದೊಂದಿಗೆ ನೇರಗೊಳಿಸುವ ಕಾಮಗಾರಿಯಲ್ಲಿ ಬಾರೀ ಹಗರಣ ನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ಕಾರ್ಯಕರ್ತರು ಜಲದರ್ಶಿನಿ ಮುಂದೆ ಪ್ರತಿಭಟನೆ ನಡೆಸಿದರು. ಮೈಸೂರಿನ ಕಲಾಮಂದಿರದಿಂದ ವಾಲ್ಮೀಕಿ ರಸ್ತೆಯ ಜಂಕ್ಷನ್‍ವರೆಗೆ ಈ ಹಿಂದೆ ಅಪಘಾತಗಳು ಸಂಭವಿಸುತ್ತಿದ್ದವು. ಕಡಿದಾದ ತಿರುವಿನಲ್ಲಿ ವಾಹನಗಳು ಅಪಘಾತಕ್ಕೀಡಾಗಿ ಅಮಾಯಕರು ಬಲಿಯಾಗುತ್ತಿದ್ದರು. ಆದರೆ ಜಲದರ್ಶಿನಿಯ ಮುಂಭಾಗದಿಂದ ವಾಲ್ಮೀಕಿ ರಸ್ತೆಯ ಜಂಕ್ಷನ್‍ವರೆಗೆ ರಸ್ತೆ ನೇರಗೊಳಿಸುವ ಕಾಮಗಾರಿ…

ಕಾರು ಉರುಳಿ ಮೈಸೂರಿನ ವಕೀಲ ಸಾವು
ಮೈಸೂರು

ಕಾರು ಉರುಳಿ ಮೈಸೂರಿನ ವಕೀಲ ಸಾವು

June 16, 2018

ಮೈಸೂರು:  ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕದ ಮೇಲೇರಿ, ನಂತರ ಮೂರು ಪಲ್ಟಿ ಹೊಡೆದ ಪರಿಣಾಮ ಮೈಸೂರಿನ ವಕೀಲ ಸಾವನ್ನಪ್ಪಿ, ಇತರ ಇಬ್ಬರು ಗಾಯ ಗೊಂಡಿರುವ ಘಟನೆ ಕಳೆದ ಮಧ್ಯರಾತ್ರಿ ಬಿಳಿಕೆರೆ ಸಮೀಪ ಎಳನೀರು ಬೋರೆ ಬಳಿ ಹುಣಸೂರು ರಸ್ತೆಯಲ್ಲಿ ಸಂಭವಿಸಿದೆ. ಮೈಸೂರಿನ ಮಂಚೇಗೌಡನಕೊಪ್ಪಲು, ಅಭಿಷೇಕ್ ಸರ್ಕಲ್ ನಿವಾಸಿ ಶ್ರೀನಿವಾಸ ಗೌಡರ ಮಗ ಬಾಲಕೃಷ್ಣ(42) ಸಾವನ್ನಪ್ಪಿದ ವಕೀಲ. ಅಪಘಾತದಿಂದ ಗಾಯಗೊಂಡಿ ರುವ ಎಂಜಿ ಕೊಪ್ಪಲಿನ ಹುಚ್ಚೇಗೌಡ ಮತ್ತು ನಾರಾಯಣ ಅವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಹೊರ ರೋಗಿಗ…

ಜಲದರ್ಶಿನಿ ಬಳಿ ಹುಣಸೂರು ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ಲೋಕಾಯುಕ್ತ ತನಿಖೆಗೆ ಆಗ್ರಹ
ಮೈಸೂರು

ಜಲದರ್ಶಿನಿ ಬಳಿ ಹುಣಸೂರು ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ಲೋಕಾಯುಕ್ತ ತನಿಖೆಗೆ ಆಗ್ರಹ

May 27, 2018

ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಮುಂಭಾಗದ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರುವ ವಕೀಲ ಎಂ.ರಾಮಕೃಷ್ಣ, ಈ ಸಂಬಂಧ ಲೋಕಾಯುಕ್ತ ತನಿಖೆಗೆ ಆದೇಶ ನೀಡಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, ಆಗ್ರಹಿಸಿದ್ದಾರೆ. ಮೈಸೂರು-ಹುಣಸೂರು ಮುಖ್ಯರಸ್ತೆಯಲ್ಲಿ ಜಲದರ್ಶಿನಿ ಅತಿಥಿಗೃಹದ ಮುಂಭಾಗದಿಂದ ಪಡುವಾರಹಳ್ಳಿಯ ಆದಿಚುಂಚನಗಿರಿ ವಿದ್ಯಾರ್ಥಿನಿಲಯದವರೆಗೆ ರಸ್ತೆಯನ್ನು ನೇರಗೊಳಿಸುವ ಕಾಮಗಾರಿಯನ್ನು ಅಂದಾಜು 13 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗಿದೆ. ಆದರೆ ರಸ್ತೆಯನ್ನು ಅಗೆದು ಹೊಸದಾಗಿ ಡಾಂಬರೀಕರಣ ಮಾಡಿರುವುದನ್ನು ಬಿಟ್ಟರೆ ಯಾವುದೇ ರೀತಿಯಲ್ಲಿ ನೇರಗೊಳಿಸುವ ಕಾಮಗಾರಿ…

Translate »