ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಸರಣಿ ಅಪಘಾತ
ಮೈಸೂರು

ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಸರಣಿ ಅಪಘಾತ

December 6, 2018

ಮೈಸೂರು:  ಮೈಸೂರಿನ ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ಕು ಕಾರುಗಳು ಜಖಂಗೊಂಡಿದ್ದು ಚಾಲಕರು ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಹುಂಡೈ ಕ್ರೆಟಾ (ಕೆಎಲ್58, ಆರ್.555), ಹುಂಡೈ ಐ-10 (ಕೆಎ.09, ಎಂಎ 9664), ಮಾರುತಿ ಸುಜುಕಿ ಇಕೋ (ಕೆಎ 09, ಎಂಬಿ 5063) ಹಾಗೂ ಫೋರ್ಡ್ ಫಿಯಸ್ಟಾ (ಕೆಎ 17, ಎಂ.9487) ಕಾರುಗಳು ಜಖಂಗೊಂಡಿವೆ. ಘಟನೆಯಿಂದಾಗಿ ಪಡುವಾರಹಳ್ಳಿ ಬಳಿ ಭೂದೇವಿ ಫಾರಂ ಎದುರು ಸುಮಾರು ಅರ್ಧ ಗಂಟೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ತಕ್ಷಣ ಪಡುವಾರಹಳ್ಳಿ ಸಿಗ್ನಲ್‍ಲೈಟ್ ಸರ್ಕಲ್‍ನಲ್ಲಿ ಕರ್ತವ್ಯದಲ್ಲಿದ್ದ ವಿವಿಪುರಂ ಸಂಚಾರ ಠಾಣೆ ಸಿಬ್ಬಂದಿ ನಾಲ್ಕು ಕಾರುಗಳನ್ನು ಬೇರ್ಪಡಿಸಿ, ಠಾಣೆಗೆ ಸ್ಥಳಾಂತರಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಘಟನೆ ವಿವರ: ಹಿನಕಲ್ ಕಡೆಯಿಂದ ಬಂದ ಹುಂಡೈ ಕ್ರೆಟಾ ಕಾರು ಚಾಲಕ ಮುನಾಫ್ ಮುಂದೆ ಇದ್ದ ವಾಹನ ಹಠಾ ತ್ತನೆ ಬ್ರೇಕ್ ಹಾಕಿದ ಪರಿಣಾಮ ತಾನು ಬ್ರೇಕ್ ಹಾಕಿದ್ದಾರೆ. ಅದರ ಹಿಂದೆಯೇ ಬರುತ್ತಿದ್ದ ಹುಂಡೈ ಐ-10 ಕಾರು, ಕ್ರೆಟಾ ಹಿಂಬದಿಗೆ ಡಿಕ್ಕಿ ಹೊಡೆಯಿತು. ಹಾಗೇ ಅವುಗಳ ಹಿಂದೆ ಬರುತ್ತಿದ್ದ ಮಾರುತಿ ಸುಜುಕಿ ಇಕೋ, ಹುಂಡೈ ಐ-10ಗೆ ಅಪ್ಪಳಿಸಿತು. ಅದರ ಹಿಂದಿದ್ದ ಫೋರ್ಡ್ ಫಿಯಸ್ಟಾ ಒಂದ ಕ್ಕೊಂದು ಡಿಕ್ಕಿಯಾಗಿ ನಿಂತಿದ್ದವು. ಕ್ರೆಟಾ ಹಿಂಬದಿ ಹಾಗೂ ಹಿಂದೆ ಇದ್ದ ಫೋರ್ಡ್ ಫಿಯಸ್ಟಾ ಕಾರಿನ ಬಾನೆಟ್ ಜಖಂಗೊಂಡರೆ. ಮಧ್ಯೆ ಇದ್ದ ಹುಂಡೈ ಐ-10 ಮತ್ತು ಮಾರುತಿ ಇಕೋ ಕಾರುಗಳ ಎರಡೂ ಬದಿ ಜಖಂಗೊಂಡವು.
ಸರಣಿ ಅಪಘಾತಕ್ಕೆ ಮುಂದಿನ ವಾಹನ ಹಠಾತ್ತನೆ ಬ್ರೇಕ್‍ಹಾಕಿ, ಪರಾರಿಯಾಗಿದ್ದೇ ಕಾರಣವಾಗಿದ್ದು, ಕಡೆಗೆ ಎಲ್ಲಾ 4 ವಾಹನ ಚಾಲಕರು ತಾವೇ ಇನ್ಷೂರೆನ್ಸ್ ಕ್ಲೇಮ್ ಮಾಡಿಕೊಳ್ಳುತ್ತೇವೆಂದು ಮಾತನಾಡಿಕೊಳ್ಳುತ್ತಿದ್ದರಾದರೂ, ಸಂಜೆವರೆಗೂ ಯಾವುದೇ ದೂರು ನೀಡಿಲ್ಲ. ಕೇಸ್ ಕೊಟ್ಟರೆ ತೆಗೆದುಕೊಂಡು ತನಿಖೆ ಮಾಡುತ್ತೇವೆ ಎಂದು ಪೊಲೀ ಸರು ತಿಳಿಸಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಸಾರ್ವಜನಿಕರು ನೆರೆದು ಮೊಬೈಲ್‍ನಲ್ಲಿ ಫೋಟೋ, ವಿಡಿಯೋ ಕ್ಲಿಕ್ಕಿಸುತ್ತಿದ್ದ ರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

Translate »